ಚಿನಕುರುಳಿ ಬೇಬಿ ಶ್ಯಾಮಿಲಿ ಒಂದು ಸಿನಿಮಾಗೆ ಪಡೆಯುತ್ತಿದ್ದ ಪೇಮೆಂಟ್ ಎಷ್ಟು ಗೊತ್ತಾ? ನಾಲ್ಕು ವರ್ಷಕ್ಕೆ ಇನ್ಕಮ್ ಟ್ಯಾಕ್ಸ್ ಕಟ್ಟಿದ ಬಾಲ ನಟಿ ಈಕೆ

ಬೇಬಿ ಶ್ಯಾಮಿಲಿ ಅಭಿನಯಿಸಬೇಕಿರುತ್ತದೋ ಆ ಒಂದು ಪಾತ್ರದ ಸ್ಕ್ರಿಪ್ಟ್ ಹಾಗೂ ವಿಡಿಯೋ ಕ್ಲಿಪಿಂಗ್ ಅನ್ನು ಬೇಬಿ ಶ್ಯಾಮಿಲಿ ಅವರ ತಂದೆಗೆ ನೀಡಲಾಗುತ್ತಿತ್ತು.

ನಟಿ ಬೇಬಿ ಶ್ಯಾಮಿಲಿ (Actress Baby Shamili) ಎನ್ನುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಆಕೆಯ ಚಿಟಪಟ ಮಾತು ಮುದ್ದಾದ ನಡೆ ಹಾಗೂ ಯಶಸ್ವಿ ಸಿನಿಮಾಗಳೆಲ್ಲವು ನೆನಪಿಗೆ ಬಂದುಬಿಡುತ್ತದೆ. ಪುಟ್ಟ ಪುಟ್ಟ ಫ್ರಾಕ್ ಹಾಗೂ ತಲೆಯ ಮೇಲೆ ಎರಡು ಪುಕ್ಕವನ್ನು ಧರಿಸಿ ಕನ್ನಡ (Kannada Cinema), ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾ ರಂಗದಲ್ಲಿ ತನ್ನ ಅಂಬೆಗಾಲನ್ನು ಇಡುತ್ತ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದಂತಹ ಕಲಾವಿದೆ

ಬೇಬಿ ಶ್ಯಾಮಿಲಿ ಅವರನ್ನು ಎಂದಾದರೂ ಸಿನಿ ಪ್ರೇಕ್ಷಕರು ಮರೆಯಲು ಸಾಧ್ಯವೇ? ಬೇಬಿ ಶ್ಯಾಮಿಲಿ ಅವರು ಕೇವಲ ನಾಲ್ಕು ವರ್ಷದ ಪುಟ್ಟ ಬಾಲಕಿಯಾಗಿದ್ದಾಗಲೇ ಮಣಿರತ್ನಂ ಅವರ ಅಂಜಲಿ ಸಿನಿಮಾದಲ್ಲಿ ಮಾನಸಿಕ ಅಸ್ವಸ್ಥ ಬಾಲಕಿಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಬದುಕಿನ ಪಯಣವನ್ನು ಶುರು ಮಾಡುತ್ತಾರೆ.

ಅಂದಿನ ಡ್ರೀಮ್ ಗರ್ಲ್ ಆಗಿದ್ದ ನಟಿ ಮಹಾಲಕ್ಷ್ಮಿ ಕಿರುತೆರೆ ಸೀರಿಯಲ್ ಮೂಲಕ ಗ್ರಾಂಡ್ ಎಂಟ್ರಿ ಕೊಡಲು ಸಜ್ಜು

ಚಿನಕುರುಳಿ ಬೇಬಿ ಶ್ಯಾಮಿಲಿ ಒಂದು ಸಿನಿಮಾಗೆ ಪಡೆಯುತ್ತಿದ್ದ ಪೇಮೆಂಟ್ ಎಷ್ಟು ಗೊತ್ತಾ? ನಾಲ್ಕು ವರ್ಷಕ್ಕೆ ಇನ್ಕಮ್ ಟ್ಯಾಕ್ಸ್ ಕಟ್ಟಿದ ಬಾಲ ನಟಿ ಈಕೆ - Kannada News

ತಂದೆ ಕೂಡ ಮಲಯಾಳಂನಲ್ಲಿ ಸುಪ್ರಸಿದ್ದಿ ನಟಿಯಾಗಿದ್ದ ಕಾರಣ ಯಾವ ಪಾತ್ರದಲ್ಲಿ ಬೇಬಿ ಶ್ಯಾಮಿಲಿ ಅಭಿನಯಿಸಬೇಕಿರುತ್ತದೋ ಆ ಒಂದು ಪಾತ್ರದ ಸ್ಕ್ರಿಪ್ಟ್ ಹಾಗೂ ವಿಡಿಯೋ ಕ್ಲಿಪಿಂಗ್ ಅನ್ನು ಬೇಬಿ ಶ್ಯಾಮಿಲಿ ಅವರ ತಂದೆಗೆ ನೀಡಲಾಗುತ್ತಿತ್ತು. ಹೀಗೆ ಅವರ ತಂದೆ ತಮ್ಮ ಮಲಯಾಳಿ ಭಾಷೆಯಲ್ಲಿ ಬೇಬಿ ಶ್ಯಾಮಿಲಿಯವರಿಗೆ ಯಾವ ರೀತಿ ಅಭಿನಯಿಸಬೇಕೆಂಬುದನ್ನು ರಾತ್ರಿ ಪೂರ ಹೇಳಿಕೊಟ್ಟು ಆಕೆ ಸಂಪೂರ್ಣವಾಗಿ ಕಲಿತ ನಂತರ ಸಿನಿಮಾದ ಸೆಟ್ಟಿಗೆ ಎಂಟ್ರಿ ಕೊಟ್ಟೊಡನೆ ಮೇಕಪ್ ಹಾಕಿಸಿಕೊಂಡು ಅಭಿನಯ ಮಾಡಲು ಸಿದ್ದಳಾಗಿ ಬಿಡುತ್ತಿದ್ದರಂತೆ.

Actress Baby Shamili

ಹೀಗೆ ನಾಲ್ಕು ವರ್ಷದಿಂದಲೇ ಅಭಿನಯದಲ್ಲಿ ಪ್ರವೀಣೆಯಾಗಿದ್ದ ಬೇಬಿ ಶ್ಯಾಮಿಲಿಯವರು ಎಲ್ಲರೊಂದಿಗೆ ಬಹಳ ಖುಷಿ ಖುಷಿಯಾಗಿ ಮಾತನಾಡುತ್ತಾ ಎಲ್ಲರೊಂದಿಗೆ ಬೆರೆಯುತ್ತಾ ಆಗಿನ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯನ್ನು ಗಳಿಸಿಕೊಂಡಿರುತ್ತಾರೆ.

ಇನ್ನು ವಿಶೇಷವೆಂದರೆ ಬೇಬಿ ಶ್ಯಾಮಿಲಿಯವರು ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಲು ಬರೋಬ್ಬರಿ 75,000 ಸಂಭಾವನೆಯನ್ನು ಪಡೆಯುತ್ತಿದ್ದರಂತೆ.

ಹೌದು ಗೆಳೆಯರೇ ಹರಳು ಹುರಿದಂತೆ ಮಾತನಾಡುವ ಮೂಲಕ ಎಲ್ಲಾ ಸಿನಿಮಾ ಇಂಡಸ್ಟ್ರಿಗು ಬೇಕಿದ್ದಂತಹ ಏಕೈಕ ಬಾಲ ಕಲಾವಿದೆ ಆಗಿದ್ದಂತ ಬೇಬಿ ಶ್ಯಾಮಿಲಿಯವರು ಆಗಿನ ವಂಡರ್ ಚೈಲ್ಡ್ ಎಂಬ ಬಿರುದನ್ನು ಪಡೆದುಕೊಂಡು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತ ಪೀಕ್ ನಲ್ಲಿ ಇದ್ದಂತಹ ಕಲಾವಿದೆ.

ಮನೆಯವರು ಎಷ್ಟೇ ಬೇಡ ಅಂದ್ರು ನಟ ದೇವರಾಜ್ ಚಂದ್ರಲೇಖ ಅವರನ್ನೇ ಮದುವೆಯಾದ್ರು! ಇವರಿಬ್ಬರ ಮದುವೆಯಿಂದ ಅವಿನಾಶ್ ಜೈಲಿಗೆ ಹೋಗಿದ್ರು

ಕೇವಲ 4 ರಿಂದ 5 ವರ್ಷದ ಈ ಪುಟ್ಟ ಬಾಲಕಿಯ ಕಾಲ್ ಶೀಟ್ ಪಡೆಯಲು ಆಗಿನ ಸಿನಿಮಾ ರಂಗ ಅವರ ಮನೆ ಮುಂದೆ ಕ್ಯೂ ನಿಲ್ಲುತ್ತಿದ್ದಂತಹ ಕಾಲವದು.

ಅಲ್ಲದೆ ಜಗತ್ತಿನಲ್ಲಿ ಯಾವ ಸಿನಿಮಾ ಇಂಡಸ್ಟ್ರಿಯಲ್ಲಿಯು ನಾಲ್ಕು ವರ್ಷದ ಹುಡುಗಿ ಇನ್ಕಮ್ ಟ್ಯಾಕ್ಸ್ ಕಟ್ಟಿರ್ಲಿಕಿಲ್ಲ, ಆದರೆ ಈ ಮಗು ಪ್ರತಿ ತಿಂಗಳು ಇನ್ಕಮ್ ಟ್ಯಾಕ್ಸ್ ಹಣವನ್ನು ಕಟ್ಟುತ್ತಿತ್ತು. ಅಷ್ಟರಮಟ್ಟಿಗೆ ಬೇಡಿಕೆ ಹೊಂದಿದ್ದಳು ಎಂದು ಹಿರಿಯ ನಿರ್ದೇಶಕ ಭಾರ್ಗವ್ ಸಂದರ್ಶನ ಒಂದರಲ್ಲಿ ನಟಿ ಬೇಬಿ ಶ್ಯಾಮಿಲಿಗೆ ಇದ್ದಂತಹ ಬೇಡಿಕೆಯನ್ನು ರಿವೀಲ್ ಮಾಡಿದರು.

Actress Baby Shamili Remuneration on That Days

Comments are closed.