ಕಾಂತಾರ ಸಿನಿಮಾದ ಗುರುವ ಪಾತ್ರದಾರಿ ಸ್ವರಾಜ್ ಶೆಟ್ಟಿ ಅವರಿಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ?

ಕಾಂತಾರ ಸಿನಿಮಾದಲ್ಲಿ ಗುರುವ ಎಂಬ ಮುಗ್ಧ ಹಾಗೂ ಸೌಮ್ಯ ಹುಡುಗನಾಗಿ ಅಭಿನಯಿಸಿದಂತಹ ನಟ ಸ್ವರಾಜ್ ಶೆಟ್ಟಿ ಅವರ ಅಭಿನಯವನ್ನು ಮರೆಯಲಾದೀತೆ

ಸ್ನೇಹಿತರೆ ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ತೆರೆಗಪ್ಪಳಿಸಿದ ನಮ್ಮ ಕನ್ನಡ ಸಿನಿಮಾ (Kannada Cinema) ಬಾಲಿವುಡ್ ಮಂದಿಯನ್ನು ಬೆಚ್ಚಿ ಬೆಳಿಸಿತ್ತು . ಹೌದು ಗೆಳೆಯರೇ ತುಳುನಾಡಿನ ದೈವರಾದನೆಯ ಮೂಲಕ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದಂತಹ ಕಾಂತಾರ ಸಿನಿಮಾವನ್ನು (Kantara Cinema) ಎಂದಾದರೂ ಸಿನಿ ಪ್ರೇಕ್ಷಕರು ಮರೆಯಲು ಸಾಧ್ಯವೇ?

ಇಷ್ಟು ದಿನಗಳ ಕಾಲ ಯಾರು ಮಾಡಿರದಂತಹ ದೈವರಾಧನೆಯ ಕಥೆಯೊಂದನ್ನು ರಿಷಬ್ ಶೆಟ್ಟಿ ಬಹಳನೇ ಸುಂದರವಾಗಿ ತೆರೆಯ ಮೇಲೆ ತಂದಿದ್ದರು.

ಅಲ್ಲದೆ ಇವರ ಅಪ್ರತಿಮ ಅಭಿನಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಗಳು ಕೂಡ ವ್ಯಕ್ತವಾಗಿದ್ದವು. ಹೊಂಬಾಳೆ ಬ್ಯಾನರ್ಸ್ನ ಅಡಿಯಲ್ಲಿ ತಯಾರದಂತಹ ಈ ಸಿನಿಮಾಗೆ ವ್ಯಾಪಕ ರೆಸ್ಪಾನ್ಸ್ ಸಿಕ್ಕಿದೆ.

ಕಾಂತಾರ ಸಿನಿಮಾದ ಗುರುವ ಪಾತ್ರದಾರಿ ಸ್ವರಾಜ್ ಶೆಟ್ಟಿ ಅವರಿಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ? - Kannada News

ಕೇವಲ 16 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾದಂತಹ ಈ ಒಂದು ಸಿನಿಮಾ 450 ಕೋಟಿ ಅಧಿಕ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಸಾರ್ವಕಾಲಿಕ ಹಿಟ್ ಸಿನಿಮಾಗಳ ಪಟ್ಟಿಗೆ ಸೇರಿಕೊಂಡಿದೆ.

ನೆನಪಿದ್ದಾರ ನವೀನ್ ಮಯೂರ್, ಬದುಕಿ ಬಾಳಬೇಕಿದ್ದ ನಟ ಕೇವಲ 32 ವರ್ಷಕ್ಕೆ ದುರಂತ ಕಂಡಿದ್ದು ಹೇಗೆ?

ಹೌದು ಗೆಳೆಯರೇ ಕಾಂತಾರ ಸಿನಿಮಾವನ್ನು ಬಿಡುಗಡೆ ಮಾಡಬೇಕೆಂದು ನಿರ್ಧರಿಸಿ ಕೇವಲ ಕನ್ನಡ ಭಾಷೆಯಲ್ಲಿ (Kannada Language) ಮಾತ್ರ ತೆರೆಗೆ ತಂದಿರಲಾಗುತ್ತದೆ. ಆದರೆ ಕನ್ನಡಿಗರಿಂದ ಸಿಕ್ಕಂತಹ ಒಳ್ಳೆಯ ರೆಸ್ಪಾನ್ಸ್ ಕಂಡು ತಮಿಳು, ತೆಲುಗು, ಹಿಂದಿ ಭಾಷೆಗೆ ಸಿನಿಮಾವನ್ನು ಡಬ್‌ ಮಾಡಲಾಯಿತು. ಆನಂತರ ಕಾಂತಾರ ಸಿನಿಮಾದ ಕ್ರೇಜ್, ಬೇರೊಂದು ಮಟ್ಟಕ್ಕೆ ತಲುಪುತ್ತು ಎಂದರೆ ತಪ್ಪಾಗಲಾರದು.

Kannada Actor Swaraj Shetty
Image Source: Hindustan Times

ಸಿನಿಮಾದಲ್ಲಿ ಅಭಿನಯಿಸಿದಂತಹ ಪ್ರತಿಯೊಬ್ಬ ಕಲಾವಿದರಿಗೂ ಕೂಡ ಒಂದೊಳ್ಳೆ ಬ್ರೇಕ್ ಸಿಕ್ಕಿತ್ತು, ಎಲ್ಲಾ ದೇಸಿ ಕಲಾವಿದರೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಇನ್ನು ವಿಶೇಷ. ಇನ್ನು ಈ ಸಿನಿಮಾದ ಮೂಲಕ ಇನ್ನಷ್ಟು ಜನಪ್ರಿಯರಾದ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ನಟ ನಟಿಯರಾಗಿ ಹೊರಹೊಮ್ಮಿದ್ದಾರೆ.

ಅದರಂತೆ ಕಾಂತಾರ ಸಿನಿಮಾದಲ್ಲಿ ಗುರುವ ಎಂಬ ಮುಗ್ಧ ಹಾಗೂ ಸೌಮ್ಯ ಹುಡುಗನಾಗಿ ಅಭಿನಯಿಸಿದಂತಹ ನಟ ಸ್ವರಾಜ್ ಶೆಟ್ಟಿ (Actor Swaraj Shetty) ಅವರ ಅಭಿನಯವನ್ನು ಮರೆಯಲಾದೀತೆ? ಚಿತ್ರದ ಕಥೆಗೆ ಒಂದೊಳ್ಳೆ ಟ್ವಿಸ್ಟ್ ಕೊಟ್ಟಂತಹ ಗುರುವನ ಪಾತ್ರ ಇಂದಿಗೂ ಕಾಂತಾರ ಸಿನಿಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರೆ ಅದಕ್ಕೆ ನಟ ಸ್ವರಾಜ್ ಶೆಟ್ಟಿ ಅವರ ಪ್ರತಿಮಾ ಅಭಿನಯವೇ ಕಾರಣ.

ಆಟೋರಾಜ ಶಂಕರ್ ನಾಗ್ ಅವರ “ಹೊಸ ಜೀವನ” ಸಿನಿಮಾ ನಟಿ ದೀಪಿಕಾ ಈಗ ಹೇಗಾಗಿದ್ದಾರೆ ಗೊತ್ತಾ?

ಈ ಹಿಂದೆ ಸಾಕಷ್ಟು ನಾಟಕಗಳಲ್ಲಿ, ಸೀರಿಯಲ್ಗಳಲ್ಲಿ, ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಮನೆ ಮಾತಾಗಿದ್ದಂತಹ ಸ್ವರಾಜ್ ಶೆಟ್ಟಿಯವರು ಕಾಂತಾರ ಸಿನಿಮಾದಲ್ಲಿ ಪಾತ್ರ ಒಂದನ್ನು ಗಿಟ್ಟಿಸಿಕೊಂಡು ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು ಎಂದರೆ ತಪ್ಪಾಗಲಾರದು.

ಈ ಚಿತ್ರದ ನಂತರ ಸ್ವರಾಜ್ ಶೆಟ್ಟಿ ಅವರಿಗೆ ಸಾಕಷ್ಟು ಒಳ್ಳೆಯ ಸಿನಿಮಾಗಳ ಅವಕಾಶ ಕೂಡ ಹರಸಿ ಬಂದಿರುವುದರ ಕುರಿತು ಸಂದರ್ಶನದಲ್ಲಿ ಸ್ವತಃ ಸ್ವರಾಜ್ ಶೆಟ್ಟಿ ಅವರೇ ಹೇಳಿದ್ದಾರೆ‌.

ಇನ್ನು ಸಂಭಾವನೆ ವಿಚಾರದ ಕುರಿತು ಮಾಹಿತಿ ನೀಡಿರುವ ಸ್ವರಾಜ್ ನಾನೂರ ಕೋಟಿ ಗಡಿ ದಾಟಿರುವ ಕಾಂತಾರ ಸಿನಿಮಾದಿಂದ ಬರೋಬ್ಬರಿ 10 ಲಕ್ಷ ಸಂಭಾವನೆಯನ್ನು ಪಡೆದರಂತೆ. ಇದು ಅವರ ವೃತ್ತಿ ಬದುಕಿನ ಮೊದಲ ಬಹುದೊಡ್ಡ ಮೊತ್ತದ ಸಂಭಾವನೆ ಎಂದು ಸಂತಸ ವ್ಯಕ್ತಪಡಿಸಿದರು.

Kantara Cinema Fame Guruva Roll Artist Swaraj Shetty Remuneration

Leave A Reply

Your email address will not be published.