ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಮದುವೆಯಲ್ಲಿ ಅಪ್ಪು ನೀಡಿದ್ದ ದುಬಾರಿ ಉಡುಗೊರೆ ಏನು ಗೊತ್ತೇ?

ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾದ ಪುನೀತ್ ರಾಜಕುಮಾರ್ ಮತ್ತು ದಂಪತಿಗಳು ನವ ವಧು ವರರಿಗೆ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದರಂತೆ.

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರ (Kannada Bigg Boss Show) ಮೂಲಕ ಸ್ಪರ್ದಿಯಾಗಿ ಮನೆಯನ್ನು ಪ್ರವೇಶ ಮಾಡಿದಂತಹ ರಾಪರ್ ಚಂದನ್ ಶೆಟ್ಟಿ ಮತ್ತು ಓರ್ವ ಕಾಮನ್ ಮ್ಯಾನ್ ಆಗಿ ದೊಡ್ಮನೆಗೆ ಕಾಲಿಟ್ಟು ಇಂದು ಸೆಲೆಬ್ರಿಟಿ ಪಟ್ಟವನ್ನು ಅಲಂಕರಿಸಿರುವಂತಹ ನಿವೇದಿತ ಗೌಡ ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ?

ಕನ್ನಡದ ಬಹುತೇಕ ಎಲ್ಲಾ ಕಿರುತೆರೆ ಕಾರ್ಯಕ್ರಮಗಳಲ್ಲಿಯೂ (TV Shows) ಕಾಣಿಸಿಕೊಳ್ಳುವ ಮೂಲಕ ಮನೆ ಮಾತಾಗಿರುವ ಈ ದಂಪತಿಗಳ ಪ್ರೇಮ ಕಹಾನಿಯೇ ಕೊಂಚ ವಿಚಿತ್ರ ಎಂದರೆ ತಪ್ಪಾಗಲಾರದು.

ಕಾಂತಾರ ಸಿನಿಮಾದ ಗುರುವ ಪಾತ್ರದಾರಿ ಸ್ವರಾಜ್ ಶೆಟ್ಟಿ ಅವರಿಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ?

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಮದುವೆಯಲ್ಲಿ ಅಪ್ಪು ನೀಡಿದ್ದ ದುಬಾರಿ ಉಡುಗೊರೆ ಏನು ಗೊತ್ತೇ? - Kannada News

ಹೌದು ಗೆಳೆಯರೇ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿದ್ದಾಗ ಶ್ರುತಿ ಪ್ರಕಾಶ್ ಅವರನ್ನು ಇಷ್ಟಪಡುತ್ತಿದಂತಹ ಮಾಹಿತಿ ನಮ್ಮೆಲ್ಲರಿಗೂ ಗೊತ್ತಿದೆ. ಮನೆಯಲ್ಲಿ ಇದ್ದಷ್ಟು ದಿನ ನಿವೇದಿತಾ ಗೌಡ ಅವರನ್ನು ಪ್ರೀತಿಯಿಂದ ತಂಗಿ ಎಂದು ಕರೆಯುತ್ತಿದ್ದರು, ಅಲ್ಲದೆ ಬಿಗ್ ಬಾಸ್ನ ಎಪಿಸೋಡ್ ಒಂದರಲ್ಲಿ ಜೋಕಾಲಿಯ ಮೇಲೆ ಕುಳಿತಿದ್ದ ಚಂದನ್ ಶೆಟ್ಟಿ ನಾನು ನಿವಿ ಶಿವರಾಜ್ ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ಇದ್ದ ಹಾಗೆ ಎಂದಿದ್ದರು.

ಹೀಗೆ ಎಲ್ಲೆಡೆ ಅಣ್ಣ ತಂಗಿ ಎಂದು ಓಡಾಡಿಕೊಂಡಿದ್ದಂತಹ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮೈಸೂರಿನ ದಸರಾ ಉತ್ಸವ ಸಮಾರಂಭದಲ್ಲಿ ಪ್ರೇಮ ನಿವೇದನೆಯನ್ನು ಮಾಡಿಕೊಂಡು ಎಲ್ಲರಿಗೂ ಶಾಕ್ ನೀಡಿದರು.

Nivedita Gowda and Chandan Shetty wedding

ಹೀಗೆ ಫೆಬ್ರವರಿ ತಿಂಗಳು 2019 ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಈ ಜೋಡಿಗಳು ಮೈಸೂರಿನಲ್ಲಿ ಅದ್ದೂರಿಯಾದ ಕಲ್ಯಾಣ ಮಂಟಪ ಒಂದರಲ್ಲಿ 2020 ರ ವೇಳೆಗೆ ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನೆನಪಿದ್ದಾರ ನವೀನ್ ಮಯೂರ್, ಬದುಕಿ ಬಾಳಬೇಕಿದ್ದ ನಟ ಕೇವಲ 32 ವರ್ಷಕ್ಕೆ ದುರಂತ ಕಂಡಿದ್ದು ಹೇಗೆ?

ಆ ವೇಳೆ ಬಾರ್ಬಿ ಡಾಲ್ ಎಂದೆ ಪ್ರಖ್ಯಾತಿ ಪಡೆದಿದ್ದಂತಹ ನಿವೇದಿತಾ ಗೌಡ ಮತ್ತು ರಾಪರ್ ಚಂದನ್ ಶೆಟ್ಟಿ ಅವರ ಮದುವೆಗೆ ಕುಟುಂಬಸ್ಥರು ಸ್ನೇಹಿತರು ಆತ್ಮೀಯರು ಹಾಗೂ ಕನ್ನಡ ಸಿನಿಮಾ ರಂಗದ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ನವ ವಧು ವರರನ್ನು ಹರಸಿ ಹಾರೈಸಿದರು.

ಅದರಲ್ಲೂ ವಿಶೇಷವೆಂದರೆ ಪುನೀತ್ ರಾಜಕುಮಾರ್ (Kannada Actor Puneeth Rajkumar) ಬಹಳನೇ ಸಿಂಪಲ್ ಆಗಿ ತಮ್ಮ ಹೆಂಡತಿ ಅಶ್ವಿನಿ ಅವರೊಂದಿಗೆ ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನವ ವಧು ವರರನ್ನು ಅರಸಿ ಆಶೀರ್ವದಿಸಿದರು.

ಆಟೋರಾಜ ಶಂಕರ್ ನಾಗ್ ಅವರ “ಹೊಸ ಜೀವನ” ಸಿನಿಮಾ ನಟಿ ದೀಪಿಕಾ ಈಗ ಹೇಗಾಗಿದ್ದಾರೆ ಗೊತ್ತಾ?

ಹೌದು ಗೆಳೆಯರೆ ನೀಲಿ ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ ಪುನೀತ್ ರಾಜಕುಮಾರ್ ಒಂದೆಡೆಯಾದರೆ ಹಳದಿ ಬಣ್ಣದ ಸೀರೆಯಲ್ಲಿ ಬಹಳ ಸಿಂಪಲ್ ಆಗಿ ಅಶ್ವಿನಿ ಹೈಲೈಟ್ ಆದರು.‌ ಹೀಗೆ ಆಹ್ವಾನಿಸಿದೊಡನೆ ಬಂದು ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾದ ಪುನೀತ್ ರಾಜಕುಮಾರ್ ಮತ್ತು ದಂಪತಿಗಳು ನವ ವಧು ವರರಿಗೆ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದರಂತೆ. ಈ ಮಾಹಿತಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ.

What Gift Puneeth Rajkumar gave at Nivedita Gowda and Chandan Shetty wedding

Leave A Reply

Your email address will not be published.