ರಿಷಬ್ ಶೆಟ್ಟಿ ನಟಿಸಬೇಕಿದ್ದ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ಪ್ಯಾನ್ ಇಂಡಿಯಾ ಚಿತ್ರಕ್ಕೊಸ್ಕರ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಕೈಬಿಟ್ರಾ ರಿಷಬ್??

ರಿಷಬ್ ಶೆಟ್ಟಿ ತಮ್ಮನ್ನು ಹರಸಿ ಬರುತ್ತಿರುವಂತಹ ಬೇರೆ ಬೇರೆ ಸಿನಿಮಾಗಳ ಅವಕಾಶವನ್ನು ತಿರಸ್ಕರಿಸುತ್ತಿರುವ ಮಾಹಿತಿ ತಿಳಿದು ಬಂದಿದ್ದು, ಹೀಗೆ ರಿಷಬ್ ಶೆಟ್ಟಿ ನಟಿಸಬೇಕಿದ್ದಂತಹ ಸಿನಿಮಾ ಸದ್ಯ ಲೂಸ್ ಮಾದ ಯೋಗಿ ಅವರ ಪಾಲಾಗಿದೆ.

ಸ್ನೇಹಿತರೆ, ರಿಷಬ್ ಶೆಟ್ಟಿ (Rishabh Shetty) ನಟಿಸಿ ನಿರ್ದೇಶಿಸಿದ ಕಾಂತರಾ (Kantara) ಚಿತ್ರವು ಬ್ಲಾಕ್ಬಸ್ಟರ್ ಹಿಟ್ ಆದ ಬೆನ್ನಲ್ಲೇ ಅವರ ಕ್ರೇಜ್ ಮತ್ತೊಂದು ಹಂತಕ್ಕೆ ತಲುಪಿದೆ. ಕೇವಲ ಬೆರಣಿಕೆಯಷ್ಟು ಕನ್ನಡ ಸಿನಿಮಾಗಳ ಮೂಲಕ ಹೆಸರುವಾಸಿಯಾಗಿದ್ದಂತ ರಿಷಬ್ ಶೆಟ್ಟಿ ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆಯನ್ನು ಪಡೆದುಕೊಂಡಿರುವಂತಹ ನಟ. ಒಂದೇ ಒಂದು ಸಿನಿಮಾದ ಮೂಲಕ ತಮ್ಮ ಸಂಪೂರ್ಣ ಸಿನಿ ಕೆರಿಯರ್ನ್ನೇ ಬದಲಿಸಿಕೊಂಡಂತ ರಿಷಬ್ ಶೆಟ್ಟಿ ಅವರು ಕಾಂತರಾ ಭಾಗ ಎರಡರ ಚಿತ್ರೀಕರಣದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು,

ಇದರ ನಡುವೆ ಅವರನ್ನು ಹರಸಿ ಬರುತ್ತಿರುವಂತಹ ಬೇರೆ ಬೇರೆ ಸಿನಿಮಾಗಳ ಅವಕಾಶವನ್ನು ತಿರಸ್ಕರಿಸುತ್ತಿರುವ ಮಾಹಿತಿ ತಿಳಿದು ಬಂದಿದ್ದು, ಹೀಗೆ ರಿಷಬ್ ಶೆಟ್ಟಿ ನಟಿಸಬೇಕಿದ್ದಂತಹ ಸಿನಿಮಾ ಸದ್ಯ ಲೂಸ್ ಮಾದ ಯೋಗಿ (Loose mada yogi) ಅವರ ಪಾಲಾಗಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ಅದು ಲೂಸ್ ಮಾದ ಯೋಗಿ ಅವರ ಪಾಲದದ್ದು ಹೇಗೆ? ಇದಕ್ಕೆ ದುನಿಯಾ ವಿಜಯ್ ಕೊಟ್ಟ ರಿವ್ಯೂ ಹೇಗಿತ್ತು? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಹೌದು ಗೆಳೆಯರೇ ಕಾಂತರಾ ಸಿನಿಮಾ ಬಿಡುಗಡೆಗೊಂಡಂತಹ ಅವಧಿಯಲ್ಲಿ ಯಾರಿಗೂ ಕೂಡ ಅದು ಈ ಮಟ್ಟದ ಗೆಲುವನ್ನು ಸಾಧಿಸುತ್ತದೆ ಎಂಬ ಸಣ್ಣ ಊಹೆಯೂ ಇರಲಿಲ್ಲ. ಕನ್ನಡ ಭಾಷೆಯಲ್ಲಿ ಬಿಡುಗಡೆಗೊಂಡಂತಹ ಈ ಚಿತ್ರದ ಅದ್ಭುತ ಕಥಾಹಂದರ ನಟನೆ, ಹಾಡುಗಳೆಲ್ಲವೂ ಬಹು ದೊಡ್ಡ ಮಟ್ಟದಲ್ಲಿ ಹಿಟ್ಟಾದ ಬಳಿಕ ಬೇರೆ ಬೇರೆ ಭಾಷೆಗಳಿಗೆ ಸಿನಿಮಾವನ್ನು ಡಬ್ ಮಾಡಲಾಯಿತು.

ರಿಷಬ್ ಶೆಟ್ಟಿ ನಟಿಸಬೇಕಿದ್ದ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ಪ್ಯಾನ್ ಇಂಡಿಯಾ ಚಿತ್ರಕ್ಕೊಸ್ಕರ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಕೈಬಿಟ್ರಾ ರಿಷಬ್?? - Kannada News

ಆನಂತರ ತೆಲುಗು ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಅದ್ಭುತ ಗೆಲುವನ್ನು ಕಾಣುವುದರ ಜೊತೆಗೆ ಸಾಕಷ್ಟು ಸೆಲೆಬ್ರಿಟಿಗಳಿಂದ ವಿಮರ್ಶಕರಿಂದಲೂ ಕಾಂತರಾ ಚಿತ್ರ ಹಾಗೂ ರಿಶಬ್ ಶೆಟ್ಟಿ ಅವರ ನಟನೆ ಮೆಚ್ಚುಗೆಗೆ ಪಾತ್ರವಾಯಿತು.

ಸದ್ಯ ಈ ಸಿನಿಮಾದ ಎರಡನೇ ಭಾಗದ ಚಿತ್ರೀಕರಣದ ಕೆಲಸಗಳಲ್ಲಿ ಪರಿಷತ್ ಶೆಟ್ಟಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಈ ಸಿನಿಮಾ ಮುಗಿಯುವವರೆಗೂ ಬೇರೆ ಯಾವ ಸಿನಿಮಾದಲ್ಲಿಯೂ ಅಭಿನಯಿಸುವುದಿಲ್ಲ ಎಂಬ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಹೀಗಾಗಿ ಕಾಂತರಾ ಚಿತ್ರ ಮುಗಿಯುವವರೆಗೂ ತಮ್ಮ ಸಿನಿ ಬದುಕಿನ ದಾರಿಯಲ್ಲಿ ಬರುವಂತಹ ಸಿನಿಮಾಗಳಿಂದ ರಿಷಬ್ ಅಂತರ ಕಾಯ್ದುಕೊಂಡಿದ್ದು, ನಿರ್ದೇಶಕರು ರಿಶಬ್ಗೆಂದು ಬರೆದಿರುವಂತಹ ಚಿತ್ರಕಥೆಗೆ ಬೇರೊರ್ವ ನಟರನ್ನು ಹುಡುಕಿ ಸಿನಿಮಾ ಮಾಡಲು ಮುಂದಾಗುತ್ತಿದ್ದಾರೆ.

ರಿಷಬ್ ಶೆಟ್ಟಿ ನಟಿಸಬೇಕಿದ್ದ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ಪ್ಯಾನ್ ಇಂಡಿಯಾ ಚಿತ್ರಕ್ಕೊಸ್ಕರ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಕೈಬಿಟ್ರಾ ರಿಷಬ್?? - Kannada News

ಅದರಂತೆ ನಟ ರಿಷಬ್ ಶೆಟ್ಟಿ ಅಭಿನಯಿಸಬೇಕಿದ್ದಂತಹ ಸಿನಿಮಾ ಒಂದು ಲೂಸ್ ಮಾದ ಯೋಗಿ ಅವರ ಪಾಲಾಗಿದ್ದು ಸದ್ಯ ಆ ಚಿತ್ರ ಇದೀಗ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಅದಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅದ್ಭುತ ಟೀಸರ್ ಹಾಗೂ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ‘ಬ್ಯಾಚುಲರ್ ಪಾರ್ಟಿ’ ಅದಾಗಲೇ ಪ್ರೇಕ್ಷಕರಿಗೆ ಚಿತ್ರದ ಮೇಲಿನ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೇ ಜನವರಿ 26ನೇ ತಾರೀಕು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಬ್ಯಾಚುಲರ್ ಪಾರ್ಟಿ ಸಿನಿಮಾವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದರೆ ಅಭಿಜಿತ್ ಮಹೇಶ್ ಅವರ ಅದ್ಭುತ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ.

ರಿಷಬ್ ಶೆಟ್ಟಿ ಅವರಿಗೆಂದೇ ಅಭಿಜಿತ್ ಚಿತ್ರದ ಕಥೆಯನ್ನು ಎಣೆದಿರುತ್ತಾರೆ ಹಾಗೂ ಕಾಂತರಾ ಚಿತ್ರ ಬಿಡುಗಡೆಗೂ ಮುನ್ನವೇ ಪಾತ್ರಧಾರಿಗಳ ಆಯ್ಕೆ ಆಗಿರುತ್ತದೆ. ಆದರೆ ಕಾಂತರಾ ಸಿನಿಮಾ ಬಿಡುಗಡೆಯಾಗಿ ಬಹುದೊಡ್ಡ ಬ್ಲಾಕ್ಬಸ್ಟರ್ ಆದ ಕಾರಣ ರಿಶಬ್ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಲಾಗಲಿಲ್ಲ.

ರಿಷಬ್ ಶೆಟ್ಟಿ ನಟಿಸಬೇಕಿದ್ದ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ಪ್ಯಾನ್ ಇಂಡಿಯಾ ಚಿತ್ರಕ್ಕೊಸ್ಕರ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಕೈಬಿಟ್ರಾ ರಿಷಬ್?? - Kannada News

ಹೀಗಾಗಿ ಚಿತ್ರಕ್ಕೆ ದುನಿಯಾ ಲೂಸ್ ಮಾದ ಯೋಗಿ ಎಂಟ್ರಿ ಕೊಟ್ಟಿದ್ದು, ಇವರ ಜೊತೆಗೆ ದೂದ್ ಪೇಡ ದಿಗಂತ್ ಕೂಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಕುರಿತು ಸಂದರ್ಶನದಲ್ಲಿ ಮಾತನಾಡುವಾಗ “ಸಿನಿಮಾ ಬಹಳವಾಗಿದೆ ಮಜವಾಗಿದೆ ಫ್ಯಾಮಿಲಿ ಎಂಟರ್ಟೈನ್ಮೆಂಟೆನರ್’’ ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಇಂದು ಲೂಸ್ ಮಾದ ಯೋಗಿ ಕೇಳಿಕೊಂಡಿದ್ದಾರೆ.

Comments are closed.