Ads By Google
Govt Schemes

ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆ ಘೋಷಣೆ; ಎಲ್ಲರಿಗೂ ಸಿಗಲಿದೆ ಯೋಜನೆಯ ಸೌಲಭ್ಯ!

Ads By Google

ಮಹಿಳೆಯರ ಸಬಲೀಕರಣಕ್ಕಾಗಿ (women empowerment) ಇಲ್ಲಿಯವರೆಗೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿವೆ. ಮಹಿಳೆಯರು ಕೂಡ ಸ್ವಾವಲಂಬಿಯಾಗಿ ಬದುಕಬೇಕು ಆರ್ಥಿಕವಾಗಿ ಯಾರ ಮೇಲೆಯೂ ಡಿಪೆಂಡ್ (depend) ಆಗಿರಬಾರದು ಎನ್ನುವ ಉದ್ದೇಶ ಸರ್ಕಾರದ್ದು ಹಾಗಾಗಿ ಅರ್ಹ ಮಹಿಳೆಯರಿಗೆ ಉಚಿತವಾದ ಹಲವು ಯೋಜನೆಗಳು ಜಾರಿಗೆ ಬಂದಿವೆ.

ರಾಜ್ಯ ಸರ್ಕಾರದ ಯೋಜನೆಯ ಜೊತೆಗೆ ಕೇಂದ್ರ ಸರಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ;
ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ (gruhalakshmi Yojana) ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಸ್ವಾವಲಂಬಿ ಜೀವನ (independence life) ನಡೆಸಲು ಅನುಕೂಲ ಮಾಡಿಕೊಟ್ಟಿದೆ.

ಮಹಿಳೆಯರು ಕೇಂದ್ರ ಸರ್ಕಾರ ಕೊಡುತ್ತಿರುವ ಈ ಬಂಪರ್ ಯೋಜನೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು. ದೇಶದ ಕೆಲವು ರಾಜ್ಯಗಳಲ್ಲಿ ಮಾತ್ರ ಈ ಯೋಜನೆ ಆರಂಭವಾಗಿದ್ದು ನಮ್ಮ ಕರ್ನಾಟಕ ರಾಜ್ಯವು ಕೂಡ ಸೇರಿಕೊಂಡಿರುವುದು ವಿಶೇಷ.

ಯಾವುದು ಈ ಯೋಜನೆ?

ಮಹಿಳೆಯರು ಕೂಡ ದುಡಿಯಲು ಹಣ ಗಳಿಸಲು ಆರಂಭಿಸಿದರೆ ಕುಟುಂಬಕ್ಕೂ ಆಧಾರವಾಗುತ್ತದೆ ಜೊತೆಗೆ ಅವರು ಸ್ವಾವಲಂಬಿಯಾಗಿ ಜೀವನ ನಡೆಸಬಹುದು ಇದಕ್ಕಾಗಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಉಚಿತ ಹೋಲಿಗೆ ಯಂತ್ರ (free sewing machine) ವಿತರಣೆ ಮಾಡುತ್ತಿದೆ ಹೊಲಿಗೆ ಬಲ್ಲ ಮಹಿಳೆಯರು ಸರ್ಕಾರ ಕೊಡುವ ಈ ಉಚಿತ ಹೊಲಿಗೆ ಯಂತ್ರ ಪಡೆದುಕೊಂಡು ಅದರಿಂದ ಪ್ರತಿ ತಿಂಗಳು ಸಾಕಷ್ಟು ಹಣ ಗಳಿಸಬಹುದಾಗಿದೆ.

Image source: India Times

ಯಾರಿಗೆ ಸಿಗಲಿದೆ ಈ ಯೋಜನೆಯ ಬೆನಿಫಿಟ್?

*ಪ್ರತಿ ರಾಜ್ಯದಿಂದ 50,000 ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡಲಾಗುವುದು.
*20 ರಿಂದ 40 ವಯಸ್ಸಿನ ಒಳಗಿನ ಮಹಿಳೆಯರು ಈ ಯೋಜನೆಗೆ ಫಲಾನುಭವಿಗಳು.
*ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಮಹಿಳೆ ಭಾರತೀಯ ನಿವಾಸಿ ಆಗಿರಬೇಕು.
*ಕುಟುಂಬದ ಅಥವಾ ಪತಿಯ ಆದಾಯ (income) ವಾರ್ಷಿಕ 1,20,000 ರೂ.ಮೀರಿರಬಾರದು.
ರಾಜ್ಯದ ಎಲ್ಲಾ ಬಡ ಹೆಣ್ಣು ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

ಯಾವ ದಾಖಲೆಗಳು ಬೇಕು?

ಸರ್ಕಾರದಿಂದ ಲಭ್ಯವಾಗುವ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಮಹಿಳೆಯರು ತಮ್ಮ ಆದಾಯ ಪ್ರಮಾಣ ಪತ್ರ (income certificate) ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಅಳತೆಯ ಫೋಟೋ ನೀಡಬೇಕು. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಂಡು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬಹುದಾಗಿದೆ. ಇದರಿಂದ ವೃತ್ತಿ ತರಬೇತಿ ಕೋರ್ಸ್ (professional course) ಗಳು ಕೂಡ ಹೆಚ್ಚಾಗಲಿವೆ. ಮಹಿಳೆಯರು ಹೊಲಿಗೆ ತರಬೇತಿ ಪಡೆದುಕೊಂಡು ಸರ್ಕಾರದ ಈ ಯೋಜನೆಯ ಬೆನಿಫಿಟ್ ಕೂಡ ತೆಗೆದುಕೊಳ್ಳಬಹುದು ಇದರಿಂದ ಪ್ರತಿ ತಿಂಗಳು ಸಾಕಷ್ಟು ಆದಾಯ ಗಳಿಸಲು ಸಾಧ್ಯವಿದೆ. ಯೋಜನೆ ಸಂಪೂರ್ಣ ಉಚಿತವಾಗಿದ್ದು ಹೊಲಿಗೆ ಯಂತ್ರ ಖರೀದಿಗೆ ಹಣ ಪಾವತಿಸಬೇಕಾಗಿಲ್ಲ.

Ads By Google
Ramya M

Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.

Published by.. ✍
Tags: Central Govt central Govt Schemes free sewing machine gruhalakshmi Yojana i5 kannada i5 Kannada News i5 ಕನ್ನಡ i5Kannada i5ಕನ್ನಡ income certificate independence life Kannada News Latest Kannada News News in Kannada professional course women empowerment ಕನ್ನಡ ಸುದ್ದಿ

Latest Stories