ಈ ಒಂದು ವಿವಾದದಿಂದಾಗಿ ಸಿನಿಮಾವನ್ನೇ ತೊರೆಯಬೇಕೆಂದಿದ್ದ ಡಿಂಪಲ್ ಕ್ವೀನ್

ಈ ಒಂದು ಸಿನಿಮಾದ ವಿವಾದದಿಂದಾಗಿ ರಚಿತ ರಾಮ್ ಮನೆಯವರು ಬೇಸತ್ತಿದ್ದ ಕಾರಣ, ಸಿನಿಮಾ ರಂಗವನ್ನೇ ತೊರೆಯುವ ಹಂತಕ್ಕೆ ಬಂದಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್.

ಯುವಕರ ನಿದ್ರೆ ಕೆಡಿಸಿದ ಗುಳಿ ಕೆನ್ನೆಯ ಬೆಡಗಿ ಡಿಂಪಲ್ ಕ್ವೀನ್ ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಅವರ ಬಗ್ಗೆ ನಿಮಗೆಷ್ಟು ಗೊತ್ತು?

2012 ರಲ್ಲಿ ಅರಸಿ (Arasi) ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ರಚಿತಾ ರಾಮ್ (Rachitha Ram). ಸದ್ಯ ಅವರು ಈಗಿನ ಸಮಯದ ಬಹು ಬೇಡಿಕೆಯ ನಾಯಕ ನಟಿಯಾಗಿ ತಮ್ಮದೇ ಆದ ವಿಭಿನ್ನ ನಟನೆಯಿಂದ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.ವಿವಿಧ ಪಾತ್ರಗಳ ಮೂಲಕ ಸತತ ಹಿಟ್ ಸಿನಿಮಾಗಳನ್ನು ನೀಡುತ್ತಾ ಕನ್ನಡ ಚಿತ್ರರಂಗ (Kannada Industry) ದಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದಾರೆ.

ಹೀಗೆ ಕೇವಲ ಕನ್ನಡ ಮಾತ್ರವಲ್ಲದೆ ಕೆಲವು ಪರ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ಬೇರೆ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿಯು ಸದ್ದು ಮಾಡಿದ್ದಾರೆ. ಡಿಂಪಲ್ ಕ್ವೀನ್ ಎಂದೇ ಖ್ಯಾತರಾಗಿರುವ ಗುಳಿ ಕೆನ್ನೆಯ ಬೆಡಗಿ ರಚಿತಾ ರಾಮ್ ಅವರ ಮೊದಲ ಹೆಸರು ಬಿಂದ್ಯಾ ರಾಮ್(Bindya Ram). ಇವರು 3 ಅಕ್ಟೋಬರ್ 1992ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.

ಈ ಒಂದು ವಿವಾದದಿಂದಾಗಿ ಸಿನಿಮಾವನ್ನೇ ತೊರೆಯಬೇಕೆಂದಿದ್ದ ಡಿಂಪಲ್ ಕ್ವೀನ್ - Kannada News

ಇವರ ತಂದೆ ಕೆ.ಎಸ್.ರಾಮು (K.S Ramu) ಭರತನಾಟ್ಯ ನರ್ತಕರು ಆಗಿದ್ದು, ಐನೂರಕ್ಕೂ ಹೆಚ್ಚು ಸಾರ್ವಜನಿಕ ಪ್ರದರ್ಶನಗಳನ್ನು ನೀಡಿದ್ದಾರೆ.‌ಇವರ ಸಹೋದರಿ ನಿತ್ಯಾ ರಾಮ್ (ಕಿರುತೆರೆ ನಟಿ ), ನಿತ್ಯಾ ರಾಮ್ ನಂದಿನಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ರಚಿತಾ ಅವರು ಸಿನಿಮಾ ರಂಗಕ್ಕೆ ಬರುವ ಮೊದಲು ಐವತ್ತಕೂ ಹೆಚ್ಚು ಸಾರ್ವಜನಿಕ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿದ್ದರು.

ಈ ಒಂದು ವಿವಾದದಿಂದಾಗಿ ಸಿನಿಮಾವನ್ನೇ ತೊರೆಯಬೇಕೆಂದಿದ್ದ ಡಿಂಪಲ್ ಕ್ವೀನ್ - Kannada News

ರಚಿತಾ ರಾಮ್ ಅವರು 2012 ರಲ್ಲಿ ಅರಸಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ನಂತರ 2013ರಲ್ಲಿ ಬುಲ್ ಬುಲ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಸಾಲು ಸಾಲಾಗಿ 28 ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.

ರಚಿತಾ ರಾಮ್ ಅವರು ಅಂಬರೀಶ್(2014), ದಿಲ್ ರಂಗೀಲಾ (2014), ರನ್ನ(2015), ರಥಾವರ (2015), ಚಕ್ರವ್ಯೂಹ (2015), ಜಗ್ಗು ದಾದಾ(2016) ಅತಿಥಿ ಪಾತ್ರದಲ್ಲಿ , ಮುಕುಂದ ಮುರಾರಿ (2016) ಅತಿಥಿ ಪಾತ್ರದಲ್ಲಿ, ಪುಷ್ಪಕ ವಿಮಾನ (2017), ಭರ್ಜರಿ (2017),ಜಾನಿ ಜಾನಿ yes papa (2018),ಅಯೋಗ್ಯ(2018), ಸೀತಾ ರಾಮ ಕಲ್ಯಾಣ (2019),ನಟ ಸಾರ್ವಭೌಮ (2019),

ಅಮರ್ (2019) ಅತಿಥಿ ಪಾತ್ರದಲ್ಲಿ ,ಐ ಲವ್ ಯು (2019), ರುಸ್ತುಂ (2019), ಭರಾಟೆ (2019), 100(2019), Love you ರಚ್ಚು (2021), ಸೂಪರ್ ಮಚ್ಚಿ(2021), ಏಕ್ ಲವ್ ಯಾ(2022), ಜೇಮ್ಸ್ (2022), ಮಾನ್ಸೂನ್ ರಾಗ (2022), ಕ್ರಾಂತಿ (2023). ವೀರಂ, ಸಿನೆಮಾಗಳಲ್ಲಿ ನಟಿಸಿದ್ದಾರೆ.

ಮ್ಯಾಟ್ರಿ, ಬ್ಯಾಡ್ ಮ್ಯಾನರ್ಸ್, ಶಬರಿ ಇನ್ ಸರ್ಚ್ ಆಫ್ ರಾವಣ,ಲವ್ ಮೀ ಆರ್ ಹೇಟ್ ಮೀ,ಸಂಜು ಮತ್ತು ಗೀತಾ 2  ಇವರ ಮುಂಬರುವ ಸಿನಿಮಾಗಳಾಗಿವೆ. ಈ ಸಿನಿಮಾಗಳು ರಚಿತಾ ರಾಮ್ ಅವರಿಗೆ ಹೆಚ್ಚಿನ ಹಿಟ್ ನೀಡಬಹುದು ಎಂದು ಹೇಳಲಾಗುತ್ತಿದೆ.

ರಚಿತಾ ರಾಮ್  2015ರಲ್ಲಿ “ರನ್ನ” ಚಿತ್ರಕ್ಕಾಗಿ ಅತ್ಯುತ್ತಮ ನಟಿ, 2018ರಲ್ಲಿ “ಅಯೋಗ್ಯ” ಚಿತ್ರಕ್ಕಾಗಿ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು .

2019ರಲ್ಲಿ, ರಚಿತಾ ರಾಮ್ ನಟಿಸಿದ “ಐ ಲವ್ ಯು” ಚಿತ್ರದಲ್ಲಿನ ಬೋಲ್ಡ್ ದೃಶ್ಯಗಳು ವಿವಾದಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಈ ಕಾರಣವಾಗಿ ಮೀಡಿಯಾ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ರಚಿತಾ ರಾಮ್  ಮದುವೆಯ ನಂತರ ಜನರು ಏನು ಮಾಡುತ್ತಾರೆ? ಪ್ರಣಯ ಮಾಡುತ್ತಾರೆ,ಅದನೇ ಚಿತ್ರದಲ್ಲಿ ಚಿತ್ರಿಸಿದ್ದಾರೆ ಎಂದು ಹೇಳಿ ಮತ್ತೊಂದು ಬಾರಿ ವಿವಾದಕ್ಕೆ ತುತ್ತಾಗಿದ್ದರು.

ಚಿತ್ರದಲ್ಲಿನ ಬೋಲ್ಡ್ ದೃಶ್ಯಗಳಿಂದಾಗಿ ಮನೆಯವರು ಸಹ ಬೇಸರ ವ್ಯಕ್ತ ಪಡಿಸಿದ್ದರು. ಈ ವಿವಾದದಿಂದಾಗಿ ರಚಿತ ರಾಮ್ ಮನೆಯವರು ಬೇಸತ್ತಿದ್ದ ಕಾರಣ, ಸಿನಿಮಾವನ್ನೇ ತೊರೆಯುವ ಹಂತಕ್ಕೆ ಬಂದಿದ್ದ ರಚಿತಾ ರಾಮ್ ಇನ್ನು ಮುಂದೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದರು.

ರಚಿತಾ ರಾಮ್ ಬರೀ ಅಭಿನಯ ಮಾತ್ರವಲ್ಲದೆ ಮಜಾ ಭಾರತ, ಡ್ರಾಮ ಜೂನಿಯರ್ 4 , ಬರ್ಜರಿ ಬ್ಯಾಚುಲರ್ ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Leave A Reply

Your email address will not be published.