ಈ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.

ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

ನಮಸ್ಕಾರ ಸ್ನೇಹಿತರೇ ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ  ಏನೂ ಎಂದು ಈ ಲೇಖನದ ಮೂಲಕ ತಿಳಿಸುತ್ತೇವೆ ನೋಡಿ.

ಆರೋಗ್ಯದ (Health) ವಿಚಾರದಲ್ಲಿ ಬಡ ವರ್ಗದ ಜನರಿಗೆ‌ ಸಹಾಯವಾಗಲೆಂದು ಸರಕಾರವು ಹಲವು ಸೌಲಭ್ಯ ಗಳನ್ನು ಜಾರಿಗೆ ತರುತ್ತಿರುತ್ತಾರೆ, ಅಂತಹ ಯೋಜನೆಗಳಲ್ಲಿ ಆಯುಷ್ಮಾನ್ ಭಾರತ ಯೋಜನೆಯು (Ayushman Bharat Yojana) ಕೂಡ ಒಂದು.

2018ರಲ್ಲಿ ಶುರುವಾದ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ ಗುಣಮಟ್ಟದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ನೀಡಿ ಜನರಿಗೆ ಸಹಾಯಕ ವಾಗುವಂತೆ ಮಾಡುತ್ತದೆ, ಈ ಯೋಜನೆಯ ಕಾರ್ಡ್‌ಗಳನ್ನು ಹೊಂದಿರುವ ಜನರು ನೋಂದಾಯಿತ ಆಸ್ಪತ್ರ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಪಡೆಯಬಹುದು.

ಈ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ. - Kannada News

ಇದು ಕೇಂದ್ರ ಸರ್ಕಾರದ (Central Govt) ಪ್ರಮುಖ ಯೋಜನೆಯಾಗಿದ್ದು, ಬಡ ವರ್ಗದ ಕುಟುಂಬಗಳು
ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಬಹುದು, ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದು. ಇದು ಸರ್ಕಾರಿ ಆರೋಗ್ಯ ವಿಮಾ (Health Insurance) ಯೋಜನೆಯಾಗಿದ್ದು ಮೊತ್ತವನ್ನು ಸರಕಾರವೇ ನೀಡುತ್ತದೆ.

ಈ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ. - Kannada News

ಈ ಯೋಜನೆಯ ಲಾಭವನ್ನು ಪಡೆಯ ಬೇಕಾದರೆ , ಬಿಪಿಎಲ್‌ ಕಾರ್ಡ್‌ (BPL Card) ಹೊಂದಿರುವವರು ಆಯುಷ್ಮಾನ್ ಕಾರ್ಡ್ ಪಡೆಯಬಹುದಾಗಿದ್ದು, ಸುಮಾರು ಒಂದು ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.

ಈ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ. - Kannada News
Image source: Gizbot kannada

ಇನ್ನು ಎಪಿಎಲ್ ಕಾರ್ಡ್ (APL Card) ಹೊಂದಿರುವವರಿಗೂ ಪಾವತಿ ಆಧಾರದ ಶೇ.30 ರಷ್ಟು ಚಿಕತ್ಸಾ ವೆಚ್ಚ ಲಭ್ಯವಿದೆ. ಒಂದು ವೇಳೆ ಚಿಕಿತ್ಸೆಗೆ ಸಂಬಂಧಪಟ್ಟ ಎಲ್ಲಾ ಆಧಾರಗಳೂ ಹೊಂದಿದ್ದರೂ ಆಸ್ಪತ್ರೆಯು ರೋಗಿಗೆ ಚಿಕಿತ್ಸೆ ನೀಡದಿದರೆ ಜನರು ದೂರು ಸಲ್ಲಿಸಬಹುದು.

ಕಾರ್ಡುದಾರರು ತಮ್ಮ ದೂರುಗಳನ್ನು 14555ಗೆ ನೀಡಬಹುದು, ಕರ್ನಾಟಕದಲ್ಲಿ ಟೋಲ್‌ ಫ್ರೀ ಸಂಖ್ಯೆ 104 ಕರೆ ಮಾಡಿ ದೂರು ನೀಡಬಹುದು, ಅಷ್ಟೆ ಅಲ್ಲದೆ ಸಹಾಯವಾಣಿ ಸಂಖ್ಯೆ 1800 425 8330 ಗೂ ದೂರು ನೀಡಬಹುದು.

ಭಾರತ ವಾಸಿಗಳು ಈ ಯೋಜನೆಯ ಲಾಭವನ್ನು ಪಡೆದು ಸುದೃಢ ಆರೋಗ್ಯ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

Comments are closed.