ಯಾವುದೇ ಗ್ಯಾರಂಟಿ ಬೇಕಿಲ್ಲ; ಸಿಗುತ್ತೆ 10 ಲಕ್ಷ ಸಾಲ, ಮಹತ್ವದ ಯೋಜನೆಗೆ ಇಂದೇ ಅರ್ಜಿ ಹಾಕಿ!

ಯಾವ ವ್ಯಕ್ತಿ ತನ್ನ ಸ್ವಂತ ಉದ್ಯೋಗ ಆರಂಭಿಸಿ ಜೀವನ ಕಟ್ಟಿಕೊಳ್ಳಲು ಬಯಸುತ್ತಾನೋ ಅಂತವರಿಗೆ ಸರ್ಕಾರ ವಿಶೇಷ ಸಾಲ ಸೌಲಭ್ಯ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.

ಯಾವುದಾದರೂ ಸ್ವಉದ್ಯೋಗ ಆರಂಭಿಸಬೇಕು (own business) ಅಂದ್ರೆ ಅದಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ (Investment) ಬೇಕಾಗುತ್ತೆ. ಸಾಮಾನ್ಯರಿಗೆ ಇಷ್ಟು ಬಂಡವಾಳ ಹೊಂದಿಸಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಬ್ಯಾಂಕ್ ನ ಸಾಲದ (Bank loan) ಮೊರೆ ಹೋಗುವುದು ಸಹಜ.

ಇನ್ನು ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವುದು ಅಂದ್ರೆ ಅಷ್ಟು ಸುಲಭವಲ್ಲ ಅದಕ್ಕೆ ನೀವು ನಿಮ್ಮ ಯಾವುದಾದರೂ ಆಸ್ತಿ ಪತ್ರ ಅಡವಿಡಬೇಕು ಅಥವಾ ಯಾವುದೇ ಗ್ಯಾರೆಂಟಿ ದಾಖಲೆಯನ್ನು ನೀಡಬೇಕು. ಬಡವರ ಬಳಿ ಆಸ್ತಿ ಇರುವುದಕ್ಕೂ ಸಾಧ್ಯವಿಲ್ಲ ಹಾಗಾಗಿ ಸಾಲ ಪಡೆದುಕೊಳ್ಳುವುದು ಅಂದರೆ ಹಲವರಿಗೆ ಸವಾಲೇ ಸರಿ.

ಹಾಗಂದ ಮಾತ್ರಕ್ಕೆ ತನ್ನ ಕನಸು ಆಸೆ ಈಡೇರುವುದೇ ಇಲ್ಲವೇನು? ತಾನು ಸ್ವಂತ ಉದ್ಯೋಗ ಮಾಡಲು ಸಾಧ್ಯವಿಲ್ಲವೇನು ಎಂದು ಬೇಸತ್ತುಕೊಳ್ಳುವ ಅಗತ್ಯವಿಲ್ಲ. ಇಂದಿನ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಕೇಂದ್ರ ಸರ್ಕಾರ ಬಹಳ ಮುತುವರ್ಜಿಯಿಂದ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಯ ಮೂಲಕ ಯಾವ ವ್ಯಕ್ತಿ ತನ್ನ ಸ್ವಂತ ಉದ್ಯೋಗ ಆರಂಭಿಸಿ ಜೀವನ ಕಟ್ಟಿಕೊಳ್ಳಲು ಬಯಸುತ್ತಾನೋ ಅಂತವರಿಗೆ ಸರ್ಕಾರ ವಿಶೇಷ ಸಾಲ ಸೌಲಭ್ಯ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.

ಯಾವುದೇ ಗ್ಯಾರಂಟಿ ಬೇಕಿಲ್ಲ; ಸಿಗುತ್ತೆ 10 ಲಕ್ಷ ಸಾಲ, ಮಹತ್ವದ ಯೋಜನೆಗೆ ಇಂದೇ ಅರ್ಜಿ ಹಾಕಿ! - Kannada News

ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ (Mudra loan)

ಕೇಂದ್ರ ಸರ್ಕಾರ ಮುದ್ರ ಯೋಜನೆ ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಯಾವುದೇ ಗ್ಯಾರಂಟಿ ಕೊಡದೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಮೂಲಾಧಾರವಿಲ್ಲದೆ 10 ಲಕ್ಷ ರೂಪಾಯಿಗಳ ಬಾರಿಗೆ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಳ್ಳಬಹುದು.

ಯಾವುದೇ ಶುಲ್ಕವಿಲ್ಲದೆ ಸಾಲ ಪಡೆಯಿರಿ

ಮುದ್ರಾ ಯೋಜನೆಯನ್ನು ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಇಂದು ಲಕ್ಷಾಂತರ ಯುವಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಯಾವುದೇ ಗ್ಯಾರೆಂಟಿಯನ್ನು ಕೊಡದೆ 50,000 ದಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದಾಗಿದ್ದು, ಈ ಪ್ರಕ್ರಿಯೆಯಲ್ಲಿ ಒಂದು ರೂಪಾಯಿ ಶುಲ್ಕವನ್ನು ಕೂಡ ಪಾವತಿಸಬೇಕಾಗಿಲ್ಲ.

ಯಾವುದೇ ಗ್ಯಾರಂಟಿ ಬೇಕಿಲ್ಲ; ಸಿಗುತ್ತೆ 10 ಲಕ್ಷ ಸಾಲ, ಮಹತ್ವದ ಯೋಜನೆಗೆ ಇಂದೇ ಅರ್ಜಿ ಹಾಕಿ! - Kannada News
Image source: Informal News

ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಪ್ರಾದೇಶಿಕ ಬ್ಯಾಂಕ್ಗಳಲ್ಲಿ ಹಣಕಾಸು ಸಂಸ್ಥೆಗಳಲ್ಲಿ, NBFC ಗಳಲ್ಲಿ ಈ ಯೋಜನೆ ಸಾಲ ಪಡೆದುಕೊಳ್ಳಬಹುದು. ಇನ್ನು ಈ ಸಾಲದ ಮೇಲಿನ ಬಡ್ಡಿ ದರವನ್ನು ನೋಡುವುದಾದರೆ ಬ್ಯಾಂಕ್ನಿಂದ ಬ್ಯಾಂಕ್ಗೆ ಬಡ್ಡಿದರ ಬದಲಾಗಬಹುದು. 10-12% ವರೆಗೆ ಬ್ಯಾಂಕ್ ಬಡ್ಡಿ ದರ (low interest) ನಿಗದಿಪಡಿಸಬಹುದು.

ಪಿ ಎಮ್ ಮುದ್ರಾ ಯೋಜನೆ ಸಾಲ

ಈ ಯೋಜನೆಯಲ್ಲಿ ಮೂರು ವಿಧದ ಸಾಲ ಪ್ರಯೋಜನ ನೀಡಲಾಗುವುದು. ಮೊದಲನೇದಾಗಿ ಶಿಶು ಸಾಲ ಹೊಸದಾಗಿ ಉದ್ಯೋಗ ಆರಂಭಿಸುವವರು ಅಥವಾ ತಮ್ಮ ಉದ್ಯೋಗ ವಿಸ್ತರಿಸುವವರು 50,000 ರೂಪಾಯಿಗಳ ಸಾಲ ಪ್ರಯೋಜನ ಪಡೆದುಕೊಳ್ಳಬಹುದು. ಎರಡನೆಯದು ಕಿಶೋರ್ ಸಾಲ ಇದು ಐವತ್ತು ಸಾವಿರ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳ ವರೆಗೆ ಪಡೆದುಕೊಳ್ಳಬಹುದಾದ ಸಾಲ ಸೌಲಭ್ಯವಾಗಿದೆ. ಮೂರನೆಯದಾಗಿ ತರುಣ್ ಸಾಲ ಸೌಲಭ್ಯ. ಈ ವರ್ಗದ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೂ ಸಾಲ ಪಡೆಯಬಹುದು.

ಯಾರು ಅರ್ಜಿ ಸಲ್ಲಿಸಬಹುದು

ಈ ಯೋಜನೆಯ ಅಡಿಯಲ್ಲಿ 24 ರಿಂದ 70 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ನಲ್ಲಿಯೂ ಅರ್ಜಿ ಸಲ್ಲಿಸಬಹುದು ಹಾಗೂ ಬ್ಯಾಂಕ್ ಗಳಲ್ಲಿಯೂ ಹೋಗಿ ಸಾಲ ಸೌಲಭ್ಯ ಪಡೆಯಬಹುದು. mudra.org.in ನಲ್ಲಿ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ ಅದನ್ನು ಭರ್ತಿ ಮಾಡಿ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಸಾಲ ಪಡೆದುಕೊಳ್ಳಬಹುದು. ಇದಕ್ಕಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಬ್ಯಾಂಕ್ ಖಾತೆಯ ಮಾಹಿತಿ ಮೊದಲಾದ ದಾಖಲೆ ನೀಡಬೇಕಾಗುತ್ತದೆ.

Comments are closed.