ಆಸ್ಪತ್ರೆಗೆ ಕಟ್ಟಲು ಹಣವಿಲ್ಲದೆ ಪರದಾಡುತ್ತಿದ್ದ ಟೈಗರ್ ಪ್ರಭಾಕರ್ ಅವರಿಗೆ ಅಂಬರೀಶ್ ಅದೆಂತಹ ಸಹಾಯ ಮಾಡಿದ್ರು ಗೊತ್ತಾ?

ಟೈಗರ್ ಪ್ರಭಾಕರ್ ಅನಾರೋಗ್ಯ ಸಮಸ್ಯೆಯಿಂದ ಸಾವಿಗೀಡಾದ ದಿನ ಆಸ್ಪತ್ರೆಗೆ ಹಣ ಕಟ್ಟಲು ದುಡ್ಡು ಇಲ್ಲದೆ ಕುಟುಂಬಸ್ಥರು ಪರದಾಡುತ್ತಿದ್ದಾಗ ಅಂಬಿ ಅದೆಂತಹ ಸಹಾಯ ಮಾಡಿದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕನ್ನಡ ಸಿನಿಮಾ (Kannada cinema) ರಂಗದ ಮೇರು ನಟರ ಪಟ್ಟಿಯಲ್ಲಿ ಡಾ. ರಾಜಕುಮಾರ್, ಡಾಕ್ಟರ್ ವಿಷ್ಣುವರ್ಧನ್, ಶಂಕರ್ ನಾಗ್ರಂತಹ ಸ್ಟಾರ್ ನಟರು ಹೇಗೆ ಇರುತ್ತಾರೋ ಟೈಗರ್ ಪ್ರಭಾಕರ್, ಅಂಬರೀಶ್ ಕೂಡ ವಿಶೇಷ ಸ್ಥಾನವನ್ನು ಅಲಂಕರಿಸುತ್ತಾರೆ. ತಮ್ಮ ಅಮೋಘ ಅಭಿನಯದ ಮೂಲಕ ಖಳನಟನಾಗಿ, ನಾಯಕ ನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಂತಹ ಈ ಇಬ್ಬರು ಕಲಾವಿದರು ತೆರೆಯ ಮೇಲೆ ವೈರಿಗಳಾಗಿ ಅಭಿನಯಿಸಿದರು ಕೂಡ ನಿಜ ಜೀವನದಲ್ಲಿ ಮಧುರವಾದ ಗೆಳೆತನವನ್ನು ಹೊಂದಿದ್ದಂತಹ ನಟರು.

ಹೀಗಿರುವಾಗ ಟೈಗರ್ ಪ್ರಭಾಕರ್ (Tiger Prabhakar) ಅನಾರೋಗ್ಯ ಸಮಸ್ಯೆಯಿಂದ ಸಾವಿಗೀಡಾದ ದಿನ ಆಸ್ಪತ್ರೆಗೆ ಹಣ ಕಟ್ಟಲು ದುಡ್ಡು ಇಲ್ಲದೆ ಕುಟುಂಬಸ್ಥರು ಪರದಾಡುತ್ತಿದ್ದಾಗ ಅಂಬಿ ಅದೆಂತಹ ಸಹಾಯ ಮಾಡಿದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 70ರ ದಶಕದಲ್ಲಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಅಭಿನಯಿಸಿ ಬರೋಬ್ಬರಿ

450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ತನ್ನದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸೂಚಿಸಿಕೊಂಡಿದ್ದಂತಹ ನಟ ಟೈಗರ್ ಪ್ರಭಾಕರ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದಂತಹ ನಟ. ಒಂದು ವರ್ಷದಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಂತಹ ಪ್ರಭಾಕರ್ ಅವರು ಕಾಲಕ್ರಮೇಣ ಸಿನಿಮಾ ರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿ ಬಿಡುತ್ತಾರೆ.

ಆಸ್ಪತ್ರೆಗೆ ಕಟ್ಟಲು ಹಣವಿಲ್ಲದೆ ಪರದಾಡುತ್ತಿದ್ದ ಟೈಗರ್ ಪ್ರಭಾಕರ್ ಅವರಿಗೆ ಅಂಬರೀಶ್ ಅದೆಂತಹ ಸಹಾಯ ಮಾಡಿದ್ರು ಗೊತ್ತಾ? - Kannada News

ಇದಕ್ಕೆ ಮುಖ್ಯ ಕಾರಣ ಅವರ ವೈಯಕ್ತಿಕ ಬದುಕಿನಲ್ಲಿ ಎದುರಾದಂತಹ ಕೆಲ ಏರುಪೇರುಗಳು ಇದಲ್ಲದೆ ಅತೀವವಾದ ಕುಡಿತದ ಚಟಕ್ಕೆ ದಾಸರಾದಂತಹ ಟೈಗರ್ ಪ್ರಭಾಕರ್ ಕಾಲಿಗೆ ಮಾಂಸ ಕಟ್ಟಿಕೊಂಡು ಓಡಾಡುತ್ತಿದ್ದರು ಎಂಬ ಗಾಳಿ ಸುದ್ದಿಯನ್ನು ಕೆಲ ಕಿಡಿಗೇಡಿಗಳು ಹಬ್ಬಿಸಿ ಬಿಡುತ್ತಾರೆ. ಇದೆಲ್ಲದರಿಂದ ಸಿನಿಮಾಗಳ ಅವಕಾಶವನ್ನು ಸಂಪೂರ್ಣವಾಗಿ ಕಳೆದುಕೊಂಡ ಟೈಗರ್ ಪ್ರಭಾಕರ್ ಒಬ್ಬರೇ ಮನೆಯಲ್ಲಿ ಕಾಲ ಕಳೆಯುತ್ತಾ ಒಂಟಿಯಾಗಿ ತಮ್ಮ ಕೊನೆ ಕ್ಷಣವನ್ನು ಕಳೆದರು.

ಆಸ್ಪತ್ರೆಗೆ ಕಟ್ಟಲು ಹಣವಿಲ್ಲದೆ ಪರದಾಡುತ್ತಿದ್ದ ಟೈಗರ್ ಪ್ರಭಾಕರ್ ಅವರಿಗೆ ಅಂಬರೀಶ್ ಅದೆಂತಹ ಸಹಾಯ ಮಾಡಿದ್ರು ಗೊತ್ತಾ? - Kannada News

ಇದಲ್ಲದೆ ಕೆಲ ಕಾಯಿಲೆಗಳು ಕೂಡ ಟೈಗರ್ ಪ್ರಭಾಕರ್ ಅವರನ್ನು ಬಾಧಿಸುತ್ತಿತ್ತು, 25 ಮಾರ್ಚ್ 2001 ರಂದು ಟೈಗರ್ ಪ್ರಭಾಕರ್ ಅವರು ತಮ್ಮ ಬಹು ಅಂಗಾಂಗ ವೈಫಲ್ಯದಿಂದಾಗಿ ಖಾಸಗಿ ಆಸ್ಪತ್ರೆ ಒಂದರಲ್ಲಿ ಕೊನೆ ಉಸಿರೆಳೆದರು. ಅಂತಹ ಸಂದರ್ಭದಲ್ಲಿ ಟೈಗರ್ ಪ್ರಭಾಕರ್ ಅವರನ್ನು ನೋಡಿಕೊಳ್ಳುತ್ತಿದ್ದಂತಹ ಕೆಲಸಗಾರರ ಬಳಿ ಅವರ ಬಾಡಿಯನ್ನು ಆಸ್ಪತ್ರೆಯಿಂದ ತಂದು ಅಂತ್ಯಸಂಸ್ಕಾರ ಮಾಡಲು ಹಣ ಇರಲಿಲ್ಲ.

ಈ ಸುದ್ದಿ ಯಾವಾಗ ಸ್ಯಾಂಡಲ್ವುಡ್ನಲ್ಲಿ ಹರಿದಾಡಲು ಶುರು ಆಯ್ತು ತಕ್ಷಣವೇ ಸ್ಪಂದಿಸಿದಂತಹ ಅಂಬರೀಶ್ (Ambareesh) ಅವರು ಆಸ್ಪತ್ರೆಗೆ ನೀಡಬೇಕಿದ್ದಂತಹ ಮೂರು ಲಕ್ಷ ಹಣವನ್ನು ನೀಡಿ ತಮ್ಮ ಆತ್ಮೀಯ ಗೆಳೆಯನ ದೇಹವನ್ನು ಆಸ್ಪತ್ರೆಯಿಂದ ಮನೆಗೆ ತಂದು ಅಂತ್ಯ ಸಂಸ್ಕಾರದ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಹೀಗೆ ಕೊನೆಯ ಕ್ಷಣದಲ್ಲಿ ಮಾಡಬೇಕಿದ್ದಂತಹ ಕಾರ್ಯವನ್ನೆಲ್ಲ ಮುಗಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಂಬರೀಶ್ ಅವರು ಮನಸ್ಪೂರ್ವಕವಾಗಿ ಬೇಡಿಕೊಂಡಿದ್ದರು. ಹೀಗೆ ಕಷ್ಟ ಕಾಲದಲ್ಲಿ ಸ್ಪಂದಿಸಿದಂತಹ ಅಂಬರೀಶ್ ಅವರಿಗೆ ಟೈಗರ್ ಪ್ರಭಾಕರ್ರವರ ಕುಟುಂಬ ಧನ್ಯವಾದಗಳನ್ನು ತಿಳಿಸಿದರು.

Leave A Reply

Your email address will not be published.