ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪ್ರವಾಸಕ್ಕೆಂದು ಬ್ಯಾಂಕಾಕ್ ಗೆ ತೆರಳಿದ್ದಾಗ ಹೃದಯಾಘಾತ ಉಂಟಾಗಿದೆ.

ಕುಟುಂಬದ ಜೊತೆ ಪ್ರವಾಸಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಹೃದಯಾಘಾತ ಉಂಟಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ನಿವೃತ್ತ ಅಧಿಕಾರಿ ಬಿ ಕೆ ಶಿವರಾಂ ಅವರ ಪುತ್ರಿ ಸ್ಪಂದನ , ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಅವರು ಪ್ರೀತಿಸಿ ಮದುವೆಯಾಗಿದ್ದರು. ಸಿನೆಮಾ ರಂಗದಲ್ಲಿ ಒಳ್ಳೆಯ ಜೋಡಿ ಎನಿಸಿಕೊಂಡಿದ್ದರು.

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ - Kannada News

ವಿಜಯ ರಾಘವೇಂದ್ರ ಅವರು ಸಹ ಖಾಸಗಿ ಕಾರ್ಯಕ್ರಮ ಒಂದರಲ್ಲಿ ತಮ್ಮ ಪತ್ನಿ ಬಗ್ಗೆ ತುಂಬಾ ಮಾತನಾಡಿದ್ದರು , ನನ್ನ ಧೈರ್ಯ ಮತ್ತು ನನ್ನ ಜೀವನ, ಜೀವ ಎಂದು ಹೇಳಿಕೊಂಡಿದ್ದರು.

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ - Kannada News

ವರದಿಗಳ ಪ್ರಕಾರ, ದುರಂತ ಘಟನೆ ನಡೆದಾಗ ಸ್ಪಂದನಾ ತನ್ನ ಕುಟುಂಬದೊಂದಿಗೆ ಥೈಲ್ಯಾಂಡ್‌ನಲ್ಲಿದ್ದರು. ಸ್ಪಂದನಾ ಅವರಿಗೆ ಕಡಿಮೆ ರಕ್ತದೊತ್ತಡ ಇತ್ತು ಮತ್ತು ಹೃದಯಾಘಾತಕ್ಕೆ ಇದೇ ಕಾರಣ ಎಂದು ಶಂಕಿಸಲಾಗಿದೆ.

ವರದಿಗಳು ನಂಬುವುದಾದರೆ, ಸ್ಯಾಂಡಲ್‌ವುಡ್ ನಟನ ಪತ್ನಿಯ ಪಾರ್ಥಿವ ಶರೀರ ನಾಳೆ ಬೆಂಗಳೂರಿಗೆ ಆಗಮಿಸಲಿದ್ದು, ನಂತರ ಎಲ್ಲಾ  ವಿಧಿವಿಧಾನಗಳನ್ನು ನಡೆಸಲಾಗುವುದು.

 

Leave A Reply

Your email address will not be published.