ಸಿಲ್ಕ್ ಸ್ಮಿತಾ ಅರ್ಧ ತಿಂದು ಉಳಿಸಿದ ಸೇಬು 38 ವರ್ಷಗಳ ಹಿಂದೆ ಎಷ್ಟಕ್ಕೆ ಹರಾಜು ಕೂಗಲಾಯಿತು ಗೊತ್ತಾ ?

ಈಕೆ ಸಿನಿಮಾದಲ್ಲಿದ್ದರೆ ಅ ಸಿನಿಮಾ ಸೂಪರ್ ಹಿಟ್ ಅಂತ, ಸಿಲ್ಕ್ ಆ ರೇಂಜ್ ಇಂಪ್ಯಾಕ್ಟ್ ಮಾಡಿದರು

ಸಿಲ್ಕ್ ಸ್ಮಿತಾ (Silk Smitha) ಈ ಹೆಸರು 80ರ ದಶಕದಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಈ ಚೆಲುವೆ ತನ್ನ ಅಮಲು ಕಣ್ಣುಗಳಿಂದ ಪಡ್ಡೆ ಹುಡುಗರ ಹೃದಯವನ್ನು ಆಯಸ್ಕಾಂತದಂತೆ ಆಕರ್ಷಿಸಿದ್ದಳು. ಆ ಅವಧಿಯಲ್ಲಿ ಸಿಲ್ಕ್ ಸ್ಮಿತಾ ಸಿನಿಮಾದಲ್ಲಿ ಐಟಂ ಸಾಂಗ್ ಗಳಲ್ಲಿ ಕಾಣಿಸಿಕೊಂಡು ತನ್ನ ಸೌಂದರ್ಯದಿಂದಲೇ ಬೆಳ್ಳಿತೆರೆಯಲ್ಲಿ ಜಾದೂ ಮಾಡಿದ್ದಾಳೆ ಈ ಚೆಲುವೆ.

ಆ ಸಮಯದಲ್ಲಿ ಸಿಲ್ಕ್ ಸ್ಮಿತಾಗೆ ತುಂಬಾ ಕ್ರೇಜ್ ಇತ್ತು. ಯಾವುದೇ ಚಿತ್ರ ಇರಲಿ, ನಾಯಕನೇ ಇರಲಿ, ಸಿಲ್ಕ್  ಐಟಂ ಸಾಂಗ್  ಇರಲೇಬೇಕಾಗಿತ್ತು. ಈಕೆ ಸಿನಿಮಾದಲ್ಲಿದ್ದರೆ ಅ ಸಿನಿಮಾ ಸೂಪರ್ ಹಿಟ್ ಅಂತ, ಸಿಲ್ಕ್ ಆ ರೇಂಜ್ ಇಂಪ್ಯಾಕ್ಟ್ ಮಾಡಿದರು.

ಆದರೆ ಆ ದಿನಗಳಲ್ಲಿ ಆಕೆಯ ಕ್ರೇಜ್ ಹೇಗಿತ್ತು ಎನ್ನಲು ಈ ಒಂದು ಸಣ್ಣ ಉದಾಹರಣೆ ಸಾಕು. ಅದೇನೆಂದರೆ, ಸಿಲ್ಕ್ ಸ್ಮಿತಾ ವಿಚಾರದಲ್ಲಿ ತಮಿಳು ಅಭಿಮಾನಿಗಳ ವರ್ತನೆಯೇ ಬೇರೆಯಾಗಿತ್ತು. ಇಮ್ಮಾನಿ ಬುಡಕಟ್ಟು ಜನಾಂಗದವರು 1984 ರಲ್ಲಿ ಒಂದು ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದರು.

ಸಿಲ್ಕ್ ಸ್ಮಿತಾ ಅರ್ಧ ತಿಂದು ಉಳಿಸಿದ ಸೇಬು 38 ವರ್ಷಗಳ ಹಿಂದೆ ಎಷ್ಟಕ್ಕೆ ಹರಾಜು ಕೂಗಲಾಯಿತು ಗೊತ್ತಾ ? - Kannada News

ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಸಿಲ್ಕ್ ಸ್ಮಿತಾ ಸೇಬು ಹಣ್ಣನ್ನು ತಿನ್ನುತ್ತಿದ್ದಾಗ, ಶಾಟ್ ರೆಡಿಯಾಗಿದೆ ಎಂದು ಸಿಲ್ಕ್ ಸ್ಮಿತಾ ಗೆ ಕರೆ ಬಂದಾಗ, ಅವಳು ಮೇಕ್ಅಪ್ ಗಾಗಿ ರೂಮ್ ಗೆ ಹೋದಳು, ಆಗ ಅಲ್ಲಿ ಅರ್ಧ ಕಚ್ಚಿದ ಸೇಬನ್ನು ಅಲ್ಲಿಯೇ ಬಿಟ್ಟುಹೋದಳು.

Unknown Facts About Actress Silk Smitha

ಸಿಲ್ಕ್ ಸ್ಮಿತಾ ಕಚ್ಚಿದ ಸೇಬು ಆಕೆಯ ಮೇಕಪ್ ಮ್ಯಾನ್  ಆ ಸ್ಥಳದಲ್ಲೇ ಇಟ್ಟರು. ಸೆಟ್ ನಲ್ಲಿದ್ದವರು ಆ ಸೇಬಿಗಾಗಿ ಪೈಪೋಟಿ ನಡೆಸಿದರು. ಮತ್ತು ಅಂತಿಮವಾಗಿ, ಅಂದು ಸಿಲ್ಕ್ ಅರ್ಧ ತಿಂದ ಆ ಸೇಬು ರೂ. 26 ಸಾವಿರದಿಂದ ಒಂದು ಲಕ್ಷ ರೂವರೆಗೆ ಅಲ್ಲಿರುವ ಜನರು ಹರಾಜು ಕೂಗಲು ಪ್ರಾರಂಭಿಸಿದರು ಅದು ಆಗಿನ ಕಾಲದ ಸಿಲ್ಕ್ ಸ್ಮಿತಾ ರೇಂಜ್ ಆಗಿತು. ಸುಮಾರು 38 ವರ್ಷಗಳ ಹಿಂದೆ ನಡೆದ ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.