ನಟ ಅಭಿಜಿತ್ ಕುರಿತು ಪತ್ನಿ ಮಾಧ್ಯಮದ ಮುಂದೆ ಬಂದು ಬೇಸರ ವ್ಯಕ್ತಪಡಿಸಿದ್ದು ಯಾಕೆ? ಅಷ್ಟಕ್ಕೂ ಆಗಿದ್ದಾದರೂ ಏನು?

ಅದೊಂದು ಕಾಲದಲ್ಲಿ ವಿಷ್ಣುವರ್ಧನ್ ಅವರ ಎಲ್ಲಾ ಸಿನಿಮಾಗಳಲ್ಲಿಯೂ ಖಾಯಂ ನಟರಾಗಿ ಅಭಿನಯಿಸುತ್ತಿದ್ದಂತಹ ಅಭಿಜಿತ್ ಅವರನ್ನು ಇಂದು ಕನ್ನಡ ಸಿನಿಮಾ ರಂಗ ಕಡೆಗಣಿಸುತ್ತಾ ಬರುತ್ತಿದೆ

ಸ್ನೇಹಿತರೆ, ಕನ್ನಡದ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಪೋಷಕ ನಟನಾಗಿ/ ಸಹನಟನಾಗಿ ಅಭಿನಯಿಸುತ್ತಾ ತಮ್ಮ ಅಪ್ರತಿಮ ಅಭಿನಯದ ಚಾಪಿನಿಂದಾಗಿ ಕನ್ನಡ ಸಿನಿಮಾಗಳಲ್ಲಿ (Kannada Cinema) ಅವಕಾಶವನ್ನು ಗಿಟ್ಟಿಸಿಕೊಂಡು ಡಾ. ವಿಷ್ಣುವರ್ಧನ್ ರವರಂತಹ ಮಹಾನ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಾ ಬಾರಿ ಜನಪ್ರಿಯತೆ ಪಡೆದಿದ್ದಂತಹ ನಟ ಅಭಿಜಿತ್ (Actor Abhijit) ಅವರನ್ನು ಎಂದಾದರೂ ಕನ್ನಡ ಸಿನಿ ಪ್ರೇಕ್ಷಕರು ಮರೆಯಲು ಸಾಧ್ಯವೇ?

ಅದೊಂದು ಕಾಲದಲ್ಲಿ ವಿಷ್ಣುವರ್ಧನ್ (Actor Vishnuvardhan) ಅವರ ಎಲ್ಲಾ ಸಿನಿಮಾಗಳಲ್ಲಿಯೂ ಖಾಯಂ ನಟರಾಗಿ ಅಭಿನಯಿಸುತ್ತಿದ್ದಂತಹ ಅಭಿಜಿತ್ ಅವರನ್ನು ಇಂದು ಕನ್ನಡ ಸಿನಿಮಾ ರಂಗ ಕಡೆಗಣಿಸುತ್ತಾ ಬರುತ್ತಿರುವುದಕ್ಕೆ ಆತ ಇತ್ತೀಚಿನ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳದೆ ಇರುವುದೇ ಸಾಕ್ಷಿ. ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ ನಟ ಅಭಿಜಿತ್ ಅವರ ಪತ್ನಿ ರೋಹಿಣಿ ಬೇಸರ ವ್ಯಕ್ತಪಡಿಸಿದ್ದಾರೆ.

10ನೇ ವಯಸ್ಸಿಗೆ ಪುನೀತ್ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಬೆಟ್ಟದ ಹೂವು ಸಿನಿಮಾ ಆಗಿನ ಕಾಲಕ್ಕೆ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ನಟ ಅಭಿಜಿತ್ ಕುರಿತು ಪತ್ನಿ ಮಾಧ್ಯಮದ ಮುಂದೆ ಬಂದು ಬೇಸರ ವ್ಯಕ್ತಪಡಿಸಿದ್ದು ಯಾಕೆ? ಅಷ್ಟಕ್ಕೂ ಆಗಿದ್ದಾದರೂ ಏನು? - Kannada News

ಹೌದು ಸ್ನೇಹಿತರೆ 1990ರಲ್ಲಿ ನಟನ ವೃತ್ತಿಯನ್ನು ಪ್ರಾರಂಭ ಮಾಡಿದಂತಹ ಅಭಿಜಿತ್ ಅವರಿಗೆ ಆಗಿನ ಸಿನಿಮಾ ರಂಗ ಸಾಕಷ್ಟು ಅವಕಾಶಗಳನ್ನು ನೀಡಿ ಗುರುತಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ. ಅದರಂತೆ ಕಾಲೇಜ್ ಹೀರೋ, ಮಾಂಗಲ್ಯ, ಚೈತ್ರದ ಪ್ರೇಮಾಂಜಲಿ, ಸಿಂಧೂರ ತಿಲಕ, ಮನಮೆಚ್ಚಿದ ಸೊಸೆ, ಜೀವನ ಚೈತ್ರ, ಸರ್ವರ್ ಸೋಮಣ್ಣ, ಬೂತಯ್ಯನ ಮಕ್ಕಳು, ಮುದ್ದಿನ ಭಾವ, ತುಂಬಿದ ಮನೆ, ಯಜಮಾನ, ಬದುಕು ಜಟಕಾಬಂಡಿ, ಪಾಂಡವರು, ಸ್ನೇಹನಾ ಪ್ರೀತಿನಾ?, ಹೆತ್ತವರು.. ಮುಂತಾದ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತ ಬಾರಿ ಜನಪ್ರಿಯತೆ ಪಡೆದುಕೊಂಡಿದ್ದರು.

Kannada Actor Abhijit

ಆದರೆ ಇತ್ತೀಚಿನ ಬದಲಾಗುತ್ತಿರುವ ಸಿನಿಮಾ ರಂಗದಲ್ಲಿ (Kannada Film Industry) ಅಭಿಜಿತ್ ಅವರಿಗೆ ಹೇಳಿಕೊಳ್ಳುವಂತಹ ಪಾತ್ರಗಳು ಅರಸಿ ಬರುತ್ತಿಲ್ಲ, ಕೇಳಿಕೊಂಡರು ಯಾವ ನಿರ್ದೇಶಕ ನಿರ್ಮಾಪಕರು ಈಗಿನ ಸಿನಿಮಾಗಳಲ್ಲಿ ಅವಕಾಶ ಕೊಡುತ್ತಿಲ್ಲ

ಈ ಕುರಿತು ಅಭಿಜಿತ್ ಅವರ ಪತ್ನಿ ರೋಹಿಣಿ ಅವರು ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ “ಅಭಿಜಿತ್ ಅವರು ಒಳ್ಳೆಯ ನಟ, ಆದರೆ ದೇವರು ಅವರಿಗೆ ಒಳ್ಳೆಯ ಸ್ಥಾನವನ್ನು ನೀಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಅತಿಯಾಗಿ ಪ್ರೀತಿಸುತ್ತಿದ್ದ ಸುನಿಲ್ ಅವರನ್ನು ಮರೆಯೋಕೆ ಮಾಲಾಶ್ರೀಗೆ ಎಷ್ಟು ದಿವಸ ಬೇಕಾಯ್ತು ಗೊತ್ತಾ? ಪಾಪ ಆ ನೋವು ಇನ್ನೂ ಕಾಡುತ್ತಿದೆಯಂತೆ

ಆ ಸಂದರ್ಭದಲ್ಲಿ ಮಾತನಾಡಿದಂತಹ ರಕ್ಷಿತಾ ಪ್ರೇಮ್ ಅವರು ನೀವು ನಿಜವಾಗಿಯೂ ನಿಮ್ಮೆಲ್ಲರಿಗೂ ಸ್ಪೂರ್ತಿ, ಕುಗ್ಗಬೇಡಿ ಎಂದು ಸಾಂತ್ವನ ನೀಡಿದರೆ, ಶಿವರಾಜ್ ಕುಮಾರ್ ‘ಅಭಿಜಿತ್ ನಾನು ನೋಡಿದ ಒಳ್ಳೆಯ ಫೈಟರ್, ಅವರು ಜೀವನವಿಡಿ ಫೈಟ್ ಮಾಡುತ್ತಾ ಬಂದಿದ್ದಾರೆ.

ಅವರು ನನ್ನ ಸಹೋದರನಂತೆ ಮುಂದಿನ ಸಿನಿಮಾದಲ್ಲಿ ಅವರಿಗೊಂದು ಪಾತ್ರ ಇದ್ದೇ ಇರುತ್ತದೆ’ ಎಂಬ ಭರವಸೆ ನೀಡಿ ಸಿನಿಮಾ ರಂಗ ಮೂಲೆಗುಂಪು ಮಾಡುತ್ತಿದ್ದಂತಹ ಕಲಾವಿದನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಇನ್ನು ಕಾರ್ಯಕ್ರಮದ ಮತ್ತೊರ್ವ ತೀರ್ಪುಗಾರರಾಗಿದ್ದ ಅರ್ಜುನ್ ಜನ್ಯ ಕೂಡ ಕಲಾವಿದರಿಗೆ ಸಾವಿಲ್ಲ ಸರ್ ಎಂಬ ಭರವಸೆ ತುಂಬಿದ ಮಾತುಗಳನ್ನು ಆಡುವ ಮೂಲಕ ಮುಂದಿನ ದಿನಗಳಲ್ಲಿ ನಿಮ್ಮನ್ನು ಕೆಲ ಪಾತ್ರಗಳು ಹರಸಿ ಬರುತ್ತದೆ ಎಂದರು.

Interesting Facts About Kannada Actor Abhijit

Comments are closed.