ನಿಮಗಿದು ಗೊತ್ತಾ? ನಮ್ಮ ರಾಜ್ಯದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಸಿಗುವ ಸಂಬಳ ಎಷ್ಟಿರಬಹುದು

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತಾ? ಪೊಲೀಸ್ ಕಾನ್ಸ್ಟೇಬಲ್ ಆದವರಿಗೆ ಸಿಗುವ ಸಂಬಳ ಎಷ್ಟು ಎನ್ನುವ ಬಗ್ಗೆ ಇಂದು ನಿಮಗೆ ಮಾಹಿತಿ ತಿಳಿಸುತ್ತೇವೆ ನೋಡಿ.

ನಮ್ಮ ದೇಶದಲ್ಲಿ ಅತ್ಯಂತ ಗೌರವಾನ್ವಿತ ಕೆಲಸಗಳಲ್ಲಿ ಒಂದು ಪೊಲೀಸ್ ಇಲಾಖೆಯ ಕೆಲಸ (Police Job) ಎಂದು ಹೇಳಬಹುದು. ಸರ್ಕಾರದ ಕೆಲಸ ಎಂದರೆ ದೇವರ ಕೆಲಸವೇ ಎಂದು ಈ ಡಿಪಾರ್ಟ್ಮೆಂಟ್ ಗೆ ಸೇವೆ ಸಲ್ಲಿಸುವ ಸಾಕಷ್ಟು ಪೊಲೀಸ್ ಅಧಿಕಾರಿಗಳಿದ್ದಾರೆ.

ಪೊಲೀಸ್ ಇಲಾಖೆ ಕೇಂದ್ರ ಸರ್ಕಾರಕ್ಕೆ ಸೇರಿದ ಇಲಾಖೆ ಆಗಿದ್ದು, ಇಲ್ಲಿ ಕೆಲಸ ಮಾಡುವ ಕನಸು ಹಲವರಲ್ಲಿ ಇರುತ್ತದೆ.. ಹಾಗೆಯೇ ಪೊಲೀಸ್ ಇಲಾಖೆಯು ಜನರ ಪ್ರಾಣ ಮತ್ತು ಎಲ್ಲಾ ಥರದ ರಕ್ಷಣೆ ನೀಡಲು, ಹಗಲು ರಾತ್ರಿ ಎನ್ನದೇ 24 ಗಂಟೆಗಳ ಕಾಲವು ಕೆಲಸ ಮಾಡುತ್ತದೆ.

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತಾ? ಪೊಲೀಸ್ ಕಾನ್ಸ್ಟೇಬಲ್ (Police Constable Job) ಆದವರಿಗೆ ಸಿಗುವ ಸಂಬಳ ಎಷ್ಟು ಎನ್ನುವ ಬಗ್ಗೆ ಇಂದು ನಿಮಗೆ ಮಾಹಿತಿ ತಿಳಿಸುತ್ತೇವೆ ನೋಡಿ.

ನಿಮಗಿದು ಗೊತ್ತಾ? ನಮ್ಮ ರಾಜ್ಯದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಸಿಗುವ ಸಂಬಳ ಎಷ್ಟಿರಬಹುದು - Kannada News

ಪೊಲೀಸ್ ಕೆಲಸ ಮಾಡುವವರಿಗೆ ಸಿಗುವ ಸಂಬಳ (Police Salary) ₹23,500 ರೂಪಾಯಿಯಿಂದ ₹47,650 ರೂಪಾಯಿಗಳವರೆಗು ಇರುತ್ತದೆ. ಈ ತಿಂಗಳ ಸಂಬಳದ ಶ್ರೇಣಿಯು ಎಲ್ಲಾ ಸರ್ಕಾರಿ ಕೆಲಸಗಳಿಗೆ ಇದೇ ಥರವೇ ಇರುತ್ತದೆ, ಆದರೆ ಕೆಲಸ ಮಾಡುವ ರೀತಿ, ವಿಧಾನ ಬೇರೆ ಬೇರೆ ರೀತಿ ಇರುತ್ತದೆ.

ಹಾಗೆಯೇ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ 12 ತಿಂಗಳ ಸಂಬಳದ ಜೊತೆಗೆ 1 ತಿಂಗಳು ಹೆಚ್ಚುವರಿಯಾಗಿ, 13 ತಿಂಗಳು ಸಂಬಳ ಸಿಗುತ್ತದೆ.

ಕಾನ್ಸ್ಟೇಬಲ್ ಗಳಿಗೆ ಬೇಸಿಕ್ ಸಂಬಳ ಎಂದು ಮೊತ್ತವನ್ನು ಫಿಕ್ಸ್ ಮಾಡಲಾಗುತ್ತದೆ, ಅದರ ಜೊತೆಗೆ ಇನ್ನಷ್ಟು ಸೌಲಭ್ಯಗಳು ಅವರಿಗೆ ಸಿಗಲಿದ್ದು, ಅದಕ್ಕಾಗಿಯು ಹಣಪಾವತಿ ಮಾಡಲಾಗುತ್ತದೆ.

ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, ಒಬ್ಬ ಕಾನ್ಸ್ಟೇಬಲ್ ಸಂಬಳ ₹25,800 ರೂಪಾಯಿ ಆದರೆ.. ಅದಕ್ಕೆ 34% DA ಹಣ ಸೇರಿಕೊಳ್ಳುತ್ತದೆ, ಇದು ₹9030 ರೂಪಾಯಿ ಆಗುತ್ತದೆ. ಜೊತೆಗೆ 24% HRA ಹಣ ಸೇರುತ್ತದೆ, ಇದು ಮನೆ ನಿರ್ವಹಿಸುವ ಖರ್ಚು, ಈ ಕೆಲಸದ ಒಟ್ಟು ಹಣ ₹6,192 ರೂಪಾಯಿಗಳು.

Karnataka police constable

ಇಲ್ಲಿ ಮನೆ ನಿರ್ವಹಿಸಲು ಕೊಡುವ ಹಣವು, ಗ್ರಾಮೀಣ ವಿಭಾಗ, ನಗರ ವಿಭಾಗ ಮತ್ತು ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಕೆಲಸ ಮಾಡುವವರಿಗೆ 8%, 16% ಮತ್ತು 24% ಎಂದು ವಿಭಾಗ ಮಾಡಲಾಗಿರುತ್ತದೆ.

ಆ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಇಂತಿಷ್ಟು ಹಣ ಎಂದು ಕೊಡಲಾಗುತ್ತದೆ. ಇದಷ್ಟೇ ಅಲ್ಲದೆ, ಕಷ್ಟ ಭರಿಸಲು ₹3000 ರೂಪಾಯಿಗಳನ್ನು ಕೊಡಲಾಗುತ್ತಿದೆ.. ಇದಷ್ಟೇ ಅಲ್ಲದೆ, ರೇಷನ್ ಗೆ, ಆರೋಗ್ಯ ಕಾರಣಕ್ಕೆ, ಯುನಿಫಾರ್ಮ್ ಗೆ ಹೀಗೆ ಸಾಕಷ್ಟು ಸೌಲಭ್ಯ ಒದಗಿಸಿಕೊಡಲಾಗುತ್ತದೆ.

ಅಷ್ಟೇ ಅಲ್ಲದೆ, 7ನೇ ವೇತನ ಆಯೋಗ ಆಗುವುದು ತಡ ಆಗಿದ್ದಕ್ಕೆ, ರಾಜ್ಯ ಸರ್ಕಾರವು 17% ಮಧ್ಯಂತರ ಪರಿಹಾರ ಕೂಡ ನೀಡುತ್ತಿದೆ. ಇದೆಲ್ಲವೂ ಸೇರಿದರೆ ಒಬ್ಬ ಕಾನ್ಸ್ಟೇಬಲ್ ಗೆ ₹50,000 ವರೆಗು ಸಂಬಳ ಸಿಗುತ್ತದೆ. ಹಾಗೆಯೇ ನಿವೃತ್ತಿ ಹೊಂದಿದ ನಂತರ KGID ಮತ್ತು NPS ಮೂಲಕ ಪೆನ್ಶನ್ ಕೊಡುವುದಕ್ಕಾಗಿ ಸ್ವಲ್ಪ ಹಣವನ್ನು ಕೂಡ ಕಟ್ ಮಾಡಲಾಗುತ್ತದೆ. ಕಟ್ ಮಾಡಿದ ನಂತರ ₹43,000 ಕೊಡಲಾಗುತ್ತದೆ.

ಆದರೆ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರದ ಎಲ್ಲಾ ರಜಾ ದಿನಗಳನ್ನು ಪಡೆಯುವ ಸೌಲಭ್ಯ ಇರುವುದಿಲ್ಲ, ಅವರು ಎಲ್ಲಾ ದಿನಗಳಲ್ಲೂ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಅವರಿಗೆ, ಒಂದು ತಿಂಗಳ ಸಂಬಳದ ಹಣ ಕೊಡಲಾಗುತ್ತದೆ.

PC ಹಾಗೂ SI ಗೆ ಒಂದು ತಿಂಗಳ ಸಂಬಳ, ASI ಮತ್ತು PSI 15 ದಿನಗಳ ಸಂಬಳವನ್ನು ಹೆಚ್ಚುವರಿಯಾಗಿ ಕೊಡಲಾಗುತ್ತದೆ. ಇಷ್ಟು ಸಂಬಳ ಬರುವುದು, ಸರ್ಕಾರದ 6ನೇ ವೇತನ ಆಯೋಗದಿಂದ.. ಇದಿಷ್ಟು ವಿಚಾರದ ಜೊತೆಗೆ, ಹೊಸದಾಗಿ ಕಾನ್ಸ್ಟೇಬಲ್ ಸೇರುವವರಿಗೆ ಟ್ರೇನಿಂಗ್ ವೇಳೆಯಲ್ಲಿ ಕೂಡ ಸಂಬಳ ಸಿಗುತ್ತದೆ.

Do You Know What is the salary of police constables

Leave A Reply

Your email address will not be published.