ಪತ್ತೇದಾರಿಯಾಗಿ 50 ನೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾಂಕಾ ಉಪೇಂದ್ರ

ಪ್ರಿಯಾಂಕಾ ಅಭಿನಯದ ಪತ್ತೆದಾರಿ ತೀಕ್ಷಣ ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಈ ಸಿನಿಮಾ ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ

ಸೂಪರ್ ಸ್ಟಾರ್ ನಟ ಉಪೇಂದ್ರ (Upendra) ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ‘ಡಿಟೆಕ್ಟಿವ್ ತೀಕ್ಷಣ’ ಸಿನಿಮಾದಲ್ಲಿ ನಾಯಕಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ತ್ರಿವಿಕ್ರಮ್ ರಘು ಆಕ್ಷನ್ ಕಟ್ ಹೇಳಿ  ನಿರ್ದೇಶಿಸಿದ್ದಾರೆ. ಮತ್ತು ಗುಟ್ಟ ಮುನಿ ಪ್ರಸನ್ನ ಮತ್ತು ಮುನಿ ವೆಂಕಟ ಚರಣ್ ನಿರ್ಮಿಸಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪೇಂದ್ರ ಮಾತನಾಡಿ, ‘ಪ್ರತಿ ಮಹಿಳೆಯಲ್ಲೂ ಒಬ್ಬ ಪತ್ತೇದಾರಿ ಇದ್ದಾನೆ. ಅದರಲ್ಲೂ ನಮ್ಮ ಮನೆಯಲ್ಲಿ ಪ್ರಿಯಾಂಕಾ (Priyanka) ಪತ್ತೇದಾರಿ. ಆಗೆಯೇ ಪ್ರತಿಯೊಬ್ಬ ಗಂಡ ತನ್ನ ಹೆಂಡತಿಯನ್ನು ಪತ್ತೇದಾರಿಯಾಗಿ ಕಾಣುತ್ತಾನೆ.

ಪತ್ತೇದಾರಿ ಪಾತ್ರಗಳನ್ನು ಸರಿಯಾಗಿ ಮಾಡಿದರೆ, ತೆರೆಯ ಮೇಲೆ ಅದ್ಭುತ ನಡೆಯುತ್ತದೆ. ಹಾಗೆಯೇ ಪ್ರಿಯಾಂಕಾ ಈ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು ಬಹಳ ಕಷ್ಟ ಪಟ್ಟು ಪಾತ್ರ ನಿರ್ವಯಿಸಿದ್ದಾರೆ ಇದಕ್ಕಾಗಿ ಪ್ರಿಯಾಂಕ ಬಹಳ ಪ್ರಿಪೇರ್ ಹಾಗಿದ್ದಾರೆ.

ಪತ್ತೇದಾರಿಯಾಗಿ 50 ನೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾಂಕಾ ಉಪೇಂದ್ರ - Kannada News

ಈ ಚಿತ್ರದ ಮೂಲಕ ಪ್ರಿಯಾಂಕಾ 50 ಚಿತ್ರಗಳನ್ನು ಪೂರೈಸಿದ್ದಾರೆ. ಮುಂದಿನ ಚಿತ್ರಕ್ಕಾಗಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ನಾನು ಭಾವಿಸುತ್ತೇನೆ’ ಎಂದರು.

ನಂತರ ಪ್ರಿಯಾಂಕಾ ಮಾತನಾಡಿ ಇದರಲ್ಲಿ ನನ್ನ ಪಾತ್ರ ಶಾರೀರಿಕಕ್ಕಿಂತ ಮಾನಸಿಕವಾಗಿ ತುಂಬಾ ಸ್ಟ್ರಾಂಗ್, ಶಾರ್ಪ್ ಮತ್ತು ಬ್ರಿಲಿಯಂಟ್ ಆಗಿರುತ್ತದೆ ಎಂದು ಪ್ರಿಯಾಂಕಾ ಹೇಳಿದರು. ಸರಣಿ ಕೊಲೆಗಳ ಪ್ರಕರಣದ ತನಿಖೆ ನಡೆಸುವ ಪತ್ತೇದಾರಿಯಾಗಿ ಪ್ರಿಯಾಂಕಾ ನಟಿಸಿದ್ದಾರೆ. ಸಾಹಸ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.

Comments are closed.