ಸರ್ಕಾರದಿಂದ ಗುಡ್ ನ್ಯೂಸ್ ! ಆಗಸ್ಟ್ 30ಕ್ಕೆ ಈ ಎಲ್ಲಾ ಗೃಹ ಲಕ್ಷ್ಮಿಯರ ಖಾತೆಗೆ 2 ಸಾವಿರ ರೂಪಾಯಿ ಜಮೆ

ಗೃಹ ಲಕ್ಷ್ಮಿ ಯೋಜನೆಯ ಅನುಷ್ಠಾನಕ್ಕೆ ಮೂಹೂರ್ತ ನಿಗದಿಯಾಗಿದೆ. ಇದೇ ಆಗಸ್ಟ್ 30 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.

ನಮಸ್ಕಾರ ಸ್ನೇಹಿತರೇ ನಿಮ್ಮಗೆಲ್ಲಾ ತಿಳಿದಂತೆ ಕಾಂಗ್ರೆಸ್ ಪಕ್ಷದ 5 ಗ್ಯಾರೆಂಟಿಗಳ ಪೈಕಿ ಗೃಹ ಲಕ್ಷ್ಮಿ ಕೂಡ ಒಂದು. ಗೃಹ ಲಕ್ಷ್ಮಿಯ ಯೋಜನೆಗೆ ಅರ್ಜಿ ಸಲ್ಲಿಸುವ ಕ್ರಿಯೆ ಜುಲೈ 15ರಿಂದ ಶುರುವಾಯಿತು. ಗೃಹ ಲಕ್ಷ್ಮಿ ಯೋಜನೆಯ ಅನುಷ್ಠಾನಕ್ಕೆ ಮೂಹೂರ್ತ ನಿಗದಿಯಾಗಿದೆ. ಇದೇ ಆಗಸ್ಟ್ 30 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ .

ಈ ಹಿಂದೆ ಬೆಳಗಾವಿಯಲ್ಲಿ ಗೃಹ ಲಕ್ಷ್ಮಿ ಯೋಜನೆಯ (Griha Lakshmi Yojana) ಅನುಷ್ಠಾನಕ್ಕೆ ಸಜ್ಜಾಗಿತ್ತು ಆದರೆ ಕೆಲವು ಕಾರಣಗಳಿಂದ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಬೆಂಗಳೂರಿನಲ್ಲಿ ಮಾಡಲು ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ, ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Shivakumar)  ಅವರು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಈಗಾಗಲೇ 1ಲಕ್ಷ 50ಸಾವಿರ ಮಹಿಳೆಯರು ನೊಂದಾಯಿಸಿದ್ದಾರೆ. ಆಗಸ್ಟ್ 30 ಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge), ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (Chief Ministers .Siddaramaiah)ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ತಿಳಿಸಿದರು.

ಸರ್ಕಾರದಿಂದ ಗುಡ್ ನ್ಯೂಸ್ ! ಆಗಸ್ಟ್ 30ಕ್ಕೆ ಈ ಎಲ್ಲಾ ಗೃಹ ಲಕ್ಷ್ಮಿಯರ ಖಾತೆಗೆ 2 ಸಾವಿರ ರೂಪಾಯಿ ಜಮೆ - Kannada News

ಮಂಡ್ಯ, ಮೈಸೂರು, ಚಾಮರಾಜನಗರ,ಕೊಡಗು ಜಿಲ್ಲೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಇದಕ್ಕಾಗಿ 2 ಸಾವಿರ ಬಸ್ ಗಳ ವ್ಯವಸ್ಥೆ ಮಾಡಲಾಗುತ್ತದೆ. ಕೆಲ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ.

ಸರ್ಕಾರದಿಂದ ಗುಡ್ ನ್ಯೂಸ್ ! ಆಗಸ್ಟ್ 30ಕ್ಕೆ ಈ ಎಲ್ಲಾ ಗೃಹ ಲಕ್ಷ್ಮಿಯರ ಖಾತೆಗೆ 2 ಸಾವಿರ ರೂಪಾಯಿ ಜಮೆ - Kannada News
ಸರ್ಕಾರದಿಂದ ಗುಡ್ ನ್ಯೂಸ್ ! ಆಗಸ್ಟ್ 30ಕ್ಕೆ ಈ ಎಲ್ಲಾ ಗೃಹ ಲಕ್ಷ್ಮಿಯರ ಖಾತೆಗೆ 2 ಸಾವಿರ ರೂಪಾಯಿ ಜಮೆ - Kannada News
Image source: Kannada News Today

ರಾಜ್ಯದಾದ್ಯಂತ ಏಕಕಾಲಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಆನ್ ಲೈನ್ (Online) ಮೂಲಕ ಸಂವಾದಕ್ಕೂ ವ್ಯವಸ್ಥೆ ಮಾಡುತ್ತೇವೆ. ಕಾರ್ಯಕ್ರಮ ಸ್ಥಳದಲ್ಲಿ ಕುಡಿಯುವ ನೀರು ಹೊರತು ಪಡಿಸಿ ಬೇರೆ ಯಾವುದೇ ವ್ಯವಸ್ಥೆ ಇರುವುದಿಲ್ಲ.

‘ನಾವು ಅಧಿಕಾರಕ್ಕೆ ಬಂದು ಇನ್ನೂ 2 ತಿಂಗಳೂ ಆಗಿಲ್ಲ. ಈಗಾಗಲೇ ಶಕ್ತಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್‌ 30ರಂದು ಅನುಷ್ಠಾನಗೊಳಿಸಿ ಪ್ರತಿ ಮನೆಯ ಯಜಮಾನಿಯ ಅಕೌಂಟಿಗೆ ಪ್ರತಿ ತಿಂಗಳು ತಲಾ 2,000 ರೂ. ಹಣ ಪಾವತಿಸುತ್ತೇವೆ.

ಯುವನಿಧಿ (Yuvanidhi yojane) ಯನ್ನು ನವೆಂಬರ್‌ ಇಲ್ಲವೇ ಡಿಸೆಂಬರ್‌ ವೇಳೆಗೆ ಜಾರಿಗೊಳಿಸುತ್ತೇವೆ. ಪ್ರತಿ ವರ್ಷ ಗ್ಯಾರಂಟಿಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂ. ಅನುದಾನ ಬೇಕು. ಆದರೆ, ಈ ವರ್ಷ ಕೆಲ ತಿಂಗಳು ಕಳೆದುಹೋಗಿರುವುದರಿಂದ 35 ಸಾವಿರ ಕೋಟಿ ರೂ. ಸಾಕಾಗಲಿದೆ,’’ ಎಂದರು.

ಆಗಸ್ಟ್ 30 ರಂದು ಗೃಹ ಲಕ್ಷ್ಮಿ ಯೋಜನೆಯ ಅನುಷ್ಟಾನಕ್ಕೆ ಸಕಲ ಸಿದ್ಧತೆಗಳುನಡೆದಿದ್ದು  ಆ ದಿನದಂದು ಕೇವಲ ಒಂದು ಬಟನ್ ಪ್ರೆಸ್ಸ್ ಮಾಡಿದ ತಕ್ಷಣ ಎಲ್ಲಾ ಗೃಹ ಲಕ್ಷ್ಮಿಯರ  ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Comments are closed.