ಆಗಿನ ಸ್ಟಾರ್ ನಟಿ ಎನಿಸಿಕೊಂಡಿದ್ದ ರಂಭಾ ಅವರ ಈಗಿನ ರಿಯಲ್ ಲೈಫ್ ಹೇಗಿದೆ ಗೊತ್ತಾ? ಪಾಪ ಒಂದು ಕಾಲದಲ್ಲಿ ಸ್ಟಾರ್ ನಟಿ

ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ನಟಿ ರಂಭಾ ಅವರು ಕೆನಡಾ ಮೂಲದ ತಮಿಳು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಟಿ ರಂಭಾ ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ? ತಮ್ಮ ಅಮೋಘ ಅಭಿನಯ ಬಳಕುವ ಮೈ ಮಾಟ ಮಾದಕ ಸೌಂದರ್ಯದಿಂದಲೇ ಅದೆಷ್ಟೋ ಸಿನಿ ಪ್ರೇಕ್ಷಕರ ಡ್ರೀಮ್ ಗರ್ಲ್ ಆಗಿದ್ದಂತಹ ರಂಭಾ (Actress Rambha) ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ಉದ್ಯಮಿಯೊಬ್ಬರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಚಿತ್ರರಂಗಕ್ಕೆ ಸಂಪೂರ್ಣ ಗುಡ್ ಬೈ ಹೇಳಿದರು.

ಹಾಗಾದ್ರೆ ಮಕ್ಕಳ ಪಾಲನೆ ಪೋಷಣೆಯಲ್ಲಿ ಬಿಜಿಯಾಗಿರುವಂತಹ ರಂಭ ಅವರು ಈಗ ಹೇಗಾಗಿದ್ದಾರೆ? ಅವರ ವೈಯಕ್ತಿಕ ಬದುಕು ಹೇಗಿದೆ? ಎಂಬ ಎಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಅತಿ ಸಣ್ಣ ವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಂತಹ ರಂಭಾ ಅವರು ತೆಲುಗು ತಮಿಳು ಹಿಂದಿ ಮಲಯಾಳಂ ಬಂಗಾಳಿ ಭೋಜಪುರಿ ಹಾಗೂ ಇಂಗ್ಲಿಷ್ ಸೇರಿದಂತೆ ಎಂಟು ಭಾಷೆಗಳಲ್ಲಿ ನೂರಕ್ಕೂ ಅಧಿಕ ಪಾತ್ರಗಳಿಗೆ ಬಣ್ಣ ಹಚ್ಚುತ್ತ 90ರ ದಶಕದಲ್ಲಿ ಉತ್ತುಂಗದ ಶಿಖರದಲ್ಲಿದ್ದಂತಹ ನಟಿ.

ಆಗಿನ ಸ್ಟಾರ್ ನಟಿ ಎನಿಸಿಕೊಂಡಿದ್ದ ರಂಭಾ ಅವರ ಈಗಿನ ರಿಯಲ್ ಲೈಫ್ ಹೇಗಿದೆ ಗೊತ್ತಾ? ಪಾಪ ಒಂದು ಕಾಲದಲ್ಲಿ ಸ್ಟಾರ್ ನಟಿ - Kannada News

ಚಿನಕುರುಳಿ ಬೇಬಿ ಶ್ಯಾಮಿಲಿ ಒಂದು ಸಿನಿಮಾಗೆ ಪಡೆಯುತ್ತಿದ್ದ ಪೇಮೆಂಟ್ ಎಷ್ಟು ಗೊತ್ತಾ? ನಾಲ್ಕು ವರ್ಷಕ್ಕೆ ಇನ್ಕಮ್ ಟ್ಯಾಕ್ಸ್ ಕಟ್ಟಿದ ಬಾಲ ನಟಿ ಈಕೆ

1991ರಲ್ಲಿ ಮಲಯಾಳಂನ ಸರ್ಗಂ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ಈ ನಟಿ ರಂಭಾ ಕಾಲಕ್ರಮೇಣ ತಮ್ಮ ಅಭೂತಪೂರ್ವ ನಟನೆಯಿಂದಾಗಿ ಅತಿ ಹೆಚ್ಚಿನ ಸಿನಿಮಾಗಳ ಅವಕಾಶವನ್ನು ಪಡೆದುಕೊಂಡು ತಮ್ಮ 15 ವರ್ಷದಲ್ಲಿಯೇ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

Actress Rambha Family

ಇನ್ನು 1999ರಲ್ಲಿ ಸರ್ವರ್ ಸೋಮಣ್ಣ ಎಂಬ ಸಿನಿಮಾದ ಮೂಲಕ ಕನ್ನಡಿಗರನ್ನು (Kannada Cinema) ರಂಜಿಸಲು ಚಂದನವನಕ್ಕೆ ಪಾದರ್ಪಣೆ ಮಾಡಿದ ಈ ನಟಿ ಭಾವಭಾಮೈದ, ಸಾಹುಕಾರ, ಪಾಂಡುರಂಗ ವಿಠಲ, ಗಂಡುಗಲಿ ಕುಮಾರರಾಮ, ಅನಾಥರು, ಪಾಂಚಾಲಿ ಹಾಗೂ ಓ ಪ್ರೇಮವೇ ಸಿನಿಮಾದ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರ ಮನದರಸಿಯಾಗಿ ಹೋದರು.

ಹೀಗೆ ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ನಟಿ ರಂಭಾ ಅವರು ಕೆನಡಾ ಮೂಲದ ತಮಿಳು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೌದು ಗೆಳೆಯರೇ ಮನೆಯವರು ನಿಶ್ಚಯ ಮಾಡಿದಂತೆ ಇಂದ್ರ ಕುಮಾರ್ ಪದ್ಮನಾಭಂ ಎಂಬುವರೊಂದಿಗೆ ಸಪ್ತಪದಿ ತುಳಿದು ಟೊರಾಂಟೋ ದಲ್ಲಿ ನೆಲೆಸಿದ್ದಾರೆ.

ಅಂದಿನ ಡ್ರೀಮ್ ಗರ್ಲ್ ಆಗಿದ್ದ ನಟಿ ಮಹಾಲಕ್ಷ್ಮಿ ಕಿರುತೆರೆ ಸೀರಿಯಲ್ ಮೂಲಕ ಗ್ರಾಂಡ್ ಎಂಟ್ರಿ ಕೊಡಲು ಸಜ್ಜು

ಸದ್ಯ ಈ ದಂಪತಿಗಳಿಗೆ ಮೂವರು ಮಕ್ಕಳಿದ್ದು, ಮಕ್ಕಳ ಲಾಲನೆ ಪಾಲನೆ ಹಾಗೂ ವಿದ್ಯಾಭ್ಯಾಸದತ್ತ ನಟಿ ರಂಭಾ ಗಮನ ಹರಿಸುತ್ತ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿದಿದ್ದಾರೆ‌. ಆಗಾಗ ಕೆಲ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವಂತಹ ರಂಭಾ ಅವರು ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಪೋಷಕ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತೇನೆ ಎಂಬ ಮಾತುಗಳನ್ನಾಡುವ ಮೂಲಕ ಅಭಿಮಾನಿಗಳ ಸಂತೋಷಕ್ಕೆ ಕಾರಣರಾದರು.

ಹೀಗೆ ವೃತ್ತಿ ಬದುಕಿನಲ್ಲಿ ಮಹತ್ತರವಾದ ಯಶಸ್ಸನ್ನು ಕಂಡಂತಹ ರಂಭ ಅವರು ಇತರೆ ನಟಿಯರಂತೆ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳದೆ ವೈಯಕ್ತಿಕ ಬದುಕಿನಲ್ಲಿ ಸಂತೋಷವನ್ನು ಕಾಣುತ್ತಿದ್ದಾರೆ.

Do you know how Actress Rambha real life is now

Comments are closed.