ಹತ್ತು ಸಾವಿರ ಬಂಡವಾಳ ಹಾಕಿದ್ರೆ ಈ ಉದ್ಯಮದಿಂದ ಗಳಿಸಬಹುದು ಎರಡು ತಿಂಗಳಿನಲ್ಲಿ 30,000!

ಹಿಸ್ಟರಿ ರಿಪೀಟ್ ಎನ್ನುವಂತೆ ಈಗ ಮತ್ತೆ ಯುವಕರು ಕೂಡ ಕೃಷಿಯತ್ತ ಮುಖ ಮಾಡಿದ್ದಾರೆ, ವರ್ಷಕ್ಕೆ 15,000 ರೂ ಹೂಡಿಕೆ ಮಾಡಿ ನಾಲ್ಕು ಲಕ್ಷ ಆದಾಯ ಗಳಿಸಬಹುದು.

ಈ ಐಟಿ ಬಿಟಿ (IT BT) ಹಾಗೂ ಇತರ ಕಮರ್ಷಿಯಲ್ ಉದ್ಯೋಗಗಳು ಆರಂಭವಾಗುವುದಕ್ಕೂ ಮೊದಲು ಭಾರತದಲ್ಲಿ ಇದ್ದಿದ್ದು ಕೃಷಿ (Agriculture) ಮಾತ್ರ. ಆದರೆ ಯಾವಾಗ ನಾವು ಉದ್ಯೋಗದ ಕಡೆಗೆ ಮುಖ ಮಾಡಿದೆವೋ ಆಗ ಕೃಷಿ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತಾ ಬಂತು. ತೋಟದಲ್ಲಿ ಹಿರಿಯರನ್ನು ಹೊರತುಪಡಿಸಿ ಯುವ ಪೀಳಿಗೆ ಕೆಲಸವೇ ಮಾಡದೇ ಇರುವ ಸ್ಥಿತಿಗೆ ಬಂತು.

ಆದರೆ ಹಿಸ್ಟರಿ ರಿಪೀಟ್ ಎನ್ನುವಂತೆ ಈಗ ಮತ್ತೆ ಯುವಕರು ಕೂಡ ಕೃಷಿಯತ್ತ ಮುಖ ಮಾಡಿದ್ದಾರೆ. ಹೀಗೆ ಸೋಲೆ ಗೆಲುವಿನ ಸೋಪಾನ ಎಂದುಕೊಂಡ ಒಬ್ಬ ವ್ಯಕ್ತಿ ಯಾವ ರೀತಿ ಯಶಸ್ಸು ಸಾಧಿಸಿದ ಎನ್ನುವುದನ್ನು ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಅದೇ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತೀರಿ.

ಬೇಬಿ ಕಾರ್ನ್ ನಿಂದ ಬಂತು ಹಣವೋ ಹಣ! (Baby corn farming)

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ ಈ ಒಂದು ವರದಿ ನೀಡಿದೆ. ಹರಿಯಾಣದ (Haryana) ಸೋನಿಪತ್ ಜಿಲ್ಲೆಯ ಅಟೆರ್ನಾ ಗ್ರಾಮದಲ್ಲಿ ಇಂದು ಬಹುತೇಕ ಎಲ್ಲಾ ರೈತರು ಬೇಬಿ ಕಾರ್ನರ್ ಕೃಷಿ ಮಾಡುತ್ತಿದ್ದಾರೆ. ಖಾಸಗಿ ಕಂಪನಿಗಳಿಂದ 160 ರಿಂದ 200 ರೂಪಾಯಿಗಳಿಗೆ ರೈತರಿಗೆ ಬೀಜ ದೊರೆಯುತ್ತಿದೆ. ಆದರೆ ಇದು ಬಹಳ ದುಬಾರಿ. ಈ ಭಾಗದ ರೈತರಿಗೆ ಇಷ್ಟು ದೊಡ್ಡ ಮೊತ್ತದ ಹಣ ನೀಡಿ ಬೀಜ ಖರೀದಿ ಮಾಡಿ ಬೆಳೆಯುವುದು ಬಹಳ ಸಂಕಷ್ಟ ಎದುರಿಸುವಂತೆ ಮಾಡಿತು.

ಹತ್ತು ಸಾವಿರ ಬಂಡವಾಳ ಹಾಕಿದ್ರೆ ಈ ಉದ್ಯಮದಿಂದ ಗಳಿಸಬಹುದು ಎರಡು ತಿಂಗಳಿನಲ್ಲಿ 30,000! - Kannada News

ಪರಿಹಾರ ಕಂಡುಹಿಡಿದ ಚೌಹಾಣ್ ಸಿಂಗ್:

ಕನ್ವಾಲ್ ಸಿಂಗ್ ಚೌಹಾಣ್ ಈ ಸಮಸ್ಯೆಗೆ ಒಂದು ಪರಿಹಾರ ಕಂಡುಹಿಡಿಯಲು HM 4 ಬೇಬಿ ಕಾರ್ನ್ ಹೈಬ್ರಿಡ್‌ ನ್ನು ನಾವೇ ಸ್ವತಃ ಅನ್ವೇಷಣೆ ಮಾಡುತ್ತಾರೆ. ಚೌಹಾಣ್ ಎಚ್‌ಎಂ 4 ಬೀಜವನ್ನು ಈಗ ಕೇವಲ ಕೆಜಿಗೆ 50 ರೂ. ಗಳನ್ನು ಕೊಟ್ಟು ರೈತರು ಖರೀದಿಸುತ್ತಾರೆ.

ಹತ್ತು ಸಾವಿರ ಬಂಡವಾಳ ಹಾಕಿದ್ರೆ ಈ ಉದ್ಯಮದಿಂದ ಗಳಿಸಬಹುದು ಎರಡು ತಿಂಗಳಿನಲ್ಲಿ 30,000! - Kannada News
Image source: Money control hindi

ಅರವತ್ತು ದಿನಗಳಲ್ಲಿ 30,000 ಲಾಭ

ಚೌಹಾಣ್ ಅವರ ಬಳಿ ಬಂಡವಾಳದ ಕೊರತೆ ಇತ್ತು ಹಾಗಾಗಿ ಅವರು ಕೇವಲ ಹತ್ತು ಸಾವಿರ ರೂಪಾಯಿಗಳನ್ನು ಬಂಡವಾಳ ಹೂಡಿ ಹೊಸದೊಂದು ತಳಿಯ ಬೇಬಿ ಕಾರ್ನ್ ಬೆಳೆಯುವುದಕ್ಕೆ ಆರಂಭಿಸುತ್ತಾರೆ. ಇದೀಗ ಇವರು ಬೆಳೆಸಿದ ಈ ಹೈಬ್ರಿಡ್ ಬೀಜಗಳನ್ನು (Hybrid seeds) ಹರಿಯಾಣದ ಬೀಜ ಅಭಿವೃದ್ಧಿ ನಿಯಮ ಇತರ ರೈತರಿಗೂ ತಮ್ಮಲ್ಲಿಯೇ ಬೆಳೆಸಿ ಮಾರಾಟ ಮಾಡುತ್ತಿದೆ.

ಚೌಹಾಣ್ ಹೇಳುವಂತೆ ಅತಿ ಹೆಚ್ಚಿನ ಲಾಭ ಬಹಳ ಬೇಗ ಸಿಗಬೇಕು ಅಂದ್ರೆ ಈ ಬೇಬಿ ಕಾರ್ನ ಕೃಷಿಯನ್ನು ಮಾಡಬೇಕು. ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ವಿಟಮಿನ್ ಜೀವಸತ್ವಗಳು ಹೇರಳವಾಗಿ ಇವೆ ಹಾಗಾಗಿ ಜನರು ಕಚ್ಚಾ ಬೇಬಿ ಕಾರ್ನ್ ಅಥವಾ ಅದನ್ನು ಬೇಯಿಸಿಕೊಂಡು ತಿನ್ನುವುದಕ್ಕೆ ಇಷ್ಟಪಡುತ್ತಾರೆ ಹಾಗಾಗಿ ದೊಡ್ಡ ಮಾರುಕಟ್ಟೆ ಬೇಬಿ ಕಾರ್ನ್ ಕೃಷಿಗೆ ಸೃಷ್ಟಿಯಾಗಿದೆ.

ಎಲ್ಲರೂ ಸಮಯದಲ್ಲೂ ಬೆಳೆಯುವ ಕೃಷಿ

ಬೇಬಿ ಕಾರ್ನ್ ಎಲ್ಲಾ ಋತುವಿನಲ್ಲಿಯೂ ಬೆಳೆಯುವ ಕೃಷಿಯಾಗಿದೆ. ಬೇಬಿ ಕಾರ್ನರ್ ಕೃಷಿಯ ಮೂಲಕ ರೈತರು ಮೂರೂ ಪಟ್ಟು ಹೆಚ್ಚು ಲಾಭಗಳಿಸಬಹುದು. ಒಂದು ಎಕರೆ ಜಮೀನಿನಲ್ಲಿ ಬೇಬಿ ಕಾರ್ನ್ ಬೆಳೆದರೆ 15,000 ರೂ. ಬೇಕು. ವರ್ಷಕ್ಕೆ ನಾಲ್ಕು ಕೊಯ್ಲು ಅಂದ್ರು ನಾಲ್ಕು ಲಕ್ಷ ಆದಾಯ ಗಳಿಸಬಹುದು ಎಂದು ಚೌಹಾಣ್ ತಿಳಿಸುತ್ತಾರೆ. ಈ ಕೃಷಿ ಮಾಡಲು ಸರ್ಕಾರದಿಂದ ಸಾಲ ಸೌಲಭ್ಯ ಕೂಡ ಲಭ್ಯವಿದೆ.

Comments are closed.