350ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ನಟ ಉಮೇಶ್ ಅವರ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಹಾಸ್ಯ ನಟ ಉಮೇಶ್ ಇಂದಿಗೂ ಕೂಡ ಖಾಸಗಿ ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತ ತಮ್ಮ ಸಿನಿ ಬದುಕಿನ ಜರ್ನಿಯ (Cinema Journey) ಮೆಲುಕು ಹಾಕಿದ್ದಾರೆ.

“ಅಯ್ಯಯ್ಯೋ ಇವ್ರು ನನ್ನ ಅಪಾರ್ಥ ಮಾಡ್ಕೋ ಬಿಟ್ಟರಲ್ಲ, ನಾನೇನೂ ಬೇಕು ಅಂತ ಹಿಂಗ್ ಮಾಡ್ಲಿಲ್ಲ, ಹೇಳ್ಕೊಳ್ಳೋಣ ಅಂದ್ರೆ ನನ್ ಹೆಂಡ್ತಿ ಕೂಡ ಊರಲ್ಲಿ ಇಲ್ವೇ..” ಎಂಬ ಒಂದೇ ಒಂದು ಡೈಲಾಗ್ ಮೂಲ ಬಹು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಂತಹ ನಟ ಎಂ ಎಸ್ ಉಮೇಶ್ (Comedy Actor Umesh) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ?

ತಮ್ಮ ಅಮೋಘ ಹಾಸ್ಯ ಪ್ರತಿಭೆಯ ಮೂಲಕ ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ (Kannada Cinema Industry) ಹಾಗೂ ರಂಗಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಈ ನಟ ಎಂದಿಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭೂಮಿಗೆ ಬಂದ ಭಗವಂತ ಎಂಬ ಸೀರಿಯಲ್ನಲ್ಲಿ ಅಭಿನಯಿಸಿದ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ನಟ ಅರುಣ್ ಸಾಗರ್ ಬೇರೆ ಭಾಷೆಯ ಚಿತ್ರರಂಗದಲ್ಲಿದ್ದಿದ್ದರೆ ರೆಂಜೇ ಬೇರೆ ಇರ್ತಿತ್ತು! ನಮ್ಮಲ್ಲಿ ಅವರಿಗೆ ಅವಕಾಶವೇ ಇಲ್ಲವಾಯ್ತು

350ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ನಟ ಉಮೇಶ್ ಅವರ ರಿಯಲ್ ಲೈಫ್ ಹೇಗಿದೆ ಗೊತ್ತಾ? - Kannada News

ಹೌದು ಗೆಳೆಯರೇ, 1945 ರ ಇಸುವಿಯಲ್ಲಿ ಮೈಸೂರು ಜಿಲ್ಲೆಯಲ್ಲಿ (Mysore District) ಜನಿಸಿದಂತಹ ಉಮೇಶ್ ಅವರಿಗೆ ಚಿಕ್ಕಂದಿನಿಂದಲೂ ನಾಟಕಗಳಲ್ಲಿ ಬಹಳನೇ ಆಸಕ್ತಿ ಇದ್ದ ಕಾರಣ ತಾನು ಕೂಡ ರಂಗಭೂಮಿ ಕಲಾವಿದನಾಗಬೇಕೆಂಬ ಹುಚ್ಚುಹಾಸೆ ಮೂಡುತ್ತದೆ. ಇದನ್ನೇ ತಮ್ಮ ಜೀವನದ ಗುರಿಯಾಗಿಟ್ಟುಕೊಂಡ ಉಮೇಶ್ ಅವರು ಅತಿ ಚಿಕ್ಕ ವಯಸ್ಸಿಗೆ ತಮ್ಮ ಗ್ರಾಮದಲ್ಲಿ ನಡೆಯುತ್ತಿದ್ದಂತಹ ನಾಟಕಗಳಲ್ಲಿ ಅಭಿನಯಿಸುತ್ತ ಭಾರಿ ಜನಪ್ರಿಯತೆ ಪಡೆದುಕೊಂಡಿರುತ್ತಾರೆ.

ಹೀಗಿರುವಾಗ 1974ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಕಥಾ ಸಂಗಮ ಸಿನಿಮಾದ ಹಾಸ್ಯ ನಟನಾಗುವಂತಹ ಅವಕಾಶ ದೊರಕುತ್ತದೆ. ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡಂತಹ ಉಮೇಶ್ ಅವರು ಈವರೆಗೂ 350ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಪೋಷಕ ನಟನಾಗಿ ಸಹ ನಟನಾಗಿ ಹಾಗೂ ಹಾಸ್ಯ ನಟನಾಗಿ ಅಭಿನಯಿಸುವ ಮೂಲಕ ಕನ್ನಡ ಸಿನಿ ರಸಿಕರ ಮನಸ್ಸನ್ನು ಗೆದ್ದಿದ್ದಾರೆ.

Kannada Comedy Actor Umesh

ಹೀಗೆ ಇಂದಿಗೂ ಕೂಡ ಖಾಸಗಿ ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತ ತಮ್ಮ ಸಿನಿ ಬದುಕಿನ ಜರ್ನಿಯ (Cinema Journey) ಮೆಲುಕು ಹಾಕಿದ್ದಾರೆ. ಹೌದು ಗೆಳೆಯರೇ ಎಂ ಎಸ್ ಉಮೇಶ್ ಅವರು ಯುಟ್ಯೂಬ್ ಚಾನೆಲ್ ಜೊತೆಗೆ ನಡೆಸಿದ ಸಂದರ್ಶನದಲ್ಲಿ ತಮ್ಮ ಮಹಿಳಾ ಅಭಿಮಾನಿ ಬಳಗದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. “ಅಪಾರ್ಥ ಮಾಡ್ಕೋಬೇಡಿ ನನಗೆ ಸ್ವಲ್ಪ ಹೆಣ್ಣು ಮಕ್ಕಳ ಕಾಟ ಜಾಸ್ತಿ ಇತ್ತು, ಹೆಣ್ಣು ಮಕ್ಕಳು ನನ್ನ ಮೇಲೆ ಮಾನಸಿಕ ಸಂಪರ್ಕ ಬೆಳೆಸಿಕೊಂಡಿದ್ದರು.

ನೆನಪಿದ್ದಾರಾ ನಟ ಸದಾಶಿವ ಬ್ರಹ್ಮಾವರ! ಪಾಪ ಇವರು ಕೊನೆಗಾಲದಲ್ಲಿ ಅನುಭವಿಸಿದ ಕಷ್ಟ ಯಾವ ಶತ್ರುವಿಗೂ ಬೇಡ

ನನ್ನನ್ನು ಆಗ ಬಹಳನೇ ಪ್ರೀತಿ ಮಾಡುತ್ತಿದ್ದರು. ಒಮ್ಮೊಮ್ಮೆ ನನಗೆ ಜಾರಿ ಬಿದ್ದೇನೋ ಕಂದ ಎಣಿಸುತ್ತಿತ್ತು, ಆಗೆಲ್ಲ ನಾನು ತಪ್ಪು ಮಾಡುತ್ತಿದ್ದೇನೆ ಎಂಬ ಮನವರಿಕೆಯಾಗಿ ಉಮೇಶ ಎಂದರೆ ಒಳ್ಳೆಯ ಕಲಾವಿದ ಒಳ್ಳೆಯ ಹಾರ್ಮೋನಿಯಂ ಮಾಸ್ಟ್ರು, ಎಲ್ಲರೂ ನನ್ನನ್ನು ನನಗೆ ಗೌರವ ಕೊಡುತ್ತಾರೆ. ಇಂತಹ ಸಮಯದಲ್ಲಿ ನಾನೇನಾದರೂ ಸ್ವಲ್ಪ ಜಾರಿದರೆ ತಪ್ಪು ದಾರಿಗೆ ಹೋದರೆ, ಬೇರೆಯವರ ಸಹವಾಸದಿಂದ ತಪ್ಪು ಕೆಲಸಗಳನ್ನು ಮಾಡಿದರೆ ನಮ್ಮನ್ನು ಬೆರಳು ತೋರಿಸುವ ಹಾಗೆ ಆಗಿಬಿಡುತ್ತಾರಲ್ಲ ಎಂದು ಯೋಚಿಸಿ.

ನನಗೆ ಗೊತ್ತಿದ್ದ ಹೆಣ್ಣು ಮಗಳೊಬ್ಬಳನ್ನು ಮದುವೆಯಾಗಿ ಬಿಟ್ಟೆ ನಮ್ಮ ಮದುವೆ ಸಮಯದಲ್ಲಿ ಪುರೋಹಿತರ ಮಂತ್ರ ಇರಲಿಲ್ಲ, ವಾದ್ಯ ಇರಲಿಲ್ಲ, ಏನು ಇರಲಿಲ್ಲ. ನಾನು ಒಪ್ಕೊಂಡೆ ಆಕೆನೂ ಒಪ್ಪಿಕೊಂಡು, ಒಂದು ರೆಡಿಮೇಡ್ ತಾಳಿ ತೆಗೆದು ಹಾಕಿಬಿಟ್ಟೆ ಮದುವೆಯಾಗಿ 52 ವರ್ಷವಾಯಿತು. ಇಂದಿಗೂ ಅಷ್ಟೇ ಅನ್ಯೋನ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದೇವೆ ಎಂದು ತಮ್ಮ ಸಾಂಸಾರಿಕ ಜೀವನದ ಸಂತಸವನ್ನು ಹಿರಿಯ ನಟ ಎಂ ಎಸ್ ಉಮೇಶ್ ಅವರು ಹಂಚಿಕೊಂಡರು.

Kannada Comedy Actor Umesh Cinema Journey

Leave A Reply

Your email address will not be published.