ಮನೆಯವರು ಎಷ್ಟೇ ಬೇಡ ಅಂದ್ರು ನಟ ದೇವರಾಜ್ ಚಂದ್ರಲೇಖ ಅವರನ್ನೇ ಮದುವೆಯಾದ್ರು! ಇವರಿಬ್ಬರ ಮದುವೆಯಿಂದ ಅವಿನಾಶ್ ಜೈಲಿಗೆ ಹೋಗಿದ್ರು

ಲಾಲಿ ಚಿತ್ರದಲ್ಲಿ ಪೋಷಕ ಪಾತ್ರ ಒಂದರ ಅವಕಾಶ ದೊರಕುತ್ತದೆ. ಅಲ್ಲದೆ ಈ ಸಿನಿಮಾದಲ್ಲಿ ದೇವರಾಜ್ ಅವರಿಗೆ ಚಂದ್ರಲೇಖ ಅವರು ನಾಯಕಿಯಾಗಿ ಆಯ್ಕೆಯಾಗಿರುತ್ತಾರೆ

ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಸಾಕಷ್ಟು ನಟ ನಟಿಯರು ತಮ್ಮ ಚಿತ್ರಗಳಲ್ಲಿಯೇ ಕೆಲಸ ಮಾಡಿದಂತಹ ಕೋ ಆಕ್ಟರ್ಗಳನ್ನು ಮದುವೆಯಾಗಿ ಇಂದು ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿರುವಂತಹ ಉದಾಹರಣೆಗಳು ಸಾಕಷ್ಟಿವೆ.

ಅವರಲ್ಲಿ ಎಲ್ಲರ ಪ್ರೀತಿಯ ಡೈನಾಮಿಕ್ ಹೀರೋ ದೇವರಾಜ್ (Actor Devraj) ಕೂಡ ಒಬ್ಬರು. ಹೌದು ಗೆಳೆಯರೇ ಅದೊಂದು ಕಾಲದಲ್ಲಿ ಉತ್ತುಂಗದ ಶಿಖರದಲ್ಲಿದಂತಹ ದೇವರಾಜ್ ಅವರಿಗೆ ಸಾಲು ಸಾಲು ಸಿನಿಮಾಗಳು ಹರಸಿ ಬಂದವು.

ಸಿಕ್ಕಂತಹ ಪಾತ್ರಗಳಿಗೆ ಅದ್ಭುತವಾಗಿ ಜೀವ ತುಂಬುತ್ತ ಕನ್ನಡದ ಯಶಸ್ವಿ ನಟರಾಗಿ (Kannada Top Hero) ಹೊರಹೊಮ್ಮಿದಂತಹ ದೇವರಾಜ್ ಅವರಿಗೆ ಲಾಲಿ ಚಿತ್ರದಲ್ಲಿ ಪೋಷಕ ಪಾತ್ರ ಒಂದರ ಅವಕಾಶ ದೊರಕುತ್ತದೆ. ಅಲ್ಲದೆ ಈ ಸಿನಿಮಾದಲ್ಲಿ ದೇವರಾಜ್ ಅವರಿಗೆ ಚಂದ್ರಲೇಖ ಅವರು ನಾಯಕಿಯಾಗಿ ಆಯ್ಕೆಯಾಗಿರುತ್ತಾರೆ. ಈ ಮೂಲಕ ಇವರಿಬ್ಬರ ಪರಿಚಯ ಶುರುವಾಗಿ ಕಾಲಕ್ರಮೇಣ ಪರಿಚಯದಿಂದ ಸ್ನೇಹಕ್ಕೆ ತಿರುಗುತ್ತದೆ.

ಮನೆಯವರು ಎಷ್ಟೇ ಬೇಡ ಅಂದ್ರು ನಟ ದೇವರಾಜ್ ಚಂದ್ರಲೇಖ ಅವರನ್ನೇ ಮದುವೆಯಾದ್ರು! ಇವರಿಬ್ಬರ ಮದುವೆಯಿಂದ ಅವಿನಾಶ್ ಜೈಲಿಗೆ ಹೋಗಿದ್ರು - Kannada News

ನಟ ಅಭಿಜಿತ್ ಕುರಿತು ಪತ್ನಿ ಮಾಧ್ಯಮದ ಮುಂದೆ ಬಂದು ಬೇಸರ ವ್ಯಕ್ತಪಡಿಸಿದ್ದು ಯಾಕೆ? ಅಷ್ಟಕ್ಕೂ ಆಗಿದ್ದಾದರೂ ಏನು?

ಹೀಗೆ ಕೆಂಡಮಂಡಲ ಎಂಬ ಸಿನಿಮಾದಲ್ಲಿ ದೇವರಾಜ್ ಪ್ರಮುಕ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಅಲ್ಲದೆ ಈ ಸಿನಿಮಾದ ನಾಯಕ ನಟಿಯಾಗಿ ನಟಿ ಚಂದ್ರಲೇಖ ಮತ್ತೊಮ್ಮೆ ದೇವರಾಜ್ ಅವರೊಟ್ಟಿಗೆ ಅಭಿನಯಿಸುವಂತಹ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಈ ಚಿತ್ರದ ರೇ’ಪ್ ಸೀನ್ ಒಂದರಲ್ಲಿ ಚಂದ್ರಲೇಖ ಅವರಿಗೆ ಮೈತುಂಬ ಗಾಯಗಳಾಗಿ ಬಿಟ್ಟಿರುತ್ತದೆ.

Kannada Actor Devraj and His Wife

ಹೀಗೆ ಸಿನಿಮಾದ ಶೂಟಿಂಗ್ ಮುಗಿದ ನಂತರ ಆಕೆಯ ಮೈಮೇಲೆ ಆಗಿದ್ದಂತಹ ಗಾಯವನ್ನೆಲ್ಲ ನೋಡಿ ಬೇಸರ ವ್ಯಕ್ತಪಡಿಸಿದ ದೇವರಾಜ್ ಅವರೇ ಅಯಿಂಟ್ಮೆಂಟ್ ಹಚ್ಚುತ್ತಾ ಆಕೆಯ ಆರೋಗ್ಯದ ಕಡೆಗೆ ನಿಗಾವಹಿಸುತ್ತಾರೆ. ಅಲ್ಲದೆ ಚಂದ್ರಲೇಖ ಅವರಿಗೆ ಆಗಿದಂತಹ ಗಾಯಗಳೆಲ್ಲವೂ ಸಂಪೂರ್ಣವಾಸಿಯಾಗುವವರೆಗೂ ಕರೆ ಮಾಡಿ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿದ್ದರಂತೆ.

10ನೇ ವಯಸ್ಸಿಗೆ ಪುನೀತ್ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಬೆಟ್ಟದ ಹೂವು ಸಿನಿಮಾ ಆಗಿನ ಕಾಲಕ್ಕೆ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಈ ನಡುವೆ ದೇವರಾಜ್ ಹಾಗು ಚಂದ್ರಲೇಖ ಅವರ ಸ್ನೇಹ ಪ್ರೀತಿಗೆ ತಿರುಗುತ್ತದೆ, ಇಬ್ಬರು ಮದುವೆಯಾಗಬೇಕೆಂಬ (Marriage) ನಿರ್ಧಾರ ಮಾಡಿ ಮನೆಯವರ ಒಪ್ಪಿಗೆ ಕೇಳ ಹೊರಟಾಗ ಇಬ್ಬರ ಮನೆಯಿಂದಲೂ ವಿರೋಧ ವ್ಯಕ್ತವಾಗುತ್ತದೆ.

ಅಲ್ಲದೆ ಚಂದ್ರಲೇಖ ಅವರ ಮನೆಯಲ್ಲಿ ಬೇರೊಬ್ಬ ಹುಡುಗನೊಂದಿಗೆ ಮದುವೆ ಮಾಡಲು ನಿಶ್ಚಯ ಮಾಡಿದಾಗ ನಟ ಅವಿನಾಶ್ ದೇವರಾಜ್ ಮತ್ತು ಚಂದ್ರಲೇಖ ಅವರನ್ನು ಕರೆದುಕೊಂಡು ರಿಜಿಸ್ಟರ್ ಆಫೀಸ್ ನಲ್ಲಿ ಮದುವೆ ಮಾಡಿಸಿಬಿಡುತ್ತಾರೆ.

ಇದರಿಂದ ಕೋಪಗೊಂಡಂತಹ ಚಂದ್ರಲೇಖ ಪೋಷಕರು ಅವಿನಾಶ್ ಅವರ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದರು. ಪೊಲೀಸರು ದೂರಿನ ಅನ್ವಯ ಅವಿನಾಶ್ ಅವರನ್ನು ಜೈಲಿಗೆ ಕರೆದುಕೊಂಡು ಹೋಗಿ ಕುಳಿಸಿರುತ್ತಾರೆ. ಆ ಸಂದರ್ಭದಲ್ಲಿ ತಮಗೆ ಸಹಾಯ ಮಾಡಲು ಬಂದ ಸ್ನೇಹಿತ ಕಷ್ಟದಲ್ಲಿದ್ದಾನೆ ಎಂಬ ಮಾಹಿತಿ ತಿಳಿದೊಡನೆ ಸ್ಟೇಷನ್ ಗೆ ಧಾವಿಸಿದ ದೇವರಾಜ್ ಮತ್ತು ಚಂದ್ರಲೇಖ ತಾವಿಬ್ಬರು ಸ್ವಯಚೆಯಿಂದಾಗಿ ಮದುವೆ ಮಾಡಿಕೊಂಡಿದ್ದೇವೆ ಎಂಬ ಹೇಳಿಕೆ ನೀಡಿ ಅವಿನಾಶ್ ಅವರನ್ನು ಬಿಡಿಸಿಕೊಂಡು ಬಂದರಂತೆ..

ಅತಿಯಾಗಿ ಪ್ರೀತಿಸುತ್ತಿದ್ದ ಸುನಿಲ್ ಅವರನ್ನು ಮರೆಯೋಕೆ ಮಾಲಾಶ್ರೀಗೆ ಎಷ್ಟು ದಿವಸ ಬೇಕಾಯ್ತು ಗೊತ್ತಾ? ಪಾಪ ಆ ನೋವು ಇನ್ನೂ ಕಾಡುತ್ತಿದೆಯಂತೆ

ಹೀಗೆ ಮನೆಯವರ ವಿರೋಧದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದ್ರಲೇಖ ಗರ್ಭಿಣಿಯಾದ ಸಂದರ್ಭದಲ್ಲಿ ದೇವರಾಜ್ ಅವರೇ ಆಕೆಯ ತಂದೆ ತಾಯಿ ಎಲ್ಲವೂ ಆಗಿ ಹಾರೈಕೆ ಮಾಡಿದರಂತೆ

Unknown Facts About Kannada Actor Devraj Marriage Story

Comments are closed.