ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿನ ಕಲಾವಿದರ ನಿಜವಾದ ವಯಸ್ಸೆಷ್ಟು ಗೊತ್ತೇ?

ಹೆಚ್ಚಿನ ಟಿ ಆರ್ ಪಿ ಗಳಿಸುವ ಮೂಲಕ ಕನ್ನಡದ ನಂಬರ್ ವನ್ ಸೀರಿಯಲ್ ಎಂಬ ಪಟ್ಟವನ್ನು ಗೆದ್ದಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಅಭಿನಯಿಸುವ ಕಲಾವಿದರ ನಿಜವಾದ ವಯಸ್ಸೆಷ್ಟು? ಎಲ್ಲರಿಗಿಂತ ಯಾರೂ ಅತಿ ಹೆಚ್ಚು ಹಿರಿಯರು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದೇವೆ.

ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು(Puttakkana Makkalu) ಧಾರಾವಾಹಿ ಮೊದಲ ದಿನದಿಂದ ಇಂದಿನ ವರೆಗೂ ಅದ್ಭುತ ಯಶಸ್ಸನ್ನು ಪಡೆದುಕೊಳ್ಳುತ್ತಿದೆ. ಪ್ರತಿದಿನ ಸಂಜೆ 7:30 ಸಮಯಕ್ಕೆ ಪ್ರಸಾರವಾಗುವಂತಹ ಈ ಧಾರವಾಹಿಗೆ ಕಟ್ಟ ಅಭಿಮಾನಿ ಬಳಗ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು. ಹಿರಿಯ ನಟಿ ಉಮಾಶ್ರೀ(Umashree) ಅವರ ಅಮೋಘ ನಟನೆ ಸೀರಿಯಲ್ನ, ವಿಶೇಷ ಕಥಾಹಂದರ ಎಲ್ಲವೂ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತಿದೆ.

ಹೀಗೆ ಹೆಚ್ಚಿನ ಟಿ ಆರ್ ಪಿ ಗಳಿಸುವ ಮೂಲಕ ಕನ್ನಡದ ನಂಬರ್ ವನ್ ಸೀರಿಯಲ್ ಎಂಬ ಪಟ್ಟವನ್ನು ಗೆದ್ದಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಅಭಿನಯಿಸುವ ಕಲಾವಿದರ ನಿಜವಾದ ವಯಸ್ಸೆಷ್ಟು? ಎಲ್ಲರಿಗಿಂತ ಯಾರೂ ಅತಿ ಹೆಚ್ಚು ಹಿರಿಯರು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದೇವೆ. ಆದ್ದರಿಂದ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಬೆಳ್ಳಿ ಪರದೆಯ ಮೇಲೆ ವ್ಯಾಪಕವಾದ ಯಶಸ್ಸು ಕೀರ್ತಿ ಹಾಗೂ ಬೇಡಿಕೆಯನ್ನು ಗಳಿಸಿದಂತಹ ನಟಿ ಉಮಾಶ್ರೀ(Umashree) ಅವರು ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡು ರಾಜಕೀಯ ಬದುಕಿನಲ್ಲಿ ಸಕ್ರಿಯರಾಗಿ ಸಿನಿ ಬದುಕಿನಿಂದ ಅಂತರ ಕಾಯ್ದುಕೊಂಡಿದ್ದ ಸಮಯದಲ್ಲಿ ಈ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಪುಟ್ಟಕ್ಕನ (Puttakka) ಪಾತ್ರದಲ್ಲಿ ಅಭಿನಯಿಸುವ ಮೂಲಕ ಮತ್ತೆ ಬಣ್ಣದ ಬದುಕಿದ್ದೆ ಕಂಬ್ಯಾಕ್ ಮಾಡಿದರು.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿನ ಕಲಾವಿದರ ನಿಜವಾದ ವಯಸ್ಸೆಷ್ಟು ಗೊತ್ತೇ? - Kannada News

ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಬಹಳ ಲೀಲಾ ಜಾಲವಾಗಿ ಅಭಿನಯಿಸುವಂತಹ ಕಲೆಯನ್ನು ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರದ ಮೂಲಕ ಪ್ರತಿ ಕಿರುತೆರೆ ತಾಯಂದಿರ ಮನಸ್ಸನ್ನು ಗೆದ್ದರು. ಹೌದು ಸ್ನೇಹಿತರೆ ಗಂಡ ಬಿಟ್ಟು ಹೋಗಿದ್ದರು ಹೇಗೆ ತಮ್ಮ ೩ ಹೆಣ್ಣು ಮಕ್ಕಳನ್ನು ಸಾಕುತ್ತಾರೆ? ಬಂದಂತಹ ಕಷ್ಟಗಳನ್ನೆಲ್ಲ ಎಷ್ಟು ತಾಳ್ಮೆಯಿಂದ ನಿಭಾಯಿಸುತ್ತಾರೆ ಎಂಬ ಪಾತ್ರ ಉಮಾಶ್ರೀ ಅವರದಾಗಿತ್ತು. ಹೀಗೆ ತಮ್ಮ ಮನೋಜ್ಞ ನಟನೆಯ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ನಟಿ ಉಮಾಶ್ರೀ ಅವರಿಗೆ ಸದ್ಯ 65 ವರ್ಷ ವಯಸ್ಸಾಗಿದೆ.

ಇನ್ನೂ ಪುಟ್ಟಕ್ಕ ಮತ್ತು ರಾಜೇಶ್ವರಿ, ಇಬ್ಬರು ಹೆಂಡತಿಯರನ್ನು ಮದುವೆಯಾಗಿರುವ ಗೋಪಾಲಯ್ಯ ಪಾತ್ರಧಾರಿ ರಮೇಶ್ ಪಂಡಿತ್ (Ramesh Pandit) ಅವರಿಗೆ 55 ವರ್ಷ ವಯಸ್ಸಾಗಿದ್ದು ಇಂದಿಗೂ ಕೂಡ ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಪೋಷಕ ನಟನಾಗಿ ಹಾಗೂ ಖಳನಟನಾಗಿ ಅಭಿನಯಿಸುವ ಮೂಲಕ ಚಿತ್ರಪೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು ಸೀರಿಯಲ್ ನಲ್ಲಿ ಪುಟ್ಟಕ್ಕನ ಸಂಬಂಧಿ ನಂಜಮ್ಮನ ಪಾತ್ರ ಮಾಡುತ್ತಿರುವ ಸಾರಿಕಾ ಹರೀಶ್(Sarika Harish) ಅವರಿಗೆ 45 ವರ್ಷ ವಯಸ್ಸಾಗಿರುವ ಮಾಹಿತಿ ಮೂಲಗಳಿಂದ ದೊರೆಯುವುದು ಬಂದಿದೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿನ ಕಲಾವಿದರ ನಿಜವಾದ ವಯಸ್ಸೆಷ್ಟು ಗೊತ್ತೇ? - Kannada News
Image source: Nadunudi

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಮಂತರೆಯಾಗಿ ರಾಜೇಶ್ವರಿ ಅಲಿಯಾಸ್ ರಾಜಿ ಪಾತ್ರ ಮಾಡಿರುವ ಹಂಸ ಪ್ರತಾಪ್(Hamsa Pratap) ಅವರಿಗೆ 40 ವರ್ಷ ವಯಸ್ಸಾಗಿದ್ದು ನಟನೆಯಲ್ಲಿ ಬಹಳ ಶಕ್ತಿ ಇರುವ ಕಾರಣ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಮುದ್ದಾ ತಾಯಿಯಾಗಿ ಖಡಕ್ ವಿಲನ್ ಆಗಿ ನಟಿಸಿರುವ ಬಡ್ಡಿ ಬಂಗಾರಮ್ಮ ಅಲಿಯಾಸ್ ಮಂಜು ಭಾಷಣೆ (Manju Bashini) ಅವರಿಗೂ 45 ವರ್ಷ ವಯಸ್ಸಾಗಿದ್ದು, ಪೋಷಕ ಪಾತ್ರಗಳ ಮೂಲಕ ನೋಡುಗರ ಮನಸ್ಸನ್ನು ಸೆಳೆಯುತ್ತಿರುತ್ತಾರೆ.

ಈ ಧಾರಾವಾಹಿಯ ನಾಯಕ ನಟ ಶ್ರೀಕಂಠ/ಕಂಠಿ ಬಡ್ಡಿ ಬಂಗಾರಮ್ಮ ಮಗನಾಗಿ ಅಭಿನಯಿಸುತ್ತಿರುವ ಧನುಶ್(Dhanush) 1998ರಲ್ಲಿ ಜನಿಸಿದ್ದು, 26 ವರ್ಷದ ಈ ನಟ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಸಾಕಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಂಡು ಅನಂತರ ನಟನ ಲೋಕಕ್ಕೆ ಕಾಲಿಟ್ಟು ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೂಲಕ ಮನೆ ಮಾತಾಗಿದ್ದಾರೆ.

ಇನ್ನೂ ಸೀರಿಯಲ್ನ ಬಹು ಮುಖ್ಯ ಪಾತ್ರಧಾರಿ ಸಂಜನಾ ಬುರ್ಲಿ (Sanjana Burli) ಅಲಿಯಾಸ್ ಸ್ನೇಹಾ ಅವರು ಧಾರಾವಾಹಿಯ ನಾಯಕ ನಟಿಯಾಗಿ ಗಟ್ಟಿಗಿತ್ತಿ ಹೆಣ್ಣು ಮಗಳ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮಗಳಾಗಿ ಹೋಗಿದ್ದಾರೆ ಎಂದರೆ ತಪ್ಪಾಗಲಾರದು. ಮೆಡಿಕಲ್ ಇಂಜಿನಿಯರಿಂಗ್(Medical engineering) ವಿದ್ಯಾಭ್ಯಾಸದ ಜೊತೆಗೆ ನಟನೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸ್ನೇಹ ಅವರು ತಮ್ಮ ಮನೋಜ್ಞ ಅಭಿನಯದ ಮೂಲಕ ಮೊದಲ ಸಿರಿಯಲ್ನಲ್ಲೇ ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.

ಸ್ನೇಹಳ ಸಹೋದರಿ ಸಹನಾ- ಅಕ್ಷರ ಅವರಿಗೆ 25 ವರ್ಷ ಮತ್ತೊಂದು ತಂಗಿ ಸುಮಾಳ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಶಿಲ್ಪ ಸವರಾಸೆ(Shilpa Savrase) ಗೆ 25 ವರ್ಷ ವಯಸ್ಸಾಗಿದ್ದು, ತಮಗೆ ನೀಡಲಾಗಿರುವಂತಹ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಕನ್ನಡಿಗರ ಹೃದಯವನ್ನು ಈ ಕಣ್ಮಣಿಯರು ಗೆದ್ದಿದ್ದಾರೆ.

Comments are closed.