ರೇಷನ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದ್ರೆ ಅಂತವರ ರೇಷನ್ ಕಾರ್ಡ್ ರದ್ದು; ಇಲಾಖೆಯ ಮಹತ್ವದ ಸೂಚನೆ!

ಆಹಾರ ಇಲಾಖೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಂಬಂಧಪಟ್ಟ ಹಾಗೆ ಮಹತ್ವದ  ಹಾಗೂ ಕಟ್ಟುನಿಟ್ಟಿನ ನಿರ್ಣಯವನ್ನು ಕೈಗೊಂಡಿದೆ. ಯಾರು ಕಳೆದ ಆರು ತಿಂಗಳಿನಿಂದ ಪಡಿತರವನ್ನು ಪಡೆದುಕೊಂಡಿಲ್ಲವೋ ಅಂತವರ ರೇಷನ್ ಕಾರ್ಡ್ ತಕ್ಷಣ ರದ್ದಾಗಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ರೇಷನ್ ಕಾರ್ಡ್ (ration card) ಗೆ ಸಂಬಂಧಪಟ್ಟ ಹಾಗೆ ಕೆಲವು ನೀತಿ ನಿಯಮಗಳನ್ನ ಕೇಂದ್ರ ಸರ್ಕಾರವೇ ಜಾರಿಗೆ ತಂದಿದೆ ಆದರೂ ಇವುಗಳನ್ನೆಲ್ಲ ಕಡೆಗಣಿಸಿ ರೇಷನ್ ಕಾರ್ಡ್ ವಿಷಯದಲ್ಲಿ ಕೆಲವು ತಪ್ಪುಗಳನ್ನು ಮಾಡಿದವರು ಇಂದು ಸಂಕಷ್ಟ ಎದುರಿಸುವಂತೆ ಆಗಿದೆ ಇಂಥವರು ಸರ್ಕಾರದ ಯೋಜನೆಗಳಿಂದಲೂ ವಂಚಿತರಾಗಲಿದ್ದಾರೆ.

ಈ ಎಲ್ಲಾ ಯೋಜನೆಗೂ ರೇಷನ್ ಕಾರ್ಡ್ ಕಡ್ಡಾಯ!

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೆಲವು ಯೋಜನೆಗಳು (stay to government guarantee schemes) ಬಹಳ ಮಹತ್ವದ ಯೋಜನೆಗಳಾಗಿದ್ದು ಇದರಿಂದ ಇಂದು ಲಕ್ಷಾಂತರ ಕುಟುಂಬಗಳು ನೆಮ್ಮದಿಯಿಂದ ಪಡಿತರ ಪಡೆದುಕೊಳ್ಳುವಂಥಾಗಿದೆ ಜೊತೆಗೆ ಲಕ್ಷಾಂತರ ಗೃಹಿಣಿಯರು ಉಚಿತವಾಗಿ 2000 ಪಡೆದುಕೊಳ್ಳುವಂತಾಗಿದೆ. ಆದರೆ ಇಂದು ಬಿಪಿಎಲ್ ಕಾರ್ಡ್ (BPL card) ಹೊಂದಿದವರು ಕೂಡ ಇಂತಹ ಕೆಲವು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ ಇದಕ್ಕೆ ಮುಖ್ಯ ಕಾರಣ ಏನು ಗೊತ್ತಾ?

ಆಹಾರ ಇಲಾಖೆಯ ಮಹತ್ವದ ಸೂಚನೆ!

ದೇಶಾದ್ಯಂತ ಬಡತನ ರೇಖೆಗಿಂತ ಕೆಳಗಿರುವವರಿಗೆ ಅಂತವರ ಹಸಿವು ನೀಗಿಸುವ ಉದ್ದೇಶದಿಂದ ಪಡಿತರ ನೀಡಲು ಅನುಕೂಲವಾಗುವಂತೆ ಬಿಪಿಎಲ್ ಕಾರ್ಡ್ ಅನ್ನು ಕೇಂದ್ರ ಸರ್ಕಾರ ನೀಡಿದೆ. ಬಿಪಿಎಲ್ ಕಾರ್ಡ್ ಇದ್ರೆ ಎಪಿಎಲ್ ಕಾರ್ಡ್ (APL card) ಗಿಂತಲೂ ಹೆಚ್ಚಿನ ಬೆನಿಫಿಟ್ ಸಿಗುತ್ತದೆ. ಈಗಂತೂ ಅನ್ನಭಾಗ್ಯ ಯೋಜನೆಯ (Anna Bhagya scheme) ಅಡಿಯಲ್ಲಿ 5 ಕೆಜಿ ಉಚಿತ ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯ ಬದಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ರಾಜ್ಯ ಸರ್ಕಾರ ಜಮಾ ಮಾಡುತ್ತಿದೆ.

ರೇಷನ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದ್ರೆ ಅಂತವರ ರೇಷನ್ ಕಾರ್ಡ್ ರದ್ದು; ಇಲಾಖೆಯ ಮಹತ್ವದ ಸೂಚನೆ! - Kannada News

ಈಗಾಗಲೇ ಜುಲೈ ನಿಂದ ಅಕ್ಟೋಬರ್ ತಿಂಗಳವರೆಗೆ ಮೂರು ಕಂತಿನ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆಯಾಗಿದೆ. ಇಷ್ಟಾದರೂ ಕೆಲವರು ಮಾಡುವ ತಪ್ಪಿನಿಂದಾಗಿ ಅನ್ನ ಭಾಗ್ಯ ಹಣ ಇನ್ನು ಮುಂದೆ ಅಂಥವರ ಖಾತೆಗೆ ಬರುವುದಿಲ್ಲ.

ರೇಷನ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದ್ರೆ ಅಂತವರ ರೇಷನ್ ಕಾರ್ಡ್ ರದ್ದು; ಇಲಾಖೆಯ ಮಹತ್ವದ ಸೂಚನೆ! - Kannada News
Image source: Kannada news today

ಪಡಿತರ ಪಡೆದುಕೊಳ್ಳದ ವರಿಗೆ ಕಟ್ಟುನಿಟ್ಟಿನ ಆದೇಶ!

ಆಹಾರ ಇಲಾಖೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಂಬಂಧಪಟ್ಟ ಹಾಗೆ ಮಹತ್ವದ  ಹಾಗೂ ಕಟ್ಟುನಿಟ್ಟಿನ ನಿರ್ಣಯವನ್ನು ಕೈಗೊಂಡಿದೆ. ಯಾರು ಕಳೆದ ಆರು ತಿಂಗಳಿನಿಂದ ಪಡಿತರವನ್ನು ಪಡೆದುಕೊಂಡಿಲ್ಲವೋ ಅಂತವರ ರೇಷನ್ ಕಾರ್ಡ್ ತಕ್ಷಣ ರದ್ದಾಗಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ. ಜನರಿಗೆ ಪಡಿತರ ಪಡೆದುಕೊಳ್ಳುವ ಸಲುವಾಗಿ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಆದರೆ ಬಿಪಿಎಲ್ ಕಾರ್ಡ್ ಹೊಂದಿದ್ದು ಕೂಡ ಕೆಲವರು ಕಳೆದ ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳುತ್ತಿಲ್ಲ.

ಈ ಕಾರಣಕ್ಕೆ ಅಂಥವರ ರೇಷನ್ ಕಾರ್ಡ್ ರದ್ದುಪಡಿಸಲು (ration card cancellation) ಸರ್ಕಾರ ಮುಂದಾಗಿದೆ ಅದು ಅಲ್ಲದೆ ಹೀಗೆ ರೇಷನ್ ಕಾರ್ಡ್ ರದ್ದುಪಡಿಸಲು ಆಹಾರ ಇಲಾಖೆಯಿಂದ ಯಾವುದೇ ರೀತಿಯ ನೋಟೀಸ್ ಕೂಡ ಕೊಡುವುದಿಲ್ಲ ನೇರವಾಗಿ ರೇಷನ್ ಕಾರ್ಡ್ ರದ್ದಾಗುತ್ತದೆ ಹಾಗೂ ಈವರೆಗೆ ಅನ್ನ ಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ ಅಂತವರಿಗೆ ಆ ಪ್ರಯೋಜನವೂ ಕೂಡ ಸಿಗುವುದಿಲ್ಲ. ಅಷ್ಟೇ ಅಲ್ಲದೆ ಯಾರು ರೇಷನ್ ಕಾರ್ಡ್ ನಲ್ಲಿ ವಂಚನೆ ಮಾಡಿರುತ್ತಾರೋ ಅಂಥವರನ್ನು ಕೂಡ ಗುರುತಿಸಿ ಅವರ ರೇಷನ್ ಕಾರ್ಡ್ ರದ್ದು ಪಡಿ ಮಾಡಲು ಸರ್ಕಾರ ಮುಂದಾಗಿದೆ.

ಹಾಗಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಕಳೆದ ಒಂದೆರಡು ತಿಂಗಳಿನಿಂದ ಪಡಿತರ ಪಡೆದುಕೊಂಡಿರದೆ ಇದ್ದರೆ ತಕ್ಷಣವೇ ಈ ತಿಂಗಳಿನ ಪಡಿತರ ಪಡೆದುಕೊಳ್ಳಿ. ಈ ರೀತಿ ಮಾಡಿದರೆ ನಿಮಗೆ ಸಿಗುತ್ತಿರುವ ಯಾವುದೇ ಯೋಜನೆಯಿಂದ ನೀವು ವಂಚಿತರಾಗಬೇಕಿಲ್ಲ.

ಹೊಸ ಪಡಿತರ ವಿತರಣೆಯ ಬಗ್ಗೆಯೂ ಕೂಡ ಆಹಾರ ಇಲಾಖೆ ಮಹತ್ವದ ಅಪ್ಡೇಟ್ ನೀಡಿದ್ದು ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿ ಪರಿಶೀಲನೆ ಕೊನೆಯ ಹಂತದಲ್ಲಿ ಇದೆ ಹಾಗಾಗಿ ಈ ತಿಂಗಳ ಕೊನೆಯ ದಿನಾಂಕದ ಒಳಗೆ ಹೊಸ ಪಡಿತರ ಚೀಟಿ ವಿತರಣೆಯನ್ನು ಆರಂಭಿಸಲಾಗುವುದು ಎನ್ನಲಾಗಿದೆ.

Comments are closed.