ಡಾಕ್ಟರ್ ಬ್ರೋರನ್ನು ಹಾಡಿ ಹೊಗಳಿದ ಕಿರುತೆರೆ ನಟ ಚಂದನ್ ಕುಮಾರ್!

ಬಹುದೊಡ್ಡ ಮಟ್ಟದ ಜನಪ್ರಿಯತೆಯನ್ನು ಅತಿ ಚಿಕ್ಕ ವಯಸ್ಸಿನಲ್ಲಿ ಪಡೆದು ಸ್ಟಾರ್ ಸೆಲೆಬ್ರಿಟಿಯಾಗಿ ಮಿಂಚುತ್ತಿರುವ ಗಗನ್ ಶ್ರೀನಿವಾಸ್ ಅಲಿಯಾಸ್ ಡಾಕ್ಟರ್ ಬ್ರೋ ಕುರಿತು ಸಂದರ್ಶನದಲ್ಲಿ ಮಾತನಾಡಿದ ಕಿರುತೆರೆ ನಟ ಚಂದನ್ ಕುಮಾರ್ ಅವರ ಮಹತ್ಕಾರ್ಯವನ್ನು ಗುಣಗಾನ ಮಾಡಿದ್ದಾರೆ.

ಸ್ನೇಹಿತರೆ, ಗಗನ್ ಶ್ರೀನಿವಾಸ್ ಅಲಿಯಾಸ್ ಡಾಕ್ಟರ್ ಬ್ರೋ (DR.Bro) ಸದ್ಯ ಯೂಟ್ಯೂಬರ್ ಆಗಿ ದೇಶ ವಿದೇಶಗಳನ್ನು ಸುತ್ತುತ್ತಾ ನಮ್ಮ ಭಾರತದಲ್ಲಿರುವಂತಹ ಜನರಿಗೆ ಫೋನಿನಿಂದಲೇ ವಿದೇಶದಲ್ಲಿನ ಜನರ ಮನೆ, ತಾಣಗಳು, ಊಟ ತಿಂಡಿ ಹಾಗೂ ಅಲ್ಲಿನ ಜನ ಏನನ್ನು ಹೆಚ್ಚು ಇಷ್ಟಪಡುತ್ತಾರೆ? ಅವರ ಜೀವನ ಶೈಲಿ ಹೇಗಿರುತ್ತದೆ? ಎಂಬುದನ್ನೆಲ್ಲ ತಮ್ಮ ವಿಡಿಯೋಗಳ ಮೂಲಕ ಜನರಿಗೆ ಪರಿಚಯಿಸುತ್ತಿದ್ದಾರೆ?

ನಮ್ಮ ಕರ್ನಾಟಕದ ಪುಟ್ಟ ಹಳ್ಳಿಯಿಂದ ಹಿಡಿದು ಆಫ್ರಿಕಾ ಆಫ್ಘಾನಿಸ್ತಾನ್ ಅಂತ ದೇಶಗಳಿಗೆ ಹೋಗಿ ಅತಿ ಚಿಕ್ಕ ವಯಸ್ಸಿನಲ್ಲಿ ಬಹು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿರುವ ಡಾ. ಬ್ರೋ, ಸಾವಿರಾರು ಸಂಖ್ಯೆಯ ಅಭಿಮಾನಿ ಬಳಗವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಂದಿದ್ದಾರೆ. ಕನ್ನಡದ ಸಾಕಷ್ಟು ಸೆಲೆಬ್ರಿಟಿಗಳು ಡಾಕ್ಟರ್ ಬ್ರೋ ಮಾಡುತ್ತಿರುವಂತಹ ಕೆಲಸವನ್ನು ಹಾಡಿ ಹೋಗುತ್ತಿದ್ದಾರೆ. ಅಲ್ಲದೆ ಹಲವಾರು ಟಿವಿ ನ್ಯೂಸ್ ಚಾನೆಲ್ಗಳು ಇವರ ಒಂದೇ ಒಂದು ಸಂದರ್ಶನಕ್ಕಾಗಿ ಕಾದುಕುಳಿತ್ತಿದ್ದಾರೆ.‌

ಬಹುದೊಡ್ಡ ಮಟ್ಟದ ಜನಪ್ರಿಯತೆಯನ್ನು ಅತಿ ಚಿಕ್ಕ ವಯಸ್ಸಿನಲ್ಲಿ ಪಡೆದು ಸ್ಟಾರ್ ಸೆಲೆಬ್ರಿಟಿಯಾಗಿ ಮಿಂಚುತ್ತಿರುವ ಗಗನ್ ಶ್ರೀನಿವಾಸ್ ಅಲಿಯಾಸ್ ಡಾಕ್ಟರ್ ಬ್ರೋ ಕುರಿತು ಸಂದರ್ಶನದಲ್ಲಿ ಮಾತನಾಡಿದ ಕಿರುತೆರೆ ನಟ ಚಂದನ್ ಕುಮಾರ್ (Actor Chandan Kumar) ಅವರ ಮಹತ್ಕಾರ್ಯವನ್ನು ಗುಣಗಾನ ಮಾಡಿದ್ದಾರೆ.

ಡಾಕ್ಟರ್ ಬ್ರೋರನ್ನು ಹಾಡಿ ಹೊಗಳಿದ ಕಿರುತೆರೆ ನಟ ಚಂದನ್ ಕುಮಾರ್! - Kannada News

ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದೆ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಡಾ. ಬ್ರೋ ಬರಲಿದ್ದಾರೆ ಎಂಬ ಸುದ್ದಿ ಬಹು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು,ಆದರೆ ಮಾದ್ಯಮದ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರ್ರವರು (Raghavendra hunasooru)  ಡಾ. ಬ್ರೋ ಅವರ ಸಾಧನೆಯ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದು, ಪ್ರತಿಯೊಬ್ಬ ನೆಟ್ಟಿಗರಿಗೂ ಸಿಟ್ಟೇ ಏರುವಂತೆ ಮಾಡಿತ್ತು.

ಈ ಕಾರಣದಿಂದ ಡಾಕ್ಟರ್ ಬ್ರೋರವರನ್ನು ಸಾಕಷ್ಟು ಟ್ರೋಲ್ ಕೂಡ ಮಾಡಿ ಕ್ಷಮೆ ಯಾಚಿಸುವಂತೆ ಕೇಳಿಕೊಂಡಿದ್ದರು. ಹೀಗಿರುವಾಗ ಈ ಕುರಿತು ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟ ಚಂದನ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ್ದು, “ನಿಮ್ಮ ಸಾಧನೆಗೆ ಆಲ್ ದ ಬೆಸ್ಟ್ ಯಾರು ಏನೇ ಹೇಳಲಿ ನೀವು ಸಾಧಕ.

ನಿಮಗೆ ಬೆಸ್ಟ್ ವಿಶಸ್. ನಮ್ಮ ಅಮ್ಮ ಅಜ್ಜಿಗೆ ನೀವು ಯಾರೆಂದು ತಿಳಿದಿದೆ. ನಮ್ಮಿಬ್ಬರಿಗೂ ಪರಿಚಯವಿಲ್ಲ ಆದರೆ ನಿಮ್ಮ ವಿಡಿಯೋದಲ್ಲಿನ ಪ್ರಾಮಾಣಿಕತೆ, ನೈಜತೆ, ತರ್ಲೆ ಹಾಗೂ ಕೊಂಕು ನುಡಿಗಳು ನನಗೆ ಸಿಕ್ಕಾಪಟ್ಟೆ ಇಷ್ಟ” ಎಂದು ನಟ ಚಂದನ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡಾ. ಬ್ರೋ ಅವರ ಗುಣಗಾನ ಮಾಡುವುದರ ಜೊತೆಗೆ ಪರೋಕ್ಷವಾಗಿ ರಾಘವೇಂದ್ರ ಹುಣಸೂರ್ ಅವರಿಗೆ ಟಾಂಗ್ ನೀಡಿದ್ದಾರೆ.

‌ಸದ್ಯ ಈ ಒಂದು ಪೋಸ್ಟ್ ಬಾರಿ ವೈರಲ್ ಆಗುತ್ತಿದ್ದು, ಚಂದನ್ ಕುಮಾರ್ ಅವರ ಈ ಮಾತುಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ತಮ್ಮ ಕಡೆಯಿಂದ ಶುಭಾಶಯಗಳು ಕೋರುತ್ತ ಇನ್ನಷ್ಟು ಹೆಚ್ಚಿನ ವಿಡಿಯೋಗಳನ್ನು ನಮಗಾಗಿ ಹೊತ್ತು ತನ್ನಿ ಎಂದು ಶುಭ ಹಾರೈಸುತ್ತಿದ್ದಾರೆ.

Leave A Reply

Your email address will not be published.