ಅಂದಿನ ಡ್ರೀಮ್ ಗರ್ಲ್ ಆಗಿದ್ದ ನಟಿ ಮಹಾಲಕ್ಷ್ಮಿ ಕಿರುತೆರೆ ಸೀರಿಯಲ್ ಮೂಲಕ ಗ್ರಾಂಡ್ ಎಂಟ್ರಿ ಕೊಡಲು ಸಜ್ಜು

ಧಾರಾವಾಹಿಯ ಮೂಲಕ ನಟಿ ಮಹಾಲಕ್ಷ್ಮಿ ಕಂಬ್ಯಾಕ್ ಮಾಡ ಹೊರಟಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ.

ಸ್ನೇಹಿತರೆ, 80ರ ದಶಕದಲ್ಲಿ ತಮ್ಮ ಅಪ್ರತಿಮ ಅಭಿನಯ ಹಾಗೂ ಸೌಂದರ್ಯದ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಪಡೆದು ಕನ್ನಡ (Kannada Cinema) ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಉತ್ತುಂಗದ ಶಿಖರದಲ್ಲಿದ್ದಂತಹ ನಟಿ ಮಹಾಲಕ್ಷ್ಮಿ (Actress Mahalakshmi) ಇದ್ದಕ್ಕಿದ್ದ ಹಾಗೆ ಸಿನಿಮಾ ಬದುಕಿನಿಂದ ದೂರ ಉಳಿದು ವೈಯಕ್ತಿಕ ಬದುಕಿನಲ್ಲಿಯೂ ಸಂತೋಷವನ್ನು ಕಾಣದೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ‌.

ಇವರ ವೈಯಕ್ತಿಕ ಬದುಕಿನ ಮಾಹಿತಿ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಹರಿದಾಡುತ್ತಲೆ ಇದ್ದವು. ಆದರೆ ಈಗ ಯಶಸ್ವಿ ಸೀರಿಯಲ್ (TV Serial) ಒಂದರ ಮೂಲಕ ಪೋಷಕ ನಟಿಯಾಗಿ ಕಿರುತೆರೆಯಲ್ಲಿ ಕಮಲ್ ಮಾಡಲು ಸಜ್ಜಾಗುತ್ತಿರುವ ಮಾಹಿತಿ ಬಾರಿ ಮಟ್ಟದಲ್ಲಿ ವೈರಲಾಗುತ್ತಿದ್ದು, ಅದ್ಯಾವ ಭಾಷೆಯ ಧಾರಾವಾಹಿಯ ಮೂಲಕ ನಟಿ ಮಹಾಲಕ್ಷ್ಮಿ ಕಂಬ್ಯಾಕ್ ಮಾಡ ಹೊರಟಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ.

ಮನೆಯವರು ಎಷ್ಟೇ ಬೇಡ ಅಂದ್ರು ನಟ ದೇವರಾಜ್ ಚಂದ್ರಲೇಖ ಅವರನ್ನೇ ಮದುವೆಯಾದ್ರು! ಇವರಿಬ್ಬರ ಮದುವೆಯಿಂದ ಅವಿನಾಶ್ ಜೈಲಿಗೆ ಹೋಗಿದ್ರು

ಅಂದಿನ ಡ್ರೀಮ್ ಗರ್ಲ್ ಆಗಿದ್ದ ನಟಿ ಮಹಾಲಕ್ಷ್ಮಿ ಕಿರುತೆರೆ ಸೀರಿಯಲ್ ಮೂಲಕ ಗ್ರಾಂಡ್ ಎಂಟ್ರಿ ಕೊಡಲು ಸಜ್ಜು - Kannada News

ಹೌದು ಗೆಳೆಯರೇ ತಮಿಳುನಾಡಿನವರಾದ ಮಹಾಲಕ್ಷ್ಮಿಯವರು ಕನ್ನಡ ಚಿತ್ರಗಳ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದು ಅದೆಷ್ಟೋ ಸಿನಿ ಪ್ರೇಕ್ಷಕರ ಮನದರಸಿಯಾಗಿ ಹೋಗಿದ್ದರು.

ಬರೋಬ್ಬರಿ 10 ವರ್ಷಗಳ ಕಾಲ ಸಿನಿಮಾ ರಂಗವನ್ನು ಆಳಿದ ಈ ನಟಿ ದಿಢೀರನೆ ಚಿತ್ರರಂಗದಿಂದ ದೂರ ಆದುದ್ದಾದರೂ ಯಾಕೆ? ಎಂಬ ಪ್ರಶ್ನೆ ಇಂದಿಗೂ ಅಭಿಮಾನಿಗಳ ಮನಸ್ಸು ಕಾಡುತ್ತಲೇ ಇದೆ.

ಇದಕ್ಕೆ ಪರಿಪೂರ್ಣವಾಗಿ ಮಹಾಲಕ್ಷ್ಮಿ ಅವರ ಕುರಿತಾದ ಸಾಕಷ್ಟು ಕಥೆಗಳು, ಊಹಾಪೋಹಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಲೆ ಇದ್ದವು.

Actress Mahalakshmi

ಅದರಲ್ಲೂ ಸಿನಿ ಬದುಕಿನ ಪೀಕ್ ನಲ್ಲಿ ಇರುವಾಗಲೇ ಮಹಾಲಕ್ಷ್ಮಿ ಓರ್ವ ಸ್ಟಾರ್ ನಟರನ್ನು ಪ್ರೀತಿಸಿದ್ದರು ಆತ ಮದುವೆಯಾಗುವುದಾಗಿ ನಂಬಿಸಿ ಮನೆಯವರ ವಿರೋಧ ಕಟ್ಟಿಕೊಳ್ಳಲಾಗದೆ ಮಹಾಲಕ್ಷ್ಮಿ ಅವರಿಗೆ ಮೋಸ ಮಾಡಿ ಬೇರೆ ಮದುವೆಯಾದರೂ ಅದರಿಂದಾಗಿ ಖಿನ್ನತೆಗೆ ಒಳಗಾದಂತಹ ಮಹಾಲಕ್ಷ್ಮಿ ಸಿನಿಮಾ ರಂಗದಲ್ಲಿಯೂ ಕಾಣಿಸಿಕೊಳ್ಳದೆ ಬೇರೆ ಯಾರನ್ನು ಮದುವೆಯಾಗದೆ ಸನ್ಯಾಸತ್ವ ಸ್ವೀಕರಿಸಿದ್ದಾರೆ ಎಂಬ ವಿಚಾರ ಇಂದಿಗೂ ಹೊಗೆಯಾಡುತ್ತಿದೆ.

ಆದರೀಗ ಹೆಚ್ಚು ಕಡಿಮೆ 30 ವರ್ಷವಾದ ಬಳಿಕ ಮಹಾಲಕ್ಷ್ಮಿ ಮತ್ತೆ ಕ್ಯಾಮರಾದ ಮುಂದೆ ಕಾಣಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಫಿಲ್ಮಿ ಬೀಟ್ ಜೊತೆಗೆ ಸಂದರ್ಶನ ನಡೆಸಿದಂತಹ ಮಹಾಲಕ್ಷ್ಮಿಯವರು ಮತ್ತೆ ಕನ್ನಡ ಕಿರುತೆರೆ ಲೋಕಕ್ಕೆ ಕಂಬ್ಯಾಕ್ ಮಾಡುವುದಾಗಿ ತಿಳಿಸುವ ಮೂಲಕ ಅಭಿಮಾನಿಗಳಿಗೆ ಸಂತೋಷವನ್ನು ತಂದಿದ್ದಾರೆ.

ನಟ ಅಭಿಜಿತ್ ಕುರಿತು ಪತ್ನಿ ಮಾಧ್ಯಮದ ಮುಂದೆ ಬಂದು ಬೇಸರ ವ್ಯಕ್ತಪಡಿಸಿದ್ದು ಯಾಕೆ? ಅಷ್ಟಕ್ಕೂ ಆಗಿದ್ದಾದರೂ ಏನು?

ಇನ್ನೆರಡು ವಾರದಲ್ಲಿ ಕನ್ನಡ ಕಿರುತೆರೆ ಲೋಕದಲ್ಲಿ, ಮಹಾಲಕ್ಷ್ಮಿ ಅವರ ಮುಖಭೂಮಿಕೆಯಲ್ಲಿ ತಯಾರಾಗಲಿರುವ ಆ ಧಾರಾವಾಹಿ ಯಾವುದೆಂಬುದನ್ನು ವಾಹಿನಿಯು ಹಾಗೂ ಮಹಾಲಕ್ಷ್ಮಿಯವರು ಅಧಿಕೃತವಾಗಿ ತಿಳಿಸಲಿದ್ದಾರೆ.

ಈಗಾಗಲೇ ಸುಧಾರಾಣಿ ಉಮಾಶ್ರೀ ಅವರಂತಹ ಹಿರಿಯ ಕಲಾವಿದರೆ ಆವರಿಸಿಕೊಂಡಿರುವಂತಹ ಕಿರುತೆರೆ ಲೋಕದಲ್ಲಿ ನಟಿ ಮಹಾಲಕ್ಷ್ಮಿ ಅವರಿಗೂ ಕೂಡ ಯಶಸ್ಸು ಹಾಗೂ ಜನರ ಪ್ರೀತಿ ಮತ್ತೆ ದೊರಕಲಿದ್ಯಾ? ಎಂಬುದನ್ನು ಕಾದು ನೋಡಬೇಕಿದೆ.

Actress Mahalakshmi is all set to make a grand entry through a TV serial

Comments are closed.