ಅತಿಯಾಗಿ ಪ್ರೀತಿಸುತ್ತಿದ್ದ ಸುನಿಲ್ ಅವರನ್ನು ಮರೆಯೋಕೆ ಮಾಲಾಶ್ರೀಗೆ ಎಷ್ಟು ದಿವಸ ಬೇಕಾಯ್ತು ಗೊತ್ತಾ? ಪಾಪ ಆ ನೋವು ಇನ್ನೂ ಕಾಡುತ್ತಿದೆಯಂತೆ

ರಿಯಲ್ ಲೈಫ್ನಲ್ಲಿಯೂ ಒಂದಾಗಬೇಕೆಂಬ ಹತ್ತಾರು ಆಸೆ ಕನಸುಗಳನ್ನು ಹೊಂದಿದ್ದ ಮಾಲಾಶ್ರೀ ಮತ್ತು ಸುನಿಲ್ ಅವರನ್ನು ಜವರಾಯ ಬೇರೆ ಮಾಡಿಬಿಡುತ್ತಾನೆ.

ಚಂದನ ವನದ ಕ್ಯೂಟ್ ಕಪಲ್ಸ್ ಎನಿಸಿಕೊಳ್ಳುತ್ತಿದ್ದಂತಹ ಮಾಲಾಶ್ರೀ (Actress Malashree) ಮತ್ತು ಸುನಿಲ್ (Actor Sunil) ಅವರು ಶೃತಿ ಎಂಬ ಸಿನಿಮಾದಲ್ಲಿ ಅಕ್ಕ ತಮ್ಮನಾಗಿ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಜನರ ಆಕರ್ಷಣೆ ಪಡೆದುಕೊಂಡು. ಆನಂತರ ಸಾಲು ಸಾಲು ಸಿನಿಮಾಗಳಲ್ಲಿ ಇಬ್ಬರು ಒಟ್ಟಾಗಿ ಅಭಿನಯಿಸಿ ಕನ್ನಡ ಸಿನಿಮಾ ರಂಗದ (Kannada Film Industry) ಕ್ಲಾಸಿಕ್ ಜೋಡಿಗಳು ಎಂಬ ಪಟ್ಟಿಗೆ ಸೇರ್ಪಡೆಯಾಗುತ್ತಾರೆ.

ತೆರೆಯ ಮೇಲೆ ಇವರಿಬ್ಬರ ಚಿತ್ರ ಬಂದರೆ ಸಾಕು ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವುದು ಖಂಡಿತ ಎಂದು ನಿರ್ದೇಶಕ ನಿರ್ಮಾಪಕರು ಊಹಿಸುತ್ತಿದ್ದಂತಹ ಕಾಲವದು. ಹೌದು ಗೆಳೆಯರೇ ಬೆಳ್ಳಿ ಕಾಲುಂಗುರ, ಸಿಂಧೂರ ತಿಲಕ, ಮನಮೆಚ್ಚಿದ ಸೊಸೆ, ಮರಣ ಮೃದಂಗ ಸಿನಿಮಾಗಳೆ ಇದಕ್ಕೆ ಸಾಕ್ಷಿ.

ಈ ಪರಿ ಜನಪ್ರಿಯತೆ ಪಡೆದಿದ್ದಂತಹ ಈ ಜೋಡಿಗಳ ಮೇಲೆ ಅದ್ಯಾರ ವಕ್ರದೃಷ್ಟಿ ಬಿತ್ತೋ ಗೊತ್ತಿಲ್ಲ ರಿಯಲ್ ಲೈಫ್ನಲ್ಲಿಯೂ ಒಂದಾಗಬೇಕೆಂಬ ಹತ್ತಾರು ಆಸೆ ಕನಸುಗಳನ್ನು ಹೊಂದಿದ್ದ ಮಾಲಾಶ್ರೀ ಮತ್ತು ಸುನಿಲ್ (Malashree and Sunil) ಅವರನ್ನು ಜವರಾಯ ಬೇರೆ ಮಾಡಿಬಿಡುತ್ತಾನೆ.

ಅತಿಯಾಗಿ ಪ್ರೀತಿಸುತ್ತಿದ್ದ ಸುನಿಲ್ ಅವರನ್ನು ಮರೆಯೋಕೆ ಮಾಲಾಶ್ರೀಗೆ ಎಷ್ಟು ದಿವಸ ಬೇಕಾಯ್ತು ಗೊತ್ತಾ? ಪಾಪ ಆ ನೋವು ಇನ್ನೂ ಕಾಡುತ್ತಿದೆಯಂತೆ - Kannada News

ಬಳಕುವ ಬಳ್ಳಿಯಂತಿದ್ದ ನಟಿ ಸಿಲ್ಕ್ ಸ್ಮಿತಾ ಅವರ ಮೈ ಕೈ ಮೇಲೆಲ್ಲಾ ಸಿಗರೇಟ್ನಿಂದ ಸುಟ್ಟಿ ಚಿತ್ರ ಹಿಂಸೆ ನೀಡಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?

ಹೌದು ಗೆಳೆಯರೆ 1994 ರಂದು ಸುನಿಲ್ ಗೆಳೆಯ ಸಚಿನ್ ಮತ್ತು ಮಾಲಾಶ್ರೀ ಅವರು ಚಿಕ್ಕೋಡಿಯಿಂದ ಬೆಂಗಳೂರಿಗೆ ಧಾವಿಸುತ್ತಿರುವಾಗ ರಸ್ತೆ ಮಾರ್ಗ ಮಧ್ಯದಲ್ಲಿ ಅಪಘಾತ ಉಂಟಾಗಿ ಸುನಿಲ್ ಇಹಲೋಕ ತ್ಯಜಿಸುತ್ತಾರೆ.

ದುಃಖಕರ ಸಂಗತಿ ಏನೆಂದರೆ ಅಪಘಾತ ಆದ ನಂತರ ಸುನಿಲ್ ಬರೋಬ್ಬರಿ 40 ನಿಮಿಷಗಳ ಕಾಲ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರಂತೆ. ಆದರೆ ಯಾರಿಂದಲೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಅಲ್ಪಾವಧಿಯಲ್ಲಿ ಉತ್ತುಂಗದ ಶಿಖರವನ್ನು ಏರಿದ ಸುನಿಲ್ ಅವರು ಸಿನಿಮಾ ರಂಗಕ್ಕೆ ಬಂದಾಗ ಅದೆಷ್ಟೋ ಕಲಾವಿದರು ಕನ್ನಡ ಸಿನಿಮಾ ರಂಗಕ್ಕೆ ಮತ್ತೊಬ್ಬ ನಟ ಸಿಕ್ಕ ಎಂದು ಸಂತಸಪಟ್ಟಿದರು.

Actor Sunil and Actress Malashree

ಇಂತಹ ಅದ್ಭುತ ನಟನನ್ನು ಅತಿ ಚಿಕ್ಕ ವಯಸ್ಸಿಗೆ ಕಳೆದುಕೊಂಡು ಸಿನಿಮಾ ರಂಗ ದುಃಖತಪ್ತವಾಯಿತು. ಕಣ್ಣೆದುರಿಗೆ ತನ್ನ ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುತ್ತಿದ್ದಂತಹ ಇನಿಯನ ಪ್ರಾಣಪಕ್ಷಿ ಹಾರಿ ಹೋದದ್ದನ್ನು ನೋಡಿದಂತಹ ಮಾಲಾಶ್ರೀ ಅವರು ಕಂಗಾಲಾಗುತ್ತಾರೆ. ಹೀಗೆ ಭೀಕರ ಅಪಘಾತಕ್ಕೆ ತುತ್ತಾಗಿ ಸುನಿಲ್ ಅವರನ್ನು ಆ ಪರಿಸ್ಥಿತಿಯಲ್ಲಿ ನೋಡಿದಂತಹ ಮಾಲಾಶ್ರೀ ಅವರು ಮೂರ್ಛೆ ಹೋಗಿದ್ದರು.

ವಿಷ್ಣುವರ್ಧನ್ ಇಲ್ಲದೇ ಹೋದರೆ ಸಿನಿಮಾವನ್ನೇ ಮಾಡಲ್ಲ ಎಂದು ನಟಿ ಜಯಲಲಿತಾ ಅಂದು ಹಠ ಹಿಡಿದಿದ್ದು ಯಾಕೆ? ವಿಷ್ಣು ದಾದಾ ಅಭಿನಯಿಸದಿರಲು ಕಾರಣವೇನು ಗೊತ್ತಾ?

ಪ್ರಜ್ಞೆ ಬಂದಾಗ ಸುನಿಲ್ ಅವರು ಇನ್ನಿಲ್ಲಾ ಎಂಬ ವಿಚಾರ ಕೇಳಿದೊಡನೆ ಮಾಲಾಶ್ರೀ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಹೌದು ಗೆಳೆಯರೇ ಮಾಲಾಶ್ರೀ ಹಾಗೂ ಸುನಿಲ್ ನಡುವಿನ ಪ್ರೀತಿ ಮನೆಯವರಿಗೂ ತಿಳಿದು ಇಬ್ಬರಿಗೂ ಮದುವೆ ನಿಶ್ಚಯವನ್ನು ಮಾಡಿದ್ದರಂತೆ. ಆದರೆ ವಿಧಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಂತಹ ಜೋಡಿಗಳನ್ನು ದೂರ ಮಾಡಿ ಮಾಲಾಶ್ರೀ ಅವರಿಗೆ ಘೋರವಾದ ನೋವು ತಂದೊಡ್ಡಿತ್ತು.

ಹೌದು ಗೆಳೆಯರೇ ಅದೆಷ್ಟೋ ದಿನಗಳ ಕಾಲ ಮಾಲಾಶ್ರೀ ಅವರು ಮನೆ ಬಿಟ್ಟು ಹೊರಬರಲೇ ಇಲ್ಲ, ಈ ಒಂದು ಘಟನೆಯಿಂದ ಚೇತರಿಸಿಕೊಳ್ಳೋಕೆ ಮಾಲಾಶ್ರೀ ಅವರು ಪ್ರತಿ ದಿನ ಒದ್ದಾಡುತ್ತಿದ್ದರಂತೆ. ಹೀಗೆ ಸತತ ಒಂದು ವರ್ಷದ ಕಾಲ ಹೆಚ್ಚಿನ ಸಿನಿಮಾ ಕೆಲಸಗಳಲ್ಲಿ ಭಾಗಿಯಾಗದೆ ಮಾಲಾಶ್ರೀ ಅವರು ಮನೆಯಲ್ಲೇ ಕುಳಿತಿದ್ದರಂತೆ..

ಹೀಗೆ ಮಾಲಾಶ್ರೀ ಅವರ ಕಷ್ಟವನ್ನು ಆಳವಾಗಿ ಮನಗಂಡಂತಹ ರಾಮು ಅವರು ಅವರಿಗಾಗಿ ಕೆಲ ಸಿನಿಮಾಗಳ ಅವಕಾಶವನ್ನು ಹೊತ್ತು ತರುತ್ತಾರೆ. ಈ ಮೂಲಕ ಅವರನ್ನು ಖಿನ್ನತೆಯಿಂದ ಹೊರ ತರುವ ಪ್ರಯತ್ನದಲ್ಲಿ ಯಶಸ್ವಿಯಾದರು, ಕಾಲಕ್ರಮೇಣ ಇವರ ನಡುವೆ ಪ್ರೇಮಾಂಕರ ಉಂಟಾಗಿ ದಾಂಪತ್ಯ ಜೀವನಕ್ಕೂ ಕಾಲಿಟ್ಟರು.

Kannada Actress Malashree and Actor Sunil Real Life Story

Comments are closed.