ನಾಗರ ಹಾವು ಸಿನಿಮಾಗೆ ಪುಟ್ಟಣ್ಣ ಆಯ್ಕೆ ಮಾಡಿದ್ದು ವಿಷ್ಣುವರ್ಧನ್ ಅವರನ್ನಲ್ಲ, ಹಾಗಾದ್ರೆ ಮೊದಲಿಗೆ ಆಯ್ಕೆಯಾಗಿದ್ದ ಆ ನಟ ಯಾರು? ಅವಕಾಶ ವಿಷ್ಣುದಾದಾನ ಕೈ ಸೇರಿದ್ದು ಹೇಗೆ ಗೊತ್ತಾ?

ಕನ್ನಡ ಸಿನಿಮಾ ರಂಗದ ಮಾಂತ್ರಿಕ ನಿರ್ದೇಶಕನೆಂದೆ ಕರಿಯಲ್ಪಡುವ ಪುಟ್ಟಣ್ಣ ಕಣಗಾಲ್ ಅವರ ಪ್ರಿಯಾ ಶಿಷ್ಯರಾದಂತಹ ವಿಷ್ಣುವರ್ಧನ್ ಈ ಸಿನಿಮಾಗೆ ಆಯ್ಕೆಯಾಗುವ ಮೊದಲು ಬೇರೋಬ್ಬ ನಟ ಸಿನಿಮಾದಲ್ಲಿ ಅಭಿನಯಿಸಲು ನಿರ್ಧಾರವಾಗಿದ್ದಂತೆ.‌ ಅಷ್ಟಕ್ಕೂ ಆ ನಟ ಯಾರು? ಸಿನಿಮಾದಿಂದ ಹೊರಗೆ ಉಳಿಯಲು ಕಾರಣವಾದರೂ ಏನು?

ಸ್ನೇಹಿತರೆ 80-90 ರ ದಶಕದಲ್ಲಿ ಕನ್ನಡ ಸಿನಿಮಾರಂಗ (Kannada Cinema Industry) ಕ್ಕೆ ಸಾಕಷ್ಟು ಸ್ಟಾರ್ ನಟರಿಂದ ಸೂಪರ್ ಡೂಪರ್ ಹಿಟ್ ಚಿತ್ರಗಳ ಕೊಡುಗೆಯಾದವು. ಅದರಲ್ಲೂ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅವರಂತಹ ನಟರು ಕನ್ನಡ ಸಿನಿಮಾರಂಗದ ಯಶಸ್ಸನ್ನು ಉತ್ತುಂಗದ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮೈಲುಗಲ್ಲನ್ನು ಹಾಕಿದಂತಹ ನಟರೆಂದರೆ ತಪ್ಪಾಗಲಾರದು.

ಅಣ್ಣಾವ್ರು ತಮ್ಮದೇ ಆದ ವಿಶಿಷ್ಟ ಪ್ರೇಕ್ಷಕ ಪ್ರಭುಗಳನ್ನು ರಂಜಿಸಿ ಆರಾಧ್ಯ ದೈವರಾದರೆ, ವಿಷ್ಣುವರ್ಧನ್ (Dr.Vishnu Vardhan)  ಹ್ಯಾಂಗ್ರಿ ಯಂಗ್ ಮ್ಯಾನ್ ಪಾತ್ರಗಳ ಮೂಲಕ ಮಿಂಚಿದಂತಹ ನಟ ಚಾಮಯ್ಯ ಮೇಷ್ಟ್ರ ಪ್ರಿಯ ಶಿಷ್ಯನಾಗಿ ನಾಗರಹಾವು ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಪ್ರವೇಶ ಮಾಡಿದ ವಿಷ್ಣುವರ್ಧನ್ ಬಹುದೊಡ್ಡ ಮಟ್ಟದ ಯಶಸ್ಸನ್ನು ಕಂಡುಕೊಂಡರು ಎಂದರೆ ತಪ್ಪಾಗಲ್ಲ.

ಕನ್ನಡ ಸಿನಿಮಾ ರಂಗದ ಮಾಂತ್ರಿಕ ನಿರ್ದೇಶಕನೆಂದೆ ಕರಿಯಲ್ಪಡುವ ಪುಟ್ಟಣ್ಣ ಕಣಗಾಲ್ (Puttanna Kanagal)  ಅವರ ಪ್ರಿಯಾ ಶಿಷ್ಯರಾದಂತಹ ವಿಷ್ಣುವರ್ಧನ್ ಈ ಸಿನಿಮಾಗೆ ಆಯ್ಕೆಯಾಗುವ ಮೊದಲು ಬೇರೋಬ್ಬ ನಟ ಸಿನಿಮಾದಲ್ಲಿ ಅಭಿನಯಿಸಲು ನಿರ್ಧಾರವಾಗಿದ್ದಂತೆ.‌ ಅಷ್ಟಕ್ಕೂ ಆ ನಟ ಯಾರು? ಸಿನಿಮಾದಿಂದ ಹೊರಗೆ ಉಳಿಯಲು ಕಾರಣವಾದರೂ ಏನು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಾಗರ ಹಾವು ಸಿನಿಮಾಗೆ ಪುಟ್ಟಣ್ಣ ಆಯ್ಕೆ ಮಾಡಿದ್ದು ವಿಷ್ಣುವರ್ಧನ್ ಅವರನ್ನಲ್ಲ, ಹಾಗಾದ್ರೆ ಮೊದಲಿಗೆ ಆಯ್ಕೆಯಾಗಿದ್ದ ಆ ನಟ ಯಾರು? ಅವಕಾಶ ವಿಷ್ಣುದಾದಾನ ಕೈ ಸೇರಿದ್ದು ಹೇಗೆ ಗೊತ್ತಾ? - Kannada News

ಹೌದು ಗೆಳೆಯರೇ ತರಾಸುರವರು ಡಾಕ್ಟರ್ ರಾಜಕುಮಾರ್ (Dr.Rajkumar) ಅವರನ್ನು ತಮ್ಮ ತಲೆಯಲ್ಲಿ ಇಟ್ಟುಕೊಂಡು ಅವರಿಗಾಗಿಯೇ ಈ ಪಾತ್ರ ರೆಡಿ ಮಾಡಿರುತ್ತಾರೆ. ಆದರೆ ಯಾವಾಗ ಸಿನಿಮಾದ ನಿರ್ದೇಶನದ ಜವಾಬ್ದಾರಿ ಪುಟ್ಟಣ್ಣ ಕಣಗಾಲ್ ಅವರ ಕೈಗೆ ಹೋಯಿತೋ ಆಗ ರಾಜಕುಮಾರ್ ಸಿನಿಮಾ ನಟ ಎಂದಾಗ ಪುಟ್ಟಣ್ಣ ತಾನು ನಿರ್ದೇಶನ ಮಾಡುವುದಿಲ್ಲ ಎಂದು ಬಿಡುತ್ತಾರೆ.

ಹೌದು ಗೆಳೆಯರೆ ಆಗಿನ ಸಿನಿಮಾ ಇಂಡಸ್ಟ್ರಿಯಲ್ಲಿ ಡಾಕ್ಟರ್ ರಾಜಕುಮಾರ್ ಹಾಗೂ ಪುಟ್ಟಣ್ಣ ಕಣಗಾಲ್ ನಡುವೆ ವೈ ಮನಸ್ಸು ಮೂಡಿತ್ತು, ಡಾಕ್ಟರ್ ರಾಜಕುಮಾರ್ ಇಲ್ಲ ಎಂದರೆ ಪುಟ್ಟಣ್ಣ ಏನು ಅಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಕಾರಣದಿಂದ ಪುಟ್ಟಣ್ಣ ಕಣಗಾಲ್ ಇನ್ನೆಂದು ರಾಜಕುಮಾರ್ ಜೊತೆ ಕೆಲಸ ಮಾಡೋದಿಲ್ಲ ಎಂದು ಬಿಟ್ಟಿದ್ದರು. ಹೀಗೆ ತರಾಸುವವರು ರಾಜಕುಮಾರ್ ಅವರ ಬಳಿ ಈ ಚಿತ್ರವನ್ನು ಪುಟ್ಟಣ್ಣ ನಿರ್ದೇಶನ ಮಾಡಲಿದ್ದಾರೆ

ನೀವು ಅಭಿನಯಿಸುವಿರಾ ಎಂದು ಕೇಳಿದಾಗ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡು ಬಿಜಿಯಾಗಿ ಇದ್ದಂತಹ ಅಣ್ಣಾವ್ರು ಚಿತ್ರದ ಕಥೆ ಕೇಳಿ, ಈ ಪಾತ್ರ ವಿಷ್ಣುವರ್ಧನ್ ಅವರಿಗೆ ಬಹಳ ಸೂಕ್ತವಾಗುತ್ತದೆ. ಹೀಗಾಗಿ ಅವರನ್ನು ಆಯ್ಕೆ ಮಾಡಿಕೊಂಡರೆ ಚೆನ್ನಾಗಿರುತ್ತೆ ಎಂಬುದು ನನ್ನ ಅಭಿಪ್ರಾಯ ಎಂದು ಬಿಟ್ಟರು ಹೀಗಾಗಿ ಸಿನಿಮಾದ ಅವಕಾಶ ವಿಷ್ಣುವರ್ಧನ್ ಅವರ ಕೈ ಸೇರುತ್ತದೆ.

Leave A Reply

Your email address will not be published.