ಹಲವು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸ ಇರೋರಿಗೆ ಮಹತ್ವದ ಮಾಹಿತಿ ಕಾನೂನು ತಿಳಿಯಿರಿ!

ನಗರ ಪ್ರದೇಶಗಳಲ್ಲಿ ಉದ್ಯೋಗಕ್ಕಾಗಿ ಬರುವ ಹಲವರು ಬಾಡಿಗೆ ಮನೆಯಲ್ಲಿಯೇ ವಾಸ ಮಾಡುತ್ತಾರೆ. ಇನ್ನು ಬಾಡಿಗೆ ಮನೆಯಲ್ಲಿ ವಾಸವ ಮಾಡುವವರು ಎಷ್ಟು ವರ್ಷ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ

ತುಂಬಾ ವರ್ಷದಿಂದ ಒಂದೇ ಮನೆಯಲ್ಲಿ ಬಾಡಿಗೆ ಇದ್ರೆ ಆ ಬಾಡಿಗೆ ಮನೆ ನಿಮ್ಮ ಸ್ವಂತದ್ದಾಗಬಹುದಾ? ಮಾಲೀಕರು ನಿಮ್ಮ ಹೆಸರಿಗೆ ಬಾಡಿಗೆ ಮನೆ ಬರೆದು ಕೊಡಬೇಕ ?ಹಾಗೆ ಏನಾದರೂ ಕಾನೂನು ಇದ್ರೆ ಎಷ್ಟು ವರ್ಷದವರೆಗೆ ಒಂದೇ ಮನೆಯಲ್ಲಿ ವಾಸವಾಗಿರಬೇಕು? ಇದರ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತೆ ಗೊತ್ತಾ?

ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸ್ವಂತ ಮನೆಗಿಂತ ಬಾಡಿಗೆ ಮನೆಯಲ್ಲಿ ವಾಸಿಸುವವರ ಸಂಖ್ಯೆಯೇ ಜಾಸ್ತಿ. ಅದರಲ್ಲೂ ನಗರ ಪ್ರದೇಶಗಳಲ್ಲಿ ಉದ್ಯೋಗಕ್ಕಾಗಿ ಬರುವ ಹಲವರು ಬಾಡಿಗೆ ಮನೆಯಲ್ಲಿಯೇ ವಾಸ ಮಾಡುತ್ತಾರೆ. ಇನ್ನು ಬಾಡಿಗೆ ಮನೆಯಲ್ಲಿ ವಾಸವ ಮಾಡುವವರು ಎಷ್ಟು ವರ್ಷ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಕೆಲವರು ಅಲ್ಪಾವಧಿಗೆ ವಾಸ ಮಾಡಿದರೆ ಇನ್ನೂ ಕೆಲವರು ದೀರ್ಘಾವಧಿಯವರೆಗೆ ಒಂದೇ ಮನೆಯಲ್ಲಿ ವಾಸವಾಗಿರಬಹುದು. ಇಂಥವರು ಬಾಡಿಗೆ ಮನೆಯ ಬಗೆಗಿನ ರೂಲ್ಸ್ ತಿಳಿದುಕೊಂಡರೆ ಹೆಚ್ಚು ಉತ್ತಮ.

ಬಾಡಿಗೆ ಮನೆ ಒಂದು ಬಿಸಿನೆಸ್:

ಇಂದು ಅದೆಷ್ಟು ಜನ ದೊಡ್ಡ ದೊಡ್ಡ ಫ್ಲ್ಯಾಟ್ ನಿರ್ಮಾಣ (rented flat) ಮಾಡಿ ಬಾಡಿಗೆ ಕೊಟ್ಟು ಆರಾಮಾಗಿ ಇರುತ್ತಾರೆ ಪ್ರತಿ ತಿಂಗಳು ದುಡಿಯುವ ಅಗತ್ಯವೇ ಇಲ್ಲ ಬಾಡಿಗೆ ಮನೆ ಅವರು ಕೊಡುವ ಬಾಡಿಗೆ ಅವರ ಜೀವನಕ್ಕೆ ಸಾಕಾಗುತ್ತದೆ. ಬಾಡಿಗೆ ಮನೆಯಲ್ಲಿ ಇರಬೇಕಾದರೆ ಸ್ಥಳ ಹೇಗಿದೆ ಮನೆ ಹೇಗಿದೆ ಮೊದಲಾದವುಗಳನ್ನು ತಿಳಿದುಕೊಳ್ಳುತ್ತೇವೆ ಆದರೆ ಇದರ ಬಗ್ಗೆ ಇರುವ ಕಾನೂನು ಕೂಡ ತಿಳಿದುಕೊಳ್ಳುವುದು ಹೆಚ್ಚು ಸೂಕ್ತ.

ಹಲವು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸ ಇರೋರಿಗೆ ಮಹತ್ವದ ಮಾಹಿತಿ ಕಾನೂನು ತಿಳಿಯಿರಿ! - Kannada News

ಬಾಡಿಗೆ ಮನೆಗೂ ಇದೆ ಹಲವು ನಿಯಮ

ಬಾಡಿಗೆ ಮನೆಯಲ್ಲಿ ವಾಸಿಸುವವರು ರೆಂಟ್ ಅಗ್ರಿಮೆಂಟ್ ಮಾಡಿಸಿಕೊಳ್ಳುತ್ತಾರೆ ಇದು ಬಹಳ ಮುಖ್ಯವಾಗಿರುತ್ತೆ ಯಾಕೆಂದರೆ ಆ ಮನೆಯಲ್ಲಿ ವಾಸಿಸುವಷ್ಟು ವರುಷ ಯಾವೆಲ್ಲ ನಿಯಮಗಳ ಅಡಿಯಲ್ಲಿ (rent house rules) ಇರಬೇಕು ಎಂಬುದನ್ನು ಈ ಅಗ್ರಿಮೆಂಟ್ ನಲ್ಲಿಯೇ ಇರುತ್ತೆ. ತುಂಬಾ ವರ್ಷ ಒಂದೇ ಬಾಡಿಗೆ ಮನೆಯಲ್ಲಿ ಇದ್ದರೆ ಅದಕ್ಕೂ ನಿಯಮ ಇದೆ ಗೊತ್ತಾ? ಧೀರ್ಘಕಾಲದವರೆಗೆ ಅಂದರೆ 12 ವರ್ಷಗಳವರೆಗೆ ಒಂದೇ ಬಾಡಿಗೆ ಮನೆಯಲ್ಲಿ ಇದ್ದರೆ ಆ ಮನೆಯ ಓನರ್ ನೀವಾಗಬಹುದು ಎನ್ನುವುದು ನಿಮಗೆ ಗೊತ್ತಾ?

ಹಲವು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸ ಇರೋರಿಗೆ ಮಹತ್ವದ ಮಾಹಿತಿ ಕಾನೂನು ತಿಳಿಯಿರಿ! - Kannada News
ಹಲವು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸ ಇರೋರಿಗೆ ಮಹತ್ವದ ಮಾಹಿತಿ ಕಾನೂನು ತಿಳಿಯಿರಿ! - Kannada News
Image source: India Times

ಪ್ರತಿಕೂಲ ಸ್ವಾಧೀನ ಕಾನೂನಿನ ಅಡಿಯಲ್ಲಿ ದೀರ್ಘಾವಧಿಯವರೆಗೆ ಒಂದು ಮನೆಯಲ್ಲಿ ವಾಸವಾಗಿದ್ದರೆ ಆ ಆಸ್ತಿ ವಾಸವಾಗಿರುವವರ ಅಸ್ತಿತ್ವಕ್ಕೆ ಸೇರುತ್ತದೆ. ವಾಸ್ತವವಾಗಿ ಇದು ಬ್ರಿಟಿಷರ ಆಳ್ವಿಕೆ ಕಾಲದ ಭೂಕಬಳಿಕೆ ಕಾಯ್ದೆ. ಬ್ರಿಟಿಷರ ಕಾಲದಲ್ಲಿ ಅನೇಕ ಬಾರಿ ಮಾಲೀಕರು ತಮ್ಮ ಆಸ್ತಿ ಕಳೆದುಕೊಂಡಿರುವ ಉದಾಹರಣೆಗಳು ಇವೆ. ಈ ಕಾಯ್ದೆ ಈಗಲೂ ಜಾರಿಯಲ್ಲಿ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಬಾಡಿಗೆದಾರರು ಇದರ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ ಹಾಗಾಗಿ ಜಮೀನುದಾರರು ಬಹಳ ಜಾಗರೂಕತೆಯಿಂದ ಇರಬೇಕು.

ಸರ್ಕಾರಿ ಆಸ್ತಿಗೆ ಅನ್ವಯವಾಗುವುದಿಲ್ಲ;

ಇನ್ನು ಈ ನಿಯಮ ಸರ್ಕಾರಿ ಆಸ್ತಿಗೆ (Government property) ಅಥವಾ ಸರ್ಕಾರಿ ಅಸ್ತಿತ್ವದಲ್ಲಿ ಇರುವ ಮನೆಗೆ ಅನ್ವಯವಾಗುವುದಿಲ್ಲ. ಬಾಡಿಗೆದಾರರು ಆಸ್ತಿಯನ್ನು ವಶಪಡಿಸಿಕೊಳ್ಳದೆ ಇರುವಂತೆ ಮನೆಯ ಮಾಲೀಕರು ಬಹಳ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ 11 ತಿಂಗಳ ಅಗ್ರಿಮೆಂಟ್ (Rent agreement) ಮಾಡಿಕೊಳ್ಳಬಹುದು. ಇನ್ನು ಮಾಲೀಕರು ಬಯಸಿದರೆ ಬಾಡಿಗೆದಾರರನ್ನು ಆಗಾಗ ಬದಲಾಯಿಸಬಹುದು. ನಿಮ್ಮ ಆಸ್ತಿ ಬಾಡಿಗೆದಾರರು ವಶಪಡಿಸಿಕೊಳ್ಳದಂತೆ ನಿಗಾ ವಹಿಸಬೇಕು. ಒಂದು ಸುವಂತ ಆಸ್ತಿ ಮಾಡುವುದು ಅಂದ್ರೆ ಅಷ್ಟು ಸುಲಭವಲ್ಲ ಸಾಕಷ್ಟು ವರ್ಷಗಳ ಪರಿಶ್ರಮ ಇರುತ್ತದೆ. ಹಾಗಾಗಿ ಅದನ್ನ ಇನ್ನೊಬ್ಬರು ಸುಲಭವಾಗಿ ವಶಕ್ಕೆ ತೆಗೆದುಕೊಳ್ಳದಂತೆ ಎಚ್ಚರವಹಿಸುವುದು ಬಹಳ ಮುಖ್ಯ.

Comments are closed.