ಎಲ್‌ಐಸಿ ಏಜೆಂಟರು ಮತ್ತು ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ
ನೌಕರರ ಕುಟುಂಬಗಳಿಗೆ ಆರ್ಥಿಕ ಸ್ಥಿರತೆ ಒದಗಿಸಲು ಶೇ.30ರಷ್ಟು ಪಿಂಚಣಿ ನೀಡಲು ನಿರ್ಧರಿಸಲಾಗಿದೆ.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಏಜೆಂಟರು ಮತ್ತು ಉದ್ಯೋಗಿಗಳಿಗೆ ದೊಡ್ಡ ಸುದ್ದಿಯನ್ನು ಪ್ರಕಟಿಸಿದೆ. ಗ್ರಾಚ್ಯುಟಿ ಮಿತಿಯನ್ನು ಹೆಚ್ಚಿಸುವುದು, ಟರ್ಮ್ ಇನ್ಶೂರೆನ್ಸ್ (Insurance) ಹೆಚ್ಚಿಸುವುದು, ನೌಕರರ ಕುಟುಂಬದ ಕಲ್ಯಾಣಕ್ಕಾಗಿ 30 ಪ್ರತಿಶತ ಕುಟುಂಬ ಪಿಂಚಣಿ (Pension) ನೀಡಲಾಗುವುದು ಎಂದು ಹೇಳಿದೆ. ಇವುಗಳಿಗೆ ಸಂಬಂಧಿಸಿದ ನಿರ್ಧಾರಗಳಿಗೆ ಕೇಂದ್ರ ಹಣಕಾಸು ಇಲಾಖೆ ಸೋಮವಾರ ಅನುಮೋದನೆ ನೀಡಿದೆ.
ಇದರೊಂದಿಗೆ ಪ್ರಸ್ತುತ ಎಲ್ ಐಸಿ ಏಜೆಂಟ್ (LIC Agent)ಗಳಿಗೆ ನೀಡುತ್ತಿರುವ ಗ್ರಾಚ್ಯುಟಿಯ (Gratuity) ಮಿತಿಯನ್ನು ರೂ.3 ಲಕ್ಷದಿಂದ ರೂ.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಮರು ನೇಮಕಗೊಂಡ ಏಜೆಂಟರಿಗೆ ನವೀಕರಣ ಕಮಿಷನ್ ಪಡೆಯಲು ಅವಕಾಶ ನೀಡಲಾಗುವುದು.
ಏಜೆಂಟರಿಗೆ ನೀಡುವ ಅವಧಿ ವಿಮೆ ರೂ. 3,000-10,000 ರಿಂದ 25,000-1,50,000 ರೂ.ಗೆ ಹೆಚ್ಚಿಸಲಾಗುವುದು ಎಂದು ಹಣಕಾಸು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇವುಗಳ ಹೊರತಾಗಿ ನೌಕರರ ಕುಟುಂಬಗಳಿಗೆ ಆರ್ಥಿಕ ಸ್ಥಿರತೆ ಒದಗಿಸಲು ಶೇ.30ರಷ್ಟು ಪಿಂಚಣಿ (Pension) ನೀಡಲು ನಿರ್ಧರಿಸಲಾಗಿದೆ.
13 ಲಕ್ಷ ಏಜೆಂಟರು ಮತ್ತು 1 ಲಕ್ಷ ಉದ್ಯೋಗಿಗಳು ಎಲ್‌ಐಸಿ ಈ ಮಟ್ಟಕ್ಕೆ ಬರಲು ಸುದೀರ್ಘ ಕಾಲ ಶ್ರಮಿಸಿದ್ದಾರೆ. ಹಾಗಾಗಿ ಅವರ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಹಣಕಾಸು (Finance) ಇಲಾಖೆ ಹೇಳಿದೆ.
LIC, 1956 ರಲ್ಲಿ ರೂ.5 ಕೋಟಿ ಬಂಡವಾಳ (Capital) ದೊಂದಿಗೆ ಪ್ರಾರಂಭವಾಯಿತು, ಪ್ರಸ್ತುತ ವಿಮಾ ಕ್ಷೇತ್ರದ ಅತಿದೊಡ್ಡ ಸಾರ್ವಜನಿಕ ವಲಯದ ಕಂಪನಿಯಾಗಿದೆ. ಕಳೆದ ವರ್ಷ ಶೇರು (Share) ಮಾರುಕಟ್ಟೆಯಲ್ಲೂ ಲಿಸ್ಟ್ ಆಗಿತ್ತು.
Comments are closed.