ಹುಚ್ಚ ಸಿನಿಮಾ ನೋಡಿ ಕಿಚ್ಚ ಸುದೀಪ್ ಅವರಿಗೆ ವಿಷ್ಣು ದಾದಾ ಹೊಡೆದಿದ್ದು ಯಾಕೆ ಗೊತ್ತೆ?

ತಂದೆ ಮಗನ ಬಾಂಧವ್ಯದಂತೆ ಬಹಳ ಅನ್ಯೋನ್ಯವಾಗಿದ್ದ ಕಿಚ್ಚ ಸುದೀಪ್ ಹಾಗೂ ವಿಷ್ಣುವರ್ಧನ್ ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು.

ನಮ್ಮ ಕನ್ನಡ ಸಿನಿಮಾರಂಗದ (Kannada Cinema Industry) ಈಗಿನ ಸಾಕಷ್ಟು ನಟರಿಗೆ ಓರ್ವ ಗಾಡ್ ಫಾದರ್ ಅಥವಾ ಗುರುಗಳು ಇದ್ದೆ ಇರುತ್ತಾರೆ. ಅದರಂತೆ ನಮ್ಮೆಲ್ಲರ ಪ್ರೀತಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬಹಳ ಇಷ್ಟದ ಗುರುಗಳೆಂದರೆ ಅದು ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್.

ತಮ್ಮ ಸೌಮ್ಯ ಸ್ವಭಾವದ ಮೂಲಕವೇ ಎಷ್ಟೋ ಜನರ ಮನಸ್ಸನ್ನು ಆವರಿಸಿಕೊಂಡಿರುವಂತಹ ವಿಷ್ಣು ದಾದಾ (Actor Vishnuvardhan) ಎಲ್ಲರನ್ನೂ ಬಹಳ ಪ್ರೀತಿ ಗೌರವದಿಂದ ಕಾಣುತ್ತಿದ್ದಂತಹ ನಟ.

ಅದರಲ್ಲೂ ಕಿಚ್ಚ ಸುದೀಪ್ (Actor Kiccha Sudeep) ಅವರಿಗಂತು ವಿಷ್ಣುವರ್ಧನ್ ಎಂದರೆ ಎಲ್ಲಿಲ್ಲದಂತಹ ಪ್ರೀತಿ. ಹೀಗಾಗಿ ಅವರ ಮಾತಾಡ್ ಮಲ್ಲಿಗೆ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಸುದೀಪ್ ಆಗಾಗ ಸಂದರ್ಶನಗಳಲ್ಲಿ ಹೇಳುತ್ತಲೇ ಇರುತ್ತಾರೆ.

ಹುಚ್ಚ ಸಿನಿಮಾ ನೋಡಿ ಕಿಚ್ಚ ಸುದೀಪ್ ಅವರಿಗೆ ವಿಷ್ಣು ದಾದಾ ಹೊಡೆದಿದ್ದು ಯಾಕೆ ಗೊತ್ತೆ? - Kannada News

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸಿನಿಮಾ ಕ್ಷೇತ್ರದಿಂದ ದೂರವಿರಲು ಕಾರಣವೇನು ಗೊತ್ತೆ?

ಹೀಗೆ ತಂದೆ ಮಗನ ಬಾಂಧವ್ಯದಂತೆ ಬಹಳ ಅನ್ಯೋನ್ಯವಾಗಿದ್ದ ಕಿಚ್ಚ ಸುದೀಪ್ ಹಾಗೂ ವಿಷ್ಣುವರ್ಧನ್ ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು.

ಅಲ್ಲದೆ ಸುದೀಪ್ ಅವರ ಪ್ರತಿಯೊಂದು ಸಿನಿಮಾಗೂ ವಿಷ್ಣು ದಾದನ ಪ್ರೋತ್ಸಾಹ ಇರುತ್ತಿತ್ತು. ಹೀಗಿರುವಾಗ ಹುಚ್ಚ ಸಿನಿಮಾ (Kannada Huccha Cinema) ನೋಡಿ ಸುದೀಪ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ವಿಷ್ಣು ದಾದಾ ಕಪ್ಪಾಳಕ್ಕೆ ಹೊಡೆದಿದ್ದರಂತೆ.

ಅಷ್ಟಕ್ಕೂ ವಿಷ್ಣುವರ್ಧನ್ ಅವರಿಗೆ ಅಂದು ಏನಾಗಿತ್ತು? ಕಿಚ್ಚನಿಗೆ ಹೊಡೆಯಲು ಕಾರಣವಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Kannada Actor Kiccha Sudeep

ಹೌದು ಸ್ನೇಹಿತರೆ ಅಕುಲ್ ಬಾಲಾಜಿ ಈ ಹಿಂದೆ ನಡೆಸಿ ಕೊಟ್ಟಂತಹ ಕಾರ್ಯಕ್ರಮ ಒಂದರ ಅತಿಥಿಯಾಗಿ ಬಂದಿದ್ದಂತಹ ಕಿಚ್ಚ ಸುದೀಪ್ ತಮ್ಮ ಹಾಗೂ ವಿಷ್ಣುದಾದಾನ ಬಾಂಧವ್ಯ ಹೇಗಿತ್ತು ಎಂಬುದರ ಕುರಿತು ಮೆಲುಕು ಹಾಕುವಾಗ ಈ ಒಂದು ಮನದಾಳದ ಮಾಹಿತಿಯನ್ನು ತೆರೆದಿಟ್ಟರು.

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಮದುವೆಯಲ್ಲಿ ಅಪ್ಪು ನೀಡಿದ್ದ ದುಬಾರಿ ಉಡುಗೊರೆ ಏನು ಗೊತ್ತೇ?

ಆ ಸಂದರ್ಭದಲ್ಲಿ “ನಟಸಾರ್ವಭೌಮ ಅಣ್ಣಾವ್ರು ಸ್ವಾತಿಮುತ್ತು ಸಿನಿಮಾ ನೋಡಿ ಅಳುತ್ತಾ ನನ್ನನ್ನು ಅವರ ಮನೆಗೆ ಕರೆಸಿ, ಕೆನ್ನೆಗೆ ಮುತ್ತಿಟ್ಟು ಉಪಚಾರ ಮಾಡಿದರು.

ಅದರಂತೆ ವಿಷ್ಣುವರ್ಧನ್ ಅವರು ಹುಚ್ಚ ಸಿನಿಮಾ ನೋಡಿ ನನ್ನನ್ನು ಅವರ ಮನೆಗೆ ಕರೆದರು ನಾನು ಕರೆದ ಕೂಡಲೇ ಏನಿರಬಹುದು ಏನೋ ಎಂದು ಹೆದರುತ್ತಲೇ ಅವರ ಮನೆಗೆ ಹೋದೆ, ವಿಷ್ಣು ದಾದಾ ಕಿಟಕಿಯ ಬಳಿ ಬಂದು ನಿಂತಿದ್ದರು. ಐದು ನಿಮಿಷಗಳ ಕಾಲ ನನ್ನನ್ನು ಮಾತನಾಡಿಸಲಿಲ್ಲ, ಆನಂತರ ಸುದೀಪ್ ಎಂದು ಕರೆದು ಫಳ್ ಅಂತ ನನಗೆ ಹೊಡೆದರು.

ಆಗ ನಾನು ಇವರಿಗೆ ಇಷ್ಟು ಕೆಟ್ಟ ಸಿನಿಮಾ ತೋರಿಸಿಬಿಟ್ನ ಅಂತ ಅನಿಸ್ತಿತ್ತು. ಆ ಸಂದರ್ಭದಲ್ಲಿ ನನ್ನನ್ನು ನೋಡುತ್ತಾ ಎಲ್ಲಿದ್ರಿ ಇಷ್ಟು ವರ್ಷ ಅಂತ ಕೇಳಿದ್ರು? ಭಾವನೆಗಳನ್ನು ಅವರು ಹೀಗೆ ವ್ಯಕ್ತಪಡಿಸುವುದಾ ಅಂತ ಅನಿಸ್ತು, ನನ್ನ ಸಿನಿಮಾ ಅವರಿಗೆ ಬಹಳನೇ ಇಷ್ಟವಾಗಿ ಅದನ್ನು ಅವರು ಹೊಡೆಯುವುದರ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.

ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್, ಯಾವುದೇ ವಸ್ತು ಮೇಲೆ 80% ಡಿಸ್ಕೌಂಟ್ ಈ ಆಫರ್ ಇನ್ನು ಒಂದೇ ದಿನ ಮಾತ್ರ

ನನಗೆ ಅಂದು ಬಹಳನೇ ಸಂತೋಷವಾದಂತಹ ದಿನವಾಗಿತ್ತು, ನನ್ನ ಅಷ್ಟು ವರ್ಷದ ಪ್ರಯತ್ನಕ್ಕೆ ಒಂದೊಳ್ಳೆ ಪ್ರತಿಫಲ ಸಿಕ್ತು ಎಂದು ವಿಷ್ಣು ದಾದನನ್ನು ಅಪ್ಪಿಕೊಂಡೆ. ಎಂದು ಕಿಚ್ಚ ಸುದೀಪ್ ತಮ್ಮ ಹಾಗೂ ವಿಷ್ಣುವರ್ಧನ್ ಅವರ ನಡುವೆ ಇದ್ದಂತಹ ಮಧುರವಾದ ಬಾಂಧವ್ಯವನ್ನು ವರ್ಣಿಸಿದರು.

Kannada Actor Vishnuvardhan Reaction After Watching Sudeep Huccha Cinema

Leave A Reply

Your email address will not be published.