ಕನ್ನಡದ ದೈತ್ಯ ಪ್ರತಿಭೆ ಶರತ್ ಲೋಹಿತಾಶ್ವ ಏನಾದ್ರು? ತಮ್ಮ ಕಣ್ಣೆದುರೇ ತಂದೆಯ ಪ್ರಾಣ ಪಕ್ಷಿ ಹಾರಿ ಹೋದ ನೋವು ಅವರನ್ನು ಬಾಧಿಸುತ್ತಿದಿಯಾ?

ನಟ ಶರತ್ ಲೋಹೀತಾಶ್ವ ತಮ್ಮ ತಂದೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಕಾರಣ ತಾವು ನಟನಾಗಿ ಗುರುತಿಸಿಕೊಳ್ಳಬೇಕೆಂಬ ಆಸೆಯಿಂದ ಅತಿ ಚಿಕ್ಕ ವಯಸ್ಸಿಗೆ ರಂಗಭೂಮಿ ಪ್ರವೇಶ ಮಾಡಿದರು.

ಸ್ನೇಹಿತರೆ ಕನ್ನಡ ಹಾಗೂ ತಮಿಳು ಸಿನಿಮಾ ರಂಗದಲ್ಲಿ ಸಹನಟನಾಗಿ, ಪೋಷಕ ನಟನಾಗಿ, ಖಳನಟನಾಗಿ ಗುರುತಿಸಿಕೊಂಡಿರುವಂತಹ ಶರತ್ ಚಂದ್ರಲೋಹೀತಾಶ್ವ (Actor Sharath Lohitashwa) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ?

ಈ ನಟನ ಹೆಸರು ಕಿವಿಗೆ ಬಿದ್ದ ತಕ್ಷಣ ಸಾಕಷ್ಟು ಡಿ ಬಾಸ್ ಅಭಿಮಾನಿಗಳಿಗೆ (D Boss Fans) ಸಾರಥಿ ಸಿನಿಮಾದ ವಿಲನ್ ಪಾತ್ರ ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ. ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಸೈ ಎನಿಸಿಕೊಳ್ಳುತ್ತಿದ್ದ ನಟ ಶರತ್ ಲೋಹೀತಾಶ್ವ ತಮ್ಮ ತಂದೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಕಾರಣ ತಾವು ನಟನಾಗಿ ಗುರುತಿಸಿಕೊಳ್ಳಬೇಕೆಂಬ ಆಸೆಯಿಂದ ಅತಿ ಚಿಕ್ಕ ವಯಸ್ಸಿಗೆ ರಂಗಭೂಮಿ ಪ್ರವೇಶ ಮಾಡಿದರು.

ಸಾಕಷ್ಟು ನಾಟಕಗಳಲ್ಲಿ ಅಭಿನಯಿಸುತ್ತಾ 1995 ರಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿದ್ದಾರೆ. ಹೌದು ಗೆಳೆಯರೇ 1972 ಮೇ 5ನೇ ತಾರೀಕು ತುಮಕೂರಿನಲ್ಲಿ ಜನಿಸಿದ ಇವರು ಶಾಲಾ ದಿನಗಳಿಂದಲೂ ನಟನೆಯ ಮೇಲೆ ಬಹಳ ಆಸಕ್ತಿ ಇದ್ದ ಕಾರಣ ತಂದೆ ಲೋಹಿತಾಶ್ವರೊಂದಿಗೆ ನಾಟಕಗಳಲ್ಲಿ ಅಭಿನಯಿಸುತ್ತ ಅತಿ ಚಿಕ್ಕ ವಯಸ್ಸಿನಲ್ಲಿಯೇ ಭಗತ್ ಸಿಂಗ್ ಅವರಂತಹ ಪಾತ್ರಗಳನ್ನು ವೇದಿಕೆಯ ಮೇಲೆ ಮಾಡಿದರು.

ಕನ್ನಡದ ದೈತ್ಯ ಪ್ರತಿಭೆ ಶರತ್ ಲೋಹಿತಾಶ್ವ ಏನಾದ್ರು? ತಮ್ಮ ಕಣ್ಣೆದುರೇ ತಂದೆಯ ಪ್ರಾಣ ಪಕ್ಷಿ ಹಾರಿ ಹೋದ ನೋವು ಅವರನ್ನು ಬಾಧಿಸುತ್ತಿದಿಯಾ? - Kannada News

ಇನ್ನು ಸ್ವಲ್ಪ ಸಮಯಗಳ ಕಾಲ ಉಪನ್ಯಾಸಕ ಕಾರ್ಯನಿರ್ವಹಿಸಿದ ಶರತ್ ಲೋಹಿತಾಶ್ವ ಅವರಿಗೆ 2007ರಲ್ಲಿ ತೆರೆಗೆ ಬಂದ ಆ ದಿನಗಳು ಸಿನಿಮಾದ ಕೋತ್ವಾಲ ಚಂದ್ರನ ಪಾತ್ರ ಬಹುದೊಡ್ಡ ಮಟ್ಟದ ಹೆಸರನ್ನು ತಂದುಕೊಡುತ್ತದೆ. ಅಲ್ಲದೆ ಈ ಒಂದು ಪಾತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಸೌತ್ ಫಿಲಂ ಫೇರ್ ಪ್ರಶಸ್ತಿಯನ್ನು ತಮ್ಮ ಮುಡುಗೇರಿಸಿಕೊಳ್ಳುತ್ತಾರೆ.

ಆಗಿನ ಪಡ್ಡೆ ಹುಡುಗರ ಫೇವರೆಟ್ ಆಗಿದ್ದ ನಟಿ ಸಿತಾರ ಕೊನೆಗೂ ಸಾಂಸಾರಿಕ ಜೀವನ ತೊರೆದು ಸನ್ಯಾಸಿ ಆಗ್ಬಿಟ್ರಾ?

ನಂತರ ಸಂಜು ವೆಡ್ಸ್ ಗೀತಾ, ಭೀಮ ತೀರದಲ್ಲಿ, ಸುಂಟರಗಾಳಿ, ಕಲ್ಲರಳಿ ಹೂವಾಗಿ, ಒಂದು ಪ್ರೀತಿಯ ಕಥೆ, ಮಂದಾಕಿನಿ, ಅರ್ಜುನ್, ಯುಗಯುಗಗಳೇ ಆಗಲಿ, ಹ್ಯಾಟ್ರಿಕ್ ಹೊಡಿ ಮಗ, ಪೊರ್ಕಿ ಗುಂಡ್ರಗೋವಿ, ನಂಜನಗೂಡು ನಂಜುಂಡ, ಸಾರಥಿ, ಸ್ವೀಟಿ ನನ್ನ ಜೋಡಿ, ಬುಲ್ ಬುಲ್, ಮದರಂಗಿ ಅಂತಹ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು.

Kannada Actor Sharath Lohitashwa

ಇನ್ನು ಇವರ ತಂದೆ ಲೋಹಿತಾಶ್ವ ಕೂಡ ಹಳೆಯ ಚಿತ್ರಗಳಲ್ಲಿ ಗಂಭೀರ ಪಾತ್ರಗಳು ಹಾಗೂ ತಮ್ಮ ಪ್ರಬಲ ಧ್ವನಿಯಿಂದಾಗಿ ಸಿನಿ ಪ್ರೇಕ್ಷಕರನ್ನು ರಂಜಿಸಿದಂತ ಕಲಾವಿದ.

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರು ಎಂಟನೇ ತಾರೀಕು ನವೆಂಬರ್ 2022 ತಮ್ಮ ಪುತ್ರ ಶರತ್ ಲೋಹಿತಾಶ್ವ ಅವರ ಕಣ್ಣೆದುರಿಗೆ ಪ್ರಾಣಬಿಟ್ಟರು. ಈ ಒಂದು ನೋವನ್ನು ಎಂದಿಗೂ ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಅಂದು ನನ್ನ ತಂದೆಯನ್ನೇ ನಾನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಲೋಹಿತಾಶ್ವ ಮಾಧ್ಯಮ ಒಂದರಲ್ಲಿ ಮಾತನಾಡುವಾಗ ಕಣ್ಣೀರು ಹಾಕಿದ್ದಾರೆ.

ಹೌದು ಗೆಳೆಯರೇ, ನಮ್ಮೆಲ್ಲರನ್ನು ಹಲವು ದಶಕಗಳ ಕಾಲ ರಂಜಿಸಿದಂತಹ ಹಿರಿಯ ನಟ ಲೋಹಿತಾಶ್ವ ಅವರು ತಮ್ಮ 80ನೇ ವಯಸ್ಸಿಗೆ ಇಹಲೋಕ ತೆಜಿಸಿದ್ದು, ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿತ್ತು. ಸದ್ಯ ತಂದೆಯ ಅಗಲಿಕೆಯ ನೋವಿಂದ ಚೇತರಿಸಿಕೊಳ್ಳುತ್ತಿರುವಂತಹ ಶರತ್ ಲೋಹಿತಾಶ್ವ ಸಿನಿಮಾ ರಂಗದಲ್ಲಿ ಮತ್ತೆ ಸಕ್ರಿಯರಾಗುವಂತಹ ಪ್ರಯತ್ನ ಮಾಡುತ್ತಿದ್ದಾರೆ.

Unknown Facts About Kannada Actor Sharath Lohitashwa

Leave A Reply

Your email address will not be published.