ರೂ. 2000 ನೋಟುಗಳ ಅಮಾನ್ಯೀಕರಣ ಪ್ರಕ್ರಿಯೆ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆ ನಂತರ ರೂ. 500 ನೋಟುಗಳನ್ನು ಆರ್ ಬಿಐ ರದ್ದು ಮಾಡಲಿದೆ ಎಂಬ ವಾದವಿದೆ. ರೂ.500 ನೋಟುಗಳನ್ನು ರದ್ದುಪಡಿಸಿ, ಅವುಗಳ ಜಾಗದಲ್ಲಿ 1000 ನೋಟುಗಳು ಲಭ್ಯವಾಗಲಿವೆ ಎಂಬ ಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಆರ್‌ಬಿಐ ಸ್ಪಷ್ಟನೆ ನೀಡಿದೆ. ರೂ. 1000 ನೋಟುಗಳನ್ನು ವಾಪಸ್ ತರುವ ಉದ್ದೇಶವಿಲ್ಲ, ರೂ. 500 ನೋಟುಗಳನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಆರ್‌ಬಿಐ ಬಹಿರಂಗಪಡಿಸಿದೆ.