ನೆನಪಿದ್ದಾರಾ ಸಮಯದ ಗೊಂಬೆ ನಟಿ ರೂಪದೇವಿ? ಗಾಸಿಪ್ ಗಳಿಗೆ ಅಂಜಿ ಸಿನಿಮಾರಂಗವನ್ನೇ ತೊರೆದ್ರಾ?

ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ, ಅಲ್ಪಾವಧಿಯಲ್ಲಿ ಅವಕಾಶಗಳ ಸುರಿಮಳೆಯನ್ನು ಗಿಟ್ಟಿಸಿಕೊಂಡಂತಹ ನಟಿ ರೂಪದೇವಿ ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ?

ಸ್ನೇಹಿತರೆ, ಕನ್ನಡ ಸಿನಿಮಾ (Kannada cinema) ರಂಗ ಆಗಷ್ಟೇ ಅಂಬೆಗಾಲನ್ನು ಇಡುತ್ತಿದ್ದ ಸಂದರ್ಭದಲ್ಲಿ ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅನಂತನಾಗ್ರಂತಹ ನಟರು ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದವರು. ಇಂತಹ ಸ್ಟಾರ್ ನಟರಿಗೆ ಆರತಿ, ಭಾರತಿ, ಅಡ್ವಾಣಿ ಲಕ್ಷ್ಮೀದೇವಿ, ಬಿ ಸರೋಜಾ ದೇವಿ, ಮಾಧವಿ, ಮಹಾಲಕ್ಷ್ಮಿ, ರೂಪಿಣಿಯಂತಹ ನಟಿಯರು ಸಾತ್ ಸಾತ್ ನೀಡಿದರು.

ಡಾಕ್ಟರ್ ರಾಜಕುಮಾರ್ (Dr.Rajkumar) ಅವರೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ, ಅಲ್ಪಾವಧಿಯಲ್ಲಿ ಅವಕಾಶಗಳ ಸುರಿಮಳೆಯನ್ನು ಗಿಟ್ಟಿಸಿಕೊಂಡಂತಹ ನಟಿ ರೂಪದೇವಿ (actress Roopa Devi) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? ಅದರಲ್ಲೂ ಅಣ್ಣಾವ್ರ ಸಮಯದ ಗೊಂಬೆ ಹಾಗೂ ಯಾರಿವನು ಸಿನಿಮಾಗಳ ಮೂಲಕ ಉನ್ನತ ಮಟ್ಟದ ಯಶಸ್ಸನ್ನು ಪಡೆದುಕೊಂಡ ರೂಪ ದೇವಿ ಕಾಲಕ್ರಮೇಣ ಸಿನಿಮಾ ರಂಗದಿಂದ ಮಾಯವಾಗಿ ಬಿಟ್ಟರು.

ಹಾಗಾದ್ರೆ ಈ ನಟಿ ಸದ್ಯ ಎಲ್ಲಿದ್ದಾರೆ ಹೇಗಿದ್ದಾರೆ? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಅಣ್ಣಾವ್ರು ಹಾಗೂ ಇತರ ನಟರಿಗೆ ತಾಯಿಯಾಗಿ ಪೋಷಕ ಪಾತ್ರಧಾರಿಯಾಗಿ ಸಹ ನಟಿಯಾಗಿ ಕಾಣಿಸಿಕೊಂಡ ಅಡ್ವಾಣಿ ಲಕ್ಷ್ಮೀದೇವಿಯವರ ಪುತ್ರಿ ರೂಪ ದೇವಿಯವರು ಡಾಕ್ಟರ್ ರಾಜಕುಮಾರ್,

ನೆನಪಿದ್ದಾರಾ ಸಮಯದ ಗೊಂಬೆ ನಟಿ ರೂಪದೇವಿ? ಗಾಸಿಪ್ ಗಳಿಗೆ ಅಂಜಿ ಸಿನಿಮಾರಂಗವನ್ನೇ ತೊರೆದ್ರಾ? - Kannada News

ಶಂಕರ್ ನಾಗ್, ಟೈಗರ್ ಪ್ರಭಾಕರ್ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ನಟರೊಂದಿಗೆ (Kannada Co-actors) ತೆರೆ ಹಂಚಿಕೊಂಡು ಆಗಿನ ಕಾಲದ ಟಾಪ್ ನಟರೊಂದಿಗೆ ನಾಯಕಿಯಾಗಿ ನಟಿಸುವ ಭಾಗ್ಯವನ್ನು ಪಡೆದುಕೊಂಡರು. ಇನ್ನು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ ಟಾಪ್ ನಟಿಯಾಗಿ ಮಿಂಚಿದರು. ಅದರಲ್ಲೂ ಅಣ್ಣವರೊಂದಿಗೆ ಅಭಿನಯಿಸಿದ ಹಾಲು ಜೇನು, ಸಮಯದ ಗೊಂಬೆ, ಯಾರಿವನುದಂತಹ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿಕೊಂಡವು.

ಇದಲ್ಲದೆ ಸಿಂಹ ಜೋಡಿ, ಬಂಧನ, ನ್ಯಾಯ ಗೆದ್ದಿತು, ನೆನಪಿನ ಗುಡಿಗೆ, ನೆನಪಿನ ದೋಣಿ, ಮಹಾಪುರುಷ, ಬೆಟ್ಟದ ಹೂವು ಹೀಗೆ ಮುಂತಾದ ಚಿತ್ರಗಳಲ್ಲಿಯೂ ರೂಪದೇವಿ ಅಭಿನಯಿಸಿದ್ದಾರೆ. ಇದಲ್ಲದೆ 2011ರಲ್ಲಿ ತೆರೆಗೆ ಬಂದ ದುನಿಯಾ ವಿಜಯ (Duniya Vijay) ಅವರ ಜರಾಸಂಧ ಸಿನಿಮಾದಲ್ಲಿ, ಪೋಷಕ ನಟಿಯಾಗಿ ಕಾಣಿಸಿಕೊಂಡ ರೂಪ ದೇವಿ ಕಾಲಕ್ರಮೇಣ ಅವಕಾಶಗಳು ಕಡಿಮೆಯಾದ ಬೆನ್ನೆಲೆ ಸಿನಿಮಾರಂಗದಿಂದ ದೂರ ಉಳಿದು ತಮ್ಮ ವೈಯಕ್ತಿಕ ಬದುಕಿನತ್ತ ಗಮನಹರಿಸುತ್ತಿರುವ ಮಾಹಿತಿ ತಿಳಿದು ಬಂದಿದೆ.

ಇನ್ನು ಆಗಿನ ಕಾಲದಲ್ಲಿ ಪೋಷಕ ನಟನಾಗಿ ಅಭಿನಯಿಸುತ್ತಿದ್ದ ಜೈ ಜಗದೀಶ್ ಅವರ ಹೆಸರಿನೊಂದಿಗೆ ರೂಪ ದೇವಿಯವರ ಹೆಸರು ತಳುಕು ಹಾಕಿಕೊಂಡಿತ್ತು. ಅಲ್ಲದೆ ಜೈ ಜಗದೀಶ್ ಅವರು ರೂಪದೇವಿಯವರನ್ನು ಮದುವೆಯಾಗಿದ್ದಾರೆ ಎಂಬೆಲ್ಲ ಸುದ್ದಿ ಹರಿದಾಡಿತ್ತು. ಇದಕ್ಕೆ ಮಾಧ್ಯಮದ ಮುಂದೆ ಬಂದು ಸ್ಪಷ್ಟನೆ ನೀಡಿದ ರೂಪ ದೇವಿಯವರು ನಾನು ಅವರನ್ನು ಮದುವೆಯಾಗಿಲ್ಲ ಬದಲಿಗೆ ನನ್ನದೇ ಆದ ವೈಯಕ್ತಿಕ ಬದುಕಿದೆ ಈ ರೀತಿ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದರು.

Leave A Reply

Your email address will not be published.