ನಟ ಉಪೇಂದ್ರ ಮೇಲೆ ದಾಖಲಾಯಿತು ಎಫ್ಐಆರ್! ಎಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ

ಸಮಾಜ ಸೇವೆ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂಧನ್ ಅವರು ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಉಪೇಂದ್ರ ಅವರ ವಿರುದ್ಧ ದೂರನ್ನು ದಾಖಲಿಸಿ ಎಫ್ಐಆರ್ ದಾಖಲಾಗಿದೆ.

ಸ್ನೇಹಿತರೆ ಸದಾ ವಿಭಿನ್ನತೆಗಳ ಮೂಲಕವೇ ಸದ್ದು ಮಾಡುವಂತಹ ಉಪೇಂದ್ರ (Kannada Actor Upendra) ನಮ್ಮ ಪ್ರತಿ ಸಿನಿಮಾದಲ್ಲಿಯೂ ಹೊಸತನದ ಅಳವಡಿಕೆಯನ್ನು ಎದುರು ನೋಡುತ್ತಿರುತ್ತಾರೆ. ಹೀಗಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ ಅವರನ್ನು ಬುದ್ಧಿವಂತರೆನ್ನಲಾಗುತ್ತದೆ, ಈ ಬುದ್ಧಿವಂತನ ಮೇಲೆ ಎಫ್ಐಆರ್ (FIR) ಒಂದು ದಾಖಲಾಗಿದೆ.

ಆ ಒಂದು ಸಮುದಾಯವನ್ನು ಉಪೇಂದ್ರ ನಿಂದಿಸಿದ್ದಕ್ಕಾಗಿ ಸ್ವತಹ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕರೊಬ್ಬರು ಉಪೇಂದ್ರರವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಿದ್ದಾರೆ.

ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದ (Social Media) ಲೈವ್ಗೆ ಬಂದು ಅಭಿಮಾನಿಗಳೊಡನೆ ಮಾತನಾಡಿದ್ದಂತಹ ಉಪೇಂದ್ರ ಅವರು ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಕುರಿತು ತಮ್ಮ ಪ್ರಜಾಕೀಯ ಪಕ್ಷ ತೋರಿದಂತಹ ಯಶಸ್ವಿ ಜನಮನ್ನಣೆಯ ಕುರಿತು ಹಾಡಿ ಹೊಗಳಿದರು.

ನಟ ಉಪೇಂದ್ರ ಮೇಲೆ ದಾಖಲಾಯಿತು ಎಫ್ಐಆರ್! ಎಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ - Kannada News

ಹುಚ್ಚ ಸಿನಿಮಾ ನೋಡಿ ಕಿಚ್ಚ ಸುದೀಪ್ ಅವರಿಗೆ ವಿಷ್ಣು ದಾದಾ ಹೊಡೆದಿದ್ದು ಯಾಕೆ ಗೊತ್ತೆ?

ಯಾವುದೇ ಪ್ರಚಾರವಿಲ್ಲದೆ ನಮ್ಮ ಪಕ್ಷ ರಾಜ್ಯದ ಇತರೆ ಪಕ್ಷಗಳಿಗಿಂತ ಹೆಚ್ಚಿನ ಮತವನ್ನು ಗಳಿಸಿದೆ ಎನ್ನುತ್ತಾ ತಮ್ಮ ಮಾತನ್ನು ಮುಂದುವರಿಸಿದರು.

ಹೀಗೆ ತಮ್ಮ ಪ್ರಜಾಕೀಯ ಪಕ್ಷದ ಸದಸ್ಯರನ್ನು ಹೊಗಳುತ್ತಾ ವಿರೋಧ ಪಕ್ಷದ ಕುರಿತು ಮಾತನಾಡಲು ಪ್ರಾರಂಭ ಮಾಡಿದ ಉಪೇಂದ್ರ ಅವರು ‘ಊರೆಂದರೆ ಹೊಲಗೇರಿ ಇದ್ದೇ ಇರುತ್ತದೆ’ ಎಂದು ಹೊಲಗೇರಿ ಅವರ ಕುರಿತು ತುಚ್ಛವಾಗಿ ಮಾತನಾಡುವ ಮೂಲಕ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು ಗೆಳೆಯರೇ ಹೊಲಗೇರಿ ಅಂದ್ರೆ ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದಂತಹ ಜನರು ಬರುತ್ತಾರೆ.

ಹೀಗಾಗಿ ಇದರ ಕುರಿತು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿರುವ ಸಮಾಜ ಸೇವೆ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂಧನ್ ಅವರು ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಉಪೇಂದ್ರ ಅವರ ವಿರುದ್ಧ ದೂರನ್ನು ದಾಖಲಿಸಿ ಎಫ್ಐಆರ್ ದಾಖಲಾಗಿದೆ.

Kannada Actor Upendra

ಹೌದು ಗೆಳೆಯರೇ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಉಪೇಂದ್ರ ಅವರ ಮೇಲೆ ಈ ಒಂದು ಎಫ್ ಐ ಆರ್ (Case Registered) ದಾಖಲಾಗಿದ್ದು, ಎಸಿಪಿ ಮಟ್ಟದ ಅಧಿಕಾರಿಗಳಿಂದ ಈ ಒಂದು ಪ್ರಕರಣದ ತನಿಖೆ ನಡೆಯುತ್ತಿದೆ.

ಹೀಗೆ ಇರಲಾರದೆ ಇರುವೆ ಬಿಟ್ಟುಕೊಂಡ ಹಾಗೆ ತಮ್ಮ ಪಕ್ಷವನ್ನು ಹೊಗಳುತ್ತಾ ಇದ್ದಂತಹ ಉಪೇಂದ್ರ ಅವರು ಲೈವ್ನಲ್ಲಿ ಊರೆಂದರೆ ಹೊಲಗೇರಿಯವರು ಇದ್ದೇ ಇರುತ್ತಾರೆ ಎಂಬ ಗಾದೆ ಮಾತನ್ನು ಬಳಸಿ ಇದೀಗ ಜನಾಂಗದವರ ದೌರ್ಜನ್ಯ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸಿನಿಮಾ ಕ್ಷೇತ್ರದಿಂದ ದೂರವಿರಲು ಕಾರಣವೇನು ಗೊತ್ತೆ?

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಉಪೇಂದ್ರ ಅವರ ಈ ನಡೆಗೆ ವಿರೋಧ ಪಕ್ಷಗಳೊಂದಿಗೆ ಹೊಲಗೇರಿ ಜನಾಂಗದವರು ಕೂಡ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು, ಇದರ ಜೊತೆಗೆ ಉಪೇಂದ್ರ ಅವರ ವಿರುದ್ಧ ಕಾನೂನು ಹೋರಾಟಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯೂ ಮುಂದಾಗುತ್ತಿದೆ.

ಸದ್ಯ ಈ ಎಲ್ಲಾ ಬೆಳವಣಿಗೆಗಳು ಉಪೇಂದ್ರ ಅವರ ವಲಯದಲ್ಲಿ ಹಾಗೂ ಅಭಿಮಾನಿ ಬಳಗದಲ್ಲಿ ಹೆಚ್ಚು ಸುದ್ದಿಗೊಳಗಾಗುತ್ತಿದ್ದು, ಉಪ್ಪಿ ಕೇವಲ ಗಾದೆ ಮಾತನ್ನು ಉಪಯೋಗಿಸಿದ್ದಾರೆ ಅಷ್ಟೇ ಎಂದು ಅಭಿಮಾನಿಗಳು ಉಪೇಂದ್ರ ಅವರ ಈ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಸದ್ಯ ತೀವ್ರಕ್ಕೆರಿರುವಂತಹ ಈ ಒಂದು ಪ್ರಕರಣದಿಂದ ಉಪೇಂದ್ರ ಹೇಗೆ ಹೊರಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

FIR Registered Against Kannada Actor and Politician Real Star Upendra

Leave A Reply

Your email address will not be published.