ನನ್ನ ಹಾಡಿಗೆ ಜೀವ ಕೊಡೋದು ಕನ್ನಡದ ಆ ನಟ ಮಾತ್ರ ಎಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಯಾವ ನಟನನ್ನು ಸದಾ ಗುಣಗಾನ ಮಾಡುತ್ತಿದ್ದರು ಗೊತ್ತಾ?

ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವುದು ಖಂಡಿತ ಎಂದು ಬಯಸುತ್ತಿದ್ದಂತಹ ಕಾಲವದು. ಈ ಕಾರಣದಿಂದಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಹಾಡಿಸಬೇಕು ಎಂದು ನಿರ್ಮಾಪಕರು ಸಾಲುಗಟ್ಟಲೆ ಕ್ಯೂ ನಿಲ್ಲುತ್ತಿದ್ದರು.

ಸ್ನೇಹಿತರೆ, ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಮಧುರವಾದ ಕಂಠದ ಕುರಿತು ವರ್ಣನೆ ಮಾಡಲು ಪದಗಳೇ ಸಾಲುವುದಿಲ್ಲ ಬಿಡಿ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ಹೀಗೆ ಎಲ್ಲಾ ಭಾಷೆಯ ಚಲನಚಿತ್ರಗಳಿಗೆ ತಮ್ಮ ಹಾಡಿನ ಮೂಲಕವೇ ಮೆರುಗನ್ನು ನೀಡುತ್ತಿದ್ದ ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡದ ಆ ನಟನನ್ನು ಕಂಡರೆ ಬಹಳ ಪ್ರೀತಿ ಹಾಗೂ ಅವರು ಮಾತ್ರ ನನ್ನ ಹಾಡಿಗೆ ಜೀವ ಕೊಡೋದು ಎಂದು ಸಾಕಷ್ಟು ವೇದಿಕೆಯ ಮೇಲೆ ಅವರ ಗುಣಗಾನ ಮಾಡುತ್ತಿದ್ದರು.

ಅಷ್ಟಕ್ಕೂ ಬಾಲಸುಬ್ರಹ್ಮಣ್ಯಂ ಅವರಿಗೆ ಯಾವ ನಟನ ಮೇಲೆ ಇಷ್ಟು ಅಪಾರವಾದ ಪ್ರೀತಿ ಗೌರವ ಇತ್ತು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅದೊಂದು ಸಮಯವಿತ್ತು ಯಾವುದಾದರೂ ಸಿನಿಮಾದಲ್ಲಿ ಬಾಲಸುಬ್ರಮಣ್ಯಂ ಅವರ ಧ್ವನಿ ಇದೆ ಎಂಬ ಮಾಹಿತಿ ಅಧಿಕೃತವಾಗಿ ತಿಳಿದು ಬಂದರೆಸಾಕು ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವುದು ಖಂಡಿತ ಎಂದು ಬಯಸುತ್ತಿದ್ದಂತಹ ಕಾಲವದು.

SPB Vishnuvardhan

ನನ್ನ ಹಾಡಿಗೆ ಜೀವ ಕೊಡೋದು ಕನ್ನಡದ ಆ ನಟ ಮಾತ್ರ ಎಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಯಾವ ನಟನನ್ನು ಸದಾ ಗುಣಗಾನ ಮಾಡುತ್ತಿದ್ದರು ಗೊತ್ತಾ? - Kannada News

ಈ ಕಾರಣದಿಂದಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಹಾಡಿಸಬೇಕು ಎಂದು ನಿರ್ಮಾಪಕರು ಸಾಲುಗಟ್ಟಲೆ ಕ್ಯೂ ನಿಲ್ಲುತ್ತಿದ್ದರು. ಅಲ್ಲದೆ ಸ್ಟಾರ್ ನಟರು ಎಸ್ಪಿಬಿ ಹಾಡಿದರೆ ಮಾತ್ರ ಕಾಲ್ಶೀಟ್ ಕೊಡುವುದು ಎಂದು ನಟರೂ ಸಹ ಹೇಳುತ್ತಿದ್ದರು. ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ನಟರಿಗೂ ಎಸ್ಪಿಬಿ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ ಎಂದರೆ ತಪ್ಪಾಗಲಾರದು.

ಆದ್ರೆ ಕನ್ನಡದ ಪಾಲಿಗೆ ಎಸ್ಪಿಪಿ ಬಹಳ ವಿಶೇಷ ಏಕೆಂದರೆ ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ರವಿಚಂದ್ರನ್, ಪ್ರಭಾಕರ್ ಶಶಿಕುಮಾರ್ ಎಲ್ಲರ ಸಿನಿಮಾಗಳಲ್ಲೂ ಹಾಡುವ ಮೂಲಕ ಅದ್ಭುತವಾದ ಸಂಗೀತವನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಆದರೆ ಸ್ವತಹ ಎಸ್ಪಿಬಿ ಅವರ ಕುರಿತು ವಾಹಿನಿಯೊಂದರಲ್ಲಿ ಸಂದರ್ಶನ ನೀಡಿದ ಭಾರತಿ ವಿಷ್ಣುವರ್ಧನ್ ಅವರು ಎಸ್ಪಿಬಿ ಅವರಿಗೆ ಯಾವ ನಟ ತುಂಬಾ ಇಷ್ಟ ಎಂದು ತಿಳಿಸಿದ್ದಾರೆ.

ನನ್ನ ಹಾಡಿಗೆ ಜೀವ ಕೊಡೋದು ವಿಷ್ಣುವರ್ಧನ್ ಎಂದು ಅನೇಕ ಸಲ ಎಸ್ಪಿಬಿ ಹೇಳಿದ್ದಾರಂತೆ. ಹೌದು ಸಾಹಸಸಿಂಹ ವಿಷ್ಣುವರ್ಧನ್  ನಟಿಸುತ್ತಿದ್ದ ಬಹುತೇಕ ಎಲ್ಲಾ ಚಿತ್ರಗಳಿಗೂ ಎಸ್ಪಿಬಿ ಹಾಡಬೇಕಿತ್ತು. ಎಸ್ಪಿಬಿ ಹಾಡಿದರೆ ವಿಷ್ಣುವರ್ಧನ್ ಅವರು ಹಾಡಿದಂತೆ ಭಾಸವಾಗುತ್ತಿತ್ತು, ವಿಷ್ಣುವರ್ಧನ್ ಮತ್ತು ಎಸ್ ಪಿ ಬಾಲಸುಬ್ರಹ್ಮಣ್ಯಂ ಅಷ್ಟು ಆಪ್ತರಾಗಿದ್ದರು. ಇನ್ನು ವಿಷ್ಣುವರ್ಧನ್ ನಟಿಸಿದ ಕೊನೆಯ ಚಿತ್ರ ಆಪ್ತರಕ್ಷಕ ಸಿನಿಮಾದ “ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೊನೇ, ಇನ್ನೆಲ್ಲ ಜನ್ಮದಲ್ಲೂ ಹುಟ್ಟೋದು ಇಲ್ಲೇನೆ” ಹಾಡು ವಿಷ್ಣುವರ್ಧನ್ ಅಭಿಮಾನಿಗಳಿಗೆ ಮರೆಯಲಾರದ ಹಾಡಾಯಿತು.

Leave A Reply

Your email address will not be published.