ನಟ ಅರುಣ್ ಸಾಗರ್ ಬೇರೆ ಭಾಷೆಯ ಚಿತ್ರರಂಗದಲ್ಲಿದ್ದಿದ್ದರೆ ರೆಂಜೇ ಬೇರೆ ಇರ್ತಿತ್ತು! ನಮ್ಮಲ್ಲಿ ಅವರಿಗೆ ಅವಕಾಶವೇ ಇಲ್ಲವಾಯ್ತು

ಅರುಣ್ ಸಾಗರ್ ಅವರಂತಹ ಕಲಾವಿದ ಬೇರೆ ಭಾಷೆಯ ಸಿನಿಮಾ ರಂಗದಲ್ಲಿ ಏನಾದರೂ ಇದಿದ್ದರೆ ಇದೀಗ ದೇಶ ವ್ಯಾಪಿ ಹೆಸರು ಮಾಡುತ್ತಿದ್ದರು. ಆದರೆ ನಮ್ಮ ಕನ್ನಡ ಸಿನಿಮಾರಂಗ ಇವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೆ ಇರುವುದು ಸ್ಯಾಂಡಲ್ವುಡ್ನ ದುರಾದೃಷ್ಟವೇ ಸರಿ

ಸ್ನೇಹಿತರೆ, ಅರುಣ್ ಸಾಗರ್ (Actor Arun Sagar) ಎಂಬ ವ್ಯಕ್ತಿಯಲ್ಲಿ ಓರ್ವ ಕಲೆಗಾರ, ಹಾಸ್ಯಗಾರ, ಚಿತ್ರಗಾರ, ನಟ, ಸಂಗೀತಗಾರ, ವಿಲ್ಲನ್, ನಾಟಕಕಾರ, ಕಥೆಗಾರ, ನಿರ್ದೇಶಕ ಹೀಗೆ ಮುಂತಾದ ಹತ್ತು ಹಲವು ಬಗೆಯ ಅದ್ಭುತ ವೈವಿಧ್ಯಮಯಗಳಿವೆ.

ಸರಿಸುಮಾರು 26 ವರ್ಷಗಳಿಂದಲೂ ಚಿತ್ರರಂಗದಲ್ಲಿ ಇರುವಂತಹ ಅರುಣ್ ಸಾಗರ್ ಚಿತ್ರೋದ್ಯಮಕ್ಕೆ ನಾಯಕನಟನಾಗಲು ಬಂದು ಗುರುತಿಸಿಕೊಂಡಿದ್ದು ಓರ್ವ ಕಲಾ ನಿರ್ದೇಶಕನಾಗಿ, ಆನಂತರ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಹಾಸ್ಯನಟ, ಪೋಷಕ ನಟ ಹಾಗೂ ಸಹ ನಟನಾಗಿ.

ಹೀಗೆ ಬಿಗ್ ಬಾಸ್ ಮನೆಗೂ ಎರಡು ಬಾರಿ ಪಾಧಾರ್ಪಣೆ ಮಾಡಿ ತಮ್ಮ ಅಘಾದವಾದ ಪ್ರತಿಭೆಯ ಅನಾವರಣಗೊಳಿಸುವಲ್ಲಿ ಯಶಸ್ವಿಯಾದರು. ಹೌದು ಗೆಳೆಯರೇ ಅರುಣ್ ಸಾಗರ್ ಅವರ ನಟನೆಯ ಮೊದಲ ಸಿನಿಮಾ ಶಿವರಾಜ್ ಕುಮಾರ್ ಸ್ನೇಹಿತನಾಗಿ ಕಾಣಿಸಿಕೊಂಡಿದ್ದ ಜನುಮದ ಜೋಡಿ. ಈ ಸಿನಿಮಾದ ಪಾಪುಲರ್ ಹಾಡು ಕೋಲು ಮಂಡೆ ಜಂಗಮದೇವ ಹಾಡಿನಲ್ಲಿ ಅರುಣ್ ಸಾಗರ್ ಕೂಡ ಸ್ಟೆಪ್ ಹಾಕಿದ್ರು.

ನಟ ಅರುಣ್ ಸಾಗರ್ ಬೇರೆ ಭಾಷೆಯ ಚಿತ್ರರಂಗದಲ್ಲಿದ್ದಿದ್ದರೆ ರೆಂಜೇ ಬೇರೆ ಇರ್ತಿತ್ತು! ನಮ್ಮಲ್ಲಿ ಅವರಿಗೆ ಅವಕಾಶವೇ ಇಲ್ಲವಾಯ್ತು - Kannada News

ನೆನಪಿದ್ದಾರಾ ನಟ ಸದಾಶಿವ ಬ್ರಹ್ಮಾವರ! ಪಾಪ ಇವರು ಕೊನೆಗಾಲದಲ್ಲಿ ಅನುಭವಿಸಿದ ಕಷ್ಟ ಯಾವ ಶತ್ರುವಿಗೂ ಬೇಡ

ಇದಾದ ಬಳಿಕ ಅದೇ ಶಿವರಾಜಕುಮಾರ್ (Actor Shiva Rajkumar) ಅವರೊಂದಿಗೆ ನಮ್ಮೂರ ಹುಡುಗ ಸಿನಿಮಾದಲ್ಲಿ ಅಭಿನಯಿಸಿದ ಅರುಣ್ ಕುಮಾರ್ ಅವರಿಗೆ ರವಿಚಂದ್ರನ್ ಅವರ ಓ ನನ್ನ ನಲ್ಲೆ ಸಿನಿಮಾದ ನಿರ್ದೇಶನ ಮಾಡುವಂತಹ ಅವಕಾಶ ದೊರೆಯುತ್ತದೆ. ಈ ಒಂದು ಕೆಲಸದಿಂದ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೆರಿಸಿಕೊಂಡಂತಹ ಅರುಣ್ ಸಾಗರ್ ಸಾಲು ಸಾಲು ಸಿನಿಮಾಗಳಿಗೆ ನಿರ್ದೇಶನ ಮಾಡುತ್ತಾರೆ.

ಅದರ ಜೊತೆ ಬ್ಯಾಗ್ರೌಂಡ್ ಕೆಲಸಗಳಲ್ಲಿಯೂ ತಮ್ಮ ಕೈಚಳಕವನ್ನು ತೋರಿದ ಅರುಣ್ ಸಾಗರ್ ಮರ್ಮಾ ಎಂಬ ಸಿನಿಮಾದ ನಾಯಕ ನಟನಾಗುವಂತಹ ಅವಕಾಶ ಗಿಟ್ಟಿಸಿಕೊಂಡು ಓರ್ವ ಸೈಕಾಲಜಿಕಲ್ ಕುರುಡನ ಪಾತ್ರದಲ್ಲಿ ಅಭಿನಯಿಸಿ ಜನಮನ್ನಣೆ ಪಡೆಯುತ್ತಾರೆ.

ಇದಾದ ಬಳಿಕ ಪ್ರೀತಿ ಪ್ರೇಮ ಪ್ರಣಯ, ಕ್ಷಣ ಕ್ಷಣ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ವಿಷ್ಣುವರ್ಧನ, ಬಚ್ಚನ್ ಹೇಗೆ ಮುಂತಾದ ಸುದೀಪ್ (Kiccha Sudeep) ಅಭಿನಯದ ಸಿನಿಮಾಗಳಲ್ಲಿ ಅರುಣ್ ಸಾಗರ್ ಕಾಯಂ ನಟರಾಗಿ ಕಾಣಿಸಿಕೊಂಡರು.

ಇದಲ್ಲದೆ ಸಂಜು ವೆಡ್ಸ್ ಗೀತಾ ಹಾಗೂ ಮೈನ ಸಿನಿಮಾದಲ್ಲಿನ ಖಳನಟನೆ ಅರುಣ್ ಸಾಗರ್ ಅವರನ್ನು ಮನ್ನಣೆಗೆ ತಂದವು. ಇದರ ನಡುವೆ ಬಚ್ಚನ್ ಸಿನಿಮಾ ಮುಗಿದ ನಂತರ ಕನ್ನಡದ ಬಿಗ್ ಬಾಸ್ ಸೀಸನ್ ಒಂದಕ್ಕೆ ಸ್ಪರ್ಧಿಯಾಗಿ ಪಾದರ್ಪಣೆ ಮಾಡಿದ ಅರುಣ್ ಸಾಗರ್ ತಮ್ಮೊಳಗೆ ಇರುವಂತಹ ಅಘಾದ ಪ್ರತಿಭೆಯನ್ನು ಅನಾವರಣಗೊಳಿಸುತ್ತಾ ಹಂತ ಹಂತದಲ್ಲೂ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದರು.

ನಟಿ ಸುಧಾರಣಿಯನ್ನು ಅಂದು ನಟ ರವಿಚಂದ್ರನ್ ಏಕಾಏಕಿ ಗದರಿದ್ದು ಏಕೆ? ಅಷ್ಟಕ್ಕೂ ಅಂದು ನಡೆದಿದ್ದು ಏನು ಗೊತ್ತಾ?

Kannada Actor Arun Sagar

ಹೀಗೆ ಅರುಣ್ ಸಾಗರ್ ಬಿಗ್ ಬಾಸ್ (Kannada Bigg Boss Show) ಮನೆಯಿಂದ ಹೊರ ಬಂದ ನಂತರ ಈಟಿವಿ, ಸುವರ್ಣ, ಕಸ್ತೂರಿ ಹೀಗೆ ಮುಂತಾದ ಕಾರ್ಯಕ್ರಮಗಳ ಹಾಸ್ಯ ಶೋಗಳಲ್ಲಿ ಕಾಣಿಸಿಕೊಂಡರು. ಬೀದಿಯಲ್ಲಿ ಬೆಳೆದು ಬಂದಂತಹ ಅರುಣ್ ಸಾಗರ್ ಅವರು ಅಪ್ರತಿಮ ಕಲಾವಿದನಾಗಿ ಮುನ್ನೆಲೆಗೆ ಬಂದರೂ.. ಹೇಳಿಕೊಳ್ಳುವಂತಹ ಅವಕಾಶ ಅವರನ್ನು ಹರಸಿ ಬರಲಿಲ್ಲ.

ರಂಗಾಯಣದಲ್ಲಿ ಕಲಿಕೆ ಮಾಡುವಾಗ ಅರುಣ್ ಸಾಗರ್ ಅವರಿಗೆ ಮೀರ ಎಂಬುವವರ ಪರಿಚಯವಾಗಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಈ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಈಗಾಗಲೇ ವೇದ ಚಿತ್ರದ ಮೂಲಕ ತಮ್ಮ ತಂದೆಗೆ ಸೆಡ್ಡು ಹೊಡೆಯುವಂತಹ ಅಭಿನಯ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.

ಕೊನೆಗೂ ತಮ್ಮ ಸಿನಿ ಬದುಕಿನ ಸಕ್ಸಸ್ ಸೀಕ್ರೆಟ್ ರಿವೀಲ್ ಮಾಡಿದ ರಶ್ಮಿಕಾ ಮಂದಣ್ಣ, ಡಿಸೆಂಬರ್ ತಿಂಗಳು ಲಕ್ಕಿ ಎಂದ ನ್ಯಾಷನಲ್ ಕ್ರಶ್

50ರ ಹೊಸ್ತಿಲಿನಲ್ಲಿರುವಂತಹ ಅರುಣ್ ಸಾಗರ್ ಅವರಿಗೆ ಈಗಲೂ ಬಣ್ಣದ ಲೋಕದ ಹಸಿವು ತೀರಿಲ್ಲ ಹೀಗಾಗಿ ಮುಂದೆ ಬರುವಂತಹ ಯುವ ಪ್ರತಿಭೆಗಳಿಗೆ ತಮ್ಮದೇ ತರಗತಿಯಲ್ಲಿ ಅಭಿನಯ ಹೇಳಿಕೊಡುತ್ತ ಸ್ಫೂರ್ತಿ ತುಂಬುತ್ತಾ ಬರುತ್ತಿದ್ದಾರೆ.

ಹೀಗೆ 26 ವರ್ಷಗಳಿಂದ ಸಿನಿಮಾ ರಂಗದಲ್ಲಿ ಇರುವಂತಹ ಅರುಣ್ ಸಾಗರ್ ಅವರಿಗೆ ಸಲ್ಲಬೇಕಾದಂತಹ ಗಮನ ಇನ್ನು ದಕ್ಕಿಲ್ಲ, ಅವರ ಪ್ರಯೋಜನಗಳನ್ನು ಪಡೆಯಲಾಗದೆ ಕುಳಿತಿರುವ ನಮ್ಮದು ಒಂದು ತರದ ನತದೃಷ್ಟ ಚಿತ್ರೋದ್ಯಮ.

ಹೌದು ಗೆಳೆಯರೇ ಅರುಣ್ ಸಾಗರ್ ಅವರಂತಹ ಕಲಾವಿದ ಬೇರೆ ಭಾಷೆಯ ಸಿನಿಮಾ ರಂಗದಲ್ಲಿ ಏನಾದರೂ ಇದಿದ್ದರೆ ಇದೀಗ ದೇಶ ವ್ಯಾಪಿ ಹೆಸರು ಮಾಡುತ್ತಿದ್ದರು. ಆದರೆ ನಮ್ಮ ಕನ್ನಡ ಸಿನಿಮಾರಂಗ ಇವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೆ ಇರುವುದು ಸ್ಯಾಂಡಲ್ವುಡ್ನ ದುರಾದೃಷ್ಟವೇ ಸರಿ. ಚಿತ್ರೋದ್ಯಮ ಈಗಲಾದರೂ ಈ ಮೇರು ಕಲಾವಿದನತ್ತ ಗಮನ ಹರಿಸಲಿ ಎಂದು ಆಶಿಸೋಣ.

Interesting Facts About Kannada Actor Arun Sagar

Leave A Reply

Your email address will not be published.