14 ವರ್ಷದ ಮಗಳಿರುವಾಗ ನಟಿ ವಿನಯ ಪ್ರಸಾದ್ ತಮ್ಮ ಮಗಳಿಗೆ ಇಷ್ಟ ಇಲ್ಲದಿದ್ರೂ ಎರಡನೇ ಮದುವೆಯಾಗುವ ನಿರ್ಧಾರ ಮಾಡಿದ್ರಾ?

ವಿನಯ ಪ್ರಸಾದ್ ಪತಿ ವಿ ಆರ್ ಕೆ ಪ್ರಸಾದ್ ಇಹಲೋಕ ತ್ಯಜಿಸಿದಾಗ ವಿನಯ ಪ್ರಸಾದ್ ಅವರು ಎರಡನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾಗ, ಜ್ಯೋತಿ ಪ್ರಕಾಶ್ ಅವರ ಪರಿಚಯವಾಗಿ ಸ್ನೇಹಿತರಾಗಿ ಕಾಲಕ್ರಮಣ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗುತ್ತದೆ.

ಸ್ನೇಹಿತರೆ ಸ್ಯಾಂಡಲ್ ವುಡ್ನ ಮುದ್ದಾದ ಜೋಡಿಗಳು ಎನಿಸಿಕೊಳ್ಳುತ್ತಿದ್ದ ವಿನಯ ಪ್ರಸಾದ್ ಮತ್ತು ವಿ ಆರ್ ಕೆ ಪ್ರಸಾದ್ ಹಲವು ವರ್ಷಗಳ ಕಾಲ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಾಂಸಾರಿಕ ಜೀವನವನ್ನು ನಡೆಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಈ ಜೋಡಿಗಳ ಮೇಲೆ ಅದ್ಯಾರ ವಕ್ರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಪ್ರಸಾದ್ ಅವರು ಅತಿ ಚಿಕ್ಕ ವಯಸ್ಸಿಗೆ ತಮ್ಮ ಹೆಂಡತಿ ಮಗಳನ್ನಗಲಿ ಇಹಲೋಕ ತ್ಯಜಿಸಿದರು.

ಆಗ ವಿನಯ ಪ್ರಸಾದ್ರವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು. ಈ ದಂಪತಿಗಳಿಗೆ ಜನಿಸಿದ ಮಗಳೇ ಪ್ರಥಮಾ. ಪ್ರಥಮಾಲಿಗೆ 14 ವರ್ಷ ವಯಸ್ಸಾಗಿತ್ತಂತೆ. ಇಂತಹ ಪರಿಸ್ಥಿತಿಯಲ್ಲಿ ವಿನಯ ಪ್ರಸಾದ್ ಅವರು ಎರಡನೇ ಮದುವೆ ಮಾಡಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಾಗ ತಮ್ಮ ಮಗಳನ್ನು ಒಪ್ಪಿಸಿದ್ದು ಹೇಗೆ ಇದಕ್ಕೆ ಆಕೆಯ ಪ್ರತಿಕ್ರಿಯೆ ಏನಾಗಿತ್ತು ಎಂಬುದನ್ನು ಕಲಾಮಧ್ಯಮ ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.

ಆಗಿನ ಕಾಲದ ಸಿನಿಮಾ ಇಂಡಸ್ಟ್ರಿಯಲ್ಲಿ ಪೀಕ್ನಲ್ಲಿ ಇರುವಾಗಲೇ ವಿನಯ ಪ್ರಸಾದ್ರವರು ವಿ ಆರ್ ಕೆ ಪ್ರಸಾದ್ ಅವರನ್ನು ಪ್ರೀತಿಸಿ ಮದುವೆಯಾದರು. ಬಹಳ ಅನ್ಯೂನ್ಯವಾಗಿದ್ದ ಈ ದಂಪತಿಗಳನ್ನು ವಿಧಿ ದೂರ ಮಾಡಿದಾಗ ವಿನಯ ಪ್ರಸಾದ್ ಅವರು ಎರಡನೇ ಮದುವೆ ಮಾಡಿಕೊಳ್ಳಲೇ ಬೇಕೆಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಅಂತಹ ಸಂದರ್ಭದಲ್ಲಿ ಜ್ಯೋತಿ ಪ್ರಕಾಶ್ ಅವರು ವಿನಯ ಪ್ರಸಾದ್ ಅವರ ಸ್ನೇಹಿತರಾಗಿ ಪರಿಚಯವಾಗಿ ಕಾಲಕ್ರಮಣ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗುತ್ತದೆ.

14 ವರ್ಷದ ಮಗಳಿರುವಾಗ ನಟಿ ವಿನಯ ಪ್ರಸಾದ್ ತಮ್ಮ ಮಗಳಿಗೆ ಇಷ್ಟ ಇಲ್ಲದಿದ್ರೂ ಎರಡನೇ ಮದುವೆಯಾಗುವ ನಿರ್ಧಾರ ಮಾಡಿದ್ರಾ? - Kannada News

14 ವರ್ಷದ ಮಗಳಿರುವಾಗ ನಟಿ ವಿನಯ ಪ್ರಸಾದ್ ತಮ್ಮ ಮಗಳಿಗೆ ಇಷ್ಟ ಇಲ್ಲದಿದ್ರೂ ಎರಡನೇ ಮದುವೆಯಾಗುವ ನಿರ್ಧಾರ ಮಾಡಿದ್ರಾ? - Kannada News

ಜ್ಯೋತಿಪ್ರಕಾಶ್ ಅವರು ಕೂಡ ತಮ್ಮ ಮಗ ಎರಡು ತಿಂಗಳ ಮಗುವಾಗಿದ್ದಾಗ ಹೆಂಡತಿಯನ್ನು ಅನಾರೋಗ್ಯದ ಸಮಸ್ಯೆಯಿಂದಾಗಿ ಕಳೆದುಕೊಂಡಿರುತ್ತಾರೆ. ಹೀಗಾಗಿ ಇಬ್ಬರು ಮದುವೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದರು, ಈ ಒಂದು ಸಂಗತಿಯನ್ನು ವಿನಯ ಪ್ರಸಾದ್ ತಮ್ಮ ಹದಿನಾಲ್ಕು ವರ್ಷದ ಮಗಳು ಪ್ರಥಮಳಿಗೆ ಹೇಳಿದಾಗ ಆಕೆ ಮನಃಪೂರ್ವಕವಾಗಿ ಒಪ್ಪದೇ ಹೋದರು ವಾಸ್ತವವನ್ನು ಅರ್ಥ ಮಾಡಿಕೊಂಡು ಮದುವೆ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸುತ್ತಾಳಂತೆ.

ಈ ಕಾರಣದಿಂದ ಸಂದರ್ಶನಲ್ಲಿ ಮಾತನಾಡುವಾಗ ವಿನಯ ಪ್ರಸಾದ್ ತಮ್ಮ ಮಗಳನ್ನು ಕೊಂಡಾಡುತ್ತಾ ಕೃತಜ್ಞತೆಯನ್ನು ಸಲ್ಲಿಸಿದರು. ಸದ್ಯ ಪ್ರಥಮ ಅವರಿಗೆ ಮದುವೆಯಾಗಿ ಸ್ಪಟಿಕ ಎಂಬ ಮುದ್ದು ಮಗಳಿದ್ದು, ಆಕೆ ಕೂಡ ತಮ್ಮ ತಾಯಿ ಹಾಗೂ ಅಜ್ಜಿಯಂತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಜ್ಯೋತಿ ಪ್ರಕಾಶ್ ಅವರ ಮಗ ಬಾಂಬೆಯಲ್ಲಿ ನೆಲೆಸಿದ್ದು ಆತ ಕೂಡ ಮದುವೆಯಾಗಿ ತಮ್ಮದೇ ಆದ ಪುಟ್ಟ ಸಂಸಾರಿಕ ಜೀವನವನ್ನು ಕಟ್ಟಿಕೊಂಡಿದ್ದಾರೆ.

ಸದ್ಯ ವಿನಯ ಪ್ರಸಾದ್ ತಮ್ಮ ಎರಡನೇ ಪತಿಯ ಪ್ರೋತ್ಸಾಹದಿಂದಾಗಿ ಸಿನಿಮಾ ರಂಗದಲ್ಲಿ ಇಂದಿಗೂ ಸಕ್ರಿಯರಾಗಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಸೀರಿಯಲ್ ಮೂಲಕ ನಮ್ಮೆಲ್ಲರನ್ನು ಇಂದಿಗೂ ರಂಜಿಸುತ್ತಿದ್ದಾರೆ.

Leave A Reply

Your email address will not be published.