ಪಾಪ ಪ್ರತಿದಿನ ಕಣ್ಣೀರಿನೊಂದಿಗೆ ಕಾಲ ಕಳೆಯುತ್ತಿರುವ ಡಿಸ್ಕೋ ಶಾಂತಿ

ನನ್ನ ಗಂಡ ಮತ್ತು ಮಗಳನ್ನು ನಾನು ಮರೆಯಲು ಸಾಧ್ಯವಿಲ್ಲ ಮತ್ತು ಪ್ರತಿದಿನ ಕಣ್ಣೀರಿನೊಂದಿಗೆ ಕಳೆಯುತಿದೇನೆ

ಶಾಂತಾ ಕುಮಾರಿ, ಡಿಸ್ಕೋ ಶಾಂತಿ (Disco Shanthi) ಎಂದೇ ಪ್ರಸಿತರಾಗಿದ್ದ ನೃತ್ಯ ಕಲಾವಿದೆ (Dance Actor) , ಇವರು ಭಾರತೀಯ ಚಿತ್ರ ರಂಗದ  ನಟಿಯಾಗಿದ್ದು, ಐಟಂ ಡಾನ್ಸ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಕ್ಕಾಗಿ ದಕ್ಷಿಣ ಭಾರತದಲ್ಲಿ (In South India) ವಿಶೇಷವಾಗಿ ಪ್ರಸಿದ್ಧರಾಗಿದ್ದಾರು.

ಇವರು ಕನ್ನಡ, ತಮಿಳು, ತೆಲುಗು,ಮಲಯಾಳಂ, ಹಿಂದಿ ಮತ್ತು ಒಡಿಯಾ ಸೇರಿದಂತೆ ಭಾರತದ ವಿವಿಧ ಭಾಷೆಗಳಲ್ಲಿ 900 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ (Movies) ಕಾಣಿಸಿಕೊಂಡಿದ್ದಾರೆ.

ಮಾಜಿ ಗ್ಲಾಮರ್ (Ex-glamour) ನಟಿ ಡಿಸ್ಕೋ ಶಾಂತಿ ಅವರು ತಮ್ಮ ಪತಿಯ ಸಾವಿನ ನಂತರ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಮತ್ತು ಪತಿಯಿಂದ ಸಹಾಯಕ್ಕಾಗಿ ಹಣ ಪಡೆದವರು ಯಾರು ಕೂಡ ಕೊಟ್ಟ ಹಣ್ಣವನು ವಾಪಸ್ ನೀಡಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಪಾಪ ಪ್ರತಿದಿನ ಕಣ್ಣೀರಿನೊಂದಿಗೆ ಕಾಲ ಕಳೆಯುತ್ತಿರುವ ಡಿಸ್ಕೋ ಶಾಂತಿ - Kannada News

ಡಿಸ್ಕೋ ಶಾಂತಿ ತಮಿಳು ಚಿತ್ರರಂಗದ ಖ್ಯಾತ ನಟ ಸಿ ಎಲ್ ಅನಂತನ್ ಅವರ ಪುತ್ರಿ. ಕೌಟುಂಬಿಕ ಪರಿಸ್ಥಿತಿಯಿಂದಾಗಿ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದರು. ‘ಡಿಸ್ಕೋ’ ಡ್ಯಾನ್ಸ್‌ನಲ್ಲಿ ನಿಪುಣರಾಗಿದ್ದರಿಂದ ‘ಡಿಸ್ಕೋ’ ಶಾಂತಿ ಎಂಬ ಹೆಸರಿನೊಂದಿಗೆ ಅಂಟಿಕೊಂಡಿದೆ.

ಪಾಪ ಪ್ರತಿದಿನ ಕಣ್ಣೀರಿನೊಂದಿಗೆ ಕಾಲ ಕಳೆಯುತ್ತಿರುವ ಡಿಸ್ಕೋ ಶಾಂತಿ - Kannada News

ಡಿಸ್ಕೋ ಶಾಂತಿ ಅವರ ತಂಗಿ ಲಲಿತಾ ಕುಮಾರಿ ಕೂಡ ಪ್ರಖ್ಯಾತ ನಟಿ. ಲಲಿತಾ ಕುಮಾರಿ ಅವರು ನಟ ಪ್ರಕಾಶ್‌ರಾಜ್ (Prakash raj) ಅವರ ಮಾಜಿ ಪತ್ನಿ.

ಡಿಸ್ಕೋ ಶಾಂತಿ ತೆಲುಗು ಪ್ರಖ್ಯಾತ ನಟ ಶ್ರೀಹರಿ (Srihari) ಯನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರು ತಮ್ಮ ವೈವಾಹಿಕ ಜೀವನ ಸಂತೋಷದಿಂದ ನಡೆಸುತಿದ್ದರು.  ಪತಿಯೊಂದಿಗೆ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ಆದರೆ ವಿದಿ ಅವರ ಜೀವನದಲ್ಲಿ ಬಿರುಗಾಳಿಯನೆ ಎಬ್ಬಿಸಿಬಿಟ್ಟಿತು.

ಹತ್ತು ವರ್ಷಗಳ ಹಿಂದೆ ಮಗಳು ಅಕ್ಷರಾ ಕೇವಲ ನಾಲ್ಕು ತಿಂಗಳ ಮಗುವಾಗಿದ್ದಾಗ ಶ್ರೀಹರಿ ನಿಧನರಾದರು.

ಶ್ರೀಹರಿ ಸಾವಿಗೂ ಮುನ್ನ ಹಲವು ಜನರಿಗೆ ಸಹಾಯ ಮಾಡಿದ್ದರು, ಆದರೆ ಯಾರೂ ಸಹ ಪ್ರಾಮಾಣಿಕವಾಗಿ ಹಣವನ್ನು ಹಿಂದಿರುಗಿಸಿಲ್ಲ.

ಆದರೆ ಅವರು ಕೆಲವು ಜನರಿಗೆ ಸಾಲ ಪಾವತಿಸಬೇಕಾಗಿತ್ತು. ಚಿನ್ನಾಭರಣ, ಕಾರು, ಜಮೀನು ಎಲ್ಲವನ್ನೂ ಮಾರಿ ಸಾಲ ತೀರಿಸಿದ್ದರು . ಕಂತುಗಳನ್ನು ಪಾವತಿಸಲು ಸಾಧ್ಯವಾಗದ ಕಾರಣ ಇವರ ಕಾರೊಂದನ್ನು ಬ್ಯಾಂಕ್ ನವರು ವಾಪಸ್ ಪಡೆದಿದ್ದರು.

ಪಾಪ ಪ್ರತಿದಿನ ಕಣ್ಣೀರಿನೊಂದಿಗೆ ಕಾಲ ಕಳೆಯುತ್ತಿರುವ ಡಿಸ್ಕೋ ಶಾಂತಿ - Kannada News

ಈಗ ಅವರ ಪತಿ ಕಟ್ಟಿಸಿದ ಎರಡು ಮನೆಯಿಂದ ಬರುವ ಬಾಡಿಗೆಯಲ್ಲಿಯೇ ಶಾಂತಿ  ಸಂಸಾರ ನಡೆಸುತಿದ್ದಾರೆ.

ಚಿತ್ರರಂಗದ ಯಾರೊಬ್ಬರೂ ತಮಗೆ ಸಹಾಯ ಮಾಡಿಲ್ಲ ಎಂದು ಅವರು ಒಂದು ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.  ಅವರು ತಮ್ಮ ಪತಿಯ ಒಳ್ಳೆಯ ಕಾರ್ಯಗಳು ವ್ಯರ್ಥವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದರು.

Comments are closed.