ಕೊನೆಗೂ ತಮ್ಮ ಸಿನಿ ಬದುಕಿನ ಸಕ್ಸಸ್ ಸೀಕ್ರೆಟ್ ರಿವೀಲ್ ಮಾಡಿದ ರಶ್ಮಿಕಾ ಮಂದಣ್ಣ, ಡಿಸೆಂಬರ್ ತಿಂಗಳು ಲಕ್ಕಿ ಎಂದ ನ್ಯಾಷನಲ್ ಕ್ರಶ್

Rashmika Mandanna : ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ ರಶ್ಮಿಕಾ ಮಂದಣ್ಣ ನನಗೆ ಡಿಸೆಂಬರ್ ತಿಂಗಳು ತುಂಬಾ ಲಕ್ಕಿ ತಿಂಗಳು (December Month) ಎಂದು ಹೇಳುವ ಮೂಲಕ ತಮ್ಮ ಸಿನಿ ಬದುಕಿನ ಸೀಕ್ರೆಟ್ ಅನ್ನು ರಿವಿಲ್ ಮಾಡಿದ್ದಾರೆ.

ಸ್ನೇಹಿತರೆ ಕನ್ನಡದ ಕಿರಿಕ್ ಪಾರ್ಟಿ (Kannada Kirik Party Cinema) ಸಿನಿಮಾದ ಮೂಲಕ ಸಾನ್ವಿ ಜೋಸೆಫ್ ಆಗಿ ಸಿನಿ ಬದುಕಿಗೆ ಕಾಲಿಟ್ಟಂತಹ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿ.

2016ರಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ತಮ್ಮ ನಟನಾ ಬದುಕನ್ನು ಪ್ರಾರಂಭ ಮಾಡಿದ ರಶ್ಮಿಕಾ ಮಂದಣ್ಣ ಇಂದು ಅಲ್ಲು ಅರ್ಜುನ್, ವಿಜಯ ದೇವರಕೊಂಡ, ಅಮಿತಾ ಬಚ್ಚನ್ ಹಾಗೂ ರನ್ಬೀರ್ ಕಪೂರ್ರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಪೀಕ್ನಲ್ಲಿ ಇದ್ದಾರೆ.

ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಸಹ ಸೋಶಿಯಲ್ ಮೀಡಿಯಾದಲ್ಲಿ (Social Media) ಸಕ್ಕತ್ ಆಕ್ಟಿವ್ ಇರುವಂತಹ ಈ ನಟಿ ಆಗಾಗ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ವೈಯಕ್ತಿಕ ವಿಚಾರಗಳನ್ನು ರಿವೀಲ್ ಮಾಡುತ್ತಿರುತ್ತಾರೆ.

ಕೊನೆಗೂ ತಮ್ಮ ಸಿನಿ ಬದುಕಿನ ಸಕ್ಸಸ್ ಸೀಕ್ರೆಟ್ ರಿವೀಲ್ ಮಾಡಿದ ರಶ್ಮಿಕಾ ಮಂದಣ್ಣ, ಡಿಸೆಂಬರ್ ತಿಂಗಳು ಲಕ್ಕಿ ಎಂದ ನ್ಯಾಷನಲ್ ಕ್ರಶ್ - Kannada News

ನಟ ಉಪೇಂದ್ರ ಮೇಲೆ ದಾಖಲಾಯಿತು ಎಫ್ಐಆರ್! ಎಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ

ಹೀಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ ರಶ್ಮಿಕಾ ಮಂದಣ್ಣ ನನಗೆ ಡಿಸೆಂಬರ್ ತಿಂಗಳು ತುಂಬಾ ಲಕ್ಕಿ ತಿಂಗಳು (December Month) ಎಂದು ಹೇಳುವ ಮೂಲಕ ತಮ್ಮ ಸಿನಿ ಬದುಕಿನ ಸೀಕ್ರೆಟ್ ಅನ್ನು ರಿವಿಲ್ ಮಾಡಿದ್ದಾರೆ.

ಹೌದು ಗೆಳೆಯರೇ ರನ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಸಿನಿಮಾ ಇದೇ ವರ್ಷ ಅಂತ್ಯದಲ್ಲಿ ಅಂದರೆ ಡಿಸೆಂಬರ್ 1ನೇ ತಾರೀಕು ತೆರೆಗಪ್ಪಳಿಸಲಿದೆ. ಈಗಾಗಲೇ ಸಿನಿಮಾದ ಎರಡನೇ ಹಂತದ ಶೂಟಿಂಗ್ ಕೆಲಸಗಳು ಕೂಡ ಮುಗಿಯುವ ಹಂತ ತಲುಪಿದ್ದು ಚಿತ್ರತಂಡ ಸಿನಿಮಾದ ರಿಲೀಸ್ ಡೇಟ್ ಅನ್ನು ಅಧಿಕೃತವಾಗಿ ತಿಳಿಸಿದ್ದಾರೆ.

ಹುಚ್ಚ ಸಿನಿಮಾ ನೋಡಿ ಕಿಚ್ಚ ಸುದೀಪ್ ಅವರಿಗೆ ವಿಷ್ಣು ದಾದಾ ಹೊಡೆದಿದ್ದು ಯಾಕೆ ಗೊತ್ತೆ?

Actress Rashmika Mandanna

ಈಗಿರುವಾಗ ಸಂದರ್ಶನದಲ್ಲಿ ತಮ್ಮ ಸಿನಿ ಬದುಕಿನ ಸೀಕ್ರೆಟ್ ಒಂದರ ಕುರಿತು ಮಾತನಾಡಿರುವ ರಶ್ಮಿಕಾ ಮಂದಣ್ಣ ನಾನು ನಟಿಸಿದ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಇಂದ ಪುಷ್ಪ ಸಿನಿಮಾದವರೆಗೂ ಬಹುತೇಕ ಎಲ್ಲಾ ಸಿನಿಮಾಗಳು ಅಂದರೆ ಕಿರಿಕ್ ಪಾರ್ಟಿ, ಅಂಜನಿಪುತ್ರ, ಚಮಕ್ ಹಾಗೂ ಪುಷ್ಪ ಸಿನಿಮಾಗಳು ಡಿಸೆಂಬರ್ ನಲ್ಲಿ ತೆರೆಕಂಡು ಸೂಪರ್ ಡೂಪರ್ ಹಿಟ್ ಆದವು.

ಅದರಂತೆ ಈಗ ಡಿಸೆಂಬರ್ನಲ್ಲಿ ರಿಲೀಸ್ ಆಗುತ್ತಿರುವ ನನ್ನ ಐದನೇ ಸಿನಿಮಾ ಅನಿಮಲ್ ಕೂಡ ನನ್ನ ಲಕ್ಕಿ ತಿಂಗಳಿನಲ್ಲಿ ರಿಲೀಸ್ ಆಗುತ್ತಿದೆ ಎಂದು ರಶ್ಮಿಕಾ ಮಂದಣ್ಣ ತಮ್ಮ ಹಾಗೂ ಡಿಸೆಂಬರ್ ತಿಂಗಳಿನ (December is Lucky) ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ. ಇದರ ಜೊತೆಗೆ ಅನಿಮಲ್ ಸಿನಿಮಾದಲ್ಲಿನ ಪಾತ್ರದ ಕುರಿತು ಹೇಳಿಕೊಂಡಿರುವ ರಶ್ಮಿಕಾ ಅನಿಮಲ್ ಸಿನಿಮಾದಲ್ಲಿ ನನ್ನ ಪಾತ್ರ ಬಹಳ ಯೂನಿಕ್ ಆಗಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸಿನಿಮಾ ಕ್ಷೇತ್ರದಿಂದ ದೂರವಿರಲು ಕಾರಣವೇನು ಗೊತ್ತೆ?

ನಾನು ಈವರೆಗೂ ಎಂದು ಸಹ ಇಂತಹ ಪಾತ್ರಗಳಲ್ಲಿ ಅಭಿನಯಿಸಿಲ್ಲ. ನನ್ನ ಪಾತ್ರದ ಕುರಿತು ಪ್ರೇಕ್ಷಕರ ಅಭಿಪ್ರಾಯ ತಿಳಿದುಕೊಳ್ಳಲು ಕಾಯುತ್ತಿದ್ದೇನೆ. ಆದಷ್ಟು ಬೇಗ ಅನಿಮಲ್ ತೆರೆಗೆ ಬರಲಿ ಎಂದು ನಾನು ಎದುರು ನೋಡುತ್ತಿದ್ದೇನೆ ಎಂದು ನಟಿ ರಶ್ಮಿಕಾ ಮಂದಣ್ಣ ತಮ್ಮ ಮುಂದಿನ ಸಿನಿಮಾದ ಕುರಿತು ತಮಗಿರುವ ಕುತೂಹಲವನ್ನು ಹೊರಹಾಕಿದರು.

ಹೀಗೆ ಡಿಸೆಂಬರ್ ತಿಂಗಳಿನಲ್ಲಿ ಒಂದರ ಮೇಲ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡಿರುವ ರಶ್ಮಿಕಾ ಮಂದಣ್ಣ ಇದೀಗ ಮತ್ತೊಮ್ಮೆ ಡಿಸೆಂಬರ್ನಲ್ಲಿ ತೆರೆಗೆ ಬರಲು ಸಕಲ ತಯಾರಿಯನ್ನು ನಡೆಸುತ್ತಿದ್ದು, ಅನಿಮಲ್ ಸಿನಿಮಾ ನಿರೀಕ್ಷಿಸಿದಂತೆ ಬಹುದೊಡ್ಡ ಮಟ್ಟದ ಯಶಸ್ಸನ್ನು ಗಳಿಸಲಿದ್ಯಾ? ಸಿನಿ ಪ್ರೇಕ್ಷಕರು ನಟಿ ರಶ್ಮಿಕಾ ಮಂದಣ್ಣ ಅವರ ಯೂನಿಕ್ ಪಾತ್ರವನ್ನು ಮೆಚ್ಚಲಿದ್ದಾರ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ

Rashmika Mandanna revealed the success secret of her film life

Leave A Reply

Your email address will not be published.