ಅದೊಂದು ಕಾಲದಲ್ಲಿ ಟಾಪ್ ನಟನಾಗಿದ್ದ ಅಬ್ಬಾಸ್ ಈಗ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸ್ಥಿತಿಗೆ ಬಂದಿದ್ದಾದರೂ ಹೇಗೆ?

ಇವರ ಕ್ಯೂಟ್ ಹಾಗೂ ಚಾರ್ಮಿಂಗ್ ಮುಖಕ್ಕೆ ಆಗಿನ ಅದೆಷ್ಟೋ ಹೆಣ್ಣುಮಕ್ಕಳು ಮನಸ್ಸೊತೂ ಹೋಗಿದ್ದಂತಹ ಕಾಲ

ಕನ್ನಡದ ಐವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಚಾರ್ಮಿಂಗ್ ಸೌಂದರ್ಯದ ಮೂಲಕವೇ ಅದೆಷ್ಟೋ ಹೆಣ್ಣು ಮಕ್ಕಳ ಹೃದಯ ಕದ್ದಿದ್ದಂತಹ ನಟ ಅಬ್ಬಾಸ್ ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ. ಕೊಲ್ಕತ್ತಾ(Kolkata) ಮೂಲದವರಾದ ಅಬ್ಬಾಸ್ ಚಿಕ್ಕಂದಿನಿಂದಲೂ ನಟನೆ ಹಾಗೂ ಮಾಡ್ಲಿಂಗ್(Model) ಲೋಕದ ಮೇಲೆ ಹುಚ್ಚು ಆಸಕ್ತಿಯನ್ನು ಬೆಳೆಸಿಕೊಂಡು ಶಾಲೆ ಮುಗಿಸಿದ ನಂತರ ಮಾಡ್ಲಿಂಗ್ ಲೋಕಕ್ಕೆ ಕಾಲಿಡುತ್ತಾರೆ.

ಆನಂತರ ಸಾಕಷ್ಟು ಅಡ್ವರ್ಟೈಸ್ಮೆಂಟ್ಗಳಲ್ಲಿ (Advertisement)ಕಾಣಿಸಿಕೊಳ್ಳಲು ಶುರು ಮಾಡಿದಂತಹ ಅಬ್ಬಾಸ್ಗೆ ಸಿನಿಮಾಗಳ ಅವಕಾಶ ಹರಸಿ ಬಂದವು. ಹೌದು ಗೆಳೆಯರೇ, 1996ರಲ್ಲಿ ಮಿರ್ಜಾ ಅಬ್ಬಾಸ್ ಅಲಿ ಕಾದಲ್ ದೇಶಂ ಎಂಬ ತೆಲುಗು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ. ಈ ಚಿತ್ರದ ಮೂಲಕ ತಕ್ಕಮಟ್ಟಿಗೆ ಗುರುತಿಸಿಕೊಂಡಂತಹ ಅಬ್ಬಾಸ್ ಅವರಿಗೆ ಶಾಂತಿ ಶಾಂತಿ ಶಾಂತಿ (Shanthi Shanthi Shanthi), ಹಲೋ(Hello), ಅಪ್ಪು ಅಂಡ್ ಪಪ್ಪು ಹೀಗೆ ಮೊದಲಾದ ಚಿತ್ರಗಳಲ್ಲಿ ಅಭಿನಯಿಸುವಂತಹ ಅವಕಾಶ ದೊರಕುತ್ತದೆ.

ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡಂತಹ ಮಿರ್ಜಾ ಅಬ್ಬಾಸ್ ಅಲಿ ಹಿಂದಿ ತೆಲುಗು ತಮಿಳು ಹಾಗೂ ಕನ್ನಡದ ಬಹುತೇಕ ಚಿತ್ರಗಳಲ್ಲಿ ಎರಡನೇ ನಾಯಕನಾಗಿ ಪೋಷಕ ನಟನಾಗಿ, ಸಹ ನಟನಾಗಿ ಕಾಣಿಸಿಕೊಳ್ಳಲು ಪ್ರಾರಂಭ ಮಾಡಿದರು. ಇವರ ಕ್ಯೂಟ್ ಹಾಗೂ ಚಾರ್ಮಿಂಗ್ ಮುಖಕ್ಕೆ ಆಗಿನ ಅದೆಷ್ಟೋ ಹೆಣ್ಣುಮಕ್ಕಳು ಮನಸ್ಸೊತೂ ಹೋಗಿದ್ದಂತಹ ಕಾಲ. ಆದರೆ 2015ರಿಂದ ಈಚೆಗೆ ಯಾವ ಸಿನಿಮಾಗಳು(Film) ಕೂಡ ಅಬ್ಬಾಸ್ ಅವರನ್ನು ಹರಸಿ ಬರಲಿಲ್ಲ.

ಅದೊಂದು ಕಾಲದಲ್ಲಿ ಟಾಪ್ ನಟನಾಗಿದ್ದ ಅಬ್ಬಾಸ್ ಈಗ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸ್ಥಿತಿಗೆ ಬಂದಿದ್ದಾದರೂ ಹೇಗೆ? - Kannada News

ಅದೊಂದು ಕಾಲದಲ್ಲಿ ಟಾಪ್ ನಟನಾಗಿದ್ದ ಅಬ್ಬಾಸ್ ಈಗ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸ್ಥಿತಿಗೆ ಬಂದಿದ್ದಾದರೂ ಹೇಗೆ? - Kannada News

ಹೀಗೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಸಿನಿಮ ಎಂಬ ಜಾಲದೊಳಗೆ ಪ್ರವೇಶ ಮಾಡಿದ ಅಬ್ಬಾಸ್ಗೆ ಸಿನಿಮಾ ರಂಗ ಸಂಪೂರ್ಣ ಕೈ ಕೊಟ್ಟಾಗ ಒಂದು ಹೊತ್ತು ಊಟಕ್ಕೂ ಪರದಾಡುವಂತಹ ಸ್ಥಿತಿ ಎದುರಾಗುತ್ತದೆ. ಈ ಕಾರಣದಿಂದ ಸಿನಿಮಾಗಳಿಂದ ವಿರಾಮ ತೆಗೆದುಕೊಂಡ ಅಬ್ಬಾಸ್ ಮತ್ತೆಂದು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಪ್ರಯತ್ನವನ್ನೇ ಮಾಡಲಿಲ್ಲ. ಹೌದು ಗೆಳೆಯರೇ ಮೆಕಾನಿಕ್ (Mechanic) ಆಗಿ ಕೆಲಸಕ್ಕೆ ಸೇರಿಕೊಂಡ ಅಬ್ಬಾಸ್ ಅಲ್ಲಿಂದ ಪೆಟ್ರೋಲ್ ಬಂಕ್ನಲ್ಲಿ(Petrol Pump) ಕಾರ್ಯಾ ನಿರ್ವಹಿಸುತ್ತ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರೊಂದಿಗೆ ಒಡನಾಟದಲ್ಲಿ ಇರುವ ಅಬ್ಬಾಸ್ ಅವರ ಕಹಿ ಸಿನಿ ಬದುಕಿನ ಕಥೆ ಇದು. ಮುಂದಿನ ದಿನಗಳಲ್ಲಾದರೂ ಈ ಅಪ್ರತಿಮ ಕಲಾವಿದನನ್ನು ಗುರುತಿಸಿ ಕನ್ನಡ ಸಿನಿಮಾ ರಂಗ ಅವಕಾಶವನ್ನು ನೀಡಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.