ನಟಿ ಮಾಲಾಶ್ರೀ ವಿಷ್ಣು ದಾದನೊಟ್ಟಿಗೆ ಅಭಿನಯಿಸಬೇಕಿದ್ದ ಸಿನಿಮಾ ಮೂಹೂರ್ತದವರೆಗೂ ಬಂದು ಸೆಟ್ಟೇರದೆ ಇರಲು ಕಾರಣವೇನು?

ರಾಘವೇಂದ್ರ ರಾಜಕುಮಾರ್ ಅವರ ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಮಾಲಾಶ್ರೀ ಆನಂತರ ತಮ್ಮದೇ ಆದ ಪರ್ವವನ್ನೇ ಸೃಷ್ಟಿಸಿದರು ಎಂದರೆ ತಪ್ಪಾಗಲಾರದು.

ಕನ್ನಡ ಸಿನಿಮಾ ರಂಗದ (Kannada Film Industry) ಕನಸಿನ ರಾಣಿ ಮಾಲಾಶ್ರೀ (Actress Malashree) ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯ ಹೇಳಿ? ತಮ್ಮ ಸುಂದರ ನಗು, ಅಪ್ರತಿಮ ಅಭಿನಯ ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗುತ್ತಿದ್ದಂತಹ ಅಪ್ರತಿಮ ಕಲಾವಿದೆ.

ರಾಘವೇಂದ್ರ ರಾಜಕುಮಾರ್ ಅವರ ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಮಾಲಾಶ್ರೀ ಆನಂತರ ತಮ್ಮದೇ ಆದ ಪರ್ವವನ್ನೇ ಸೃಷ್ಟಿಸಿದರು ಎಂದರೆ ತಪ್ಪಾಗಲಾರದು.

ಹೀಗೆ ವರ್ಷವೊಂದರಲ್ಲಿ 19 ಸಿನಿಮಾಗಳಲ್ಲಿ ಅಭಿನಯಿಸಿದಂತಹ ಖ್ಯಾತಿ ಮತ್ತು ಕೀರ್ತಿ ಮಾಲಾಶ್ರೀ ಅವರಿಗೆ ಸಲ್ಲಲೇ ಬೇಕಾದ್ದು, ಆಗಿನ ಸಿನಿಮಾ ರಂಗದ ಫಿನಿಕ್ಸ್ ಹೀರೋಯಿನ್ ಎಂದೆಲ್ಲ ಕರಿಯಲ್ಪಡುತ್ತಿದ್ದಂತಹ ಮಾಲಾಶ್ರೀ ರೆಬೆಲ್ ಸ್ಟಾರ್ ಅಂಬರೀಶ್ ಶಶಿಕುಮಾರ್ ದೇವರಾಜ್ ಸುನಿಲ್ ರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ತಮ್ಮ ಅಪ್ರತಿಮ ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡರು.

ನಟಿ ಮಾಲಾಶ್ರೀ ವಿಷ್ಣು ದಾದನೊಟ್ಟಿಗೆ ಅಭಿನಯಿಸಬೇಕಿದ್ದ ಸಿನಿಮಾ ಮೂಹೂರ್ತದವರೆಗೂ ಬಂದು ಸೆಟ್ಟೇರದೆ ಇರಲು ಕಾರಣವೇನು? - Kannada News

ಕನ್ನಡ ಹುಡುಗಿ ಸೋನು ಗೌಡ ಮಾಡಬೇಕಿದ್ದ ಮುಂಗಾರು ಮಳೆ ಸಿನಿಮಾ ಪಂಜಾಬಿ ಬೆಡಗಿ ಪೂಜಾ ಗಾಂಧಿ ಪಾಲಾಗಿದ್ದು ಹೇಗೆ?

ಇನ್ನು ಆಗಸ್ಟ್ 10ನೇ ತಾರೀಕಿನಂದು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಆಚರಿಸಿಕೊಂಡಿರುವ ಮಾಲಾಶ್ರೀ ಅವರು ಆ ಸಂಭ್ರಮವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಮಾಲಾಶ್ರೀ ಅವರ ಹಲವಾರು ಕುತೂಹಲಕಾರಿ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದರಂತೆ ನಾವಿವತ್ತು ಸ್ವತಃ ಮಾಲಾಶ್ರೀ ಅವರೇ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ ಹಾಗೆ ತಮ್ಮ ಹಾಗೂ ವಿಷ್ಣುದಾದನ ಒಡನಾಟದ ಕುರಿತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

Kannada Actress Malashree

ಹೌದು ಗೆಳೆಯರೇ ಹಲವಾರು ಸಂದರ್ಶನಗಳಲ್ಲಿ ಸ್ವತಹ ಮಾಲಾಶ್ರೀ ಅವರೇ ತಾನು ಬಹಳ ಇಷ್ಟಪಡುತ್ತಿದ್ದಂತಹ ನಟ ವಿಷ್ಣುವರ್ಧನ್ ಅವರೊಂದಿಗೆ ಅವಕಾಶ ಇದ್ದರು ಅಭಿನಯಿಸಲಾಗಲಿಲ್ಲ ಎಂದಿದ್ದರು. ಇದಕ್ಕೆ ಮುಖ್ಯ ಕಾರಣ ಆಗಿನ ಸಮಯದಲ್ಲಿ ಮಾಲಾಶ್ರೀ ಹಾಗೂ ವಿಷ್ಣುವರ್ಧನ್ ಇಬ್ಬರು ಸಹ ತಮ್ಮದೇ ಆದ ವಿಶೇಷ ಜಾನರ್ ಇರುವಂತಹ ಸಿನಿಮಾಗಳ ಮೂಲಕ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡು ಪೀಕ್ ನಲ್ಲಿ ಇದ್ದಂತಹ ನಟರು.

ಅದೊಂದು ಕಾಲದಲ್ಲಿ ಟಾಪ್ ನಟನಾಗಿದ್ದ ಅಬ್ಬಾಸ್ ಈಗ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸ್ಥಿತಿಗೆ ಬಂದಿದ್ದಾದರೂ ಹೇಗೆ?

ಇಂತಹ ಸಮಯದಲ್ಲೂ ವಿಷ್ಣುವರ್ಧನ್ ಹಾಗೂ ಮಾಲಾಶ್ರೀ ಅವರಿಗೆ ಒಟ್ಟಾಗಿ ಅಭಿನಯಿಸುವಂತಹ ಅವಕಾಶ ದೊರಕುತ್ತದೆ. ಆದರೆ ಅದನ್ನು ಸ್ವತಃ ಮಾಲಾಶ್ರೀ ಅವರೇ ತಮ್ಮ ಬಿಂಕದ ಮಾತಿನ ಮೂಲಕ ಹಾಳು ಮಾಡಿಕೊಂಡರು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ 1991ರಲ್ಲಿ ಡಾ. ವಿಷ್ಣುವರ್ಧನ್ ಅವರ ಲಯನ್ ಜಗಪತಿರಾವ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದಾಗ ಮಾಲಾಶ್ರೀ ಹಾಗೂ ಅಂಬರೀಶ್ ಅವರ ಕಾಂಬಿನೇಷನ್ನಲ್ಲಿ ತಯಾರಾದ ಹೃದಯ ಹಾಡಿತು ಸಿನಿಮಾ ಕೂಡ ರಿಲೀಸ್ಗೆ ಸಿದ್ಧಗೊಂಡಿರುತ್ತದೆ.

ಇಂತಹ ಸಂದರ್ಭದಲ್ಲಿ ಅಂಬಿ ತಮ್ಮ ಆಪ್ತಮಿತ್ರನನ್ನು ಭೇಟಿ ಮಾಡಿ ಮೊದಲು ವಿಷ್ಣುವರ್ಧನ್ ಅವರ ಸಿನಿಮಾ ಬಿಡುಗಡೆಯಾಗಲಿ ಆನಂತರ ನಮ್ಮ ಚಿತ್ರ ಬಿಡುಗಡೆಯಾದರೆ ಆಯಿತು ಎನ್ನುತ್ತಾರೆ.

14 ವರ್ಷದ ಮಗಳಿರುವಾಗ ನಟಿ ವಿನಯ ಪ್ರಸಾದ್ ತಮ್ಮ ಮಗಳಿಗೆ ಇಷ್ಟ ಇಲ್ಲದಿದ್ರೂ ಎರಡನೇ ಮದುವೆಯಾಗುವ ನಿರ್ಧಾರ ಮಾಡಿದ್ರಾ?

ಆದರೆ ಮಾಲಾಶ್ರೀ ಅವರು ನಾನೀಗ ಸ್ಟಾರ್ ನಟಿ ನನ್ನೊಂದಿಗೆ ಯಾವ ನಟ ನಟಿಸಿದರು ಆತನಿಗೆ ಸ್ಟಾರ್ ಡಂ ದೊರೆಯುತ್ತದೆ ಇಲ್ಲಿ ನನ್ನ ಮಾತು ಕೂಡ ಮುಖ್ಯವಾಗುತ್ತದೆ. ಚಿತ್ರವನ್ನು ನಾನು ಹೇಳಿದ ಹಾಗೆ ಬಿಡುಗಡೆ ಮಾಡಬೇಕೆಂದು ಹಠ ಹಿಡಿದು ಎರಡು ಸಿನಿಮಾ ಕ್ಲಾಶ್ ಆಗುವಂತೆ ಮಾಡಿದರು. ಈ ಕಾರಣದಿಂದ ವಿಷ್ಣುವರ್ಧನ್ ಅವರು ಮಾಲಾಶ್ರೀ ಅವರೊಟ್ಟಿಗೆ ಅಭಿನಯಿಸುವ ಮನಸ್ಸನ್ನೇ ಮಾಡಲಿಲ್ಲ.

Why Actress Malashree and Actor Vishnuvardhan Not Did Movie

Leave A Reply

Your email address will not be published.