ಕೊನೆಗೂ ಕೊಟ್ಟ ಮಾತನ್ನು ಉಳಿಸಿಕೊಂಡ ರಾಕಿ ಬಾಯ್, ಅಭಿಮಾನಿಗಳ ಕುಟುಂಬಕ್ಕೆ ಯಶ್ ಕೊಟ್ಟ ಪರಿಹಾರ ಧನ ಎಷ್ಟು ಲಕ್ಷ ಗೊತ್ತೇ?

ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಅಭಿಮಾನಿಗಳ ಕುಟುಂಬಕ್ಕೆ ಪರಿಹಾರದ ಹಣವನ್ನು ವಿತರಿಸಿರುವ ಮಾಹಿತಿ ತಿಳಿದು ಬಂದಿದೆ. ರಾಕಿಂಗ್ ಸ್ಟಾರ್ ಯಶ್ ಅವರ ವತಿಯಿಂದ ದೊರಕಿರುವ ಪರಿಹಾರದ ಹಣವನ್ನು ಕೈಯಲ್ಲಿ ಹಿಡಿದು ಕಣ್ಣೀರು ಹಾಕುತ್ತಲೇ ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ನೇಹಿತರೆ, ಕಳೆದ ಕೆಲವು ದಿನಗಳ ಹಿಂದೆ ಗದಗ ಜಿಲ್ಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರ ಮೂವರು ಅಭಿಮಾನಿಗಳು ಮೃತಪಟ್ಟಂತಹ ವಿಚಾರ ರಾಜದಾದ್ಯಂತ ತೀವ್ರ ಸಂಚಲನ ಸೃಷ್ಟಿ ಮಾಡಿತ್ತು. ಖುದ್ದಾಗಿ ಯಶ್ (Yash) ಅವರ ತಮ್ಮ ಸಿನಿಮಾ ಕೆಲಸಗಳನ್ನು ಬಿಟ್ಟು ಏರ್ಲೈನ್ಸ್ ಮೂಲಕ ಸ್ಥಳಕ್ಕೆ ತೆರಳಿ ಮೃತಪಟ್ಟ ಕುಟುಂಬಸ್ಥರಿಗೆ ಸಾಂತ್ವನ ಮಾಡುವ ಕೆಲಸ ಮಾಡಿದರು ಹಾಗೂ ಗಾಯಾಳುಗಳಿಗೆ ತಮ್ಮ ಧೈರ್ಯದ ಮಾತುಗಳಿಂದ ಶಕ್ತಿ ತುಂಬಿದರು.

ಹೀಗಿರುವಾಗ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಅಭಿಮಾನಿಗಳ ಕುಟುಂಬಕ್ಕೆ ಪರಿಹಾರದ ಹಣವನ್ನು ವಿತರಿಸಿರುವ ಮಾಹಿತಿ ತಿಳಿದು ಬಂದಿದೆ. ರಾಕಿಂಗ್ ಸ್ಟಾರ್ ಯಶ್ ಅವರ ವತಿಯಿಂದ ದೊರಕಿರುವ ಪರಿಹಾರದ ಹಣವನ್ನು ಕೈಯಲ್ಲಿ ಹಿಡಿದು ಕಣ್ಣೀರು ಹಾಕುತ್ತಲೇ ಕೃತಜ್ಞತೆ ಸಲ್ಲಿಸಿದ್ದಾರೆ. ಅಷ್ಟಕ್ಕೂ ರಾಕಿಂಗ್ ಸ್ಟಾರ್ ಯಶ್ ನೀಡಿದ ಹಣ ಎಷ್ಟು ಲಕ್ಷ? ಗಾಯಾಳುಗಳಿಗೆ ಸಿಕ್ಕಂತಹ ಪರಿಹಾರ ಧನವೇನು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಹೌದು ಗೆಳೆಯರೇ ಕಳೆದ ಜನವರಿ 8, 2024ರಂದು ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ 38ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿದ್ದಂತಹ ದಿನ. ಆದರೆ ತಮ್ಮ ಅಭಿಮಾನಿಗಳ ಜೊತೆಗೆ ಸಮಯ ಕಳೆಯಲಾಗದೆ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಂತ ಯಶ್ರವರಿಗೆ ಅಭಿಮಾನಿಗಳ ಸಾ-ವಿನ ಕುರಿತಾದ ಕಹಿ ವಿಚಾರದ ಮಾಹಿತಿ ಒಂದು ತಲುಪುತ್ತದೆ.

ಕೊನೆಗೂ ಕೊಟ್ಟ ಮಾತನ್ನು ಉಳಿಸಿಕೊಂಡ ರಾಕಿ ಬಾಯ್, ಅಭಿಮಾನಿಗಳ ಕುಟುಂಬಕ್ಕೆ ಯಶ್ ಕೊಟ್ಟ ಪರಿಹಾರ ಧನ ಎಷ್ಟು ಲಕ್ಷ ಗೊತ್ತೇ? - Kannada News

ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ಯಶ್ ಅಭಿಮಾನಿಗಳು ಅವರ ಉದ್ದನೆಯ ಕಟೌಟ್ ಹಾಕುವ ಸಲುವಾಗಿ ಎಲೆಕ್ಟ್ರಿಕ್ ಕಂಬಿಗಳು ಇದ್ದಂತಹ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಆ ಅವಧಿಯಲ್ಲಿ ಎಲೆಕ್ಟ್ರಿಕ್ ಶಾಕ್ಗೆ ತುತ್ತಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಹನುಮಂತ ಹರಿಜನ್, ಮುರಳಿ ನಡುವಿನಮನಿ ಮತ್ತು ನವೀನ್ ಕುಟುಂಬಸ್ಥರಿಗೆ ರಾಕಿಂಗ್ ಸ್ಟಾರ್ ಯಶ್ ಅವರು ಚೆಕ್ ಮೂಲಕ ಪರಿಹಾರದ ಹಣವನ್ನು ತಲುಪಿಸಿದ್ದಾರೆ.

ಕೊನೆಗೂ ಕೊಟ್ಟ ಮಾತನ್ನು ಉಳಿಸಿಕೊಂಡ ರಾಕಿ ಬಾಯ್, ಅಭಿಮಾನಿಗಳ ಕುಟುಂಬಕ್ಕೆ ಯಶ್ ಕೊಟ್ಟ ಪರಿಹಾರ ಧನ ಎಷ್ಟು ಲಕ್ಷ ಗೊತ್ತೇ? - Kannada News

ಇದರ ಜೊತೆಗೆ ಗಾಯಾಳುಗಳಿಗೆ ಗದಗ ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸುವುದರ ಜೊತೆಗೆ ತಲಾ 50 ಸಾವಿರ ರೂಪಾಯಿ ಹಣವನ್ನು ನೀಡಿದ್ದಾರೆ. ಇನ್ನು ಕಣ್ಣೀರು ಸುರಿಸುತ್ತಲೇ ಮಾಧ್ಯಮದ ಮುಂದೆ ಬಂದು “ನನ್ನ ಮಗ ನನ್ನ ಮನೆಯಲ್ಲಿಯೇ ಇರಬೇಕು ಎಂದು ಭಾವಿಸಿದ್ದೆ ಕೂಲಿಗೆ ಹೋದ ಮಗನಿಗೆ ಪೇಮೆಂಟ್ ಕೊಟ್ಟು ಕಳುಹಿಸಿದ್ದಾರೆ ಅನ್ನಲಾ..? ದೊಡ್ಡ ಮನಸ್ಸು ಮಾಡಿರುವ ಯಶ್ ಅವರನ್ನೇ ದೇವರು ಅಂತ ಕರೆಯಲಾ? ನನ್ನ ಮಗ ಸ.ತ್ತ ಕಾರಣ ಬಂದ ಈ ದುಡ್ಡಿನಿಂದ ನನ್ನ ಹೊಟ್ಟೆ ತುಂಬಿಸಿಕೊಳ್ಳಲಾ? ಹೊಸ ಗಾಡಿ ತಗೋಬೇಕು ಅಂತ ಹೇಳಿದ್ದ

ಈ ಹಣದಲ್ಲಿ ಅದನ್ನು ಖರೀದಿಸಿ ಹಿಂದೆ ಕುಳಿತುಕೊಳ್ಳಲಾ?” ಎನ್ನುತ್ತಾ ಗೋಳಾಡಿದ್ದಾರೆ. ಹೀಗೆ ಮೃತಪಟ್ಟ ಮೂರು ಅಭಿಮಾನಿಗಳ ಮನೆಗೆ ರಾಕಿಂಗ್ ಸ್ಟಾರ್ ಯಶ್ ಅವರು ತಲಾ 5 ಲಕ್ಷ ರೂಪಾಯಿ ಪರಿಹಾರ ಹಣವನ್ನು ನೀಡುವುದರ ಜೊತೆಗೆ ತಮ್ಮ ಅಭಿಮಾನಿಗಳಿಗೆ ಮತ್ತೆಂದು ಈ ರೀತಿ ಮಾಡದಂತೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಹಣ ಪಡೆದುಕೊಂಡಂತಹ ಮೃ-ತನ ಕುಟುಂಬಸ್ಥರು ರಾಕಿಂಗ್ ಸ್ಟಾರ್ ಯಶ್ ಕೊಟ್ಟ ಮಾತನ್ನು ಉಳಿಸಿಕೊಂಡು ನೀಡಿದಂತಹ ಭರವಸೆಯನ್ನು ಈಡೇರಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Comments are closed.