ಕಾಣೆಯಾದ ಒಂದು ಬಿಸ್ಕೆಟ್‌ಗಾಗಿ ಗ್ರಾಹಕನಿಗೆ ಒಂದು ಲಕ್ಷ ರೂಪಾಯಿ ಪಾವತಿಸಿದ ಸನ್ ಫಿಸ್ಟ್ ಮಾರಿ ಲೈಟ್!

ಸನ್‌ಫಿಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕೆಟ್‌ನಲ್ಲಿ ಒಂದು ಬಿಸ್ಕೆಟ್ ಕಾಣೆಯಾಗಿದೆ ಎಂದು ಗ್ರಾಹಕರೊಬ್ಬರು ದೂರು ನೀಡಿದ್ದಾರೆ

ಬಿಸ್ಕೆಟ್ ಬಾಕ್ಸ್ ನಲ್ಲಿ ಒಂದು ಕಡಿಮೆ ಬಿಸ್ಕತ್ ನೀಡಿದಕ್ಕೆ ಐಟಿಸಿ (ITC) ಕಂಪನಿಗೆ ಭಾರಿ ನಷ್ಟ ಎದುರಾಗಿದೆ. ಕೇವಲ ಒಂದು ಬಿಸ್ಕೆಟ್‌ಗೆ ಕಂಪನಿಯು ಒಂದು ಲಕ್ಷ ರೂಪಾಯಿ ದಂಡ (Fine) ಪಾವತಿಸಬೇಕಾಗಿದೆ. ಸನ್ ಫಿಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕೆಟ್ ನಲ್ಲಿ ಒಂದು ಬಿಸ್ಕತ್ ಕಾಣೆಯಾಗಿದೆ ಎಂದು ಗ್ರಾಹಕರೊಬ್ಬರು ದೂರಿದ್ದಾರೆ.

ಸಿಕ್ಕಿರುವ ಮಾಹಿತಿ ಪ್ರಕಾರ ಚೆನ್ನೈನಿಂದ ಡಿಸೆಂಬರ್ (December) 2021 ರಂದು ಪಿ. ದಿಲ್ಲಿಬಾಬು ನಾಯಿಗಳಿಗೆ ಆಹಾರಕ್ಕಾಗಿ ಸನ್‌ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್‌ಗಳನ್ನು ಖರೀದಿಸಿದರು. ಆದರೆ ಬಾಕ್ಸ್ ನಲ್ಲಿ 16ರ ಬದಲು 15 ಬಿಸ್ಕೆಟ್ ಗಳು ಇರುವುದನ್ನು ಗ್ರಾಹಕರು (Customer) ಗಮನಿಸಿದ್ದಾರೆ. ಇದಾದ ನಂತರ ವ್ಯಕ್ತಿ ಅಂಗಡಿಯವರಿಗೆ ಮತ್ತು ಐಟಿಸಿ ಕಂಪನಿಗೆ ಈ ಬಗ್ಗೆ ದೂರು ನೀಡಿದ್ದರು. ಆದರೆ ಇಬ್ಬರಿಂದಲೂ ಸಮಾಧಾನಕರ ಉತ್ತರ ಸಿಗಲಿಲ್ಲ.

ಇದರಿಂದ ಕುಪಿತಗೊಂಡ ದಿಲಿಬಾಬು ನೇರವಾಗಿ ಗ್ರಾಹಕ ನ್ಯಾಯಾಲಯಕ್ಕೆ (Consumer court) ತೆರಳಿ ದೂರು ದಾಖಲಿಸಿದ್ದಾರೆ. ಈ ವೇಳೆ ಕಂಪನಿಯ ವಂಚನೆಯ ಸಂಪೂರ್ಣ ವಿವರ ನೀಡಿದರು. ಐಟಿಸಿ ಕಂಪನಿ ಪ್ರತಿದಿನ 50 ಲಕ್ಷ ಬಿಸ್ಕತ್‌ಗಳನ್ನು ತಯಾರಿಸುತ್ತದೆ. ಒಂದು ಬಿಸ್ಕೆಟ್ ಬೆಲೆ 75 ಪೈಸೆ. ಈ ಲೆಕ್ಕಾಚಾರದ ಪ್ರಕಾರ, ಕಂಪನಿಯು (Company) ಗ್ರಾಹಕರಿಗೆ ಪ್ರತಿದಿನ 29 ಲಕ್ಷದವರೆಗೆ ವಂಚಿಸುತ್ತದೆ.

ಕಾಣೆಯಾದ ಒಂದು ಬಿಸ್ಕೆಟ್‌ಗಾಗಿ ಗ್ರಾಹಕನಿಗೆ ಒಂದು ಲಕ್ಷ ರೂಪಾಯಿ ಪಾವತಿಸಿದ ಸನ್ ಫಿಸ್ಟ್ ಮಾರಿ ಲೈಟ್! - Kannada News

ಈ ಬಾರಿ ತೂಕದಲ್ಲಿ ಬಿಸ್ಕತ್ ಮಾರಾಟ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ. ಸನ್‌ಫಿಸ್ಟ್ (sunfeast) ಮಾರಿ ಲೈಟ್ ಬಿಸ್ಕೆಟ್ ಪ್ಯಾಕೆಟ್‌ನ ತೂಕ 76 ಗ್ರಾಂ. ಆದರೆ ನ್ಯಾಯಾಲಯದ (Court) ವಿಚಾರಣೆ ವೇಳೆ 15 ಬಿಸ್ಕತ್‌ಗಳಿದ್ದ ಬ್ಯಾಗ್‌ನ ತೂಕ 74 ಗ್ರಾಂ ಎಂದು ತಿಳಿದುಬಂದಿದೆ.

ಆದರೆ, ನಂತರ ನಿಯಮಾನುಸಾರ ಗ್ರಾಹಕ ನ್ಯಾಯಾಲಯ ಕಂಪನಿಗೆ ದಂಡ ವಿಧಿಸಿದೆ. ಎರಡು ವರ್ಷಗಳ ನಂತರ ಪರಿಹಾರವಾಗಿ ದಿಲಿಬಾಬುಗೆ 1 ಲಕ್ಷ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಕೆಲವು ಬ್ಯಾಚ್‌ಗಳ ಬಿಸ್ಕೆಟ್‌ಗಳ ಮಾರಾಟವನ್ನು ಸಹ  ನಿಲ್ಲಿಸುವಂತೆಯೂ ಕಂಪನಿಗೆ ನ್ಯಾಯಾಲಯ ಆದೇಶಿಸಲಾಗಿದೆ.

Comments are closed.