ಒಂದು ಹೊತ್ತು ಊಟಕ್ಕೂ ಗತಿ ಇಲ್ಲದೆ ಪರದಾಡುತ್ತಿದ್ದ ಸಾಧು ಕೋಕಿಲ ಬಹು ಬೇಡಿಕೆಯ ನಟನಾಗಿದ್ದು ಹೇಗೆ! ಅವರ ಕಷ್ಟದ ದಿನಗಳು ಹೇಗಿತ್ತು ಅಂತ ತಿಳಿದ್ರೆ ಖಂಡಿತ ಬೇಜಾರಾಗುತ್ತೆ!

ಮನೆಯಲ್ಲಿ ಕಡು ಬಡತನ ಇದ್ದರೂ ಸಹ ಕೆಲಸಕ್ಕೆ ಹೋಗಿ ಆನಂತರ ತಮ್ಮ ಸಂಗೀತ ಅಭ್ಯಾಸವನ್ನು ಸಾಧುಕೋಕಿಲ ಮಾಡುತ್ತಿದ್ದರು. ಹೀಗೆ ಒಂದು ಹೊತ್ತು ಊಟಕ್ಕೂ ಕಷ್ಟ ಪಡುವಂತಹ ಕಡು ಬಡತನ ಸಾಧು ಕೋಕಿಲ ಅವರ ಮನೆಯಲ್ಲಿತ್ತು, ಆದರೂ ತಮ್ಮ ಗುರಿಯನ್ನು ಬಿಡದ ಸಾಧು ಮಹಾರಾಜ್ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಸ್ನೇಹಿತರೆ, ಸಾಧು ಕೋಕಿಲ ಅವರ ಹೆಸರು ಕೇಳಿದೊಡನೆ ನಮ್ಮೆಲ್ಲರಿಗೂ ಸಕಲ ಕಲಾವಲ್ಲಭನ ದರುಶನವಾಗಿ ಬಿಡುತ್ತದೆ. ತಮ್ಮ ಅದ್ಭುತ ಕಾಮಿಡಿ ಸನ್ಸ್ ಮೂಲಕವೇ ಪ್ರತಿಯೊಬ್ಬರಿಗೂ ತಮ್ಮ ಮಾತಿನಲ್ಲೇ ನಗುವಿನ ಕಚ್ಚುಗುಳಿ ಇಡುವಂತಹ ಸಾಧುಕೋಕಿಲ ಅವರು ಸಿನಿಮಾ ರಂಗಕ್ಕೆ ಬರಲು ಸಾಕಷ್ಟು ಕಷ್ಟ ನೋವನ್ನು ಅನುಭವಿಸಿದರು. ಹೌದು ಗೆಳೆಯರೇ ಓರ್ವ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕೆಂಬ ಆಸೆ ಹೊಂದಿದ್ದ ಸಾಧು ಮಹಾರಾಜ್ ಪ್ರಖ್ಯಾತಿ ಪಡೆದಿದ್ದು ಹಾಸ್ಯ ನಟನಾಗಿ.

ಇಂತಹ ಬಹುಮುಖ ಪ್ರತಿಭೆ ಚಿತ್ರರಂಗಕ್ಕೆ ಬರುವ ಮುನ್ನ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದರು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ನಟ ಸಾಧು ಕೋಕಿಲ ಅವರಿಗೆ ಚಿಕ್ಕಂದಿನಿಂದಲೂ ತಾನು ಓರ್ವ ಸಂಗೀತ ನಿರ್ದೇಶಕನಾಗಬೇಕು, ದೊಡ್ಡ ಹಾಡುಗಾರನಾಗಬೇಕು ಎಂಬ ಆಸೆ ಇರುತ್ತದೆ.

ಹೀಗಾಗಿ ಮನೆಯಲ್ಲಿ ಕಡು ಬಡತನ ಇದ್ದರೂ ಸಹ ಕೆಲಸಕ್ಕೆ ಹೋಗಿ ಆನಂತರ ತಮ್ಮ ಸಂಗೀತ ಅಭ್ಯಾಸವನ್ನು ಸಾಧುಕೋಕಿಲ ಮಾಡುತ್ತಿದ್ದರು. ಹೀಗೆ ಒಂದು ಹೊತ್ತು ಊಟಕ್ಕೂ ಕಷ್ಟ ಪಡುವಂತಹ ಕಡು ಬಡತನ ಸಾಧು ಕೋಕಿಲ ಅವರ ಮನೆಯಲ್ಲಿತ್ತು, ಆದರೂ ತಮ್ಮ ಗುರಿಯನ್ನು ಬಿಡದ ಸಾಧು ಮಹಾರಾಜ್ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಸಾಧು ಕೋಕಿಲ್ ಅವರಿಗೆ ಆರ್ಕೆಸ್ಟ್ರಾದವರ ಪರಿಚಯವಾಗುತ್ತದೆ.

ಒಂದು ಹೊತ್ತು ಊಟಕ್ಕೂ ಗತಿ ಇಲ್ಲದೆ ಪರದಾಡುತ್ತಿದ್ದ ಸಾಧು ಕೋಕಿಲ ಬಹು ಬೇಡಿಕೆಯ ನಟನಾಗಿದ್ದು ಹೇಗೆ! ಅವರ ಕಷ್ಟದ ದಿನಗಳು ಹೇಗಿತ್ತು ಅಂತ ತಿಳಿದ್ರೆ ಖಂಡಿತ ಬೇಜಾರಾಗುತ್ತೆ! - Kannada News

 

 

ಆರ್ಕೆಸ್ಟ್ರಾದಲ್ಲಿ ಗುರುತಿಸಿಕೊಳ್ಳಲು ಪ್ರಾರಂಭ ಮಾಡಿದ ಸಾಧುಕೋಕಿಲ ಅವರಿಗೆ ಸಿನಿಮಾದಲ್ಲಿ ಕೆಲಸ ಮಾಡುವಂತಹ ಅವಕಾಶ ದೊರಕುತ್ತದೆ. ಹೌದು ಗೆಳೆಯರೇ ಅಸಿಸ್ಟೆಂಟ್ ಮ್ಯೂಸಿಕಲ್ ಡೈರೆಕ್ಟರ್ ಆಗಿ ಚಿತ್ರರಂಗ ಪ್ರವೇಶ ಮಾಡಿದ ಸಾಧು ಕೋಕಿಲ ತಮ್ಮ ಅದ್ಭುತ ಕಾಮಿಡಿ ಸನ್ಸ್ನಿಂದ ಒಂದೆರಡು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಲು ಪ್ರಾರಂಭ ಮಾಡಿದರು. ಬಯಸದೆ ಬಂದ ಭಾಗ್ಯ ಎಂಬಂತೆ ಶಿವಮಣಿ ನಿರ್ದೇಶನ ಮಾಡಬೇಕಿದ್ದ ಉಪೇಂದ್ರ ಅವರ ರಕ್ತ ಕಣ್ಣೀರು ಸಿನಿಮಾ ಸಾಧುಕೋಕಿಲ ಅವರ ಕೈಗೆ ದೊರಕುತ್ತದೆ.

ಸಿಕ್ಕಂತಹ ಅವಕಾಶವನ್ನು ಸದ್ದುಪಯೋಗಪಡಿಸಿಕೊಂಡ ಸಾಧುಕೋಕಿಲ ಅವರು ತಮ್ಮ ಮೊದಲ ನಿರ್ದೇಶನದಲ್ಲಿಯೇ ಎಲ್ಲರೂ ಭೇಷ್ ಎನ್ನುವಂತೆ ಮಾಡಿ ಟೀಕೆ ಮಾಡುತ್ತಿದ್ದವರಿಗೆ ಸರಿಯಾದ ಉತ್ತರ ನೀಡಿದರು. ಹೀಗೆ ಹಂತ ಹಂತವಾಗಿ ಕಡು ಬಡತನದಿಂದ ಮೇಲೆ ಬಂದಂತಹ ಸಾಧುಕೋಕಿಲ ಅವರೀಗ ಮ್ಯೂಸಿಕ್ ಡೈರೆಕ್ಟರ್, ಪ್ರೊಡ್ಯೂಸರ್, ಡೈರೆಕ್ಟರ್, ಸಿಂಗರ್, ಆಕ್ಟರ್ ಹಾಗೂ ಕಾಮಿಡಿಯನ್ ಒಂದೇ ಮಾತಲ್ಲಿ ಹೇಳಬೇಕೆಂದರೆ ಇವರೊಬ್ಬ ಮಲ್ಟಿ ಟ್ಯಾಲೆಂಟೆಡ್ ಪರ್ಸನಾಲಿಟಿ.

ಆಗಿನ ಕಾಲದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದರೆ ಕೇವಲ 500 ರಿಂದ 600 ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಸಾಧುಕೋಕಿಲ ಇಂದು ಒಂದು ಚಿತ್ರದಲ್ಲಿ ಅಭಿನಯಿಸಲು ಒಂದು ಲಕ್ಷಕ್ಕೂ ಅಧಿಕ ಸಂಭಾವನೆಯನ್ನು ಪಡೆಯುತ್ತಾರೆ. ಹೀಗೆ ಕಲೆಯ ಮೇಲೆ ಆಸಕ್ತಿ ಹೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನಮ್ಮೆಲ್ಲರ ಪ್ರೀತಿಯ ಸಾಧು ಮಹಾರಾಜ್ ಅವರೇ ಪ್ರತ್ಯಕ್ಷ ಸ್ಪೂರ್ತಿ.

Leave A Reply

Your email address will not be published.