ಕನ್ನಡ ಹುಡುಗಿ ಸೋನು ಗೌಡ ಮಾಡಬೇಕಿದ್ದ ಮುಂಗಾರು ಮಳೆ ಸಿನಿಮಾ ಪಂಜಾಬಿ ಬೆಡಗಿ ಪೂಜಾ ಗಾಂಧಿ ಪಾಲಾಗಿದ್ದು ಹೇಗೆ?

ಮುಂಗಾರು ಮಳೆ ಸಿನಿಮಾ ಬರೋಬ್ಬರಿ 500 ದಿನಗಳ ಕಾಲ ಕರ್ನಾಟಕ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿಯೂ ರಾರಾಜಿಸಿ 125 ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಗಳಿಸಿತು.

ಮುಂಗಾರು ಮಳೆ (Mungaru Male Kannada Cinema) ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಮ್ಯೂಸಿಕಲ್ ಹಿಟ್ ಚಿತ್ರಗಳ (Musical Hit Cinema) ಸಾಲಿನಲ್ಲಿ ಸೇರಿ ಅದೊಂದು ಕಾಲದಲ್ಲಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದಂತಹ ಪೂಜಾಗಾಂಧಿ (Actress Pooja Gandhi) ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕಾಂಬಿನೇಷನ್ನ ಈ ಚಿತ್ರವು ರಫ್ ಎಂದು ಕಣ್ಣ ಮುಂದೆ ಬಂದುಬಿಡುತ್ತದೆ.

ಹೀಗೆ 2006ರಲ್ಲಿ ತೆರಿಗೆ ಬಂದ ಈ ಸಿನಿಮಾ ಬರೋಬ್ಬರಿ 500 ದಿನಗಳ ಕಾಲ ಕರ್ನಾಟಕ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿಯೂ ರಾರಾಜಿಸಿ 125 ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಗಳಿಸಿತು.

ಇಂದಿಗೂ ಕೂಡ ಈ ಚಿತ್ರಕ್ಕೆ ಕಟ್ಟ ಅಭಿಮಾನಿಗಳಿದ್ದಾರೆ ಎಂದರೆ ಅದಕ್ಕೆ ಸಿನಿಮಾದ ಅದ್ಭುತ ಔಟ್ ಕಮ್ ಕಾರಣ. ಪ್ರೀತಂ ಗುಬ್ಬಿ ಅವರ ಚಿತ್ರಕಥೆ, ಯೋಗರಾಜ್ ಭಟ್ರ ಸಂಭಾಷಣೆ, ಮನೋಮೂರ್ತಿಯವರ ಸಂಗೀತ, ಕೃಷ್ಣ ಅವರ ಅದ್ಭುತ ಕ್ಯಾಮೆರಾದ ಕೈಚಳಕ, ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ, ಅನಂತನಾಗ್, ಜೈ ಜಗದೀಶ್, ಪದ್ಮಜಾ ರಾವ್, ಸುಧಾ ಬೆಳವಾಡಿ ಸೇರಿದಂತೆ ಮುಂತಾದ ಅದ್ಭುತ ಕಲಾವಿದರೊಂದಿಗೆ ಬಿಳಿ ದೇವದಾಸನ ಮುಗ್ಧ ಅಭಿನಯ ಆಗಿನ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು.

ಕನ್ನಡ ಹುಡುಗಿ ಸೋನು ಗೌಡ ಮಾಡಬೇಕಿದ್ದ ಮುಂಗಾರು ಮಳೆ ಸಿನಿಮಾ ಪಂಜಾಬಿ ಬೆಡಗಿ ಪೂಜಾ ಗಾಂಧಿ ಪಾಲಾಗಿದ್ದು ಹೇಗೆ? - Kannada News

ಅದೊಂದು ಕಾಲದಲ್ಲಿ ಟಾಪ್ ನಟನಾಗಿದ್ದ ಅಬ್ಬಾಸ್ ಈಗ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸ್ಥಿತಿಗೆ ಬಂದಿದ್ದಾದರೂ ಹೇಗೆ?

ಎಲ್ಲ ಕ್ಷೇತ್ರದಿಂದಲೂ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳಿಗೆ ಒಳಗಾದ ಈ ಸಿನಿಮಾದಲ್ಲಿ ನಟಿ ಪೂಜಾ ಗಾಂಧಿ ಅಭಿನಯಿಸಿ ಬಹುದೊಡ್ಡ ಮಟ್ಟದ ಯಶಸ್ಸನ್ನು ಕಂಡುಕೊಳ್ಳುತ್ತಾರೆ. ಆದರೆ ಮೂಲವೊಂದರ ಮಾಹಿತಿಯ ಪ್ರಕಾರ ಈ ಸಿನಿಮಾಗೆ ಮೊದಲು ಇಂತಿ ನಿನ್ನ ಪ್ರೀತಿಯ ಖ್ಯಾತಿಯ ನಟಿ ಸೋನು ಗೌಡ ಆಯ್ಕೆ ಆಗಿದ್ದರಂತೆ..

How Pooja Gandhi Selected For Mungaru Male Kannada Cinema

ಹೌದು ಗೆಳೆಯರೇ ಕಾಲೇಜು ದಿನಗಳಿಂದಲೂ ನಟನೆಯತ್ತ ಗಮನ ಹರಿಸಿದ ಸೋನು ಗೌಡ ಅವರಿಗೆ ಪಿಯುಸಿ ಓದುತ್ತಿರುವ ಸಾಕಷ್ಟು ಧಾರಾವಾಹಿಗಳ ಅವಕಾಶ ದೊರಕುತ್ತದೆ.

ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡಂತಹ ಈ ನಟಿ ಪರಮೇಶಿ ಪಾನ್ವಾಲ, ಗುಲಾಮ, ಇಂತಿ ನಿನ್ನ ಪ್ರೀತಿಯ ಹೀಗೆ ಮುಂತಾದ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದರು. ಆದರೆ ಸೋನು ಗೌಡ ಬೆಳ್ಳಿತೆರೆಗೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ಪುನೀತ್ ರಾಜಕುಮಾರ್ ಅವರ ಮಿಲನ ಹಾಗೂ ಗಣೇಶ್ ಅವರ ಮುಂಗಾರು ಮಳೆ ಎರಡು ಸಿನಿಮಾಗಳ ಅವಕಾಶ ದೊರಕಿತ್ತಂತೆ.

ಕರುನಾಡ ಚಕ್ರವರ್ತಿ ಶಿವಣ್ಣ ಜೈಲರ್ ಸಿನಿಮಾದಲ್ಲಿ ನಟಿಸಲು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಆದರೆ ಮನೆಯಲ್ಲಿ ಎಷ್ಟೇ ಹಠ ಮಾಡಿ ಕೇಳಿಕೊಂಡರು ಅವರ ತಂದೆ ಸಿನಿಮಾ ಕ್ಷೇತ್ರಕ್ಕೆ ಹೋಗುವುದು ಬೇಡ ಎಂದು ಖಡಾ ಖಂಡಿತವಾಗಿ ಹೇಳಿದಾಗ ಸ್ವತಃ ಸೋನು ಗೌಡ ಅವರೇ ಸಿನಿಮಾವನ್ನು ರಿಜೆಕ್ಟ್ ಮಾಡಿದರು.

ಈ ಅವಕಾಶ ಪೂಜಾ ಗಾಂಧಿಯವರಿಗೆ ದೊರಕಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಇಂದು ಕನ್ನಡದ ಪ್ರಸಿದ್ಧಿ ನಟಿಯಾಗಿ ಬೆಳೆದಿದ್ದಾರೆ.

ಸದಾ ದೇಸಿ ಕಲೆ ಹಾಗೂ ನಮ್ಮ ಕನ್ನಡದವರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಯೋಗರಾಜ್ ಭಟ್ರು, ಪೂಜಾ ಗಾಂಧಿ ಅವರಿಗೂ ಮುನ್ನ ಸಾಕಷ್ಟು ನಟಿಯರ ಆಡಿಶನ್ ನಡೆಸಿದ್ದರು. ಆದರೆ ಹೊಸ ಮುಖದ ಹುಡುಕಾಟದಲ್ಲಿದ್ದ ಅವರಿಗೆ ಪೂಜಾ ಗಾಂಧಿಯವರ ಪರಿಚಯವಾಗಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದರು.

Leave A Reply

Your email address will not be published.