ಆ ಒಂದು ಕಾರಣಕ್ಕಾಗಿ ಸಿನಿಮಾ ಬದುಕನ್ನೇ ಕೈ ಬಿಟ್ಟ ನಟಿ ಶ್ವೇತಾ

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದ ಶ್ವೇತಾ, ತಮ್ಮ ಬದುಕಿನಲ್ಲಿ ನಡೆದಂತಹ ಆ ಒಂದು ಘಟನೆಯಿಂದ ತಮ್ಮ ವೃತ್ತಿಯಾದ ಸಿನಿಮಾ ಬದುಕನ್ನೇ ಕೈ ಬಿಟ್ಟು ಸುಮ್ಮನಾದರು.

ಮೂಲತಃ ಶ್ವೇತಾ ತಮಿಳುನಾಡಿನವರು ಅವರ ನಿಜವಾದ ಹೆಸರು ವಿನೋದಿನಿ. ಶ್ವೇತಾ ತಮಿಳು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲ ಕಲಾವಿದೆಯಾಗಿ(Child artist)  ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಅವರು ಕನ್ನಡ ಚಲನಚಿತ್ರಗಳಲ್ಲಿ ಶ್ವೇತಾ ಎಂದು ಗುರುತಿಸಿಕೊಂಡಿದ್ದಾರೆ.

ನಿರ್ಮಾಪಕರು ಮನೆ ಮುಂದೆ ಬಂದು ಕಾಯುವಶ್ಟು ಹೆಸರು ಮಾಡಿದ್ದ ಶ್ವೇತಾ, 90ರ ದಶಕದ ಅತ್ಯಂತ ಬ್ಯುಸಿ ನಟಿ, 1992ರಲ್ಲಿ ಚೈತ್ರದ ಪ್ರೇಮಾಂಜಲಿ(Chaitrada premanjali)  ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶ್ವೇತಾ ಎಂಟ್ರಿ ಕೊಟ್ಟರು. ಚೈತ್ರದ ಪ್ರೇಮಾಂಜಲಿ ಸಿನಿಮಾ ಸಾಕಷ್ಟು ಯಶಸ್ಸನ್ನು ಗಳಿಸಿತು ಚೈತ್ರದ ಪ್ರೇಮಾಂಜಲಿ ಸಿನಿಮಾ ಹಿಟ್ ಆದ ಕಾರಣ ಶ್ವೇತಾ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ಹುಡುಕಿ ಬಂದವು.

ನಂತರ ಗೆಜ್ಜೆನಾದ (Gejjenaada) ಚಿತ್ರದಲ್ಲಿ ಕಾಣಿಸಿಕೊಂಡ ಶ್ವೇತಾ ಅವರು ಇನ್ನಷ್ಟು ಹೆಸರು ಗಳಿಸಿದರು ನಂತರ ಎರಡು ವರ್ಷಗಳ ಕಾಲ ಕನ್ನಡ ಚಿತ್ರರಂಗದಿಂದ ದೂರ ಉಳಿದ ಶ್ವೇತಾ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಬಿಸಿಯಾಗಿದ್ದರು.

ಆ ಒಂದು ಕಾರಣಕ್ಕಾಗಿ ಸಿನಿಮಾ ಬದುಕನ್ನೇ ಕೈ ಬಿಟ್ಟ ನಟಿ ಶ್ವೇತಾ - Kannada News

ನಂತರ 1996ರಲ್ಲಿ ಮತ್ತೊಮ್ಮೆ ಶ್ವೇತಾ ಹೆತ್ತವರು (Hettavaru) ಅನ್ನೋ ಸಿನಿಮಾ ಮೂಲಕ ಕಾಣಿಸಿಕೊಳ್ಳುತ್ತಾರೆ ನಂತರ ಶ್ವೇತಾ ಅವರು ಕನ್ನಡ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಶ್ವೇತಾ ಅವರು 1996 ರ ಒಂದೇ ವರ್ಷದಲ್ಲಿ ಏಳು ಸಿನಿಮಾಗಳನ್ನ ಮಾಡುತ್ತಾರೆ.

ಶ್ವೇತಾ ಚೈತ್ರದಾ ಪ್ರೇಮಾಂಜಲಿ (1992), ಗೆಜ್ಜೆ ನಾದ (1993), ಮುದ್ದಿನ ಅಳಿಯ (1996), ಮಿನುಗು ತಾರೆ (1996), ಕರ್ಪೂರದ ಗೊಂಬೆ (1996), ಪ್ರೇಮ ರಾಗ ಹಾಡು ಗೆಳತಿ (1997), ನೋಡು ಬಾ ನಮ್ಮೂರ (1997), ಮಾವನ ಮಗಳು (1997), ಲಕ್ಷ್ಮಿ ಮಹಾಲಕ್ಷ್ಮಿ (1997), ಬದುಕು ಜಟಕಾ ಬಂಡಿ (1997), ನಮ್ಮ ಸಂಸಾರ ಆನಂದ ಸಾಗರ (2001), ಕೋಟಿಗೊಬ್ಬ (2001), ಪಂಜಾಬಿ ಹೌಸ್ (2002), ಕುಟುಂಬ (2003) ಎಂಬ ಸಿನೆಮಾಗಳಲ್ಲಿ ನಟಿಸಿದ್ದಾರೆ.

ಆದರೆ ನಂತರದ ದಿನಗಳಲ್ಲಿ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತದೆ ನಂತರ 2001ರಲ್ಲಿ ಕೋಟಿಗೊಬ್ಬ ಸಿನಿಮಾದಲ್ಲಿ ಚಿಕ್ಕ ಪಾತ್ರದ ಮೂಲಕ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಾರೆ ನಂತರ ಅವರ ದಪ್ಪ ಆದ ಕಾರಣ ಯಾವ ಸಿನಿಮಾಗಳಲ್ಲೂ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ ಅವಕಾಶಗಳೆಲ್ಲವೂ ಅವರ ಕೈ ತಪ್ಪಿ ಹೋಗುತ್ತಿದ್ದವು.

ಆ ಒಂದು ಕಾರಣಕ್ಕಾಗಿ ಸಿನಿಮಾ ಬದುಕನ್ನೇ ಕೈ ಬಿಟ್ಟ ನಟಿ ಶ್ವೇತಾ - Kannada News

ಸಿನಿಮಾದಲ್ಲಿ ನಟಿಸುವ ಸಮಯದಲ್ಲಿಯೇ ಶ್ರೀಧರ್ ಎಂಬುವವರನ್ನು ಮದುವೆಯಾದ ಶ್ವೇತಾ ಅವರು ವೈವಾಹಿಕ ಜೀವನದಲ್ಲಿ ಬ್ಯುಸಿಯಾಗುತ್ತಾರೆ.ಒಳ್ಳೆಯ ಜೀವನ ನಡೆಸುತ್ತ ಖುಷಿಯಾಗಿದ್ದ ಅವರ ಬದುಕಲ್ಲಿ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ. ಶ್ವೇತಾ ಅವರ ಪತಿಗೆ ಹಣದ ಮೋಸ ನಡೆದು,ತೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.ಈಕಡೆ ಮೋಸ ಮತ್ತು ಕೆಲಸ ಇಲ್ಲದ ಸಮಯದಲ್ಲಿ ಮತ್ತೊಂದು ದುರಂತ ನಡೆಯುತ್ತದೆ.

ನಟಿ ಶ್ವೇತಾ ಅವರ ಪತಿಗೆ ದೊಡ್ಡ ಆಕ್ಸಿಡೆಂಟ್ ನಡೆಯುತ್ತೆ ಆ ಆಕ್ಸಿಡೆಂಟ್ ನಲ್ಲಿ ಅವರ ಪತಿ ಶ್ರೀಧರ್ (Sridhar ) ಗೆ ಹೆಚ್ಚಾಗಿ ಇಂಜ್ಯೂರ್ ಆಗಿ ವೀಲ್ ಚೇರ್ ಹಿಡಿಯುವಂತಾಗಿದ್ದು, ನಂತರದ ದಿನಗಳಲ್ಲಿ ತಮ್ಮ ಪತಿಯ ಜವಾಬ್ದಾರಿ, ಮನೆಯ ಜವಾಬ್ದಾರಿ ಮತ್ತು ಮಕ್ಕಳ ಜವಾಬ್ದಾರಿ ಅವರ ಬೆನ್ನಿಗೆ ಬೀಳುತ್ತದೆ. ಮೊದಲೇ ಆರ್ಥಿಕ ಸಮಸ್ಯೆಯಿಂದಿದ್ದ ಅವರು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ, ಮತ್ತು ಸಿನಿಮಾ ವೃತ್ತಿಯನ್ನೇ ಬಿಡಬೇಕಾಗಿ ಬರುತ್ತದೆ.

ಇಷ್ಟೆಲ್ಲಾ ಆದರೂ ತಮ್ಮ ಸಂಸಾರವನ್ನು ಬಿಟ್ಟುಕೊಡದ ಶ್ವೇತಾ ಸಾಕಷ್ಟು ಕಷ್ಟಗಳ ನಡುವೆ ಮನೆಯವರನ್ನೆಲ್ಲಾ ನಿಭಾಯಿಸುತ್ತಾರೆ. ಈ ಕಾರಣದಿಂದಾಗಿ  ಮುಂದಿನ  ದಿನಗಳಲ್ಲಿ ಇಂಡಸ್ಟ್ರಿಯಲ್ಲಿ ಶ್ವೇತಾ ಅವರ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತವೆ.

ಹೌದು ಬೇರೆ ಯಾವುದೇ ನಟಿಯರಾಗಿದ್ದರೆ, ತಮ್ಮ ಪತಿಗೆ ಡೈವೋರ್ಸ್ ನೀಡಿ ತಮ್ಮ ಜೀವನದ ಬಗ್ಗೆ ಯೋಚಿಸುತ್ತಿದ್ದರು, ಆದರೆ ನಟಿ ಶ್ವೇತಾ ಅವರು ಆ ರೀತಿ ಮಾಡಲಿಲ್ಲ, ತಮ್ಮ ಸಂಸಾರದ ಜವಾಬ್ದಾರಿಯನ್ನು ಒಳ್ಳೆ ರೀತಿಯಲ್ಲಿ ನಿಭಾಯಿಸಿದರು.ಆ ಕಾರಣ ಅವರನ್ನು ಎಲ್ಲರು ಹೆಚ್ಚು ಇಷ್ಟ ಪಡುತ್ತಿದ್ದರು. ಇದಾದ ನಂತರದ ದಿನಗಳಲ್ಲಿ ಶ್ವೇತಾ ಅವರಿಗೆ ಧಾರಾವಾಹಿಗಳಿಂದ ಹೆಚ್ಚಾಗಿ ಅವಕಾಶಗಳು ಹುಡುಕಿ ಬರುತ್ತಿದ್ದವು. ಸದ್ಯಕ್ಕೆ ಶ್ವೇತಾ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದು, ತಮ್ಮ ಕುಟುಂಬದೊಂದಿಗೆ ಖುಷಿಯಿಂದಿದ್ದಾರೆ .

 

 

 

 

Leave A Reply

Your email address will not be published.