ಹಾಸ್ಯ ನಟ ಕೋಮಲ್ ಸಿನಿ ಜರ್ನಿ ಹೇಗಿತ್ತು? ಅಷ್ಟಕ್ಕೂ ಅವರು ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ ಗೊತ್ತಾ?

ಕೋಮಲ್ ಚಿತ್ರರಂಗವನ್ನು ತೊರೆದರು ಎಂಬ ಸುದ್ದಿ ಹರಿದಾಡಲು ಪ್ರಾರಂಭ ಆದಂತಹ ವೇಳೆಗೆ ಇದೀಗ ನಮೋ ಭೂತಾತ್ಮ ಪಾರ್ಟ್ ೨ ಚಿತ್ರದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುವ ಪ್ರಯತ್ನ ಮಾಡಿರುವ ಕೋಮಲ್ ಅವರಿಗೆ ಸಿನಿಮಾದ ಯಶಸ್ಸು ಸಿಗಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

ಸ್ನೇಹಿತರೆ, ಹಾಸ್ಯವನ್ನು ಹಾಸ್ಯ ನಟರಷ್ಟೇ ನಿರ್ವಹಿಸಬೇಕು, ನಾಯಕತ್ವವನ್ನು ಸಿನಿಮಾ ಹೀರೋ ಮಾತ್ರ ಹೊರಬೇಕು, ವಿಲನ್ ಪಾತ್ರವನ್ನು ಖಳನಟನೆ ನಿರ್ವಹಿಸಬೇಕು ಎಂಬ ಕಾಲಘಟ್ಟ ಒಂದಿತ್ತು. ಆದರೆ ಈಗಿನ ಕಾಲಘಟ್ಟದಲ್ಲಿ ಇದು ಮರೆಯಾಗಿ ಹಾಸ್ಯ ನಟರು ಕೂಡ ಹೀರೋ ಆಗಬೇಕೆಂಬ ರೂಡಿಗೆ ಬಂದಿದ್ದಾರೆ.

ಹೌದು ಗೆಳೆಯರೇ ಈ ಒಂದು ಟ್ರೆಂಡನ್ನು ಮೊದಲು ಮುರಿದಿದವರು ಕನ್ನಡದ ಕುಳ್ಳ ದ್ವಾರಕೇಶ್ ಅವರು, ಕೆಲ ಹಂತಗಳ ಕಾಲ ಎಲ್ಲಾ ಸಿನಿಮಾಗಳಲ್ಲಿಯೂ ಕೇವಲ ಹಾಸ್ಯ ನಟನಾಗಿ ಕಾಣಿಸಿಕೊಳ್ಳುತಿದಂತಹ ದ್ವಾರಕೀಶ್ ಕಾಲಕ್ರಮಣ ತಮ್ಮದೇ ಸಿನಿಮಾಗಳಿಗೆ ನಾಯಕನಾಗಿ ಅಭಿನಯಿಸ ತೊಡಗಿದರು.

ಆನಂತರ ಸಾಧು ಕೋಕಿಲ ಕೂಡ ಕೆಲ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ ಹಾಗೂ ನಟ ಶರಣ್ ಹಾಸ್ಯ ನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟು ಇಂದು ಲೀಡಿಂಗ್ ಸ್ಟಾರ್ ಹೀರೊಗಳಲ್ಲಿ ಒಬ್ಬರಾಗಿದ್ದಾರೆ.

ಹಾಸ್ಯ ನಟ ಕೋಮಲ್ ಸಿನಿ ಜರ್ನಿ ಹೇಗಿತ್ತು? ಅಷ್ಟಕ್ಕೂ ಅವರು ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ ಗೊತ್ತಾ? - Kannada News

ವಿಷ್ಣುವರ್ಧನ್ ಇಲ್ಲದೇ ಹೋದರೆ ಸಿನಿಮಾವನ್ನೇ ಮಾಡಲ್ಲ ಎಂದು ನಟಿ ಜಯಲಲಿತಾ ಅಂದು ಹಠ ಹಿಡಿದಿದ್ದು ಯಾಕೆ? ವಿಷ್ಣು ದಾದಾ ಅಭಿನಯಿಸದಿರಲು ಕಾರಣವೇನು ಗೊತ್ತಾ?

ಇದಕ್ಕೂ ಮುನ್ನ ಸಿನಿಮಾ ರಂಗಕ್ಕೆ ಹಾಸ್ಯ ಕಲಾವಿದನಾಗಿ ಬಂದು ನಮ್ಮೆಲ್ಲರನ್ನು ನಕ್ಕು ನಗಿಸಿದಂತಹ ಕೋಮಲ್ ಯಾರು ಅಂತ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಕಡು ಬಡತನದ ಕುಟುಂಬದಲ್ಲಿ ಜನಿಸಿದಂತಹ ಕೋಮಲ್ ಅವರು ವಿದ್ಯಾಭ್ಯಾಸ ಮುಗಿಸಿದ ನಂತರ ಮುಂದೇನು ಮಾಡಬೇಕೆಂಬ ಯೋಚನೆಯಲ್ಲಿದ್ದಾಗ ಅಣ್ಣ ಜಗ್ಗೇಶ್ ಅವರ ಸೂಪರ್ ನನ್ ಮಗ ಸಿನಿಮಾದ ಮೂಲಕ ತಮ್ಮ ನಟನ ವೃತ್ತಿಯನ್ನು ಶುರುಮಾಡಿದರು.

ಈ ಚಿತ್ರದಲ್ಲಿ ಬರುವಂತಹ ಸಿನಿಮಾದಲ್ಲಿ ಕೆಲ ನಿಮಿಷಗಳ ಕಾಲ ಅವರು ಕ್ಯಾಮಿಯೋ ಅಪ್ಪಿಯರೆನ್ಸನ್ನು ಮಾಡಿದ್ರು, ನಂತರ 1993ರಲ್ಲಿ ತೆರೆಗೆ ಬಂದ ಮಿಲಿಟರಿ ಮಾವ ಸಿನಿಮಾದಲ್ಲಿ ನಟ ಕೋಮಲ್ ಪ್ರಧಾನ ಪಾತ್ರವನ್ನು ನಿರ್ವಹಿಸಿದರು.

Kannada Actor Komal

ಆದರೆ ಈ ಚಿತ್ರ ಭಾರಿ ನಿರಾಸೆಯನ್ನು ಮೂಡಿಸಿತ್ತು ಆದರೂ ಸಹ ಪ್ರಯತ್ನವನ್ನು ಬಿಡದೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತ ಸಿಕ್ಕಸಿಕ್ಕ ಪಾತ್ರಕ್ಕೆ ಬಣ್ಣ ಹಚ್ಚುತ್ತಾ ಕನ್ನಡದ ಸಹನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ ಗುರುತಿಸಿಕೊಂಡಿದಂತಹ ಕೋಮಲ್ ಅವರು ವಾರೆವಾ, ಗೋವಿಂದಾಯ ನಮಃ, ನಮೋ ಭೂತಾತ್ಮಗಳಂತಹ ಸಿನಿಮಾಗಳ ಮೂಲಕ ನಾಯಕನಾಗಿ ಮಿಂಚಿದರು.

ನಟ ಅರುಣ್ ಸಾಗರ್ ಬೇರೆ ಭಾಷೆಯ ಚಿತ್ರರಂಗದಲ್ಲಿದ್ದಿದ್ದರೆ ರೆಂಜೇ ಬೇರೆ ಇರ್ತಿತ್ತು! ನಮ್ಮಲ್ಲಿ ಅವರಿಗೆ ಅವಕಾಶವೇ ಇಲ್ಲವಾಯ್ತು

ಆನಂತರ ಬಂದಂತಹ ಯಾವ ಸಿನಿಮಾಗಳು ಕೂಡ ಕೋಮಲ್ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸನ್ನು ನೀಡುವುದಿಲ್ಲ. ನಾಯಕನಟನಾಗಿ ಅಭಿನಯಿಸಿದಂತಹ ಎಲ್ಲಾ ಸಿನಿಮಾಗಳು ಕೂಡ ಮಖಾಡೆ ಮಲಗಿ ಬಿಡುತ್ತವೆ. ಇದರಿಂದ ಬೇಸರಕ್ಕೊಳಗಾದಂತಹ ಕೋಮಲ್ ಅವರು ಮತ್ತೆಂದು ನಾಯಕನ ಪಾತ್ರದಲ್ಲಿ ಅಭಿನಯಿಸುವುದಿಲ್ಲ ಎಂಬುವ ಹೇಳಿಕೆ ನೀಡಿಬಿಡುತ್ತಾರೆ.

ಹೀಗೆ 1992 ರಿಂದ ಈವರೆಗೂ ಸುಮಾರು ಮೂರು ದಶಕದ ಕಾಲ ನೂರಾರು ಚಿತ್ರಗಳಲ್ಲಿ ನಟಿಸಿ ಯಶಸ್ಸನ್ನು ಗಳಿಸಿದ್ದ, ಜನರನ್ನು ಅತೀವವಾಗಿ ರಂಜಿಸಿದಂತಹ ಕೋಮಲ್ ಸಿನಿಮಾದಲ್ಲಿ ಅಭಿನಯಿಸುವುದನ್ನು ಸಂಪೂರ್ಣ ಕಡಿಮೆ ಮಾಡಿಬಿಟ್ಟಿದ್ದರು.

ಹೀಗೆ ಕೋಮಲ್ ಚಿತ್ರರಂಗವನ್ನು ತೊರೆದರು ಎಂಬ ಸುದ್ದಿ ಹರಿದಾಡಲು ಪ್ರಾರಂಭ ಆದಂತಹ ವೇಳೆಗೆ ಇದೀಗ ನಮೋ ಭೂತಾತ್ಮ ಪಾರ್ಟ್ ೨ ಚಿತ್ರದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುವ ಪ್ರಯತ್ನ ಮಾಡಿರುವ ಕೋಮಲ್ ಅವರಿಗೆ ಸಿನಿಮಾದ ಯಶಸ್ಸು ಸಿಗಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

Kannada Actor Komal is back From Namo Bhoothathma Part 2

Comments are closed.