ಫ್ಲಿಪ್‌ಕಾರ್ಟ್‌ ವಿಂಟರ್ ಫೆಸ್ಟ್ ಸೆಲ್ ಮೋಟರೋಲಾ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ

ಪ್ರಮುಖ ಈ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ ವಿಂಟರ್ ಫೆಸ್ಟ್ ಸೆಲ್ ನಡೆಯುತ್ತಿದೆ. ಈ ಸಮಯದಲ್ಲಿ ಮೋಟಾರೋಲಾ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಬೆಲೆ ನೇರವಾಗಿ ರೂ. 5 ಸಾವಿರ ಕಡಿಮೆ ಆಗಿದೆ. 

Motorola Edge 40 Neo: ಈ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕ್ರೇಜಿ ಸ್ಮಾರ್ಟ್‌ಫೋನ್‌ಗಳಲ್ಲಿ ಮೋಟರೋಲಾ ಎಡ್ಜ್ 40 ನಿಯೋ 5ಜಿ (Motorola Edge 40 Neo 5g) ಒಂದು. ಈ ಫೋನ್ 2023 ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗಿದೆ. ಈ ಸ್ಮಾರ್ಟ್‌ಫೋನ್‌ಗೆ (Smartphone) ಭಾರೀ ಪ್ರತಿಕ್ರಿಯೆ ಲಭಿಸಿದೆ. ಆಕರ್ಷಕ ಫೀಚರ್‌ ನೊಂದಿಗೆ ಈ ಹ್ಯಾಂಡ್ ಸೆಟ್ ಬಿಡುಗಡೆ ಆಯಿತು.

ಆದರೆ  ಮೋಟರೋಲಾ ಎಡ್ಜ್ 40 ನಿಯೋ ಬೆಲೆ ಈಗ ಭಾರೀ ಪ್ರಮಾಣದಲ್ಲಿ ಇಳಿದಿದೆ. ಪ್ರಮುಖ ಈ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ ವಿಂಟರ್ ಫೆಸ್ಟ್ ಸೆಲ್ ನಡೆಯುತ್ತಿದೆ. ಈ ಸಮಯದಲ್ಲಿ ಮೋಟಾರೋಲಾ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಬೆಲೆ ನೇರವಾಗಿ ರೂ. 5 ಸಾವಿರ ಕಡಿಮೆ ಆಗಿದೆ.

Flipkart ನಲ್ಲಿ Motorola Edge 40 Neo ಬೆಲೆ ಕಡಿತ

ಮೋಟರೋಲಾ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಎರಡು ವೆರಿಯಂಟ್ಸ್‌ನಲ್ಲಿದೆ. 8 ಜಿಬಿ ರ್ಯಾಮ್ + 128 ಜಿಬಿ ಸ್ಟೋರೇಜ್ ವೆರಿಯಂಟ್ ನ ಬೆಲೆ  ರೂ. 27,000 ಆದರೆ.. ಈಗ ರೂ. 22,999ಕ್ಕೆ ಲಭ್ಯವಿದೆ ಹಾಗೆಯೇ ಮತ್ತೊಂದು ವೆರಿಯಂಟ್ 12 ಜಿಬಿ ರ್ಯಾಮ್ + 256 ಜಿಬಿ ಸ್ಟೋರೇಜ್ ಬೆಲೆ ರೂ. 29,999 ಆದರೆ.. ಈಗ ರೂ. 24,999ಕ್ಕೆ ಖರೀದಿಸಬಹುದು. ಹಾಗೆಯೇ ಆಕ್ಸಿಸ್ ಬ್ಯಾಂಕ್ ಕಾರ್ಡ್‌ ನಲ್ಲಿ ಗ್ರಾಹಕರು ಶೇಕಡಾ 5% ಕ್ಯಾಷ್‌ಬ್ಯಾಕ್ ಕೂಡ ಪಡೆಯಬಹುದು.

ಫ್ಲಿಪ್‌ಕಾರ್ಟ್‌ ವಿಂಟರ್ ಫೆಸ್ಟ್ ಸೆಲ್ ಮೋಟರೋಲಾ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ - Kannada News

ಇಷ್ಟೇ ಅಲ್ಲದೆ ಬದಲಾಗಿ ಗ್ರಾಹಕರು ತಮ್ಮ ಹಳೆಯ ಫೋನ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳುವ (Exchange offer) ಮೂಲಕ ರೂ.17,050 ವರೆಗೆ ಬೆಲೆ ಕಡಿತಗೊಳಿಸಬಹುದು. ಇನ್ನು ಮೋಟರೋಲಾ ಎಡ್ಜ್ 40 ನಿಯೋ ಸ್ಪೆಸಿಫಿಕೇಷನ್ಸ್ ಗಮನಿಸಿದರೆ ಮೀಡಿಯಾಟೆಕ್ ಡೈಮೆನ್ಸಿಟಿ 7030 ಎಸ್ಒಸಿ ಮೂಲಕ ಈ ಗಡ್ಜೆಟ್ ಶಕ್ತಿಯನ್ನು ಪಡೆಯುತ್ತದೆ.

ಫ್ಲಿಪ್‌ಕಾರ್ಟ್‌ ವಿಂಟರ್ ಫೆಸ್ಟ್ ಸೆಲ್ ಮೋಟರೋಲಾ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ - Kannada News
Image source: Zee news

ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೇಶನ್ ಸಪೋರ್ಟ್ ನೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರೀ ಸೆನ್ಸಾರ್, ಮತ್ತು ಅಲ್ಟ್ರಾ-ವೈಡ್-ಯಾಂಗಿಲ್ ಲೆನ್ಸ್‌ನೊಂದಿಗೆ 13-ಮೆಗಾಪಿಕ್ಸೆಲ್ ಸೆನ್ಸಾರ್ ಇರಿಸಲಾಗಿದೆ. ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. 68W ವೈರ್ಡು ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ 5,000ಎಂಎಹೆಚ್ ಬ್ಯಾಟರಿಯನ್ನು ಈ ಹ್ಯಾಂಡ್‌ಸೆಟ್‌ನಲ್ಲಿ ನೀಡಲಾಗಿದೆ.

ಆಂಡ್ರಾಯ್ಡ್ 13 ರ‌ನ್‌ಗೆ ಈ ಫೋನ್.. ವೈ-ಫೈ, ಬ್ಲೂಟೂತ್ 5.3, ಎಫ್‌ಎಮ್‌ ರೇಡಿಯೋ, ಜಿಪಿಎಸ್‌, ಇ-ಜೀಪಿಎಸ್‌, ಗೆಲಿಲಿಯೋ, 3.5 ಎಂಎಂ ಹೆಡ್‌ಫೋನ್‌ ಜಾಕ್‌ ಮತ್ತು ಯೂಎಸ್‌ಬಿ ಟೈಪ್‌-ಸಿ ಪೋರ್ಟ್‌ನಂತಹ ಕನೆಕ್ಟಿವಿಟಿ ಫೀಚರ್‌ಗಳನ್ನು ಕಲ್ಪಿಸಲಾಗಿದೆ .

Comments are closed.