ಅವನ ಮುಖ ನೋಡು, ಅವನೊಬ್ಬ ಹೀರೋನಾ? ಎಂದು ಅವಮಾನ ಮಾಡಿದವರಿಗೆ ನಟ ರಘುವೀರ್ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

ಸಿನಿಮಾ ರಂಗಕ್ಕೆ ಕಾಲಿಟ್ಟ ಮೊದಲ ಪ್ರಯತ್ನದಲ್ಲಿ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿ ಉತ್ತುಂಗದ ಶಿಖರವನ್ನೇರಿದ ರಘುವೀರ್

ನಟ ರಘುವೀರ್ ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಶೃಂಗಾರ ಕಾವ್ಯ, ಚೈತ್ರದ ಪ್ರೇಮಾಂಜಲಿ ಎಂಬ ಸಿನಿಮಾಗಳು ನೆನಪಿಗೆ ಬಂದುಬಿಡುತ್ತದೆ. ಕನ್ನಡದ ಕ್ಲಾಸಿಕ್ ಹಿಟ್ ಪಟ್ಟಿಯಲ್ಲಿ ಸೇರ್ಪಡೆಯಾದಂತಹ ಈ ಚಿತ್ರವು ಇಂದಿಗೂ ಅದೆಷ್ಟೋ ಕನ್ನಡ ಸಿನಿ ಪ್ರೇಕ್ಷಕರ ಹಾರ್ಟ್ ಫೇವರೆಟ್‌ ಸಿನಿ ಪಟ್ಟಿಯಲ್ಲಿ ಉಳಿದುಕೊಂಡಿದೆ. ಸಿನಿಮಾ ರಂಗಕ್ಕೆ ಕಾಲಿಟ್ಟ ಮೊದಲ ಪ್ರಯತ್ನದಲ್ಲಿ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿ ಉತ್ತುಂಗದ ಶಿಖರವನ್ನೇರಿದ ರಘುವೀರ್ ಸಿನಿಮಾದ ಅವಕಾಶ ಕೇಳಿ ನಿರ್ದೇಶಕರ ಬಳಿ ಹೋದಾಗ ಅವನ ಮುಖ ನೋಡು, ಇವನು ಹೀರೋನಾ? ಎಂದೆಲ್ಲ ಹೀಯಾಳಿಸಿದರಂತೆ.

ಇದಕ್ಕೆ ರಘುವೀರ್ ತಮ್ಮದೇ ದಾಟಿಯಲ್ಲಿ ಉತ್ತರಿಸಿದ್ದು ಹೇಗೆ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಅಪ್ರತಿಮ ಕಲಾವಿದನ ಸಿನಿ ಬದುಕು ಹೇಗಿತ್ತು? ಎಂಬ ಇಂಟರೆಸ್ಟಿಂಗ್ ಸ್ಟೋರಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ನಟ ರಘುವೀರ್ ಅವರು ಬಾಲ್ಯದಿಂದಲೂ ಕಷ್ಟವನ್ನು ಅನುಭವಿಸಿ ಬಂದಂತಹ ನಟನಲ್ಲ.

ಬದಲಿಗೆ ಹುಟ್ಟಿದಾಗಿನಿಂದಲೂ ಆಗರ್ಭ ಶ್ರೀಮಂತ, ಚಿನ್ನದ ತಟ್ಟೆಯಲ್ಲಿ ಊಟ ಮಾಡುತ್ತಿದ್ದಂತಹ ವ್ಯಕ್ತಿ. ಹೀಗಿರುವಾಗ ತಂದೆ ಎಷ್ಟೇ ಬೇಡ ಎಂದರು ಕೂಡ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಹುಚ್ಚು ಆಸೆಯಿಂದ ಕಾಮಿಡಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮಗನ ಪ್ರಯತ್ನಕ್ಕೆ ತಂದೆಯ ಬೆಂಬಲ ಕೂಡ ದೊರಕಿತ್ತು. ಹೀಗೆ ಬಹುದೊಡ್ಡ ತಾರಾ ಬಳಗದಲ್ಲಿ ಅತಿ ಹೆಚ್ಚು ಹಣ ವೆಚ್ಚದಲ್ಲಿ ತಯಾರಾದಂತಹ ಈ ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ಸನ್ನು ಕಾಣಲಿಲ್ಲ.

ಅವನ ಮುಖ ನೋಡು, ಅವನೊಬ್ಬ ಹೀರೋನಾ? ಎಂದು ಅವಮಾನ ಮಾಡಿದವರಿಗೆ ನಟ ರಘುವೀರ್ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ? - Kannada News

ಹಾಕಿದ ಹಣ ಕೂಡ ವಾಪಸ್ ಬರಲಿಲ್ಲ. ಹೀಗೆ ಮೊದಲ ಪ್ರಯತ್ನದಲ್ಲಿಯೇ ಬಹುದೊಡ್ಡ ಮಟ್ಟದ ಸೋಲನ್ನು ಅನುಭವಿಸಿದಂತಹ ರಘು ತಮ್ಮ ಪ್ರಯತ್ನವನ್ನು ಬಿಡದೆ ತಾವೇ ತಂಡವನ್ನು ಕಟ್ಟಿ ಇದಕ್ಕೆ ಸ್ವತಃ ರಘುವೀರ್ ಮತ್ತು ಅವರ ಸ್ನೇಹಿತರೇ ಹಣ ಹೂಡಿಕೆ ಮಾಡಿದರು. ಎಸ್ ನಾರಾಯಣ್ ಅವರು ನಿರ್ದೇಶನ ಮಾಡಿದರು ಆದರೆ ಸಿನಿಮಾ ಡಿಸ್ಟ್ರಿಬ್ಯೂಟರ್ಗಳನ್ನೆಲ್ಲ ಭೇಟಿ ಮಾಡಿದಾಗ ಸಿನಿಮಾ ನೋಡಿ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರಂತೆ.

ಆದರೆ ಡಿಸ್ಟ್ರಿಬ್ಯೂಟ್ ಮಾಡಲು ಯಾರು ಮುಂದೆ ಬರಲಿಲ್ಲ. ಕಾರಣ ಕೇಳಿದಾಗ ಒಳ್ಳೆಯ ನಿರ್ದೇಶನ, ಹಾಡುಗಳೆಲ್ಲವೂ ಚೆನ್ನಾಗಿದೆ ಆದರೆ ಸಿನಿಮಾದಲ್ಲಿರುವ ಮೈನಸ್ ಪಾಯಿಂಟ್ ಎಂದರೆ ಹೀರೋ. ಅವನ ಮುಖ ನೋಡಿ ಬಹಳ ಕಪ್ಪಾಗಿದ್ದಾನೆ, ಆತನನ್ನು ನೋಡಲು ಯಾರು ತಾನೆ ಥಿಯೇಟರ್ ಬಳಿ ಬರುತ್ತಾರೆ? ಎಂದೆಲ್ಲ ಅವಮಾನ ಮಾಡಿದರಂತೆ. ಪ್ರತಿಯೊಬ್ಬ ಡಿಸ್ಟ್ರಿಬ್ಯೂಟರ್ ಕೂಡ ಇದೇ ಕಾರಣ ನೀಡಿದಾಗ ರಘುವೀರ್ ಅನುಭವಿಸಿದಂತಹ ಅವಮಾನ ಯಾತನೆ, ನೋವು, ಸಂಕಟ ವರ್ಣಿಸಲಾಗದು.

ಅವನ ಮುಖ ನೋಡು, ಅವನೊಬ್ಬ ಹೀರೋನಾ? ಎಂದು ಅವಮಾನ ಮಾಡಿದವರಿಗೆ ನಟ ರಘುವೀರ್ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ? - Kannada News

ಹೀಗೆ ಕನ್ನಡಿ ಮುಂದೆ ತಮ್ಮ ಮುಖವನ್ನು ತಾವೇ ನೋಡಿಕೊಂಡು ಅದೆಷ್ಟೋ ಬಾರಿ ರಘುವೀರ್ ಅವರು ಕಣ್ಣೀರು ಹಾಕಿದರಂತೆ. ಆದರೂ ಯಾವುದಕ್ಕೂ ಕುಗ್ಗದೆ ಡಿಸ್ಟ್ರಿಬ್ಯೂಟರ್ಗಳ ಹುಡುಕಾಟದಲ್ಲಿದ್ದ ರಘುವೀರ್ ಅವರಿಗೆ ಪರಿಚಯವಾದದ್ದು ಕೋಟಿ ರಾಮು, ಸಿನಿಮಾದ ಕಥೆ ಹಾಗೂ ರಘುವೀರ್ ಅವರ ಅಭಿನಯಕ್ಕೆ ಮರುಳಾಗಿ ಹೋದಂತಹ ಕೋಟಿ ರಾಮು ಅವರು ಹಿಂದೆ ಮುಂದೆ ನೋಡದೆ ಹಣವನ್ನು ಹೂಡಿಕೆ ಮಾಡಿದರು.

ಅದರಂತೆ ಸಿನಿಮಾ ತೆರೆ ಕಂಡು ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗುವ ಮೂಲಕ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತದೆ. ಸಿನಿಮಾದಲ್ಲಿನ ರಘುವೀರ್ ಅವರ ಅಭಿನಯ, ಪ್ರೇಕ್ಷಕರನ್ನು ಆಕರ್ಷಿಸಿತ್ತು ಹೀಗೆ ತಮ್ಮನ್ನು ಈಯಾಳಿಸುವವರ ಮುಂದೆ ಎದ್ದು ಮೆರೆಯುವ ಮೂಲಕ ರಘುವೀರ್ ತಮ್ಮದೇ ದಾಟಿಯಲ್ಲಿ ಉತ್ತರ ನೀಡಿದರು.

Leave A Reply

Your email address will not be published.