ಹರಿದಾಡುತ್ತಿದ್ದ ಗಾಸಿಪ್ ಗಳಿಗೆ ಬ್ರೇಕ್ ಹಾಕಿ ಎರಡನೇ ಮದುವೆ ಕುರಿತು ಕ್ಲಾರಿಟಿ ಕೊಟ್ಟ ಮೇಘನಾ ರಾಜ್!

ಎದೆಯಲ್ಲಿ ಅಘಾತವಾದ ನೋವು ತುಂಬಿಕೊಂಡಿದ್ದರೂ ಕೂಡ ತಮ್ಮ ಮಗುವಿಗಾಗಿ ಹಾಗೂ ಕುಟುಂಬಸ್ಥರಿಗಾಗಿ ಮತ್ತೆ ನಗುಮುಖವನ್ನು ಧರಿಸಿರುವ ಮೇಘನ ರಾಜ್ ಸಿನಿಮಾ ರಂಗದ ಸೆಕೆಂಡ್ ಇನ್ನಿಂಗ್ ಪ್ರಾರಂಭಿಸಿದ್ದಾರೆ.

ಸ್ನೇಹಿತರೆ ಸುಂದರ್ ರಾಜ್ (Sundar raj) ಹಾಗೂ ಪ್ರಮೀಳಾ ಜೋಷಾಯಿ (Pramela joshayi)  ಯವರು ಹಲವಾರು ವರ್ಷಗಳ ಹಿಂದೆಯೇ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದ ಕಾರಣ ಅವರಿಬ್ಬರ ಮುದ್ದಿನ ಮಗಳು ಮೇಘನ ರಾಜ್ (Meghana Raj) ಕೂಡ ಬಾಲನಟೆಯಾಗಿ ಮಲಯಾಳಂ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದರು.

ತಮ್ಮ ಮನೋಜ್ಞ ಅಭಿನಯದ ಮೂಲಕ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಕಮಾಲ್ ಮಾಡುತ್ತಿರುವಾಗಲೇ ಕನ್ನಡದ ರಾಕಿ ಬಾಯ್ ರಾಕಿಂಗ್ ಸ್ಟಾರ್ ಯಶ್ ಅವರೊಡನೆ ರಾಜಹುಲಿ ಸಿನಿಮಾದ ನಾಯಕ ನಟಿಯಾಗಿ ಅಭಿನಯಿಸುವ

ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ ಈ ನಟಿ ಮದುವೆಯಾದ ನಂತರ ಸ್ವಲ್ಪ ಸಮಯಗಳ ಕಾಲ ಸಿನಿಮಾರಂಗದಿಂದ ಬ್ರೇಕ್ ಪಡೆದು ಹಾಯಾಗಿ ತಮ್ಮ ಪತಿ ಚಿರಂಜೀವಿ ಸರ್ಜಾ (Chiranjeevi Sarja) ಅವರೊಡನೆ ದೇಶ ವಿದೇಶಗಳನ್ನು ಸುತ್ತುತ್ತಾ ಸಮಯ ಕಳೆಯುತ್ತಿದ್ದರು. ಹೀಗೆ ಬಹಳ ಅನ್ಯೂನ್ಯವಾಗಿ ಎಲ್ಲೆಡೆ ಓಡಾಡಿಕೊಂಡಿದ್ದ ಈ ಜೋಡಿಗಳ ಮೇಲೆ ಧ್ಯಾರ ವಕ್ರದೃಷ್ಟಿ ಬಿತ್ತು ಗೊತ್ತಿಲ್ಲ.

ಹರಿದಾಡುತ್ತಿದ್ದ ಗಾಸಿಪ್ ಗಳಿಗೆ ಬ್ರೇಕ್ ಹಾಕಿ ಎರಡನೇ ಮದುವೆ ಕುರಿತು ಕ್ಲಾರಿಟಿ ಕೊಟ್ಟ ಮೇಘನಾ ರಾಜ್! - Kannada News

ಚಿರಂಜೀವಿ ಸರ್ಜಾ (Chiranjeevi Sarja) ಅವರು ಜೂನ್ 7ನೇ ತಾರೀಕು 2020 ರಂದು ಅದುವೇ ಕರೋನಾ ಸಮಯದಲ್ಲಿ ಹೃದಯಘಾತ ಸಮಸ್ಯೆಗೆ ತುತ್ತಾಗಿ ಬಾರದ ಲೋಕ ಪಯಣವನ್ನು ಬೆಳೆಸಿಬಿಟ್ಟರು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಘನಾ ರಾಜ್ ಮದುವೆ ಆದ ಎರಡೇ ಎರಡು ವರ್ಷಕ್ಕೆ ತಮ್ಮ ಪತಿಯನ್ನು ಕಳೆದುಕೊಳ್ಳಬೇಕಾಯಿತು.

ಎದೆಯಲ್ಲಿ ಅಘಾತವಾದ ನೋವು ತುಂಬಿಕೊಂಡಿದ್ದರೂ ಕೂಡ ತಮ್ಮ ಮಗುವಿಗಾಗಿ ಹಾಗೂ ಕುಟುಂಬಸ್ಥರಿಗಾಗಿ ಮತ್ತೆ ನಗುಮುಖವನ್ನು ಧರಿಸಿರುವ ಮೇಘನ ರಾಜ್ ಸಿನಿಮಾ ರಂಗದ ಸೆಕೆಂಡ್ ಇನ್ನಿಂಗ್ ಪ್ರಾರಂಭಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅವರೊಟ್ಟಿಗೆ ತತ್ಸಮ ತದ್ಭವ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ಮೇಘನ ರಾಜ್ ಪ್ರಪ್ರಥಮ ಬಾರಿಗೆ ಇಂತಹ ಮಹಿಳಾ ಪ್ರಧಾನ ಪಾತ್ರ ಒಂದನ್ನು ನಿರ್ವಹಿಸುತ್ತಿದ್ದು ಸಿನಿಮಾದ ಭರ್ಜರಿ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಹರಿದಾಡುತ್ತಿದ್ದ ಗಾಸಿಪ್ ಗಳಿಗೆ ಬ್ರೇಕ್ ಹಾಕಿ ಎರಡನೇ ಮದುವೆ ಕುರಿತು ಕ್ಲಾರಿಟಿ ಕೊಟ್ಟ ಮೇಘನಾ ರಾಜ್! - Kannada News

ಹೀಗೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ರಾಯನ್ ರಾಜ್ ಸರ್ಜರಿಗೆ ಸಿಂಗಲ್ ಪೇರೆಂಟ್ ಆಗಿ ಇರುತ್ತೀರಾ ಅಥವಾ ಎರಡನೇ ಮದುವೆ ಆಗುತ್ತೀರಾ ಎಂಬ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ನಾನು ಎರಡನೇ ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಅಂತಹ ಯೋಚನೆ ನನಗೆ ಬರಲೇ ಇಲ್ಲ.

ಸದ್ಯಕ್ಕೆ ನನ್ನ ಪ್ರಯಾರಿಟಿ ಏನಿದ್ದರೂ ನನ್ನ ಮಗ ಅಷ್ಟೇ ಜನರು ನನ್ನ ಬಳಿ ಬಂದು ಈ ರೀತಿಯಾದಂತಹ ಪ್ರಶ್ನೆಗಳನ್ನು ಕೇಳದಿದ್ದರೆ, ನನಗೆ ಅದರ ನೆನಪಾಗುತ್ತದೆ. ಇಲ್ಲವಾದರೆ ಆ ಬಗ್ಗೆ ಯೋಚನೆಗೆ ಬರೋದಿಲ್ಲ, ಅಂತಹ ಒಂದು ಕಾನ್ಸೆಪ್ಟ್ ನನ್ನ ಜೀವನದಲ್ಲಿಯೇ ಇಲ್ಲ ಎಂಬ ಖಡಕ್ ಉತ್ತರವನ್ನು ನೀಡುವ ಮೂಲಕ ಹರಿದಾಡುತ್ತಿದ್ದಂತಹ ಊಹಾಪೊಹಗಳಿಗೆ ನಟಿ ಮೇಘನ ರಾಜ್ ಬ್ರೇಕ್ ಹಾಕಿದರು.

Leave A Reply

Your email address will not be published.