ಕಿಚ್ಚನ 50ನೇ ವರ್ಷದ ಸ್ಪೆಷಲ್ ಬರ್ತಡೆಗೆ ಕಾದಿದೆ ಬಹುದೊಡ್ಡ ಅಚ್ಚರಿ, ಹುಟ್ಟು ಹಬ್ಬದ ಮುಂಚೆಯೇ ಸಿಕ್ತು, ಪತ್ನಿಯಿಂದ ವಿಶೇಷ ಉಡುಗೊರೆ!

ಕಿಚ್ಚನ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುವ ಸಲುವಾಗಿ ಸಕಲ ಸಿದ್ಧತೆಗಳು ನಡೆದಿದ್ದು, ಇದರ ಬೆನ್ನೆಲ್ಲೇ ಕಿಚ್ಚ ಸುದೀಪ್ಗೆ ಪತ್ನಿ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಲು ತಯಾರಿ ನಡೆಸುತ್ತಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಸ್ನೇಹಿತರೆ, ನಾಳೆ ನಮ್ಮ ಸ್ಯಾಂಡಲ್ ವುಡ್ನಲ್ಲಿ (Sandalwood) ಹಬ್ಬದ ವಾತಾವರಣ ಮನೆ ಮಾಡಿರುತ್ತದೆ ಎಂದರೆ ತಪ್ಪಾಗಲಾರದು. ಅಭಿಮಾನಿಗಳ ಆರಾಧ್ಯ ದೈವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರು ಸೆಪ್ಟೆಂಬರ್ 2, 2023 ನೇ ತಾರೀಖಿನಂದು ತಮ್ಮ 50ನೇ ವರ್ಷದ ವಸಂತಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳು ತನ್ನ ನೆಚ್ಚಿನ ನಟನ ಬರ್ತಡೆ ಸೆಲೆಬ್ರೇಶನ್ಗೆ ನಂದಿ ಲಿಂಕ್ಸ್ ರೋಡಿಗೆ ಜಮಾಯಿಸಲಿದ್ದಾರೆ.

ಕಿಚ್ಚನ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುವ ಸಲುವಾಗಿ ಸಕಲ ಸಿದ್ಧತೆಗಳು ನಡೆದಿದ್ದು, ಇದರ ಬೆನ್ನೆಲ್ಲೇ ಕಿಚ್ಚ ಸುದೀಪ್ಗೆ ಪತ್ನಿ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಲು ತಯಾರಿ ನಡೆಸುತ್ತಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಹೌದು ಗೆಳೆಯರೇ, ನಾಳೆ ನಡೆಯಲಿರುವ ಕಿಚ್ಚೋತ್ಸವಕ್ಕೆ ಸಾಕಷ್ಟು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಹಾಗೂ ಅಸಂಖ್ಯಾತ ಅಭಿಮಾನಿಗಳ ಬಳಗ ಭಾಗಿ ಆಗಲಿದ್ದು, ನಂದಿ ಲಿಂಕ್ಸ್ ರೋಡ್ನಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಮುಂಚಿತ ಮಾಹಿತಿಯನ್ನು ತಿಳಿಸಿದ್ದಾರೆ.

ಕಿಚ್ಚನ 50ನೇ ವರ್ಷದ ಸ್ಪೆಷಲ್ ಬರ್ತಡೆಗೆ ಕಾದಿದೆ ಬಹುದೊಡ್ಡ ಅಚ್ಚರಿ, ಹುಟ್ಟು ಹಬ್ಬದ ಮುಂಚೆಯೇ ಸಿಕ್ತು, ಪತ್ನಿಯಿಂದ ವಿಶೇಷ ಉಡುಗೊರೆ! - Kannada News

ಅಲ್ಲದೆ ಕಿಚ್ಚನ ಹೆಸರಿನಲ್ಲಿ ಸಾಕಷ್ಟು ಸೇವೆ ಹಾಗೂ ಸಮಾಜಮುಖಿ ಕಾರ್ಯಗಳು (Social work) ನಾಳೆ ನಡೆಯಲಿದ್ದು, ಸಾಕಷ್ಟು ಸಿನಿಮಾ ತಂಡದವರಿಂದ, ಮಾಧ್ಯಮದಿಂದ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿ ಬಳಗದಿಂದ ಶುಭಾಶಯಗಳು ಮಹಾಪೂರವೇ ಹರಿದು ಬರಲಿದೆ.

ಕಿಚ್ಚನ 50ನೇ ವರ್ಷದ ಸ್ಪೆಷಲ್ ಬರ್ತಡೆಗೆ ಕಾದಿದೆ ಬಹುದೊಡ್ಡ ಅಚ್ಚರಿ, ಹುಟ್ಟು ಹಬ್ಬದ ಮುಂಚೆಯೇ ಸಿಕ್ತು, ಪತ್ನಿಯಿಂದ ವಿಶೇಷ ಉಡುಗೊರೆ! - Kannada News
Image source: Vijaya Karnataka

ಅಭಿಮಾನಿಗಳು ತನ್ನ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲು ಉತ್ಸುಕರಾಗಿ ಕಾದು ಕುಳಿತಿರುವಾಗ ಇತ್ತ ಪ್ರಿಯ ಸುದೀಪ್ (Priya Sudeep) ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗಂಡನ ಹುಟ್ಟು ಹಬ್ಬದ ಅಂಗವಾಗಿ ನೀಡಲಿರುವ ಸರ್ಪ್ರೈಸ್ ಒಂದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೌದು ಗೆಳೆಯರೇ ಪತಿಯ ಹುಟ್ಟು ಹಬ್ಬದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟಿವ್ ಆಗಿರುವಂತಹ ಪ್ರಿಯ ಅವರು ಟ್ವಿಟರ್ (Twitter) ನಲ್ಲಿ ಮಾಹಿತಿ ಒಂದನ್ನು ಶೇರ್ ಮಾಡಿ “ಇಂದು ನಿಮ್ಮ ಪ್ರೀತಿಯ ಕಿಚ್ಚ ಸುದೀಪ್ರ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ಕಾತುರದಿಂದ ಕಾಯುತ್ತಿದ್ದೇನೆ.

ಇಂದಿನ ಕಾರ್ಯಕ್ರಮದಲ್ಲಿ ನನ್ನ ಕಡೆಯಿಂದ ನಿಮ್ಮೆಲ್ಲರ ಪರವಾಗಿ ಕಿಚ್ಚನಿಗೆ ಒಂದು ವಿಶೇಷವಾದ ಅದ್ದೂರಿ ಅಚ್ಚರಿ ಕಾದಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಚ್ಚರಿಯನ್ನು ಆನಂದಿಸಿ, ಕಿಚ್ಚನನ್ನು ಹರಸಿ #ನಂದಿ ಲಿಂಕ್” ಎಂದು ಪ್ರಿಯ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.

ಇದರ ಜೊತೆಗೆ ಕಿಚ್ಚ ಸುದೀಪ್ ಅವರ 46ನೇ ಸಿನಿಮಾದ ಶೀರ್ಷಿಕೆ ಕೂಡ ಆಗುತ್ತಿದ್ದು, ಬಹುದೊಡ್ಡ ಬಜೆಟ್ ನಲ್ಲಿ ತಯಾರಾಗಲಿರುವ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು?

ವಿಕ್ರಾಂತ್ ರೋಣ ಚಿತ್ರದ ನಂತರ ಯಾವ ಅವತಾರ ತಾಳಿ ಕಿಚ್ಚ ತೆರೆಗಪ್ಪಳಿಸಲಿದ್ದಾರೆ? ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಇದರ ಜೊತೆಗೆ ‘ಅರಸು ಕ್ರಿಯೇಶನ್’ ಸಂಸ್ಥೆ ವತಿಯಿಂದ ಕಿಚ್ಚ ಸುದೀಪ್ ಅವರಿಗೆ ವಿಶೇಷ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರ ಹೆಸರನ್ನು ಆಕಾಶದಲ್ಲಿ ಇರುವಂತಹ ನಕ್ಷತ್ರ ಒಂದಕ್ಕೆ ಇಡಲಾಗುವ ಮಾಹಿತಿ ಕೂಡ ಹೊರ ಬಿದ್ದಿದೆ.

Comments are closed.