ಮಳೆ ಹುಡುಗಿಯಾಗಿ ಮೆರೆದ ಪೂಜಾ ಗಾಂಧಿ ಏಕೆ ಸಿನಿಮಾದಲ್ಲಿ ನಟಿಸ್ತಿಲ್ಲ? ಇದ್ದಕ್ಕಿದ್ದಾಗೆ ಸಿನಿಮಾ ರಂಗದಿಂದ ದೂರಾಗಲು ಕಾರಣವೇನು ಗೊತ್ತಾ?

ಸಿನಿ ಪರ್ವವನ್ನೇ ಸೃಷ್ಟಿ ಮಾಡಿಕೊಂಡಂತಹ ಪೂಜಾ ಗಾಂಧಿ ಅವರು ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಕನ್ನಡಕ್ಕೆ ಕೊಡುಗೆಯನ್ನಾಗಿ ನೀಡಿದರು.

ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಮುಂಗಾರು ಮಳೆ ಹರಿಸುವ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದಂತಹ ನಟಿ ಪೂಜಾ ಗಾಂಧಿ (Actress Pooja Gandhi) ಅವರು ಮೂಲತಃ ನಮ್ಮ ಕನ್ನಡದವರಲ್ಲದೆ ಹೋದರು ಇವರ ಮುಗ್ಧ ಅಭಿನಯ ಸೌಮ್ಯ ಸ್ವಭಾವಕ್ಕೆ ಅದೆಷ್ಟೋ ಅಭಿಮಾನಿಗಳು ಫಿದಾ ಆಗಿ ಹೋಗಿದ್ದರು.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ಟರ ಕಾಂಬಿನೇಷನ್ನಲ್ಲಿ ತೆರೆಗೆ ಬಂದಿದ್ದ ಮುಂಗಾರು ಮಳೆ ಸಿನಿಮಾದ (Mungaru Male Cinema) ಮೂಲಕ ಬಹು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿಕೊಂಡ ಪೂಜಾ ಗಾಂಧಿ ಅವರು ರಾತ್ರೋರಾತ್ರಿ ಸ್ಟಾರ್ ಪಟ್ಟವನ್ನು ಏರಿದಂತಹ ನಟಿ.

ಹೀಗೆ ಅದೊಂದು ಕಾಲದಲ್ಲಿ ತಮ್ಮ ಸಿನಿ ಪರ್ವವನ್ನೇ ಸೃಷ್ಟಿ ಮಾಡಿಕೊಂಡಂತಹ ಪೂಜಾ ಗಾಂಧಿ ಅವರು ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಕನ್ನಡಕ್ಕೆ ಕೊಡುಗೆಯನ್ನಾಗಿ ನೀಡಿದರು.

ಮಳೆ ಹುಡುಗಿಯಾಗಿ ಮೆರೆದ ಪೂಜಾ ಗಾಂಧಿ ಏಕೆ ಸಿನಿಮಾದಲ್ಲಿ ನಟಿಸ್ತಿಲ್ಲ? ಇದ್ದಕ್ಕಿದ್ದಾಗೆ ಸಿನಿಮಾ ರಂಗದಿಂದ ದೂರಾಗಲು ಕಾರಣವೇನು ಗೊತ್ತಾ? - Kannada News

ತಮ್ಮ ಅಂದದ ಸೌಂದರ್ಯ ಬಳಕುವ ಬಳ್ಳಿಯಂತಿರುವ ಮೈಮಾಟ, ಮುಗ್ಧ ಮಾತುಗಳು ಅಭಿಮಾನಿಗಳನ್ನು ಕ್ಲೀನ್ ಬೋಲ್ಡ್ ಆಗಿಸಿತ್ತು, ಹೀಗೆ ಹೀರೋಯಿನ್ ಅಂದ್ರೆ ಹೀಗಿರಬೇಕಪ್ಪ ಎನ್ನುವಂತೆ ಇದ್ದಂತಹ ಪೂಜಾ ಗಾಂಧಿ ಅವರು ಸಿನಿಮಾ ರಂಗದ ಅವಕಾಶ ಕಳೆದುಕೊಂಡು ಇಂದು ಮನೆಯಲ್ಲಿ ಕೂರುವಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡಿಕೊಂಡಿದ್ದಾರೆ.

ಪೂಜಾ ಗಾಂಧಿ ಅವರು ಸಿನಿಮಾಗಳಲ್ಲಿ ಅಭಿನಯಿಸದೇ ಇರಲು ಕಾರಣವೇನು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ಈ ಒಂದು ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Kannada Actress Pooja Gandhi

ಹೌದು ಗೆಳೆಯರೇ ಮುಂಗಾರು ಮಳೆ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಪ್ರಖ್ಯಾತಿ ಪಡೆದುಕೊಂಡಿದ್ದ ಪೂಜಾ ಗಾಂಧಿ ಅವರು ಮಿಲನ, ಮನ್ಮಥ, ತಾಜ್ ಮಹಲ್ ನಂತಹ ಸಿನಿಮಾಗಳಲ್ಲಿ ಅಭಿನಯಿಸಿ ಉತ್ತುಂಗದ ಶಿಖರವನ್ನೇರಿದರು.

ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಬಹು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದಂತಹ ಪೂಜಾಗಾಂಧಿಯವರು 2012ರಲ್ಲಿ ತೆರೆಕಂಡ ದಂಡುಪಾಳ್ಯ ಸಿನಿಮಾದಲ್ಲಿ ಬಹಳನೇ ಮಾದಕವಾಗಿ ಕಾಣಿಸಿಕೊಂಡಿದ್ದರು. ಇದನ್ನು ಕಂಡಂತಹ ಅಭಿಮಾನಿಗಳು ಹಾಗೂ ಸಿನಿ ಪ್ರೇಕ್ಷಕರು ಪ್ರಖ್ಯಾತಿ ಹೊಂದಿರುವಂತಹ ನಟಿಯರು ಈ ರೀತಿಯಾದಂತಹ ಪಾತ್ರಗಳನ್ನು ಮಾಡಿದರೆ ಅದು ಅಷ್ಟು ಸರಿ ಬರುವುದಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಒಂದು ಸಿನಿಮಾದಿಂದಾಗಿ ಪೂಜಾಗಾಂಧಿಯವರ ಇಮೇಜ್ ಸಂಪೂರ್ಣ ಡ್ಯಾಮೇಜ್ ಆಯ್ತು. ಹೀಗೆ ಕಾಲಕ್ರಮೇಣ ಕೆಲ ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡಂತಹ ಪೂಜಾಗಾಂಧಿಯವರನ್ನು ಸಿನಿಮಾ ರಂಗ ಸಂಪೂರ್ಣ ಕೈ ಬಿಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇನ್ನು ಆನಂದ್ ಗೌಡ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಪೂಜಾ ಗಾಂಧಿಯವರು ಅಧಿಕೃತವಾಗಿ ಈ ಒಂದು ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು.

ಒಂದು ಹೆಜ್ಜೆ ಮುಂದೆ ಹೋಗಿ ಮನೆಯವರಲ್ಲರ ಒಪ್ಪಿಗೆ ಪಡೆದು ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದ ಪೂಜಾ ಗಾಂಧಿ ಅವರು ಎಂಗೇಜ್ಮೆಂಟ್ ಮುರಿದುಕೊಂಡು ಸದ್ಯ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

Kannada Mungaru Male Fame Pooja Gandhi Interesting Facts

Leave A Reply

Your email address will not be published.